ಪರಿಹಾರ ಪ್ಯಾಕೇಜ್‌: ಪಾಕ್‌ಗೆ ಐಎಂಎಫ್‌ ಕಠಿಣ ಷರತ್ತು

By Kannadaprabha News  |  First Published Feb 3, 2023, 7:29 AM IST

ಹಿಂದೆಂದೂ ಕಂಡಿರದಂತಹ ಆರ್ಥಿಕ ದುಸ್ಥಿತಿಗೆ ತಲುಪಿರುವ ಪಾಕಿಸ್ತಾನಕ್ಕೆ ಈಗ ಮತ್ತಷ್ಟುಸಂಕಷ್ಟಎದುರಾಗಿದೆ.


ಇಸ್ಲಾಮಾಬಾದ್‌: ಹಿಂದೆಂದೂ ಕಂಡಿರದಂತಹ ಆರ್ಥಿಕ ದುಸ್ಥಿತಿಗೆ ತಲುಪಿರುವ ಪಾಕಿಸ್ತಾನಕ್ಕೆ ಈಗ ಮತ್ತಷ್ಟುಸಂಕಷ್ಟಎದುರಾಗಿದೆ. ಸಾಲ ನೀಡಲು ವಿಧಿಸಿದ್ದ ಎಲ್ಲಾ ಷರತ್ತುಗಳಿಗೂ ಒಪ್ಪಿಗೆ ಸೂಚಿಸುವುದಾಗಿ ಪ್ರಧಾನಿ ಶಹಬಾಜ್‌ ಷರೀಫ್‌ ಹೇಳಿದ ಬಳಿಕವೂ ಇದಕ್ಕೆ ಒಪ್ಪದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌), ಸರ್ವಪಕ್ಷ ನಿಯೋಗ ಕರೆತಂದು ಪರಿಹಾರಕ್ಕೆ ಬೇಡಿಕೆ ಇಡಬೇಕು ಎಂದು ತಾಕೀತು ಮಾಡಿದೆ. ಇದಲ್ಲದೆ, ‘ಸಾಲ ನೀಡಬೇಕಾದರೆ ರಕ್ಷಣಾ ಬಜೆಟ್‌ ಅನ್ನು ಕಡಿತಗೊಳಿಸಬೇಕು, ಜತೆಗೆ, ‘ಹೆಚ್ಚುವರಿ ತೆರಿಗೆ ವಿಧಿಸಬೇಕು ಮತ್ತು ವಿದ್ಯುತ್‌ ಶುಲ್ಕವನ್ನು ಹೆಚ್ಚಿಸಬೇಕು’ ಎಂದು ಐಎಂಎಫ್‌ ಷರತ್ತು ವಿಧಿಸಿದೆ.

ಮಂಗಳವಾರ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ವಿತ್ತ ಸಚಿವ ಐಶಾಕ್‌ ದಾರ್‌ಗೆ (Finance Minister Ishaq Dar) ಐಎಂಎಫ್‌ (IMF)ಅಧಿಕಾರಿಗಳು ಈ ಎಲ್ಲ ಸೂಚನೆ ನೀಡಿದ್ದಾರೆ. ಇದೇ ವೇಳೆ, ‘ಸಾಲ ಪಡೆಯಲು ಇದಲ್ಲದೇ ಬೇರೆ ಯಾವುದೇ ದಾರಿ ನಿಮಗಿಲ್ಲ’ ಎಂದು ಪಾಕಿಸ್ತಾನ ಸರ್ಕಾರಕ್ಕೆ (government of Pakistan) ಎಚ್ಚರಿಕೆ ನೀಡಲಾಗಿದೆ.

Tap to resize

Latest Videos

ಕಾಶ್ಮೀರ ಮರೆತು, ಭಾರತದ ಜೊತೆ ಸ್ನೇಹ ಮಾಡಿ: ಪಾಕಿಸ್ತಾನಕ್ಕೆ ಆಪ್ತಮಿತ್ರ ಸೌದಿ , ಯುಎಇ ತಾಕೀತು

ಕಾನೂನಿನ ತೊಡಕು:

ಆದರೆ ಇವುಗಳಿಗೆ ಪಾಕಿಸ್ತಾನ ಪ್ರಧಾನಿ (Prime Minister of Pakistan) ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದರೂ ಸಹ ಇವುಗಳು ಕಾನೂನಾತ್ಮಕವಾಗಿ ಜಾರಿ ಮಾಡಲು ತೊಡಕಿದೆ. ಇವುಗಳನ್ನು ಸುಗ್ರೀವಾಜ್ಞೆಯ ಮೂಲಕ ತಕ್ಷಣಕ್ಕೇ ಜಾರಿಗೆ ತರುವುದು ಸಹ ಈಗ ಸಾಧ್ಯವಿಲ್ಲ. ಏಕೆಂದರೆ ಸುಗ್ರೀವಾಜ್ಞೆ ಜಾರಿಗೆ 14 ದಿನಗಳ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಪಾಕಿಸ್ತಾನಕ್ಕೆ ತುರ್ತಾಗಿ ಹಣದ ಅವಶ್ಯಕತೆ ಇರುವುದು ಧರ್ಮಸಂಕಟಕ್ಕೆ ನೂಕಿದೆ.

ಹಣದ ಕೊರತೆ: ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 35 ರೂ. ಹೆಚ್ಚಿಸಿದ ಪಾಕಿಸ್ತಾನ

53,300 ಕೋಟಿ ರು. ಸಾಲ ನೀಡುವ ಐಎಂಎಫ್‌ನ ಯೋಜನೆ 2023ರ ಜೂನ್‌ಗೆ ಅಂತ್ಯವಾಗಲಿದೆ. ಇದರಲ್ಲಿ ಕೇವಲ 28,700 ಕೋಟಿ ರು. ಮಾತ್ರ ಉಳಿದುಕೊಂಡಿದೆ. ಪಾಕಿಸ್ತಾನಕ್ಕೆ ಸಾಲದ ಅವಶ್ಯಕತೆ ಇರುವುದರಿಂದ ಸಾಧ್ಯವಾದಷ್ಟುಬೇಗ ಐಎಂಎಫ್‌ನ ಷರತ್ತುಗಳನ್ನು ಒಪ್ಪಿಕೊಳ್ಳಬೇಕಿದೆ. ಡಾಲರ್‌ ವಿರುದ್ಧ ಪಾಕಿಸ್ತಾನ ರುಪಾಯಿ ಮೌಲ್ಯವನ್ನು ನಿಯಂತ್ರಿಸುವ ಎಲ್ಲಾ ಕ್ರಮಗಳನ್ನು ಪಾಕಿಸ್ತಾನ ಕೈಬಿಟ್ಟಿರುವುದರಿಂದ ಪಾಕಿಸ್ತಾನ ರುಪಾಯಿ ಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠವಾದ 270 ರು.ಗೆ ತಲುಪಿದೆ.

click me!