ಅಪ್ಪ ಭದ್ರವಾಗಿಟ್ಟದ್ದ ಮ್ಯಾಪ್‌ನಿಂದ 80 ವರ್ಷ ಹಳೆ ನಿಧಿ ಪತ್ತೆ ಹಚ್ಚಿದ ಮಗ, ಇದರ ಹಿಂದಿದೆ ಕರುಣಾಜನಕ ಹಿಸ್ಟರಿ!

By Suvarna NewsFirst Published Feb 20, 2023, 5:34 PM IST
Highlights

ಬರೋಬ್ಬರಿ 80 ವರ್ಷಗಳ ಹಿಂದೆ ಹೂತಿಟ್ಟ ನಿಧಿ. ಈ ನಿಧಿ ಕುರಿತು ಸಣ್ಣ ಸುಳಿವಿನ ಜಾಡು ಹಿಡಿದು ಹೊರಟ ಕುಟುಂಬ ಸದಸ್ಯ ವರ್ಷಗಳ ಕಾಲ ನಡೆಸಿದ ಪ್ರಯತ್ನಿದಿಂದ ಕೊನೆಗೂ ಕೋಟಿ ಕೋಟಿ ರೂಪಾಯಿ ಮೌಲ್ಯದ ನಿಧಿ ಪತ್ತೆಯಾಗಿದೆ.

ಕೇಪ್ ಟೌನ್(ಫೆ.20) ಅದು ಎರಡನೇ ಮಹಾಯುದ್ಧದ ಸಂದರ್ಭ. ಹುಟ್ಟಿ ಬೆಳೆದ ಮನೆ ಬಿಡಬೇಕಾದ ಪರಿಸ್ಥಿತಿ. ಅದೆಷ್ಟೇ ಕುಟುಂಬಗಳು ಈ ಯುದ್ಧದ ವೇಳೆ ಸುಟ್ಟು ಭಸ್ಮವಾಗಿದೆ. ಹಲವು ಕುಟುಂಬಗಳು ನಾಪತ್ತೆಯಾಗಿವೆ. ಸೈನ್ಯದ ದಾಳಿ ಮುನ್ಸೂಚನೆ ಅರಿತ ಕುಟುಂಬವೊಂದು ರಾತ್ರೋರಾತ್ರಿ ಪಲಾಯನ ಮಾಡಿತು. ಆದರೆ ಪಲಾಯನಕ್ಕೂ ಮುನ್ನ ತಮ್ಮಲ್ಲಿದ್ದ ಬೆಳ್ಳಿ ನಿಧಿಯನ್ನು ಹೂತುಹಾಕಿತ್ತು. ಇದೀಗ ಈ ನಿಧಿಯನ್ನು 80 ವರ್ಷಗಳ ಬಳಿಕ ಅದೇ ಕುಟುಂಬ ಸದಸ್ಯ ಪತ್ತೆ ಹಚ್ಚಿ ಹೊರತೆಗಿದಿದ್ದಾರೆ. ಈ ಕುಟುಂಬ ಭದ್ರವಾಗಿಟ್ಟಿದ್ದ ಕೈಬರದ ಮ್ಯಾಪ್‌ನಿಂದ ಈ ನಿಧಿ ಪತ್ತೆ ಹಚ್ಚಲಾಗಿದೆ.  ಈ ಮ್ಯಾಪ್ ಮೂಲಕ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಬೆಳ್ಳಿ ನಿಧಿಯನ್ನು ಶೋಧಿಸಿ ಹೊರತೆಗೆಯಲಾಗಿದೆ. 

ಅದು 1939ರ ಕಾಲ. ಪೋಲಾಂಡ್‌ನ ಪೂರ್ವವಲಯದಲ್ಲಿದ್ದ ಕುಟುಂಬ ಅಳುಕಿನಿಂದಲೇ ಜೀವನ ಸಾಗಿಸುತ್ತಿತ್ತು. ಕಾರಣ ಸೋವಿಯತ್ ಸೇನೆ ಯಾವುದೇ ಕ್ಷಣದಲ್ಲಿ ದಾಳಿ ಮಾಡುವ ಸೂಚನೆ ಸಿಕ್ಕಿತ್ತು. ಹಲವು ಪ್ರಾಂತ್ಯಗಳಲ್ಲಿನ ದಾಳಿಯಲ್ಲಿ ಅಮಾಯಕ ನಾಗರೀಕರು ಬಲಿಯಾಗಿದ್ದರು. ಸೋವಿಯತ್ ಸೇನೆ ದಾಳಿಗೂ ಕೆಲ ದಿನಗಳ ಮುನ್ನ ಕುಟುಂಬ ತಾವು ಹುಟ್ಟಿ ಬೆಳೆದ ಮನೆ ಬಿಟ್ಟು ಹೊರಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ ತಮ್ಮ ಮನೆಯಲ್ಲಿದ್ದ ಅಮೂಲ್ಯ ಬೆಳ್ಳಿಯ ನಿಧಿಯನ್ನು ತಮ್ಮದೇ ಮನೆಯ ಹಿಂಭಾಗದ ಜಾಗದಲ್ಲಿ ಹೂತು ಹಾಕಲಾಗಿತ್ತು. ಬಳಿಕ ನಾಲ್ವರು ಸಹೋದರರು ಒಂದೊಂದು ಜಾಗಕ್ಕೆ ಪಲಾಯನ ಮಾಡಿದರು. ಒಟ್ಟಿಗೆ ತೆರಳಿದರೆ ಹತ್ಯೆಯಾಗುವ ಸಂಭವ ಜಾಸ್ತಿ ಇತ್ತು.

Latest Videos

ಸಮುದ್ರದಾಳದ ಕಸ ಸ್ವಚ್ಛಗೊಳಿಸುತ್ತಿದ್ದವರ ಕೈ ಸೇರಿತು ಚಿನ್ನದ ನಾಣ್ಯಗಳ ಖಜಾನೆ!

ಪೋಲ್ಯಾಂಡ್‌ನಲ್ಲೇ ಉಳಿದುಕೊಂಡ ಆ್ಯಡಮ್ ಗ್ಲೇಜೆವಸ್ಕಿ ತಂದೆ ತಾವು ವಾಸವಿದ್ದ ಮನೆ ಹಾಗೂ ಹೂತಿಟ್ಟಿದ್ದ ನಿಧಿಯನ್ನು ಮರೆತಿರಲಿಲ್ಲ. ಸುಮಾರು 20 ವರ್ಷಗಳ ಕಾಲ ಪೊಲ್ಯಾಂಡ್‌ನಲ್ಲಿ ವಾಸವಿದ್ದ ಆ್ಯಡಮ್ ತಂದೆ ನಿಧಿ ಕುರಿತು ಮಹತ್ವದ ಮಾಹಿತಿಯನ್ನು ನೀಡಿದ್ದರು. ಈ ಮಾಹಿತಿ ಆಧರಿಸಿ ಆಡ್ಯಮ್ ಪುತ್ರ ಗಸ್ಟಾ ಕೈಬರಹದ ಮ್ಯಾಪ್‌ ಬಿಡಿಸಿದ್ದರು. ಈ ಮ್ಯಾಪ್‌ನಲ್ಲಿ ತಮ್ಮ ಜಾಗ, ಮನೆ ಹಾಗೂ ಬೆಳ್ಳಿ ನಿಧಿ ಮಾಹಿತಿಯನ್ನು ಉಲ್ಲೇಖಿಸಿದ್ದರು.

ಈ ಮ್ಯಾಪ್‌ನ್ನು ಗ್ಲೇಜೆವಸ್ಕಿ ಕುಟುಂಬ ಭದ್ರವಾಗಿಟ್ಟಿತು. ಆ್ಯಡಮ್ ಮೊಮ್ಮದ ಜೇನ್ ಗ್ಲೇಜೇವಸ್ಕಿ ಇದೇ ಮ್ಯಾಪ್ ಹಿಡಿದು ತನ್ನ ಕುಟುಂಬದ ಜಾಡು ಪತ್ತೆ ಹಚ್ಚಲು ಮುಂದಾದ. ಹಲುವ ವರ್ಷಗಳ ಹಿಂದೆ ಏಕಾಂಗಿ ಶೋಧ ಕಾರ್ಯ ಆರಂಭಿಸಿದ್ದ. ಆದರೆ ಅದು ಸುಲಭದ ಕೆಲಸ ಆಗಿರಲಿಲ್ಲ. 2019ರಲ್ಲಿ ವಾಸವಿದ್ದ ಸ್ಥಳ ಪತ್ತೆಹಿಚ್ಚದ ಜೇನ‌ಗೆ ಬೆಳ್ಳಿಯ ನಿಧಿ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕಾರಣ ಈ ಸ್ಥಳದಲ್ಲಿ ಕಾಡು ತುಂಬಿತ್ತು. ಎಲ್ಲೆಡೆ ಪೊದೆಗಳು ಆವರಿಸಿತ್ತು.

ಆನಾಹುತ ಸೃಷ್ಟಿಸಿದ್ದ ನದಿಯಲ್ಲಿ, ಬೆಳ್ಳಿಯ ಹೊಳೆ: 280 ವರ್ಷ ಹಳೆ ನಾಣ್ಯಗಳು ಪತ್ತೆ!

ಮರಳಿದ ಜೇನ್, ಶೋಧನಾ ತಜ್ಞರ ನೆರವು ಪಡೆದ. 92 ವರ್ಷದ ಶಾಲಾ ಪ್ರಾಂಶುಪಾಲರ ನೆರವಿನ ಮೂಲಕ ಮತ್ತೆ ಶೋಧ ಕಾರ್ಯ ಆರಂಭಿಸಿದ ಜೇನ್‌ಗೊ ಬರೋಬ್ಬರಿ 80 ವರ್ಷಗಳ ಬಳಿಕ ಬೆಳ್ಳಿಯ ನಿಧಿ ಪತ್ತೆ ಹಚ್ಚಿದ್ದ. ಕೋಟಿ ಕೋಟಿ ರೂಪಾಯಿ ಮೊತ್ತದ ನಿಧಿ ಹಾಗೂ ಶೋಧನೆ ಕುರಿತು ಸಂಪೂರ್ಣ ಮಾಹಿತಿಯನ್ನು ಕೇಪ್ ಟೌನ್ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

click me!