ಅಣ್ವಸ್ತ್ರ ಕ್ಷಿಪಣೀಲಿ ಇಂಧನ ಬದಲು ನೀರು ತುಂಬಿದ್ದ ಅಧ್ಯಕ್ಷ ಕ್ಸಿ ಆಪ್ತ!

Kannadaprabha News   | Kannada Prabha
Published : Feb 03, 2026, 04:34 AM IST
China

ಸಾರಾಂಶ

ಪರಮಾಣು ಅಸ್ತ್ರದ ಮಾಹಿತಿಯನ್ನು ಅಮೆರಿಕಕ್ಕೆ ಸೋರಿಕೆ, ಭ್ರಷ್ಟಾಚಾರದ ಆರೋಪದಡಿ ಇತ್ತೀಚೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್ ಆಪ್ತ, ಹಿರಿಯ ಸೇನಾಧಿಕಾರಿ ಜಾಂಗ್ ಯೂಕ್ಸಿಯಾರರನ್ನು ಬಂಧಿಸಲಾಗಿತ್ತು. ಅದು ಚೀನಾ ಸೇನೆಯೊಳಗೆ ಹಬ್ಬಿರುವ ಭ್ರಷ್ಟಾಚಾರದ ಬಗ್ಗೆ ಬೆಳಕು ಚೆಲ್ಲಿತ್ತು.

ವಾಷಿಂಗ್ಟನ್: ಪರಮಾಣು ಅಸ್ತ್ರದ ಮಾಹಿತಿಯನ್ನು ಅಮೆರಿಕಕ್ಕೆ ಸೋರಿಕೆ, ಭ್ರಷ್ಟಾಚಾರದ ಆರೋಪದಡಿ ಇತ್ತೀಚೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್ ಆಪ್ತ, ಹಿರಿಯ ಸೇನಾಧಿಕಾರಿ ಜಾಂಗ್ ಯೂಕ್ಸಿಯಾರರನ್ನು ಬಂಧಿಸಲಾಗಿತ್ತು. ಅದು ಚೀನಾ ಸೇನೆಯೊಳಗೆ ಹಬ್ಬಿರುವ ಭ್ರಷ್ಟಾಚಾರದ ಬಗ್ಗೆ ಬೆಳಕು ಚೆಲ್ಲಿತ್ತು.

ಚೀನಾದ ಪರಮಾಣು ಕ್ಷಿಪಣಿಗಳು ಹಾರದೇ ಇರುವ ಸಾಧ್ಯತೆಯೇ ಹೆಚ್ಚು

ಅದರ ಬೆನ್ನಲ್ಲೇ ‘ಒಂದೇ ಒಂದು ಬಟನ್‌ ಒತ್ತಿದರೆ ಸಾವಿರಾರು ಕಿ.ಮೀ. ದೂರ ಹಾರಲು ಸಜ್ಜಾಗಿ ನಿಂತಿದ್ದ ಚೀನಾದ ಪರಮಾಣು ಕ್ಷಿಪಣಿಗಳು ಹಾರದೇ ಇರುವ ಸಾಧ್ಯತೆಯೇ ಹೆಚ್ಚು. ಕಾರಣ, ವಿದೇಶಗಳಿಂದ ಭಾರೀ ಹಣದ ಆಮಿಷಕ್ಕೆ ಒಳಗಾಗಿದ್ದ ಜಾಂಗ್‌ ಮತ್ತು ಅವರ ಬಂಟರು ಕ್ಷಿಪಣಿ ಇಟ್ಟಿರುವ ಜಾಗದ ಬಾಗಿಲು ತೆಗೆಯಲಾಗದಂತೆ ಮಾಡಿರುವ ಮತ್ತು ಕ್ಷಿಪಣಿಗಳಿಗೆ ಇಂಧನದ ಬದಲು ನೀರನ್ನು ತುಂಬಿಸಿರಬಹುದು’ ಎಂದು ಅಮೆರಿಕದ ಗುಪ್ತಚರ ವರದಿಗಳು ತಿಳಿಸಿವೆ. ಜೊತೆಗೆ ಈ ಕಾರಣಕ್ಕಾಗಿಯೇ ಜಾಂಗ್‌ ಅವರನ್ನು ಹುದ್ದೆಯಿಂದ ವಜಾ ಮಾಡಿ, ಬಂಧಿಸಿ ತನಿಖೆಗೆ ಒಳಪಡಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಷ್ಟಾಚಾರವನ್ನು ತಡೆಗಟ್ಟಲು ಕಠಿಣ ಕ್ರಮ

ಅದರ ಬೆನ್ನಲ್ಲೇ ‘ಭ್ರಷ್ಟಾಚಾರವನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಸೇನಾ ವೆಚ್ಚಗಳನ್ನು ತಿರುಚುತ್ತಿರುವ ದೊಡ್ಡ ಇಲಿಗಳನ್ನು ಕಿತ್ತೆಸೆಯಬೇಕಿದೆ’ ಎಂದು ಚೀನಾ ಸರ್ಕಾರದ ಮುಖವಾಣಿ ಪತ್ರಿಕೆ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking: ಅಮೆರಿಕದ ಜೊತೆಗಿನ ಟ್ರೇಡ್‌ ಡೀಲ್‌ಗೆ ಒಪ್ಪಿದ ಭಾರತ, ಶೇ.25 ರಿಂದ ಶೇ. 18ಕ್ಕೆ ಇಳಿಯಲಿದೆ ತೆರಿಗೆ!
ಲಕ್ಕುಂಡಿಗೂ ಮೊದಲು ನಡೆದಿತ್ತು ಅಚ್ಚರಿ, 17000 ವರ್ಷ ಹಿಂದಿನ ಅಮೂಲ್ಯ ಸಂಪತ್ತು ಪತ್ತೆ ಹಚ್ಚಿದ್ದ ನಾಯಿ