ಮ್ಯೂಸಿಕ್ ಕನ್ಸರ್ಟ್ ವೇಳೆ ಒದ್ದೆಯಾಗಿದ್ದ ಅಭಿಮಾನಿಯೊಬ್ಬನನ್ನು ತಬ್ಬಿಕೊಂಡ ಖ್ಯಾತ ಬ್ರೆಜಿಲಿಯನ್ ಗಾಯಕ ಐರೀಸ್ ಸಸಕಿ ಕರೆಂಟ್ ಶಾಕ್‌ಗೆ ಬಲಿಯಾದ ಆಘಾತಕಾರಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.
ಮ್ಯೂಸಿಕ್ ಕನ್ಸರ್ಟ್ ವೇಳೆ ಒದ್ದೆಯಾಗಿದ್ದ ಅಭಿಮಾನಿಯೊಬ್ಬನನ್ನು ತಬ್ಬಿಕೊಂಡ ಖ್ಯಾತ ಬ್ರೆಜಿಲಿಯನ್ ಗಾಯಕ ಐರೀಸ್ ಸಸಕಿ ಕರೆಂಟ್ ಶಾಕ್‌ಗೆ ಬಲಿಯಾದ ಆಘಾತಕಾರಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಬ್ರೆಜಿಲ್‌ನ ಉತ್ತರ ಭಾಗದಲ್ಲಿರುವ ಸಲಿನೊಪೊಲಿಸ್‌ನಲ್ಲಿ ಈ ಘಟನೆ ನಡೆದಿದೆ. ಸಲಿನೊಪೊಲಿಸ್‌ನ ಸೋಲಾರ್ ಹೊಟೇಲ್‌ನಲ್ಲಿ ಈತ ನೇರ ಪ್ರಸಾರದ ಸಂಗೀತಾ ಕಾರ್ಯಕ್ರಮ ನೀಡುತ್ತಿದ್ದಾಗ ಹತ್ತಿರ ಬಂದ ಅಭಿಮಾನಿಯನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಸಮೀಪದ ಕರೆಂಟ್ ಕೇಬಲ್ ತಾಗಿ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 35 ವರ್ಷದ ಈ ಯುವ ಗಾಯಕ ಬ್ರೆಜಿಲ್‌ನಲ್ಲಿ ಪ್ರಸಿದ್ಧಿ ಪಡೆದಿದ್ದು, ಪತ್ನಿಯನ್ನು ಅಗಲಿದ್ದಾರೆ. ಇವರು ವಿವಾಹವಾಗಿ ವರ್ಷವೂ ತುಂಬಿರಲಿಲ್ಲ ಎಂದು ತಿಳಿದು ಬಂದಿದೆ.
ದ ಮಿರರ್ ವರದಿಯ ಪ್ರಕಾರ, ಮೃತ ಗಾಯಕ ಐರೀಸ್ ಸಸಕಿ ಅತ್ತೆ ರೀಟಾ ಮಾಟೋಸ್ ಅವರು ಕೂಡ ಈ ಲೈವ್ ಕಾರ್ಯಕ್ರಮದ ವೇಳೆ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ. ಸ್ಥಳೀಯ ನ್ಯೂಸ್ ಏಜೆನ್ಸಿಯ ವರದಿಯ ಪ್ರಕಾರ, ಐರೀಸ್ ಸಸಕಿ ಅತ್ತೆ ರೀಟಾ ಮಾಟೋಸ್ ಹೇಳುವಂತೆ , ಸಸಕಿ ಅವರ ಸಂಗೀತಾ ಕಾರ್ಯಕ್ರಮವನ್ನು ನಿರ್ದಿಷ್ಟ ಸಮಯಕ್ಕೆ ನಿಗದಿಪಡಿಸಲಾಗಿತ್ತು, ಆದರೆ ನಂತರದಲ್ಲಿ ಸ್ವಲ್ಪ ಮುಂದೂಡಲಾಗಿತ್ತು. ಆದರೆ ಅಲ್ಲಿ ನಿಜವಾಗಿಯೂ ಏನು ಸಂಭವಿಸಿತು ಎಂದು ತಿಳಿಯಲು ಈಗ ನಾವು ಆ ಸಮಯದಲ್ಲಿ ಅವರೊಂದಿಗೆ ಇದ್ದವರನ್ನು ಸಂಪರ್ಕಿಸುತ್ತಿದ್ದೇವೆ. ನಾವು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡುವ ಹೇಳಿಕೆಯಲ್ಲಿ ಎಲ್ಲ ವಿವರ ನೀಡಲಿದ್ದೇವೆ ಎಂದು ಹೇಳಿದ್ದಾರೆ.
undefined
ಜುಂಬಾ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!
ಆದರೆ ಮ್ಯೂಸಿಕ್ ಕನ್ಸರ್ಟ್‌ಗೆ ಬಂದವ ಏಕೆ ಒದ್ದೆಯಾಗಿದ್ದ ಎಂಬ ಬಗ್ಗೆ ಮಾಹಿತಿ ಇಲ್ಲ, ಈ ಬಗ್ಗೆ ಸಲಿನೊಪೊಲಿಸ್‌ನ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಘಟನೆ ನಡೆದ ಹೊಟೇಲ್ ಆಡಳಿತವೂ ಕೂಡ ಘಟನೆ ಬಗ್ಗೆ ಶಾಕ್ ವ್ಯಕ್ತಪಡಿಸಿದೆ. ಹಠಾತ್ ಸಾವಿಗೀಡಾದ ಗಾಯಕ ಸಸಕಿ ಅವರ ಕುಟುಂಬಕ್ಕೆ ಎಲ್ಲಾ ಸಹಾಯ ಮಾಡಲು ತಾವು ಬದ್ಧರಾಗಿದ್ದೇವೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಅಧಿಕಾರಿಗಳ ಸಂಪೂರ್ಣವಾಗಿ ಸಹಕರಿಸಲು ಬದ್ಧರಾಗಿದ್ದೇವೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಹೊಟೇಲ್ ಮ್ಯಾನೇಜ್ಮೆಂಟ್ ಪ್ರಕಟಣೆಯಲ್ಲಿ ಹೇಳಿದೆ.
ಬ್ಯಾಡ್ಮಿಂಟನ್ ಆಡುತ್ತಲೇ ಹೃದಯಾಘಾತ, ನೇರ ಪ್ರಸಾರದಲ್ಲಿ ಮಗನ ಸಾವು ಕಣ್ಣಾರೆ ಕಂಡ ಪೋಷಕರಿಗೆ ಆಘಾತ!
ಸಸಕಿ ಪತ್ನಿ ಮರಿಯಾನಾ ಕೂಡ ಪತಿಯ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಯೂ ಸಸಕಿ ಅಭಿಮಾನಿಗಳು ಯುವ ಗಾಯಕನ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಈತ ಇನ್ಸ್ಟಾಗ್ರಾಮ್‌ನಲ್ಲಿ ಮಾಡಿದ ಕೊನೆಯ ಪೋಸ್ಟ್ ಕೂಡ ವೈರಲ್ ಆಗಿದೆ. 2023ರ ಡಿಸೆಂಬರ್‌ನಲ್ಲಿ ಇವರು ಕೊನೆಯದಾಗಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ನಲ್ಲಿ ಆತ ಹಾಡು ಹಾಡ್ತಿರುವ ವೀಡಿಯೋ ಇದೆ.