ಏಷ್ಯಾ ಜ್ಯೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿದ್ದ 17ರ ಹರೆಯದ ಬ್ಯಾಡ್ಮಿಂಟನ್ ಪ್ಲೇಯರ್ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪಂದ್ಯ ನೇರಪ್ರಸಾರ ನೋಡುತ್ತಿದ್ದ ಪೋಷಕರು ಆಘಾತಗೊಂಡಿದ್ದಾರೆ.
ಬೀಝಿಂಗ್(ಜು.02) ಏಷ್ಯಾ ಜ್ಯೂನಿಯರ್ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಇಂಡೋನೇಷಿಯಾದ ಯೋಗ್ಯಾಕರ್ತಾದಲ್ಲಿ ಆಯೋಜಿಸಿದ್ದ ಈ ಟೂರ್ನಿಯಲ್ಲಿ ಆಡುತ್ತಿದ್ದ ಚೀನಾದ 17ರ ಹರೆಯರ ಝಾಂಗ್ ಝಿಜೆ ಆಟದ ಮಧ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಜಪಾನ್‌ನ ಸ್ಪರ್ಧಿ ಕಝುಮಾ ಕವಾನೋ ವಿರುದ್ಧ ಕಣಕ್ಕಿಳಿದಿದ್ದ ಯಾಂಗ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಏಕಾಏಕಿ ಹೃದಯಾಘಾತಕ್ಕೆ ತುತ್ತಾಗಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿದರೂ ಝಾಂಗ್ ಬದುಕಿ ಉಳಿಯಲಿಲ್ಲ.
ಪಂದ್ಯ ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ. ಝಾಂಗ್ ಝಿಜೆ ಹಾಗೂ ಕಝಮಾ ಇಬ್ಬರು ಕೋರ್ಟ್‌ನಲ್ಲಿ ಟಾಸ್ ಪ್ರಕ್ರಿಯೆ ಮುಗಿಸಿ ಗೇಮ್ ಆರಂಭಿಸಿದ್ದರು. ಮೊದಲ ಗೇಮ್‌ನ ಆರಂಭದಲ್ಲೇ ಝಾಂಗ್ ಝಿಜೆ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಪ್ರಬಲ ಪೈಪೋಟಿ ಆರಂಭಗೊಂಡಿತ್ತು. ಕಾಕ್ ಹೆಕ್ಕಿ ಪ್ರತಿಸ್ಪರ್ಧಿ ಕಝಮಾಗೆ ನೀಡಿದ ಝಾಂಗ್ ಸರ್ವ್ ಎದುರಿಸಲು ಸಜ್ಜಾಗಿ ನಿಂತರು
.ಗೆಳೆಯರೊಂದಿಗೆ ಸ್ನೂಕರ್ ಆಡುವಾಗಲೇ ಯುವಕನಿಗೆ ಹೃದಯಾಘಾತ; ಸ್ಥಳದಲ್ಲೇ ಹಾರಿಹೋಯ್ತು ಪ್ರಾಣಪಕ್ಷಿ!
ಅತ್ತ ಕಝಮಾ ಸರ್ವ್ ಪೊಸಿಶನ್ ತೆಗೆದುಕೊಳ್ಳುತ್ತಿದ್ದಂತೆ ಝಾಂಗ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆತಂಕ ಮನೆ ಮಾಡಿದೆ. ಸಿಬ್ಬಂದಿಗಳು ಒಂದೆರಡು ಕ್ಷಣ ನೋಡಿದ್ದಾರೆ. ಆದರೆ ಝಾಂಗ್ ಎಳಲಿಲ್ಲ. ಹೀಗಾಗಿ ಸಿಬ್ಬಂದಿ ಕೋರ್ಟ್ ಒಳ ಪ್ರವೇಶಿಸಿ ನೆರವಿಗೆ ಆಗಮಿಸಿದ್ದಾರೆ. ಈ ವೇಲೆ ಝಾಂಗ್ ಮೇಲೆಳುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಸಿಬ್ಬಂದಿಗಳು ಅಲ್ಲೆ ನಿಂತಿದ್ದಾರೆ. ಆದರೆ ಝಾಂಗ್‌ಗೆ ಮೇಲೆಳಲು ಸಾಧ್ಯವಾಗಿಲ್ಲ. ಇತ್ತ ಸಿಬ್ಬಂದಿಗಳು ಮೆಡಿಕಲ್ ತಂಡಕ್ಕೆ ಸೂಚನೆ ನೀಡಿದ್ದಾರೆ.
ಗ್ಯಾಲರಿಯಲ್ಲಿ ಕುಳಿತಿದ್ದ ಮೆಡಿಕಲ್ ತಂಡದ ಸ್ಟಾಫ್ ಓಡೋಡಿ ಬಂದಿದ್ದಾರೆ. ತುರ್ತು ನೆರವು ನೀಡಲು ಮುಂದಾಗಿದ್ದಾರೆ. ಆದರೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಅರಿತ ಮೆಡಿಕಲ್ ತಂಡ ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಆಸ್ಪತ್ರೆಯಲ್ಲಿ ಝಾಂಗ್ ಉಳಿಸಲು ಎಲ್ಲಾ ಪ್ರಯತ್ನ ಮಾಡಲಾಗಿದೆ.
33 ಕೋಟಿ ಗೆದ್ದವನಿಗೆ ಒಂದು ರೂ ಅನುಭವಿಸೋ ಯೋಗ ಇಲ್ಲ: ಲಾಟರಿ ಗೆಲ್ಲುತ್ತಿದ್ದಂತೆ ಎಳೆದೊಯ್ದ ಜವರಾಯ
ತುರ್ತು ನಿಘಾ ಘಟಕದಲ್ಲಿ ಸತತ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಝಾಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಏಷ್ಯಾ ಚಾಂಪಿಯನ್‌ಶಿಪ್ ಟೂರ್ನಿಗೆ ಆಘಾತವಾಗಿದೆ. ಅತ್ಯುತ್ತ ಯುವ ಪ್ರತಿಭೆ ಹಠಾತ್ ನಿಧನಕ್ಕೆ ಬ್ಯಾಡ್ಮಿಂಟನ್ ದಿಗ್ಗಜರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಝಾಂಗ್ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಆದರೆ ಹೃದಯಾಘಾತಕ್ಕೆ ಬಲಿಯಾಗಿರುವುದು ನಿಜಕ್ಕೂ ಅಚ್ಚರಿ ಹಾಗೂ ನೋವಾಗಿದೆ ಎಂದು ಟೂರ್ನಿ ಆಯೋಜಕರು ಹೇಳಿದ್ದಾರೆ.
ಇತ್ತ ಮಗನ ಆಟವನ್ನು ನೇರಪ್ರಸಾರದ ಮೂಲಕ ನೋಡುತ್ತಿದ್ದ ಪೋಷಕರು ಆಘಾತಕ್ಕೊಳಗಾಗಿದ್ದರೆ. ಮಗನ ಮೃತದೇಹ ಪಡೆಯಲು ಇಂಡೋನೇಷಿಯಾಗೆ ಪ್ರಯಾಣ ಬೆಳೆಸಿದ್ದಾರೆ.
