ಮಷಿನ್​ ಮೇಲೆ ಮಲಗಿಸಿ ಗಗನಸಖಿಯರಿಗೆ ಮಾಡ್ತಿರೋದೇನು? ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಶಾಕ್​!

Published : Apr 14, 2025, 10:13 AM ISTUpdated : Apr 14, 2025, 10:39 AM IST
ಮಷಿನ್​ ಮೇಲೆ ಮಲಗಿಸಿ ಗಗನಸಖಿಯರಿಗೆ ಮಾಡ್ತಿರೋದೇನು? ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಶಾಕ್​!

ಸಾರಾಂಶ

ಗಗನಸಖಿಯರ ಕೆಲಸ ಸುಲಭವಲ್ಲ. ಅವರಿಗೆ ತರಬೇತಿ, ತಾಳ್ಮೆ, ಹಾಗೂ ಯಾವುದೇ ಪರಿಸ್ಥಿತಿಯಲ್ಲಿ ಶಾಂತವಾಗಿರುವ ಗುಣ ಅಗತ್ಯ. ಪ್ರಯಾಣಿಕರ ಉಪಟಳ ಸಹಿಸಿಕೊಂಡು, ಸಂಸ್ಥೆಯ ನಿಯಮ ಪಾಲಿಸಬೇಕು. ವೈರಲ್ ಆದ ವಿಡಿಯೋದಲ್ಲಿನ ಯಂತ್ರವು ಗಗನಸಖಿಯರ ಆಯಾಸ ಕಡಿಮೆ ಮಾಡಲು ಬಳಸುವ ಗುರುತ್ವಾಕರ್ಷಣೆಯ ಕುರ್ಚಿ. ಇದು ಸ್ನಾಯುಗಳ ಒತ್ತಡ ನಿವಾರಿಸಿ, ರಕ್ತ ಪರಿಚಲನೆ ಸುಧಾರಿಸುತ್ತದೆ. ವಿಷಯ ತಿಳಿದು ಪ್ರತಿಕ್ರಿಯಿಸಿ.

ವಿಮಾನದಲ್ಲಿರುವ ಪರಿಚಾರಿಕೆಯರು ಅರ್ಥಾತ್​ ಗಗನಸಖಿಯರಿಗೆ ಅವರದ್ದೇ ಆದ ವಿಶೇಷತೆ ಇದೆ. ಗಗನಸಖಿಯರಾಗುವುದು ಸುಲಭದ ಮಾತು ಕೂಡ ಅಲ್ಲ. ಅವರಿಗೂ  ಹಲವಾರು ರೀತಿಯ ಟ್ರೇನಿಂಗ್​ಗಳನ್ನು ನೀಡಲಾಗುತ್ತದೆ. ಆಹಾ! ದಿನನಿತ್ಯವೂ ವಿಮಾನದಲ್ಲಿಯೇ ಇರುತ್ತಾರೆ, ಏನು ಸುಖ ಎಂದು ಒಮ್ಮೆಯೂ ವಿಮಾನ ಹತ್ತದವರು ಅಂದುಕೊಳ್ಳುತ್ತಾರೆ. ಆದರೆ ಪ್ರತಿದಿನವೂ ವಿಮಾನದಲ್ಲಿ ಪ್ರಯಾಣಿಸುವ ಅವರ ಕಷ್ಟ ಅವರಿಗೆ ಮಾತ್ರ ಗೊತ್ತು. ನೋಡಲು ಸುಂದರವಾಗಿದ್ದರೆ ಸಾಕು, ಈ ಉದ್ಯೋಗ ಸುಲಭದಲ್ಲಿ ಸಿಕ್ಕಿಬಿಡುತ್ತದೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಈ ಹುದ್ದೆ ಏರಲು ಸಾಕಷ್ಟು ಅರ್ಹತೆಗಳೂ ಇರಬೇಕು.  ಇದು 9-5 ಜಾಬ್​ ಅಲ್ಲ. ದಿನದ 24 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು.  ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ. ಯಾವುದೇ ಪರಿಸ್ಥಿತಿಯಲ್ಲಿ ಶಾಂತ ಮತ್ತು ತಾಳ್ಮೆ ತುಂಬಾ ಅಗತ್ಯವಾಗಿರಬೇಕು. ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳುವ ಅಪಾಯವೂ ಇವರ ಬೆನ್ನಹಿಂದೆಯೇ ಇರುತ್ತದೆ. ಮಾತ್ರವಲ್ಲದೇ ವಿಮಾನದಲ್ಲಿ ಏನಾದರೂ ಸಮಸ್ಯೆಯಾದಾಗ ಪ್ರಯಾಣಿಕರ ಪ್ರಾಣ ಕಾಪಾಡುವ ಜವಾಬ್ದಾರಿ ಕೂಡ ಗಗನಸಖಿಯರ ಮೇಲೆ ಇರುತ್ತದೆ. ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಪ್ರಯಾಣಿಕರ ಪ್ರಾಣ ಕಾಪಾಡಿದ ಗಗನಸಖಿಯರ ಉದಾಹರಣೆಗಳೂ ಸಾಕಷ್ಟಿವೆ. 


ವಿಮಾನದಲ್ಲಿ ಬರುವ ಪ್ರಯಾಣಿಕರು ಎಂದರೆ ಬಸ್​ನಲ್ಲಿ ಹೋಗುವ ಪ್ರಯಾಣಿಕರಂತೆ ಅಲ್ಲ. ಅಂದರೆ, ಬಸ್​ನಲ್ಲಿ ಪ್ರಯಾಣಿಕರು ಮಾಡುವ ಕಿತಾಪತಿಗಳಿಗೆ ಕಂಡಕ್ಟರ್​ಗಳು ತಿರುಗೇಟು ನೀಡಬಹುದು, ಬಾಯಿ ಜೋರು ಮಾಡಬಹುದು.  ಆದರೆ ವಿಮಾನಗಳಲ್ಲಿ ಹಾಗಲ್ಲ. ಪ್ರಯಾಣಿಕರು ಏನೇ ಮಾಡಿದರೂ ಗಗನಸಖಿಯರು ಅದನ್ನೆಲ್ಲಾ ಸಹಿಸಿಕೊಂಡು ತಾಳ್ಮೆಯಿಂದ ವರ್ತಿಸಬೇಕು. ಸುಂದರ ಗಗನಸಖಿಯರನ್ನು ಸುಖಾಸುಮ್ಮನೇ ಪದೇ ಪದೇ ಕರೆಯುವ ಪ್ರಯಾಣಿಕರೂ ಇರುತ್ತಾರೆ. ಪ್ರತಿಸಲವೂ ಅದೇ ನಗುಮೊಗದಿಂದ ಪ್ರಯಾಣಿಕರ ಬಳಿ ಹೋಗಿ ಅವರ ಸೇವೆಗೆ ಸಿದ್ಧರಾಗಬೇಕು. ಹೋಟೆಲ್​ಗಳ ಸಪ್ಲೈಯರ್​ಗಳನ್ನು ಪದೇ ಪದೇ ಕರೆದು ಹಿಂಸಿಸಿದರೆ ಅವರಿಗೆ ಕೋಪ ಮಾಡಿಕೊಳ್ಳುವ ಅಧಿಕಾರ ಇರಬಹುದು. ಆದರೆ ಗಗನಸಖಿಯರು ಹಾಗಲ್ಲ. ಪ್ರಯಾಣಿಕರು ಎಷ್ಟೇ ಉಪಟಳ ನೀಡಿದರೂ, ಪದೇ ಪದೇ  ಊಟ ಮತ್ತು ಉಪಹಾರಕ್ಕಾಗಿ ಬೇಡಿಕೆ ಇಟ್ಟರೂ ಆ ವಿಮಾನ ಸಂಸ್ಥೆಗಳ ನಿಯಮಕ್ಕೆ ಅನುಸಾರವಾಗಿ ಅಷ್ಟೇ ಕಾಳಜಿಯಿಂದ ಅದನ್ನು ಪ್ರಯಾಣಿಕರಿಗೆ ಪೂರೈಸಬೇಕು. 

ಮದ್ವೆಯಾದ ಖುಷಿಯಲ್ಲಿ ಕಾಲೆತ್ತಲು ಹೋದ ಶ್ರೇಷ್ಠಾಳಿಗೆ ಆಗಬಾರದ್ದು ಆಗೋಯ್ತು! ಛೇ... ವಿಡಿಯೋನೂ ವೈರಲ್​ ಆಯ್ತು

ಇದೇ ಕಾರಣಕ್ಕೆ, ಗಗನಸಖಿಯಾಗುವವರು  ಹಲವಾರು ಸುತ್ತಿನ ಸಂದರ್ಶನಗಳು ಮತ್ತು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಅವರಿಗೆ ಅಗತ್ಯವಾದ ವಿಶ್ರಾಂತಿಯ ಅಗತ್ಯವೂ ಇರುತ್ತದೆ. ಹಾಗಿದ್ದರೆ ಗಗನಸಖಿಯರಿಗೆ ಹೇಗೆ ವಿಶ್ರಾಂತಿ ನೀಡಲಾಗುತ್ತದೆ ಎನ್ನುವ ವಿಡಿಯೋ ಒಂದು ಸೋಷಿಯಲ್​​  ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಇರುವುದು ಗಗನಸಖಿಯರಿಗೆ ವಿಶ್ರಾಂತಿಗಾಗಿ ಇರುವ ಮಷಿನ್​ಗಳನ್ನು ಹೇಗೆ ಬಳಸಲಾಗುತ್ತದೆ ಎನ್ನುವುದು.  ಆದರೆ ವೈರಲ್​ ಆಗಿರೊ ವಿಡಿಯೋದಲ್ಲಿ ಇದು ಕನ್ಯತ್ವ ಪರೀಕ್ಷೆ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಅದರ ಪಕ್ಕದಲ್ಲಿಯೇ, ಈ ವಿಡಿಯೋ ಏನು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇದ್ದರೂ, ನೆಟ್ಟಿಗರು ಗೊತ್ತಲ್ಲ! ಎರಡು ಪ್ಯಾರಾಗಳನ್ನೂ ಓದುವಷ್ಟು ಪುರುಸೊತ್ತು ಇಲ್ಲ. ಫೋಟೋದ ಮೇಲೆ ಹಾಕಿರುವ ಕನ್ಯತ್ವ ಪರೀಕ್ಷೆಯನ್ನೇ ನಿಜ ಎಂದುಕೊಂಡು ಮನಸ್ಸಿಗೆ ಬಂದರೆ  ಕಮೆಂಟ್​ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಈ ವಿಡಿಯೋ ಇಷ್ಟೊಂದು ವೈರಲ್​ ಕೂಡ ಆಗಿದೆ.

ಹಾಗಿದ್ದರೆ ನಿಜಕ್ಕೂ ಇದು ಏನು ಎಂದು ನೋಡುವುದಾದರೆ, ಈ ಕ್ಲಿಪ್‌ನಲ್ಲಿ ವಿಮಾನ ಸಿಬ್ಬಂದಿ ಹಾಗೂ ಗಗನಸಖಿಯರಿಗೆ ತರಬೇತಿ ಸಮಯದಲ್ಲಿ ಅವರ  ಆಯಾಸ ಪರಿಹಾರಕ್ಕಾಗಿ  ಈ ಮಷಿನ್​ ಬಳಸಲಾಗುತ್ತದೆ.  ಇದು  ಗುರುತ್ವಾಕರ್ಷಣ ಖುರ್ಚಿಯಾಗಿದೆ.  ಈ ಖುರ್ಚಿಯ ಮೇಲೆ ಸಿಬ್ಬಂದಿಯನ್ನು ಮಲಗಿಸಲಾಗುತ್ತದೆ. ಇದರಿಂದ ಹಲವಾರು ಪ್ರಯೋಜನಗಳು ಇವೆ. ಅವುಗಳಲ್ಲಿ ಮುಖ್ಯವಾದದ್ದು,   ಸ್ನಾಯು ಒತ್ತಡವನ್ನು ನಿವಾರಿಸುವುದು- ಗುರುತ್ವಾಕರ್ಷಣೆಯ ಖುರ್ಚಿಗಳಲ್ಲಿ  ಕಾಲುಗಳು ಮತ್ತು ಎದೆಯ  ಬೆಂಬಲದೊಂದಿಗೆ ಮುಂದಕ್ಕೆ ಹೋಗಬಹುದಾಗಿದೆ. ಇದು  ಸ್ನಾಯುಗಳ ಒತ್ತಡವನ್ನು ನಿವಾರಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ಇದು ದೀರ್ಘಕಾಲದವರೆಗೆ ನಿಂತು ಅಥವಾ ಚಲಿಸುವ ಸಿಬ್ಬಂದಿ ಸದಸ್ಯರಿಗೆ ವಿಶೇಷವಾಗಿ ಉಪಯುಕ್ತವಾಗಿದೆ. ಇನ್ನೊಂದು,   ಗಗನಸಖಿಯರಿಗೆ  ಉತ್ತಮ ಭಂಗಿ ಮತ್ತು ಕೋರ್ ಬಲಪಡಿಸಿಕೊಳ್ಳುವುದು ಅತ್ಯಗತ್ಯ. ಇದನ್ನು ಈ ಸಾಧನ ಮಾಡುತ್ತದೆ.  ಸುದೀರ್ಘ ಪ್ರಯಾಣಿಸುವ ಸಮಯದಲ್ಲಿ ಸಿಬ್ಬಂದಿಗೆ ಈ ಖುರ್ಚಿಗಳು ಅವರ ರಕ್ತ ಪರಿಚಲನೆ ಸುಧಾರಿಸಲು ಮತ್ತು ಬೆನ್ನಿನ ಒತ್ತಡವನ್ನು ನಿವಾರಿಸಲು ಸಹಕಾರಿಯಾಗಿದೆ.  ಹಾಗಿದ್ದರೆ ನಿಜಕ್ಕೂ ಇದು ಏನೆಂದು ಗೊತ್ತಾಯಿತಲ್ಲಾ? ಇನ್ನೇನಾದ್ರೂ ಇಂಥ ವಿಡಿಯೋಗಳು ಬಂದಾಗ ಪಕ್ಕದಲ್ಲಿ ಇರೋ ಅದರ ವಿಷಯಗಳನ್ನು ತಿಳಿದು ಕಮೆಂಟ್​ ಮಾಡಲು ಮರೆಯಬೇಡಿ! 

ಕಿಸ್‌ ಮಾಡಲು ಹೋದ್ರೆ ಅಲ್ಲಿ ಮುಟ್ಬೇಡಿ, ಇಲ್ಲಿ ಮುಟ್ಬೇಡಿ ಅಂತಾರೆ! ದುಃಖ ತೋಡಿಕೊಂಡ ಕಿಚ್ಚ ಸುದೀಪ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ