AI ಫ್ಯಾಶನ್ ಶೋನಲ್ಲಿ ಜಾಗತಿಕ ಗಣ್ಯರ ವಾಕ್; ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಪ್ರಧಾನಿ ಮೋದಿ, ವಿಡಿಯೋ ನೋಡಿ

By Mahmad Rafik  |  First Published Jul 22, 2024, 11:23 AM IST

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬರಾಕ್ ಒಬಮಾ, ಉಪ ಅಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಹಲವರಿದ್ದಾರೆ. ಎಐ ಮ್ಯಾಜಿಕ್‌ನಲ್ಲಿ ಎಲ್ಲಾ ರಾಜಕೀಯ ಗಣ್ಯರು, ಉದ್ಯಮಿಗಳು ತುಂಬಾ ವಿಭಿನ್ನವಾಗಿ ಕಾಣಿಸುತ್ತಿರೋದು ಮಾತ್ರ ಸತ್ಯ. 


ನವದೆಹಲಿ: ಟೆಸ್ಲಾ ಸಿಇಓ ಎಲಾನ್ ಮಸ್ಕ್ ಸೋಮವಾರ ಎಐ ಜನರೇಟೆಡ್  ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ಶಾಕ್ ಆಗಿ, ನಂತರ ಚೆನ್ನಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಜಾಗತೀಕ ರಾಜಕೀಯ ಗಣ್ಯರು ಮಾಡೆಲ್‌ಗಳಾಗಿ ವಿಶೇಷ ವೇಷಭೂಷಣ ಧರಿಸಿ ರ್ಯಾಂಪ್ ಮೇಲೆ ವಾಕ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸಹ ಇರೋದನ್ನು ಗಮನಿಸಬಹುದಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬರಾಕ್ ಒಬಮಾ, ಉಪ ಅಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಹಲವರಿದ್ದಾರೆ. ಎಐ ಮ್ಯಾಜಿಕ್‌ನಲ್ಲಿ ಎಲ್ಲಾ ರಾಜಕೀಯ ಗಣ್ಯರು, ಉದ್ಯಮಿಗಳು ತುಂಬಾ ವಿಭಿನ್ನವಾಗಿ ಕಾಣಿಸುತ್ತಿರೋದು ಮಾತ್ರ ಸತ್ಯ. 

ಈ ವಿಡಿಯೋ ಹಂಚಿಕೊಂಡಿರುವ ಎಲಾನ್ ಮಸ್ಕ್, ಎಐ ಫ್ಯಾಷನ್‌ಗೆ ಇದು ಸೂಕ್ತವಾದ ಸಮಯ ಎಂಬ ಸಾಲನ್ನು ಬರೆದುಕೊಂಡಿದ್ದಾರೆ. ಪೋಪ್ ಫ್ರಾನ್ಸಿಸ್ ವೈಟ್ ಪಫರ್ ಕೋಟ್ ಧರಿಸಿ ಬರುತ್ತಾರೆ. ವೈಟ್‌ ಪಫರ್ ಕೋಟ್‌ಗೆ ಗೋಲ್ಡನ್ ಕಲರ್ ಬೆಲ್ಟ್, ಒಂದು ಕೈಯಲ್ಲಿ ಸ್ಟಿಕ್ ಮತ್ತೊಂದು ಕೈಯಲ್ಲಿ ಪುಟಾಣಿ ಹ್ಯಾಂಡ್‌ ಬ್ಯಾಗ್ ನಡೆದುಕೊಂಡು ಬರುವಂತೆ ಎಐ ಮೂಲಕ ಸೃಷ್ಟಿಸಲಾಗಿದೆ. 

Tap to resize

Latest Videos

undefined

ಸ್ಟೈಲಿಶ್ ಲುಕ್‌ನಲ್ಲಿ ಪ್ರಧಾನಿ ಮೋದಿ!

ಈ ಎಐ ಫ್ಯಾಶನ್ ಶೋನಲ್ಲಿ ನರೇಂದ್ರ ಮೋದಿ ಸಹ ವಾಕ್ ಮಾಡಿದ್ದಾರೆ. ಈ ಫ್ಯಾಶನ್ ಶೋನಲ್ಲಿ ಮೋದಿಯವರು ಬಣ್ಣ ಬಣ್ಣದ ಜಾಕೆಟ್ ಧರಿಸಿದ್ದಾರೆ. ಮೋದಿ ಧರಿಸಿದ ಬಣ್ಣದ ಲಾಂಗ್ ಜಾಕೆಟ್ ಮೇಲೆ ರೇಖಾಗಣಿತ ಆಕೃತಿಗಳನ್ನು ಮುದ್ರಿಸಲಾಗಿದೆ. ಬ್ಲ್ಯಾಕ್ ಸನ್‌ಗ್ಲಾಸ್ ಧರಿಸಿರುವ ಎಐ  ಜನರೇಟೆಡ್ ಪ್ರಧಾನಿ ಮೋದಿ ಸಕತ್ ಸ್ಟೈಲಿಶ್ ಆಗಿ ಕಾಣಿಸುತ್ತಾರೆ. ಇದೀಗ ಪ್ರಧಾನಿ ಮೋದಿಯವರ ಈ ಎಐ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮೈಕ್ರೋಸಾಫ್ಟ್‌ ಸಾಫ್ಟ್‌ವೇರ್‌ನಲ್ಲಿ ವ್ಯತ್ಯಯ; ಸಿಗರೇಟು ಸೇದುತ್ತ ಮಲಗಿರುವ ವ್ಯಕ್ತಿಯ ಫೋಟೋ ಹಂಚಿಕೊಂಡ ಮಸ್ಕ್

ಸೂಪರ್ ಹೀರೋ ಆದ ಎಲಾನ್ ಮಸ್ಕ್

ಇನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಮಾ ಅವರನ್ನು ಹಲವು ಲುಕ್‌ಗಳಲ್ಲಿ ತೋರಿಸಲಾಗಿದೆ. ಬರಾಕ್ ಒಬಮಾ ಅವರನ್ನು ಬ್ಲಾಕ್‌ಮೆನ್ ಸಿನಿಮಾ ಸೇರಿದಂತೆ ಬೇರೆ ಬೇರೆ ಲುಕ್‌ನಲ್ಲಿ ಕಾಣಬಹುದಾಗಿದೆ. ಇದರ ಜೊತೆ ಗೋಕು, ಬಾಸ್ಕೆಟ್ ಬಾಲ್ ಕಾಸ್ಟ್ಯೂಮ್‌ನಲ್ಲಿಯೂ ಒಬಮಾ ಮಿಂಚಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಲೌಲ್ಸ್ಮ ವುಯಿಟೊನ್ ಔಟ್‌ಫಿಟ್‌ನಲ್ಲಿ ಬಂದ್ರೆ, ಅನಾರೋಗ್ಯದಿಂದ ಬಳಲುತ್ತಿರುವ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ವೀಲ್ ಚೇರ್‌ನಲ್ಲಿಯೇ ಬಂದಿದ್ದಾರೆ. ಇನ್ನು ಎಲಾನ್ ಮಸ್ಕ್ ಟೆಸ್ಲಾ ಮತ್ತು ಎಕ್ಸ್ ಚಿಹ್ನೆಯ ಕಾಸ್ಟೂಮ್ ಹಾಕಿ ಸೂಪರ್ ಹೀರೋನಂತೆ ರ್ಯಾಂಪ್ ವಾಕ್ ಮಾಡಿದ್ದಾರೆ. 

ಉತ್ತರ ಕೊರಿಯಾ ಲೀಡರ್ ಕಿಮ್ ಜಾಂಗ್ ಬ್ಯಾಗಿ ಟ್ರೊಸೆರ್‌ಗೆ ಲಾಂಗ್ ಹೂಡಿ ಧರಿಸಿ ಅದಕ್ಕೆ ಗ್ರ್ಯಾಂಡ್ ಜವೆಲ್ ಹಾಕಿ ಪಕ್ಕಾ ರ್ಯಾಪರ್ ರೀತಿ ಕಂಡಿದ್ದಾರೆ. ಇನ್ನುಳಿದಂತೆ ಆಪಲ್ ಸಿಇಓ ಟಿಮ್ ಕುಕ್ ಕೊರಳಲ್ಲಿ ಐಫೋನ್ ಐಪ್ಯಾಡ್ ಹಾಕಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ತ್ರುಬಿಯೋ, ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೊಸಿ ವಿಶೇಷವಾಗಿ ಕಾಣಿಸಿದ್ದಾರೆ.

ಅಂಬಾನಿ ಮಧ್ಯಮ ವರ್ಗದ ಕುಟುಂಬವಾದರೆ.. ಅನಂತ್-ರಾಧಿಕಾ ಮದುವೆ ಹೇಗಿರುತ್ತೆ ಗೊತ್ತಾ? AI ಮ್ಯಾಜಿಕ್ ನೋಡಿ ಜನತೆ ಶಾಕ್

ಅಂಬಾನಿ ಮದುವೆ ಎಐ ಲುಕ್ ವೈರಲ್ 

ಇಡೀ ವಿಶ್ವದ ಗಮನ ಸೆಳೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಎಐ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಂಬಾನಿ ಕುಟುಂಬ ಮಧ್ಯಮ ವರ್ಗದವರಾಗಿದ್ದು ಅನಂತ್ -ರಾಧಿಕಾ ಮದುವೆ ಹೇಗೆ ನಡೆಯುತ್ತಿತ್ತು ಎಂಬುದನ್ನು ಎಐ ಲುಕ್‌ನಲ್ಲಿ ತೋರಿಸಲಾಗಿತ್ತು. ಬಾಲಿವುಡ್ ವಿವಾಹ ಸಿನಿಮಾದಲ್ಲಿ ಮದುವೆ ದೃಶ್ಯಗಳನ್ನು ಅಂಬಾನಿ ಮದುವೆಗೆ ಲಿಂಕ್ ಮಾಡಲಾಗಿತ್ತು.

High time for an AI fashion show pic.twitter.com/ra6cHQ4AAu

— Elon Musk (@elonmusk)
click me!