ಜೈಲಿನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಅಲ್ಲಿಯ ಕೈದಿಗಳ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ವಿಡಿಯೋ ಮಾಡಿರೋ ಕೈದಿ, ನಾವು ಇತಿಹಾಸ ಸೃಷ್ಟಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾನೆ.
ಲಂಡನ್: ಮಹಿಳಾ ಪೊಲೀಸ್ ಅಧಿಕಾರಿ (Woman Police Officers) ಜೈಲಿನಲ್ಲಿರುವ ಕೈದಿಗಳ (Prisoners) ಜೊತೆ ಸೆಕ್ಸ್ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ (Viral Video) ಓರ್ವ ಕೈದಿ ಸೆಕ್ಸ್ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿರೋದನ್ನು ಗಮನಿಸಬಹುದಾಗಿದೆ. ಈ ಘಟನೆ ಇಂಗ್ಲೆಂಡ್‌ನ ವಾಂಡ್ಸ್ ಞವರ್ಥ್ ಹೆಚ್‌ಎಂಪಿ ಜೈಲಿನಲ್ಲಿ (Wandsworth Prison) ನಡೆದಿರೋದು ಎಂದು ಖಚಿತವಾಗಿದೆ. ವಾಂಡ್‌ವರ್ಥ್ ಜೈಲಿನ ಹಿರಿಯ ಅಧಿಕಾರಿಗಳು ಇದು ತಮ್ಮದೇ ಕಾರಾಗೃಹದ ದೃಶ್ಯಗಳು ಎಂದು ದೃಢೀಕರಿಸಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಮಹಿಳಾ ಸಿಬ್ಬಂದಿಯೇ ಕೈದಿಗಳ ಜೊತೆ ಹೀಗೆ ನಡೆದುಕೊಂಡ್ರೆ ಹೇಗೆ? ಈ ವಿಷಯದಲ್ಲಿ ಯಾರದು ತಪ್ಪು ಎಂಬ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿವೆ.
ವೈರಲ್ ವಿಡಿಯೋದಲ್ಲಿ ಏನಿದೆ?
undefined
ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಪುರುಷ ಕೈದಿಗಳ ಜೊತೆ ಮಹಿಳಾ ಸಿಬ್ಬಂದಿ ಪೊಲೀಸ್ ಸಮವಸ್ತ್ರದಲ್ಲಿಯೇ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಕೈದಿಗಳ ಕೋಣೆಯಲ್ಲಿ ಈ ಘಟನೆ ನಡೆದಿದೆ. ಕೈದಿಯೋರ್ವ ಸಿಗರೇಟ್ ಸೇದುತ್ತಾ ಮೊಬೈಲ್ ಹಿಡಿದುಕೊಂಡು, ಹಾಯ್, ನಾವು ಇವತ್ತು ಇತಿಹಾಸ ಸೃಷ್ಟಿಸುತ್ತಿದ್ದೇವೆ. ಅದೇನೂ ಅಂತೀರಾ? ಇಲ್ಲಿ ನೋಡಿ ಎಂದು ಮಹಿಳಾ ಸಿಬ್ಬಂದಿ ಜೊತೆ ತನ್ನ ಸಹಕೈದಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯವನ್ನು ತೋರಿಸುತ್ತಾನೆ. ಇದೇ ವಿಡಿಯೋದಲ್ಲಿ ಬೆಡ್ ಮೇಲೆ ಕೈದಿಗಳ ಸಮವಸ್ತ್ರ ಬಿದ್ದಿರೋದನ್ನು ನೀವು ಗಮನಿಸಬಹದು.
ಇಲ್ಲಿ ಅತಿಥಿಗಳ ಜೊತೆ ಹೆಂಡ್ತಿಯನ್ನು ಮಲಗಿಸಿ, ಗಂಡ ಹೊರಗೆ ಮಲಗ್ತಾನೆ
ಇದೇ ವಿಡಿಯೋದಲ್ಲಿ ಸೆಲ್‌ನೊಳಗೆ ಮತ್ತೋರ್ವ ಕೈದಿ ಒಳಗೆ ಬರಲು ಮುಂದಾಗುತ್ತಾನೆ. ಆಗ ಕ್ಯಾಮೆರಾ ಹಿಡಿದ ವ್ಯಕ್ತಿ ಸ್ವಲ್ಪ ವೇಟ್ ಮಾಡು ಎನ್ನುತ್ತಾನೆ. ವಿಡಿಯೋ ಕೊನೆಗೆ ಇದು ವಾಂಡ್ಸ್‌ವರ್ಥ್ ಜೈಲು ಎಂಬುದನ್ನು ಕೈದಿ ಖಚಿತಪಡಿಸುತ್ತಾರೆ. 36 ಸೆಕೆಂಡ್ ಅವಧಿಯ ಈ ವಿಡಿಯೋ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ.
ಮಹಿಳಾ ಸಿಬ್ಬಂದಿ ಅಮಾನತು
ವೈರಲ್ ಆಗಿರುವ ವಿಡಿಯೋ ವಾಂಡ್ಸ್‌ವರ್ಥ್ ಹೆಚ್ಎಂಪಿ ಜೈಲಿನಲ್ಲಿ ನಡೆದ ಘಟನೆಯ ದೃಶ್ಯಗಳು ಎಂದು ಲಂಡನ್ ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ. ಮಹಿಳಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಈ ಕುರಿತು ವಾಂಡ್ಸ್‌ವರ್ಥ್ ಜೈಲಿನ ವಕ್ತಾರ ಪ್ರತಿಕ್ರಿಯೆ ನೀಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಘಟನೆ ನಮ್ಮಲ್ಲಿಯೇ ನಡೆದಿರೋದು ಖಚಿತವಾಗಿದೆ. ಇದುವರೆಗೆ ಮಹಿಳಾ ಸಿಬ್ಬಂದಿಯನ್ನು ಬಂಧಿಸಿಲ್ಲ. ಈ ಸಂಬಂಧ ಕಾನೂನು ಸಚಿವಾಲಯದಿಂದ ನೆರವು ಕೇಳಲಾಗಿದೆ. ವಿಡಿಯೋದಲ್ಲಿ ಕೈದಿ ಧೂಮಪಾನ ಮಾಡುತ್ತಿರೋದು ಕಂಡು ಬಂದಿದೆ. ಜೈಲಿನೊಳಗೆ ಸಿಗರೇಟ್ ಹೇಗೆ ಬಂತು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ತನ್ನದೇ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಸಾಕ್ಷಿಯಾದ ರೋಗಿ; ಸರ್ಜರಿ ಕೂಲ್ ಆಗಿತ್ತೆಂದ ಯುವಕ
ಯಾವುದೇ ಕಾರಣಕ್ಕೂ ಅಧಿಕಾರಿಗಳ ಭ್ರಷ್ಟಾಚಾರವನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಈ ಪ್ರಕರಣದ ಜೊತೆಯಲ್ಲಿ ಜೈಲಿನ ಭದ್ರತೆ ಮತ್ತು ಸಿಬ್ಬಂದಿ ಹಾಗೂ ಕೈದಿಗಳ ವರ್ತನೆ ಮೇಲೆಯೂ ನಿಗಾ ಇರಿಸಲಾಗುವುದು. ಜೈಲಿನ ಸುಧಾರಣೆಯ ಕುರಿತು ತುರ್ತು ಅಧಿಸೂಚನೆ ಹೊರಡಿಸಲು ಇನ್ಸ್‌ಪೆಕ್ಟರ್ ಚಾರ್ಲಿ ಟೇಲರ್ ನ್ಯಾಯ ಕಾರ್ಯದರ್ಶಿ ಅಲೆಕ್ಸ್ ಚಾಕ್‌ಗೆ ಪತ್ರ ಬರೆದಿದ್ದಾರೆ.