
ಸಾಮಾನ್ಯವಾಗಿ ಸಾಕುಪ್ರಾಣಿಗಳು ಮರಿಗೆ ಜನ್ಮ ನೀಡುವುದನ್ನು ಬಹುತೇಕರು ನೋಡಿರುತ್ತಾರೆ. ಬೆಕ್ಕು, ನಾಯಿಗಳು ಮರಿಗಳಿಗೆ, ಹಸುಗಳು ಕರುಗಳಿಗೆ ಜನ್ಮ ನೀಡುವುದನ್ನು ನೀವು ನೋಡಿರಬಹುದು. ಆದರೆ ಕಾಡುಪ್ರಾಣಿಗಳು ಮರಗಳಿಗೆ ಜನ್ಮ ನೀಡುವ ಅಪರೂಪದ ಕ್ಷಣಗಳು ನೋಡಲು ಸಿಗುವುದು ತುಂಬಾ ಅಪರೂಪ. ಆದರೆ ಇಲ್ಲೊಂದು ಕಡೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಹೋದ ಪ್ರವಾಸಿಗರು ಜೀಬ್ರಾವೊಂದು ಮರಿಗೆ ಜನ್ಮ ನೀಡುವ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ. ಸಂರಕ್ಷಿತ ಅರಣ್ಯಗಳಿಗೆ, ರಾಷ್ಟ್ರೀಯ ಉದ್ಯಾನವನಗಳಿಗೆ ಕೆಲವೊಮ್ಮೆ ಸಫಾರಿ ಹೋದಾಗ ಕೆಲವೊಮ್ಮೆ ಯಾವ ಪ್ರಾಣಿಗಳು ನೋಡುವುದಕ್ಕೆ ಸಿಗುವುದಿಲ್ಲ, ಸಿಕ್ಕರೂ ಜಿಂಕೆಗಳು, ಕೋತಿಗಳು, ಚಿರತೆಗಳು ಕಾಣಲು ಸಿಗುತ್ತವೆ. ಆಯಾ ಪ್ರದೇಶವನ್ನು ಅವಲಂಬಿಸಿ ಅತೀ ಅಪರೂಪಕ್ಕೊಮ್ಮೆ ಸಿಂಹ ಹುಲಿಗಳು ಕಾಣ ಸಿಗುತ್ತವೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಹೀಗೆ ಸಫಾರಿ ಹೋದ ಪ್ರವಾಸಿಗರು ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ.
ಕ್ರುಗೆರ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ದೃಶ್ಯ:
ದಕ್ಷಿಣ ಆಫ್ರಿಕಾದ ಕ್ರುಗೆರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದ ಸಫಾರಿ ಬಂದ ಪ್ರವಾಸಿಗರಿಗೆ ಅಲ್ಲಿ ಜೀಬ್ರಾವೊಂದು ಮರಿಗೆ ಜನ್ಮ ನೀಡುವ ಅಪರೂಪದ ದೃಶ್ಯ ಕಾಣಲು ಸಿಕ್ಕಿದೆ. ಸಫಾರಿ ಗುಂಪಿನಲ್ಲಿದ್ದ ಆಮಿ ಡಿಪ್ಪೊಲ್ಡ್ ಮೊದಲಿಗೆ ಎದುರಿಗೆ ಸಿಕ್ಕ ಜಿರಾಫೆಗಳ ಗುಂಪನ್ನು ನೋಡಿ ಖುಷಿಪಡುತ್ತಾರೆ. ಆದರೆ ಅವರಿಗೆ ಅವರ ಗೈಡ್ ಅದಕ್ಕಿಂತಲೂ ವಿಶಿಷ್ಟವಾದ ದೃಶ್ಯವೊಂದನ್ನು ತೋರಿಸಿದ್ದಾರೆ. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಅವರಿಗೆ ಜೀಬ್ರಾವೊಂದು ದಾರಿಯಲ್ಲಿಯೇ ಮರಿಗೆ ಜನ್ಮ ನೀಡುತ್ತಿರುವ ದೃಶ್ಯ ಕಾಣಲು ಸಿಕ್ಕಿದೆ. ಈ ದೃಶ್ಯವನ್ನು ಅವರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು: ಬನ್ನೇರುಘಟ್ಟ ಉದ್ಯಾನವನದಲ್ಲಿ ಮರಿಗೆ ಜನ್ಮ ನೀಡಿದ ಝೀಬ್ರಾ
ಜೀಬ್ರಾ ಮರಿ ಹಾಕುವ ದೃಶ್ಯ ಸೆರೆ ಹಿಡಿದ ಪ್ರವಾಸಿ
ನಾವು ಪೊದೆಯಲ್ಲಿ ಚಹಾ ಕುಡಿಯುವುದನ್ನು ಮುಗಿಸಿ, ಹತ್ತಿರವಿದ್ದ ಜಿರಾಫೆಯನ್ನುನೋಡಲು ಹೋಗುತ್ತಿದ್ದೇವೆ ಎಂದು ಭಾವಿಸಿದ್ದೆವು, ಆಗ ನಮ್ಮ ಮಾರ್ಗದರ್ಶಿ ಜೀಬ್ರಾ ಮರಿಗೆ ಜನ್ಮ ನೀಡಲು ಸಿದ್ಧಗೊಳ್ಳುವುದನ್ನು ಗಮನಿಸಿದರು. ಇದು ತುಂಬಾ ರೋಮಾಂಚನಕಾರಿಯಾಗಿತ್ತು. ಮೀಸಲು ಪ್ರದೇಶದಲ್ಲಿ ಅವರು ಇದನ್ನು ಮೊದಲು ಎಂದಿಗೂ ನೋಡಿರಲಿಲ್ಲ. ಮುಂದಿನ 20 ನಿಮಿಷಗಳ ಕಾಲ, ನಾವು ಆರಂಭದಿಂದ ಅಂತ್ಯದವರೆಗೆ ವೀಕ್ಷಿಸಿದ್ದೇವೆ, ಎಂದು ಬರೆದು ಡಿಪೋಲ್ಡ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ನೋಡಿದ ಜನ ವೀಡಿಯೋ ಹಂಚಿಕೊಂಡ ಡಿಪೋಲ್ಡ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ನೀವು ಸರಿಯಾದ ಸ್ಥಳದಲ್ಲಿ ಸರಿಯಾದ ಸಮಯಕ್ಕೆ ಇರುವುದಕ್ಕೆ ಅದೃಷ್ಟ ಮಾಡಿದ್ದೀರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಆದಾಗ್ಯೂ, ಕೆಲವು ಸೋಶಿಯಲ್ ಮೀಡಿಯಾ ಬಳಕೆದಾರರು ಡಿಪೋಲ್ಡ್ ಆ ಕ್ಷಣವನ್ನು ರೆಕಾರ್ಡ್ ಮಾಡಿದ್ದಕ್ಕಾಗಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳಿಗೂ ಖಾಸಗಿತನ ಬೇಕು ಎಂದು ಒಬ್ಬರು ಹೇಳಿದ್ದಾರೆ. ಆದರೆ ಇದೆಲ್ಲದಕ್ಕೆ ಪ್ರತಿಕ್ರಿಯಿಸಿದ ಆಮಿ ಡಿಪೋಲ್ಡ್, ನಮ್ಮ ಸಫಾರಿ ಮಾರ್ಗದರ್ಶಿ ಹಲವು ವರ್ಷಗಳಿಂದ ಮೀಸಲು ಪ್ರದೇಶದಲ್ಲಿ ವಾಸಿಸುತ್ತಿದ್ದರು, ಅವರು ಪ್ರತಿದಿನ ಪ್ರಾಣಿಗಳೊಂದಿಗೆ ಇರುತ್ತಾರೆ, ಅವರು ಇದರ ಬಗ್ಗೆ ತಿಳಿದಿದ್ದಾರೆ ಮತ್ತು ನೋಡುತ್ತಾರೆ ಮತ್ತು ಕಾಮೆಂಟ್ ಮಾಡುವ ಪ್ರತಿಯೊಬ್ಬ ವ್ಯಕ್ತಿಗಿಂತ ಹೆಚ್ಚಿನದನ್ನು ಅವರು ಮಾಡುತ್ತಾರೆ, ಮತ್ತು ಅಂತಿಮವಾಗಿ, ಜೂಮ್ ಮಾಡುತ್ತಾರೆ. ನನ್ನ ಕ್ಯಾಮೆರಾ ನಿಜವಾಗಿಯೂ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ನಾವು ತುಂಬಾ ಶಾಂತವಾಗಿದ್ದೆವು, ಮತ್ತು ಜೀಬ್ರಾ ಹೆಚ್ಚೇನು ತೊಂದರೆಗೊಳಗಾಗಲಿಲ್ಲ, ಮರಿ ನಡೆಯಲು ಸಾಧ್ಯವಾದ ನಂತರ ಅವು ಬಹಳ ಸಮಯದವರೆಗೆ ಹತ್ತಿರದಲ್ಲಿಯೇ ಇದ್ದವು, ಅವು ಆ ಮಾರ್ಗದಿಂದ ಹೊರಡದ ಕಾರಣ ನಾವು ನಿಧಾನವಾಗಿ ಹಿಂದೆ ಸರಿದೆವು ಎಂದು ಸ್ಪಷ್ಟನೆ ನೀಡಿದ್ದಾರೆ.
ಜೀಬ್ರಾ ಹಾಗೂ ಡಾಂಕಿಯ ಪುಟ್ಟ ಕಂದ ಈ ಜಾಂಕಿ!
ಅಪರೂಪದ ವೀಡಿಯೋ ಇಲ್ಲಿದೆ ನೋಡಿ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ