ಸ್ತನ ಕಸಿ ಶಸ್ತ್ರಚಿಕಿತ್ಸೆ ವೀಡಿಯೋ ವೈರಲ್: ವೈದ್ಯರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆ

By Anusha Kb  |  First Published Jul 22, 2024, 12:39 PM IST

ಚೀನಾದಲ್ಲಿ ಆಸ್ಪತ್ರೆ ಸಿಬ್ಬಂದಿಯೇ ಶಸ್ತ್ರಚಿಕಿತ್ಸೆಯ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತಮ್ಮ ವೃತ್ತಿ ನಿಯಮವನ್ನು ಮರೆತಿರುವುದರ ಜೊತೆಗೆ ಮಹಿಳೆಯ ಮಾನಕ್ಕೂ ಭಂಗ ತಂದಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ಮಹಿಳೆ ಈಗ ತಾನು ಶಸ್ತ್ರಚಿಕಿತ್ಸೆಗೊಳಗಾದ ಆಸ್ಪತ್ರೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.


ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ವೈದ್ಯಕೀಯ ಕ್ಷೆತ್ರದಲ್ಲಿ ಕಾರ್ಯನಿರ್ವಹಿಸುವ ದಾದಿಯಿಂದ ಹಿಡಿದು, ವೈದ್ಯರು, ಸ್ಕ್ಯಾನಿಂಗ್ ಸ್ಪೆಷಲಿಸ್ಟ್, ಪಿಸಿಯೋಥೆರಪಿಸ್ಟ್ ಹೀಗೆ ಎಲ್ಲರಿಗೂ ಇದು ಅನ್ವಯ, ಅಲ್ಲದೇ ರೋಗಿಗಳ ಗೌಪ್ಯತೆ ಕಾಪಾಡುವುದು, ಅವರ ವೈಯಕ್ತಿಕ ವಿಚಾರವನ್ನು ವೈದ್ಯಕೀಯ ಕಾರಣದ ಅಥವಾ ವೈದ್ಯರ ಹೊರತಾಗಿ ಬೇರೆಯವರಿಗೆ ಹೇಳುವುದು ತೋರಿಸುವುದು ಕೂಡ ಶಿಕ್ಷಾರ್ಹ ಅಪರಾಧ. ಹೀಗಿರುವಾಗ ಚೀನಾದಲ್ಲಿ ಆಸ್ಪತ್ರೆ ಸಿಬ್ಬಂದಿಯೇ ಶಸ್ತ್ರಚಿಕಿತ್ಸೆಯ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತಮ್ಮ ವೃತ್ತಿ ನಿಯಮವನ್ನು ಮರೆತಿರುವುದರ ಜೊತೆಗೆ ಮಹಿಳೆಯ ಮಾನಕ್ಕೂ ಭಂಗ ತಂದಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ಮಹಿಳೆ ಈಗ ತಾನು ಶಸ್ತ್ರಚಿಕಿತ್ಸೆಗೊಳಗಾದ ಆಸ್ಪತ್ರೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.

ಬಹುತೇಕ  ಜನಸಾಮಾನ್ಯರು ದೇವರು ಕೊಟ್ಟ ಸೌಂದರ್ಯಕ್ಕೆ ತೃಪ್ತಿಪಟ್ಟುಕೊಂಡು ಸುಮ್ಮನಿದ್ದರೆ ದುಡ್ಡಿರುವವರು, ಸಿನಿಮಾ ನಟ ನಟಿಯರು ಮತ್ತಷ್ಟು ಚಂದಗಾಣುವ ಆಸೆಗೆ ಬಿದ್ದು, ತಮ್ಮ ದೇಹದ ಅಂಗಾಂಗಗಳಿಗೆ ಕತ್ತರಿ ಹಾಕಿಸಿಕೊಳ್ಳುತ್ತಾರೆ. ಈ ಶಸ್ತ್ರಚಿಕಿತ್ಸೆಗಳನ್ನು ಬಹಳ ಗೌಪ್ಯವಾಗಿಡಲಾಗುತ್ತದೆ. ಅದೇ ರೀತಿ ಚೀನಾದಲ್ಲಿ ಗಾವೋ ಎಂಬ ಹೆಸರಿನ ಮಹಿಳೆಯೊಬ್ಬರು ತಮ್ಮ ಸ್ತನಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸೆಂಟ್ರಲ್ ಚೀನಾದ ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆಯಲ್ಲಿ ಜನವರಿ ತಿಂಗಳಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ಆದರೆ ಈ ಶಸ್ತ್ರಚಿಕಿತ್ಸೆ ನಡೆದು ಐದು ತಿಂಗಳ ನಂತರ ಈಕೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ವೀಡಿಯೋ ಚೀನಾದ ಸಾಮಾಜಿಕ ಜಾಲತಾಣವಾದ ಡೂಯಿನ್‌( Douyin)ನಲ್ಲಿ ವೈರಲ್ ಆಗಿದೆ.

Latest Videos

undefined

ಸುಶ್ಮಿತಾ ಸೇನ್ ಸೇರಿದಂತೆ ಬ್ರೆಸ್ಟ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾದ ಟಾಪ್ ನಟಿಯರು

ಚೀನಾದ ಮಾಧ್ಯಮಗಳ ವರದಿಯ ಪ್ರಕಾರ, ಈ ವೈರಲ್ ಆದ ವೀಡಿಯೋದಲ್ಲಿ ಸರ್ಜರಿ ಮೊದಲಿನ ಹಾಗೂ ಸರ್ಜರಿ ನಂತರದ ದೃಶ್ಯಗಳಿವೆ. ಗಾವೋ ಅನಸ್ಥೇಸಿಯಾದ ಅಮಲಿನಲ್ಲಿದ್ದು, ಪೂರ್ಣವಾಗಿ ಬ್ಯಾಂಡೇಜ್‌ ಹಾಕಿಕೊಂಡಿರುವುದು ವೀಡಿಯೋದಲ್ಲಿ ಸೆರೆಯಾಗಿದೆಯಂತೆ ಇದರ ಜೊತೆಗೆ ಮತ್ತೊಂದು ಸೈಡ್‌ನಲ್ಲಿ ಇನ್ನು ಹಲವರು ಮಹಿಳೆಯರು ವೀಡಿಯೋದಲ್ಲಿ ಕಾಣಿಸುತ್ತಿದ್ದಾರೆ. 

ಹೀಗೆ ತನ್ನ ವೀಡಿಯೋ ವೈರಲ್ ಮಾಡುವ ಮೂಲಕ ಆಸ್ಪತ್ರೆ ತನ್ನ ಖಾಸಗಿತನದ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿರುವ ಮಹಿಳೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಗೆ ಮನವಿ ಮಾಡಿದ್ದಾರೆ. ಆದರೆ ಹಲವು ಮನವಿಗಳ ನಂತರವೂ ಆಸ್ಪತ್ರೆ ಆರೋಪಿಗಳನ್ನು ಪತ್ತೆ ಮಾಡಿ ಅವರನ್ನು ಶಿಕ್ಷಿಸುವುದಕ್ಕೆ ಮುಂದಾಗಿಲ್ಲ, ಜೊತೆಗೆ ಆ ವೀಡಿಯೋವನ್ನು ಕೂಡ ಸಾಮಾಜಿಕ ಜಾಲತಾಣದಿಂದ ತೆಗೆದಿಲ್ಲ, ಅಲ್ಲದೇ ಮೂರು ತಿಂಗಳುಗಳಿಗಿಂತ ಹಳೆಯ ವೀಡಿಯೋ ಸಿಸಿಟಿವಿ ಪೂಟೇಜ್‌ಗಳನ್ನು ಡಿಲೀಟ್ ಮಾಡಿರುವುದರಿಂದ ಆರೋಪಿಗಳ ಪತ್ತೆ ಅಸಾಧ್ಯ ಎಂದು ಆಸ್ಪತ್ರೆ ಹೇಳಿದೆ. ಅಲ್ಲದೇ ಈ ಘಟನೆಗೆ ಜವಾಬ್ದಾರರಾದ ವ್ಯಕ್ತಿಯು ಉದ್ಯೋಗ ತೊರೆದಿದ್ದಾಗಿ ಆಸ್ಪತ್ರೆ ಹೇಳಿದೆ.

ಹೇಗಿದ್ದವಳು ಹೇಗಾದ್ಲು! ತಮನ್ನ ಭಾಟಿಯಾ ಸ್ತನಕ್ಕೂ ಬಿದ್ದಿದ್ಯಾ ಕತ್ತರಿ? ಏನಿದು ಗುಸುಗುಸು?

ಹೀಗಾಗಿ ಬೇಸರಗೊಂಡಿರುವ ಮಹಿಳೆ ಗಾವೋ, ಆಸ್ಪತ್ರೆ ವಿರುದ್ಧ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ. ಅಲ್ಲದೇ ಗಾವೋ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬೆಂಬಲಿಸಿದ್ದು, ಆಸ್ಪತ್ರೆಯ ನಿರ್ಲಕ್ಷ್ಯದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೀನಾದ ಮಾಧ್ಯಮಗಳ ಪ್ರಕಾರ ಇದರ ಕಾನೂನು ಪರಿಣಾಮಗಳ ಬಗ್ಗೆ ಅಲ್ಲಿನ ವಕೀಲರೊಬ್ಬರು ಪ್ರತಿಕ್ರಿಯಿಸಿದ್ದು, ರೋಗಿಯ ಒಪ್ಪಿಗೆ ಇಲ್ಲದೇ ಅವರ ಮುಖ ತೋರಿಸುವುದು ವೀಡಿಯೋ ಮಾಡುವುದು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಹೊಸ ಉದ್ಯೋಗಿ ಅಥವಾ ಮಾಜಿ ಉದ್ಯೋಗಿ ಎಂಬುದನ್ನು ಲೆಕ್ಕಿಸದೇ ಆರೋಪಿ ಶಿಕ್ಷೆಗೆ ಅರ್ಹನಾಗುತ್ತಾನೆ ಎಂದು ಹೇಳಿದ್ದಾರೆ.

click me!