ದುಬೈನಲ್ಲಿ 2ನೇ ಆವೃತ್ತಿಯ ದುಬೈ ಐಕಾನಿಕ್‌ ಅವಾರ್ಡ್‌ ಪ್ರದಾನ

Published : Apr 14, 2025, 10:03 AM ISTUpdated : Apr 14, 2025, 10:24 AM IST
ದುಬೈನಲ್ಲಿ 2ನೇ ಆವೃತ್ತಿಯ ದುಬೈ ಐಕಾನಿಕ್‌ ಅವಾರ್ಡ್‌ ಪ್ರದಾನ

ಸಾರಾಂಶ

ದುಬೈನ ಖ್ಯಾತ ಉದ್ಯಮಿ ಡಾ. ಅಹ್ಮದ್ ಮೊಹ್ಮದ್ ರಶೆದ್ ತಕ್ಲೌಫ ಅಲ್ ಯಮ್ಮಹಿ, ಅರಬ್‌ನ ಖ್ಯಾತ ನಟ ಅಬ್ದುಲ್ಲಾ ಅಲ್ ಜಫಾಲಿ, ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಅವರು 27 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.  

ಜಗತ್ತಿನ ಆರ್ಥಿಕ ರಾಜಧಾನಿಯಾಗಿ ಬೆಳೆಯುತ್ತಿರುವ ದುಬೈನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭವು ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು. ದುಬೈ ಇಂಡಿಯಾ ಇಂಟರ್ ನ್ಯಾಷನಲ್ ಐಕಾನಿಕ್ ಅವಾರ್ಡ್ಸ್‌ನ ಎರಡನೇ ಆವೃತ್ತಿಯು ದುಬೈನ ಪ್ರತಿಷ್ಠಿತ ಮೂವೆನ್‌ಪಿಕ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರುನಾಡಿನ 27 ಸಾಧಕರು ಪ್ರಶಸ್ತಿ ಪುರಸ್ಕೃತರಾದರು. ಪುರಸ್ಕೃತರ ಕುಟುಂಬ ಸದಸ್ಯರು ಹಾಗೂ ದುಬೈ ಕನ್ನಡಿಗರು ಈ ಸಂಭ್ರಮಕ್ಕೆ ಸಾಕ್ಷಿಯಾದರು.

ದುಬೈನ ಖ್ಯಾತ ಉದ್ಯಮಿ ಡಾ. ಅಹ್ಮದ್ ಮೊಹ್ಮದ್ ರಶೆದ್ ತಕ್ಲೌಫ ಅಲ್ ಯಮ್ಮಹಿ, ಅರಬ್‌ನ ಖ್ಯಾತ ನಟ ಅಬ್ದುಲ್ಲಾ ಅಲ್ ಜಫಾಲಿ, ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಅವರು 27 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಪ್ರಶಸ್ತಿ ಪ್ರದಾನಕ್ಕೆ ಕೈ ಜೋಡಿಸಿದರು.

ಪ್ರತಿ ವರ್ಷ ಸಾಧನೆ ಮಾಡಿದ ಐವರಿಗೆ ಯುಗಾದಿ ಪುರಸ್ಕಾರ: ರವಿ ಹೆಗಡೆ

ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭವು ಕಳೆದ ವರ್ಷ ಆರಂಭಿಸಿದ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪೈಕಿ ಇದು 6ನೇ ಅಂತಾರಾಷ್ಟ್ರೀಯ ಕಾರ್ಯಕ್ರಮ. ದುಬೈನಲ್ಲಿ ನಡೆದ ಎರಡನೇ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದಾಗಿತ್ತು. ಬಹ್ರೇನ್‌, ಮಲೇಷ್ಯಾ, ದುಬೈ, ಲಂಡನ್ ಮತ್ತು ವಿಯೆಟ್ನಾಂ ನಂತರ ಇದೀಗ ಮತ್ತೊಮ್ಮೆ ದುಬೈಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 2025ರಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಂಘಟಿಸಿದ ಮೊದಲ ಅಂತರಾಷ್ಟ್ರೀಯ ಕಾರ್ಯಕ್ರಮ ಇದಾಗಿತ್ತು.

ಕನ್ನಡ ಭಾಷಾ ತರಬೇತುದಾರರು, ವೈದ್ಯರು, ಆಧ್ಯಾತ್ಮ ಚಿಂತಕರು, ರಿಯಲ್ ಎಸ್ಟೇಟ್ ಉದ್ಯಮಿಗಳು - ಹೀಗೆ ಕರುನಾಡಿನ ಹತ್ತಾರು ಕ್ಷೇತ್ರಗಳ 27 ಸಾಧಕರು ದುಬೈನಲ್ಲಿ ಒಂದೆಡೆ ಸೇರಿ ಕನ್ನಡ ಡಿಂಡಿಮ ಮೊಳಗಿಸಿದರು. ವಿಶೇಷವೆಂದರೆ ದುಬೈನಲ್ಲೇ ನೆಲೆಸಿದ್ದರೂ ಕರ್ನಾಟಕದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು, ದುಬೈನಲ್ಲಿ ಕನ್ನಡಿಗರಿಗೆ ಹೆಚ್ಚೆಚ್ಚು ಉದ್ಯೋಗ ನೀಡಿರುವ ಹರೀಶ್ ಶೇರಿಗಾರ್ ಅವರು ದುಬೈ ಇಂಡಿಯಾ ಇಂಟರ್‌ ನ್ಯಾಷನಲ್ ಐಕಾನಿಕ್ ಅವಾರ್ಡ್ಸ್ ಸ್ವೀಕರಿಸಿದರು. ಈ ಹಿಂದೆ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಶಸ್ತಿಗಳನ್ನು ಸ್ವೀಕರಿಸಿದ್ದ ಅನೇಕರು ವಿದೇಶಗಳಲ್ಲೂ ತಮ್ಮ ಉದ್ಯಮ ವಿಸ್ತರಿಸಿದ್ದರು. 

ಕನ್ನಡಪ್ರಭ, ಸುವರ್ಣ ನ್ಯೂಸ್‌ ರೈತ ರತ್ನ ಪ್ರಶಸ್ತಿ-2024ಗೆ ರಾಜ್ಯದ 11 ಸಾಧಕರ ಆಯ್ಕೆ

ಆ ಸಂತಸವನ್ನು ಅವರೆಲ್ಲ ಈ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಇಕೋಪ್ಲಾನೆಟ್ ಎಲಿವೇಟರ್ಸ್ ಮತ್ತು ಎಸ್ಕಲೇಟರ್ಸ್‌ನ ರಾಜುಗೌಡರು, ನಮ್ಮ ಮಾಧ್ಯಮ ಸಂಸ್ಥೆಯ ಸಹಕಾರದಿಂದ ದುಬೈನಲ್ಲಿ ವ್ಯವಹಾರ ವಿಸ್ತರಿಸಿದ್ದನ್ನು ಹೇಳಿಕೊಂಡರು. ವಿಯೆಟ್ನಾಂ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಎಂ.ಎಸ್. ಡೆವಲಪರ್ಸ್‌ನ ಮಂಜುನಾಥ್ ದ್ಯಾವಪ್ಪ ಅವರು ದುಬೈ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ಬಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಪ್ರಯತ್ನಗಳನ್ನು ಬೆಂಬಲಿಸಿದರು ಕರುನಾಡಿನ 27 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾತ್ರವಲ್ಲದೆ ದುಬೈನ ಪ್ರವಾಸಿ ತಾಣಗಳ ಭೇಟಿಯೂ ಇತ್ತು. ದುಬೈನ ಹೆಗ್ಗುರುತಾಗಿರುವ ಬುರ್ಜ್ ಖಲೀಫಾ, ಡೆಸರ್ಟ್ ಸಫಾರಿ, ಅಬುಧಾಬಿಯ ದೇವಾಲಯ ಮತ್ತು ಮಸೀದಿ ಭೇಟಿಯೂ ಪ್ರವಾಸದಲ್ಲಿ ಸೇರಿತ್ತು. ಹಡಗಿನಂತಹ ಲಿಮೋಸಿನ್ ಕಾರು ಸವಾರಿಯು ನಡೆಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!