
ಇಡೀ ಜಗತ್ತಿನಲ್ಲಿ ಎಪ್ಸ್ಟೀನ್ ಫೈಲ್ಸ್ (Epstein Files) ಕೋಲಾಹಲವೆಬ್ಬಿದೆ. ಮಾನವ ಜಾತಿ ಮಾಡಬಹುದಾದ ಎಲ್ಲಾ ರೀತಿಯ ಅನಾಚಾರಗಳನ್ನು ಮಾಡಿರುವ ಪಾತಕಿ ಜೆಫ್ರಿ ಎಪ್ಸ್ಟೀನ್ ಮಾಡಿರುವ ಒಂದೊಂದು ವಿಚಾರಗಳೂ ಕರಾಳ ಕಥೆಗಳು. ಅಮೆರಿಕದ ಜಸ್ಟೀಸ್ ಡಿಪಾರ್ಟ್‌ಮೆಂಟ್ ಕಳೆದ ಶುಕ್ರವಾರ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಹೊಸ ದಾಖಲೆಗಳ ಬ್ಯಾಚ್ ಅನ್ನು ಬಿಡುಗಡೆ ಮಾಡಿದೆ. ಈ ವೇಳೆ ಯಾಚ್‌ವೊಂದರಲ್ಲಿ ನಡೆದ ಪಾರ್ಟಿಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜಗತ್ತಿನ ಗಣ್ಯರೆನಿಸಿಕೊಂಡ ವ್ಯಕ್ತಿಗಳು ನರಭಕ್ಷಕತೆಯಲ್ಲಿ ತೊಡಗಿದ್ದಾರೆ ಎಂದು ದೊಡ್ಡ ಆರೋಪ ಮಾಡಿದ್ದ ಮೆಕ್ಸಿಕನ್ ಮಾಡೆಲ್ ಗೇಬ್ರಿಯೆಲಾ ರಿಕೊ ಜಿಮೆನೆಜ್ ಮತ್ತೆ ಬೆಳಕಿಗೆ ಬಂದಿದ್ದಾರೆ. ವಿಶೇಷ ಏನೆಂದರೆ, ಈ ಆರೋಪ ಮಾಡಿದ ಬಳಿಕ ಇಂದಿಗೂ ಕೂಡ ಗೇಬ್ರಿಯೆಲಾ ರಿಕೊ ಜಿಮೆನೆಜ್ ಎಲ್ಲಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ಜಸ್ಟೀಸ್ ಡಿಪಾರ್ಟ್‌ಮೆಂಟ್ ಈಗಾಗಲೇ ಸಾವು ಕಂಡಿರುವ ಬಾಲ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಹೊಸ ಬ್ಯಾಚ್ ಫೈಲ್‌ಗಳನ್ನು ಬಿಡುಗಡೆ ಮಾಡಿದ ನಂತರ ಈ ಮಾಡೆಲ್ ವಿಚಾರ ಮತ್ತೆ ಬೆಳಕಿಗೆ ಬಂದಿದೆ.
ಅದರಲ್ಲ ಒಂದು ದಾಖಲೆಯಲ್ಲಿ, ಯಾಚ್‌ನಲ್ಲಿ ನಡೆದ ಪಾರ್ಟಿಯ ಬಗ್ಗೆ ಮಾತನಾಡಲಾಗಿದ್ದು, ಅದರಲ್ಲಿ ಒಬ್ಬರು ಗಣ್ಯರೆನಿಸಿಕೊಂಡ ವ್ಯಕ್ತಿ ಮಾನವನ ಕರುಳಿನಿಂದ ಮಲ ತಿನ್ನುತ್ತಿದ್ದ ಎನ್ನುವ ಆರೋಪಗಳನ್ನೂ ಹೊರಿಸಲಾಗಿದೆ. ಈ ದಾಖಲೆಯು 'ಜಾರ್ಜ್ ಬುಷ್ 1' ವಿರುದ್ಧವೂ ಆರೋಪಗಳನ್ನು ಹೊರಿಸಿದೆ. ಹೊಸ ದಾಖಲೆಗಳಲ್ಲಿ ಈ ವಿವರಗಳು ಬಂದ ಬಳಿಕ ಗೇಬ್ರಿಯೆಲಾ ರಿಕೊ ಜಿಮೆನೆಜ್ ಮಾಡಿದ್ದ ಆರೋಪದ ವಿಡಿಯೋವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.
ಈ ವಿಡಿಯೋದಲ್ಲಿ 21 ವರ್ಷದ ಮೆಕ್ಸಿಕನ್ ಮಾಡೆಲ್ ಗೇಬ್ರಿಯೆಲಾ ರಿಕೊ ಜಿಮೆನೆಜ್, ಆಗಸ್ಟ್ 3, 2009 ರಂದು ಮೆಕ್ಸಿಕೋದ ಮಾಂಟೆರ್ರಿಯಲ್ಲಿರುವ ಫಿಯೆಸ್ಟಾ ಇನ್ ಹೊರಗೆ ಕಾಣಿಸಿಕೊಂಡಿದ್ದರು. ಅದ ಹೋಟೆಲ್‌ನಲ್ಲಿ ಗೇಬ್ರಿಯೆಲಾ ಖಾಸಗಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪ್ರಮುಖ ಉದ್ಯಮಿಗಳು, ರಾಜಕಾರಣಿಗು ಮತ್ತು ಜೆಫ್ರಿ ಎಪ್ಸ್ಟೀನ್ ಫೈಲ್‌ಗಳಲ್ಲಿ ಹೆಸರುಗಳು ಕಾಣಿಸಿಕೊಂಡ ವ್ಯಕ್ತಿಗಳನ್ನು ಒಟ್ಟುಗೂಡಿಸಿದ ಗಣ್ಯ ಮಾಡೆಲಿಂಗ್ ಕಾರ್ಯಕ್ರಮವಾಗಿತ್ತು. ಎಲ್ಲರೂ ಕೂಡ ಜಾತ್ಯಾತೀತವಾದಿಗಳಿಂದ ಒಲವು ಹೊಂದಿರುವ ವ್ಯಕತಿಗಳಾಗಿದ್ದಳು. ಈ ಹಂತದಲ್ಲಿ ಈ ಮಾಡೆಲ್, ಇಲ್ಲಿನ ಜನರು ಮಕ್ಕಳ ಮಾಂಸ ತಿನ್ನುತ್ತಿದ್ದಾರೆ ಎಂದು ಕಿರುಚುತ್ತಾ ಹೊರಬಂದಿದ್ದರು. ನಂತರ ಆಕೆಯನ್ನು ಬಂಧಿಸಲಾಗಿತ್ತು. ಅದಾದ ಬಳಿಕ ಆಕೆ, ಯಾವುದೇ ಕುರುಹು ಇಲ್ಲದಂತೆ ಕಣ್ಮರೆಯಾದರು. ಕೆಲದ ದಿನಗಳ ಹಿಂದ ಜಸ್ಟೀಸ್ ಡಿಪಾರ್ಟ್‌ಮೆಂಟ್ ಇದೇ ವಿಚಾರವನ್ನು ಸಾಬೀತುಪಡಿಸುವ ಪುರಾವೆಗಳನ್ನು ಹೊಸ ಬ್ಯಾಚ್ ಫೈಲ್‌ಗಳಲ್ಲಿ ಬಿಡುಗಡೆ ಮಾಡಿದೆ' ಎಂದು ವೀಡಿಯೊವನ್ನು ಹಂಚಿಕೊಂಡ ವ್ಯಕ್ತಿಯೊಬ್ಬರು ಬರೆದಿದ್ದಾರೆ.
'21 ವರ್ಷದ ಗೇಬ್ರಿಯೆಲಾ ರಿಕೊ ಜಿಮೆನೆಜ್ ಅಂದು ಕಿರುಚಾಡುತ್ಥಾ ಹೇಳಿದ್ದು ಈಗ ಎಪ್ಸ್ಟೀನ್ ಫೈಲ್‌ನಿಂದ ಹೊರಬಂದಿದೆ. ಅವಳು ಆ ರಾತ್ರಿ ಶಾಶ್ವತವಾಗಿ ಕಣ್ಮರೆಯಾದಳು. ಅವಳು ಕಣ್ಮರೆಯಾಗಿದ್ದು ಹೇಗೆ? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.
"2019 ರಲ್ಲಿ, 21 ವರ್ಷದ ಗೇಬ್ರಿಯೆಲಾ ರಿಕೊ ಜಿಮೆನೆಜ್ ಜೆಫ್ರಿ ಎಪ್ಸ್ಟೀನ್ ಮೇಲೆ ತೀವ್ರ ನಿಂದನೆ ಆರೋಪ ಹೊರಿಸಿ ಹೇಳಿಕೆಗಳನ್ನು ನೀಡಿದ್ದಳು. ಹೊಸದಾಗಿ ಬಿಡುಗಡೆಯಾದ ಎಪ್ಸ್ಟೀನ್-ಸಂಬಂಧಿತ ದಾಖಲೆಗಳು ಅವರು ಉಲ್ಲೇಖಿಸಿದ ಕೆಲವು ಅಂಶಗಳು ತನಿಖಾಧಿಕಾರಿಗಳಿಗೆ ಈಗಾಗಲೇ ತಿಳಿದಿದ್ದವು ಎಂದು ತೋರಿಸುತ್ತವೆ, ಆದರೂ ಅವರು ಅವರ ಅತ್ಯಂತ ತೀವ್ರವಾದ ಹಕ್ಕುಗಳನ್ನು ಸಮರ್ಥಿಸುವಲ್ಲಿ ವಿಫಲರಾಗಿದ್ದಾರೆ" ಎಂದು ಮತ್ತೊಬ್ಬರು ಹೇಳಿದ್ದಾರೆ.
21 ವರ್ಷದ ಗೇಬ್ರಿಯೆಲಾ, 2009ಲ್ಲಿ ಮೆಕ್ಸಿಕೋದ ಮೊಂಟೆರಿಯ ಹೋಟೆಲ್‌ನ ಹೊರಗಡೆ ಹಂಗಾಮ ಸೃಷ್ಟಿಸಿದ್ದಳು. 'ಅವರು ಒಬ್ಬ ವ್ಯಕ್ತಿಯನ್ನು ತಿಂದರು. ನನಗೆ ಗೊತ್ತಿರಲಿಲ್ಲ. ನನಗೆ ಸ್ವಾತಂತ್ರ್ಯ ಬೇಕು' ಎಂದು ಕಿರುಚಾಡಿದ್ದರು. ಬಳಿಕ ಪೊಲೀಸರು ಆಕೆಯನ್ನು ಹೊರಹಾಕಿದ್ದರು. ಆ ಬಳಿಕ ಗೇಬ್ರಿಯೆಲಾ ಏನಾದಳು ಅನ್ನೋದು ಯಾರಿಗೂ ಗೊತ್ತಿಲ್ಲ. ಆಗಸ್ಟ್ 3, 2009 ರಂದು ಅವರು ಹೇಳಿದ ಕೊನೆಯ ದಾಖಲಿತ ಮಾತುಗಳು 'ಜಾಗತಿಕ ಗಣ್ಯರ ಮೇಲೆ ನರಭಕ್ಷಕತೆಯ ಆರೋಪ'ವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ