
ನ್ಯೂಯಾರ್ಕ್ (ಮಾ.5): ಅಮೆರಿಕದಲ್ಲಿ 20 ವರ್ಷದ ಪ್ರಖ್ಯಾತ ಮಹಿಳಾ ಬಾಡಿಬಿಲ್ಡರ್ ಜೋಡಿ ವ್ಯಾನ್ಸ್ ನಿಧನರಾಗಿದ್ದಾರೆ. ಕ್ರೀಡಾ ಉತ್ಸವದಲ್ಲಿ ಭಾಗವಹಿಸುವ ವೇಳೆಯಲ್ಲೇ ಅವರಿಗೆ ಹೃದಯಾಘಾತವಾಗಿತ್ತು. ತೀವ್ರ ನಿರ್ಜಲೀಕರಣದಿಂದ (ದೇಹದಲ್ಲಿ ನೀರಿನ ಕೊರತೆ) ಹೃದಯ ಸ್ತಂಭನವಾಯಿತು ಎಂದು ವ್ಯಾನ್ಸ್ ಕುಟುಂಬ ಹೇಳಿದೆ. ವ್ಯಾನ್ಸ್ ಓಹಿಯೋದ ಕೊಲಂಬಸ್‌ನಲ್ಲಿ ನಡೆದ ಅರ್ನಾಲ್ಡ್ ಸ್ಪೋರ್ಟ್ಸ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿದ್ದರು. ಆದರೆ, ಅವರು ಕ್ರೀಡೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಬದಲಿಗೆ ತರಬೇತಿ ನೀಡಲು ಬಂದಿದ್ದರು. ಕ್ರೀಡಾ ಉತ್ಸವದಲ್ಲಿಯೇ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ವೈದ್ಯರು ಆಕೆಯ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಜೋಡಿ ವ್ಯಾನ್ಸ್ ತಪ್ಪು ಮಾಡಿದ್ದರು ಎಂದ ಕೋಚ್: ವ್ಯಾನ್ಸ್ ಅವರ ತರಬೇತುದಾರ ಜಸ್ಟಿನ್ ಮಿಹಾಲಿ ಹೇಳುವ ಪ್ರಕಾರ, ಜೋಡಿ ವ್ಯಾನ್ಸ್ ಒಂದು ದೊಡ್ಡ ತಪ್ಪು ಮಾಡಿದ್ದರು ಎಂದಿದ್ದಾರೆ.ಇದನ್ನು ಲಘುವಾಗಿ ಪರಿಗಣಿಸಬಾರದು. ಅವರ ಮಾಹಿತಿಯಿಲ್ಲದೆ ಅವರು "ಅಪಾಯಕಾರಿ" ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಅವರು ಅನುಮಾನಿಸಿದ್ದಾರೆ, ಇದರಿಂದಾಗಿ ಅವರ ದೇಹದಲ್ಲಿ ನೀರಿನ ಕೊರತೆಯುಂಟಾಯಿತು ಎಂದಿದ್ದಾರೆ.
ಮಿಹಾಲಿ ಹೇಳುವ ಪ್ರಕಾರ, "ಜೋಡಿ ತನ್ನ ದೇಹವನ್ನು ಉತ್ತಮಗೊಳಿಸಲು ಎರಡು ಅಪಾಯಕಾರಿ ವಸ್ತುಗಳನ್ನು ಬಳಸಿದ್ದಳು. ಅವಳು ನನ್ನ ಮಾಹಿತಿಯಿಲ್ಲದೆ ಹಾಗೆ ಮಾಡಿದ್ದಾಳೆ. ಕುಟುಂಬಕ್ಕೂ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಇದರ ಹೊರತಾಗಿ ಆಕೆಯ ದೇಹದಲ್ಲಿ ನೀರಿನ ಕೊರತೆಯಾಗಲು ಬೇರೆ ಯಾವುದೇ ಕಾರಣವಿಲ್ಲ' ಎಂದಿದ್ದಾರೆ.
ಮದುವೆಯಾದ 3 ದಿನಕ್ಕೆ ಹಾರ್ಟ್ ಅಟ್ಯಾಕ್‌ಗೆ ಬಲಿಯಾದ ಟೆಕ್ಕಿ; ಮಂಡ್ಯದ ಗಂಡು ಶಶಾಂಕ್ ಇನ್ನಿಲ್ಲ!
ಜೋಡಿ ವ್ಯಾನ್ಸ್ 2024 ರ ಎನ್‌ಪಿಸಿ ಬ್ಯಾಟಲ್ ಆಫ್ ಟೆಕ್ಸಾಸ್‌ನ ಮಹಿಳಾ ಫಿಸಿಕ್ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಪಡೆದ ಬಾಡಿ ಬಿಲ್ಡರ್ ಎನಿಸಿದ್ದಾರೆ. ಅವರು ನಿಯಮಿತವಾಗಿ ತಮ್ಮ ಫಿಸಿಕ್ ಮತ್ತು ಬಾಡಿ ಬಿಲ್ಡಿಂಗ್ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ 8,000 ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಅವರು ಹೊಂದಿದ್ದರು.
ರಾತ್ರಿ 8.30ರ ಮುನ್ನ ಈ ಕೆಲಸ ಮಾಡ್ಬೇಡಿ… ಹೃದಯದ ಸಮಸ್ಯೆ ಹೆಚ್ಚುತ್ತೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ