ಚಡ್ಡಿಯೊಳಗೆ ಬುಸ್ ಬುಸ್ ಅಂತಿತ್ತು ನಾಗರಹಾವು; ಎಚ್ಚರವಾದಾಗ ಆತ ಮಾಡಿದ್ದು ತಿಳಿದ್ರೆ ಏನ್ ಹೇಳ್ತೀರಾ..?

By Shriram Bhat  |  First Published Jun 28, 2024, 5:28 PM IST

ಥೈಲ್ಯಾಂಡ್‌ನಲ್ಲಿ ಹುಡುಗನೊಬ್ಬ ರಾತ್ರಿ ಬರೀ ಚಡ್ಡಿ ಹಾಕಿಕೊಂಡು ಮಲಗಿದ್ದಾನೆ. ಆತನ ಚಡ್ಡಿ ಒಳಗೆ ನಾಗರಹಾವೊಂದು ಸೇರಿಕೊಂಡುಬಿಟ್ಟಿದೆ. ಆದರೆ, ಆತನಿಗೆ ಆಗ ನಿದ್ದೆ ಬಂದಿತ್ತು. ಎಚ್ಚರವಾದಾಗ..


ಹಾವುಗಳು ಎಲ್ಲಿ ಬೇಕಾದರೂ ಓಡಾಡಬಹುದು ಎಂಬುದು ಗೊತ್ತೇ ಇದೆ. ಕೆಲವು ಹಾವುಗಳು ಉಭಯ ಸರಿಸೃಪಗಳು. ನೀರು-ನೆಲ ಎರಡರಲ್ಲೂ ಓಡಾಡಿಕೊಂಡು ಇರುತ್ತವೆ. ಮಳೆಗಾಲದಲ್ಲಿ ಬೆಚ್ಚನೆ ಜಾಗ ಹುಡುಕಿಕೊಂಡು ಎಲ್ಲೆಲ್ಲೋ ಬಂದುಬಿಡುತ್ತವೆ. ಮಳೆಗಾಲದಲ್ಲಿ ಹಾವುಗಳು ಮನೆಯ ಸುತ್ತ ಓಡಾಡುವುದು, ಕೆಲವೊಮ್ಮೆ ಮನೆಯೊಳಗೂ ಬರುವುದು ಕೂಡ ಉಂಟು. ಸಹಜವಾಗಿಯೇ ಮಳೆಗಾಲದಲ್ಲಿ ಹಾವುಗಳ ಓಡಾಟ ಹೆಚ್ಚಾಗಿರುತ್ತದೆ.

ಅದರಲೂ ಮುಖ್ಯವಾಗಿ ಮಳೆಯ ಮಧ್ಯೆ ಬಿಸಿಲು ಬಂದರೆ, ಹಾವುಗಳು ಎಲ್ಲಿ ಕಾಣಿಸಿಕೊಳ್ಳುತ್ತವೆ ಅನ್ನೋದನ್ನ ಊಹಿಸುವುದು ಕೂಡ ಕಷ್ಟವಾಗುತ್ತದೆ. ಹಾವುಗಳು ಹೆಲ್ಮೆಟ್ ಒಳಗೆ, ಶೂಗಳ ಒಳಗೆ, ಬೈಕ್‌ನಲ್ಲಿ, ಶಾಲಾ ಬ್ಯಾಗ್‌ನಲ್ಲಿ, ತಿಂಡಿ ಡಬ್ಬಗಳಲ್ಲಿ ಹೀಗೆ ಸಿಕ್ಕ ಸಿಕ್ಕಲ್ಲಿ ಅವಿತಿರುತ್ತವೆ. ಇವು ಹಲವರ ಪ್ರಾಣಕ್ಕೇ ಕುತ್ತು ತಂದ ಉದಾಹರಣೆಗಳೂ ಇವೆ. ಆದ್ರೆ ಇಲ್ಲೊಂದು ಘಟನೆ ಭಾರೀ ಗಮನ ಸೆಳೆಯುತ್ತಿದೆ. ಕಾರಣ, ನಾಗರ ಹಾವೊಂದು ಯುವಕನ ಚಡ್ಡಿಯೊಳಗೆ ಸೇರಿಕೊಂಡ ಕಥೆಯಿದು!

Tap to resize

Latest Videos

undefined

ಉಗ್ರರ ಗುಂಡಿಗೆ ಅಪ್ಪ ಬಲಿಯಾಗಿ ಹುತಾತ್ಮರಾದರು, ನಂಗೀಗ ಅಮ್ಮನೇ ಎಲ್ಲವೂ: ನಟಿ ರುಕ್ಮಿಣಿ ವಸಂತ್

ಥೈಲ್ಯಾಂಡ್‌ನಲ್ಲಿ ಹುಡುಗನೊಬ್ಬ ರಾತ್ರಿ ಬರೀ ಚಡ್ಡಿ ಹಾಕಿಕೊಂಡು ಮಲಗಿದ್ದಾನೆ. ಆತನ ಚಡ್ಡಿ ಒಳಗೆ ನಾಗರಹಾವೊಂದು ಸೇರಿಕೊಂಡುಬಿಟ್ಟಿದೆ. ಆದರೆ, ಆತನಿಗೆ ಆಗ ನಿದ್ದೆ ಬಂದಿತ್ತು. ಬಳಿಕ ಎಚ್ಚರವಾದಾಗ ಆ ವ್ಯಕ್ತಿಗೆ ಗೊತ್ತಾಗಿದೆ. ಗಾಢ ನಿದ್ರೆಯಲ್ಲಿದ್ದಾಗ ಹಾವು ಎಲ್ಲಿಂದಲೋ ಬಂದು ಆತನ ಚಡ್ಡಿಯೊಳಗೆ ಸೇರಿಕೊಂಡಿದೆ. ಆದ್ರೆ ಆತ ಅಲುಗಾಡದೆ ಮಲಗಿದ್ದರಿಂದ ಆತನಿಗೆ ಹಾವು ಕಚ್ಚಿಲ್ಲ. ಆದರೆ ಆತ ಎಚ್ಚರಗೊಂಡಾಗ ಚಡ್ಡಿಯಲ್ಲಿ ಹಾವು ಸೇರಿವುದು ಅವನ ಅರಿವಿಗೆ ಬಂದಿದೆ.

ಇದೇನ್ ಮಾತು ಗುರೂ.. ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಚೆನ್ನಾಗಿರಿ; ರಾಕಿಂಗ್ ಸ್ಟಾರ್ ಯಶ್! 

ಆತ ಹುಶಾರಾಗಿ ಸ್ವಲ್ಪವು ಅಲಗಾಡದೆ ಅದೇ ಭಂಗಿಯಲ್ಲಿಯೇ ಮಲಗಿದ್ದಾನೆ. ಏಕೆಂದರೆ ಆತ ಸ್ವಲ್ಪ ಅಲುಗಾಡಿದರು ಹಾವು ಕಚ್ಚುವ ಸಂಭವವಿತ್ತು. ಆತ ಮಲಗಿದ್ದಲ್ಲೇ ಕಂಬದಂತೆ ಸುಮ್ಮನೇ ಇದ್ದಾನೆ. ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಜನರು ಭಾರೀ ಶಾಕ್ ಆಗಿದ್ದಾರೆ. ಥಾಯ್ಲೆಂಡ್‌ನ ರೇಯಾಂಗ್‌ನಲ್ಲಿ ಈ ಘಟನೆ ನಡೆದಿದ್ದು, ಆತ ತನ್ನ ಸ್ನೇಹಿತನಿಗೆ ಸನ್ನೆಯ ಮೂಲಕ ಅದನ್ನು ತಿಳಿಸಿದ್ದಾನೆ. ಚಡ್ಡಿಯೊಳಕ್ಕೆ ಹಾವಿರುವ ಬಗ್ಗೆ ಆತನ ಸ್ನೇಹಿತನಿಗೆ ಗೊತ್ತಾಗಲು ಆತ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದಾನೆ.

ನಟ ದರ್ಶನ್ ಖೈದಿ ನಂಬರ್ 6106 ಈಗ ಭಾರೀ ಟ್ರೆಂಡ್, ಬೈಕ್ ಕಾರು ಆಟೋ ಮೇಲೆ ಸ್ಟಿಕ್ಕರ್!

ಆತ ನಿದ್ದೆಯಿಂದ ಸ್ವಲ್ಪ ಎಚ್ಚರಗೊಂಡಾಗ ತನ್ನ ಚಡ್ಡಿಯೊಳಗೆ ಏನೋ ಚಲನೆ ಗಮನಿಸಿದ್ದಾನೆ. ಆ ವೇಳೆ ಆತ ಸ್ವಲ್ಪ ಅಲುಗಾಡಿದ್ದರೂ ಹಾವು ಕಚ್ಚುತ್ತಿತ್ತು, ಆತನ ಜೀವಕ್ಕೆ ಅಪಾಯವಿತ್ತು. ಆದರೆ ಆತನ ಅದೃಷ್ಟ ಚೆನ್ನಾಗಿತ್ತು ಎನ್ನಬೇಕು, ಹಾವು ಆತನ ಮೇಲೆ ದಾಳಿ ಮಾಡದೆ ಚಡ್ಡಿಯೊಳಗೆ ಕುಳಿತಿದೆ. ಬಳಿಕ, ಉರಗ ತಜ್ಞರು ಬಂದು ಹಾವು ಹಿಡಿದು ಆತನ ಜೀವ ಉಳಿಸಿದ್ದಾರೆ. ಉರಗ ತಜ್ಞ ಆ ಹಾವನ್ನು ಹೊರಗೆ ತೆಗೆದ ಬಳಿಕ ಅದು ನಾಗರಹಾವು ಎಂದು ತಿಳಿದುಬಂದಿದೆ. ಈ ವೇಳೆ ಯುವಕ ಭಾರೀ ಶಾಕ್‌ಗೆ ಆಗಿದೆ!

ನನ್ ಲೈಫ್ ಒಂದು ಜರ್ನಿ, ನಿಲ್ದಾಣ ಅಲ್ಲ, KGF ಸ್ಟಾರ್ ಯಶ್ ಮಾತಿಗೆ ಸ್ಟನ್ ಆಯ್ತು ಜಗತ್ತು!

ಆ ನಾಗರಹಾವು ಅದೆಲ್ಲಿಂದ ಬಂತು ಎಂದು ತಿಳಿಯಲು ಆತ ಸುತಮುತ್ತ ಹುಡುಕಾಡಿದ್ದಾನೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ಎಲ್ಲರೂ ನಿದ್ದೆಯಲ್ಲೂ ಎಚ್ಚರಿಕೆಯಿಂದ ಇರಲು ಯೋಚಿಸುವಂತೆ ಮಾಡಿದೆ. ಈ ವಿಡಿಯೋ ಈಗ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ಅಸಂಖ್ಯಾತ ಮಂದಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಆತನ ಅದೃಷ್ಟ ಬಗ್ಗೆ ಮಾತನಾಡಿದ್ದರೆ, ಕೆಲವರು ಆತನ ಜಾಗರೂಕತೆ ಹಾಗೂ ಸಮಯಪ್ರಜ್ಞೆ ಕಂಡು ಮೆಚ್ಚಿದ್ದಾರೆ. ಆದರೆ ಒಬ್ಬರು ಮಾತ್ರ, ಅದು ತನ್ನ ಫ್ರೆಂಡ್ ಹುಡುಕಿಕೊಂಡು ಬಂದಿತ್ತು ಎಂದು ಫನ್ನಿ ಕಾಮೆಂಟ್ ಮಾಡಿ ಸೋಷಿಯಲ್ ಮೀಡಿಯಾ ತುಂಬಾ ನಗೆ ಉಕ್ಕಿಸಿದ್ದಾರೆ. 

ಲೇಟ್‌ ಆಗಿ ಗುಟ್ಟು ರಟ್ಟಾಗಿದೆ, ಯಾರೂ ಮಾಡದ ದಾಖಲೆ ನಟ ವಿಷ್ಣುವರ್ಧನ್ ಹೆಸರಲ್ಲಿದೆ..! 

 

 

click me!