Digital Arrest Scam: ಡಿಜಿಟಲ್‌ ಅರೆಸ್ಟ್‌ಗಾಗಿ ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್‌ ಠಾಣೆ!

Kannadaprabha News, Ravi Janekal |   | Kannada Prabha
Published : Feb 13, 2026, 11:52 AM IST
Fake Indian Police Station in Cambodia Massive Digital Arrest Scam Den Uncovered With Gandhi CBI Props

ಸಾರಾಂಶ

ಕಾಂಬೋಡಿಯಾದಲ್ಲಿ ಭಾರತೀಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಬೃಹತ್ ಡಿಜಿಟಲ್ ಅರೆಸ್ಟ್ ವಂಚನಾ ಜಾಲವನ್ನು ಅಧಿಕಾರಿಗಳು ಭೇದಿಸಿದ್ದಾರೆ. ಮುಂಬೈ ಪೊಲೀಸ್ ಠಾಣೆಯಂತೆ ಸೃಷ್ಟಿಸಲಾದ,  ಭಾರತದ ಧ್ವಜ, ಗಾಂಧಿ-ಅಂಬೇಡ್ಕರ್ ಚಿತ್ರಗಳಿದ್ದವು. ಸುಮಾರು 200 ಕೇಂದ್ರಗಳಿಗೆ ಬೀಗ, ದಾಳಿ ವೇಳೆ ಆರೋಪಿಗಳು ಪರಾರಿ.

ನಾಮ್ ಪೆನ್(ಕಾಂಬೋಡಿಯಾ): ಭಾರತೀಯರನ್ನು ಡಿಜಿಟಲ್‌ ಅರೆಸ್ಟ್‌ಗೆ ಒಳಪಡಿಸಿ ವಂಚಿಸುತ್ತಿದ್ದ ದೊಡ್ಡ ಜಾಲವನ್ನು ಕೊಲಂಬಿಯಾ ಅಧಿಕಾರಿಗಳು ಬಯಲಿಗೆಳೆದಿದ್ದು, ಇಂತಹ ಸುಮಾರು 200 ಕೇಂದ್ರಗಳಿಗೆ ಬೀಗ ಹಾಕಿದ್ದಾರೆ. 

ಮುಂಬೈ ಪೊಲೀಸ್ ಠಾಣೆ ಹೋಲುವಂತಿದೆ ಕೊಠಡಿ!

ಭೇದಿಸಲಾಗಿರುವ ಕೇಂದ್ರಗಳನ್ನು ಮುಂಬೈ ಪೊಲೀಸ್‌ ಠಾಣೆಯಂತೆ ಬಿಂಬಿಸುವ ಬೋರ್ಡ್‌, ಒಳಗೆ ಭಾರತದ ಧ್ವಜ, ಮಹಾತ್ಮಾ ಗಾಂಧಿ ಮತ್ತು ಬಿ.ಆರ್‌ ಅಂಬೇಡ್ಕರ್‌ ಅವರ ಚಿತ್ರಗಳು ಪತ್ತೆಯಾಗಿವೆ. ಜತೆಗೆ ಡಿಜಿಟಲ್‌ಗೆ ಅರೆಸ್ಟ್‌ಗೆ ಸೂಕ್ತವಾದ ಸುಸಜ್ಜಿತ ಕೋಣೆಗಳು ಬೆಳಕಿಗೆ ಬಂದಿವೆ. ಅಧಿಕಾರಿಗಳ ದಾಳಿ ವೇಳೆ ಅಲ್ಲಿದ್ದವರೆಲ್ಲ ಪರಾರಿಯಾಗಿದ್ದು, ಯಾವುದೇ ಬಂಧನವಾಗಿಲ್ಲ.

ಇದನ್ನೂ ಓದಿ: ಕರ್ನಾಟಕದ ಅತ್ಯಂತ ದುಬಾರಿ ಡಿಜಿಟಲ್‌ ಅರೆಸ್ಟ್‌: 32 ಕೋಟಿ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ!

ಕಳೆದ ಡಿಸೆಂಬರ್‌ನಲ್ಲಿ ಥಾಯ್ಲೆಂಡ್‌ ನಡೆಸಿದ ದಾಳಿಯಿಂದಾದ ಹಾನಿಯನ್ನು ಪರಿಶೀಲಿಸಲು ಅಧಿಕಾರಿಗಳು ಬಂದಿದ್ದ ವೇಳೆ ಭಾರತ ಸೇರಿದಂತೆ ಹಲವು ದೇಶಗಳ ನಕಲಿ ಪೊಲೀಸ್‌ ಠಾಣೆಗಳು ಪತ್ತೆಯಾಗಿವೆ.

ಅಮೆರಿಕ ಮತ್ತು ಚೀನಾದ ಸೂಚನೆಯಂತೆ ಕೊಲಂಬಿಯಾ ಅಧಿಕಾರಿಗಳು, ಆನ್‌ಲೈನ್‌ ವಂಚನೆಯಲ್ಲಿ ತೊಡಗಿದ್ದವರ ಬೇಟೆಯನ್ನು ಕಳೆದ ವರ್ಷ ಶುರು ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live ಬಾಂಗ್ಲಾದೇಶದಲ್ಲಿ ಬಿಎನ್‌ಪಿ ಪಕ್ಷಕ್ಕೆ ಅಭೂತಪೂರ್ವ ಗೆಲುವು: Digital Arrest Scam - ಡಿಜಿಟಲ್‌ ಅರೆಸ್ಟ್‌ಗಾಗಿ ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್‌ ಠಾಣೆ!
Tarique Rahman: 17 ವರ್ಷಗಳ ವನವಾಸ ಮುಗಿಸಿ ಬಾಂಗ್ಲಾ ಪ್ರಧಾನಿ ಪಟ್ಟಕ್ಕೇರಲು ಸಜ್ಜು!