ಯುದ್ಧಕ್ಕೆ ವಿರೋಧ: ರಷ್ಯಾ ಚಾನೆಲ್‌ನ ಎಲ್ಲ ಉದ್ಯೋಗಿಗಳಿಂದ ರಾಜೀನಾಮೆ

Suvarna News   | Asianet News
Published : Mar 05, 2022, 06:19 PM ISTUpdated : Mar 05, 2022, 06:23 PM IST
ಯುದ್ಧಕ್ಕೆ ವಿರೋಧ: ರಷ್ಯಾ ಚಾನೆಲ್‌ನ ಎಲ್ಲ ಉದ್ಯೋಗಿಗಳಿಂದ ರಾಜೀನಾಮೆ

ಸಾರಾಂಶ

ಉಕ್ರೇನ್ ಮೇಲಿನ ಆಕ್ರಮಣ ವಿರೋಧಿಸಿದ ಚಾನೆಲ್‌ ರಾಜೀನಾಮೆ ನೀಡಿ ಪ್ರಸಾರ ನಿಲ್ಲಿಸಿದ ರಷ್ಯಾ ಚಾನೆಲ್‌ ಯುದ್ಧದ ಪ್ರಸಾರ ಸ್ಥಗಿತಗೊಳಿಸುವಂತೆ ಸರ್ಕಾರದ ಒತ್ತಡ 

ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣವನ್ನು ನಿಲ್ಲಿಸುವಂತೆ ಆಗ್ರಹಿಸಿ ರಷ್ಯಾದ ನ್ಯೂಸ್‌ ಚಾನೆಲ್‌ ಒಂದು ಪ್ರಸಾರ ನಿಲ್ಲಿಸಿ ಪ್ರತಿಭಟನೆ ನಡೆಸಿದೆ. ಈ ಚಾನೆಲ್‌ನ ಎಲ್ಲಾ ಉದ್ಯೋಗಿಗಳು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ರಷ್ಯಾದ ಟಿವಿ ಚಾನೆಲ್‌ನ ಎಲ್ಲಾ ಸಿಬ್ಬಂದಿ ತಮ್ಮ ಅಂತಿಮ ಪ್ರಸಾರದಲ್ಲಿ ಉಕ್ರೇನ್ ವಿರುದ್ಧ 'ಯುದ್ಧ ಬೇಡ' ಎಂದು ಹೇಳಿದ ನಂತರ ರಾಜೀನಾಮೆ ನೀಡಿದರು. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಕುರಿತು ಚಾನೆಲ್‌ನ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಆದೇಶಿಸಿದ ನಂತರ ಉದ್ಯೋಗಿಗಳು ಸ್ಟುಡಿಯೋ ನೇರ ಪ್ರಸಾರದಿಂದ ಹೊರನಡೆದು ರಾಜೀನಾಮೆ ನೀಡಿದ್ದಾರೆ.

ಈ ವೈರಲ್ ವೀಡಿಯೋವೊಂದರಲ್ಲಿ, ಟಿವಿ ರೇನ್ (ಡೊಝ್ದ್) (TV Rain) ಸಿಬ್ಬಂದಿ ಸ್ಟುಡಿಯೊದಿಂದ ಹೊರ ಬರುತ್ತಾ 'ಯುದ್ಧ ಬೇಡ' ಎಂದು ಘೋಷಿಸುವುದನ್ನು ಕೇಳಬಹುದು. ವಾಹಿನಿಯು ನಂತರ 'ಸ್ವಾನ್ ಲೇಕ್' (Swan Lake)ಬ್ಯಾಲೆ ಡಾನ್ಸ್‌ ವೀಡಿಯೋವನ್ನು ಪ್ರಸಾರ ಮಾಡಿದೆ. ನಂತರ ಚಾನಲ್ ಹೇಳಿಕೆಯಲ್ಲಿ ಅನಿರ್ದಿಷ್ಟಾವಧಿಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ. ಇದಕ್ಕೂ ಮೊದಲು ಪ್ರಸಾರವಾದ ಈ ಸ್ವಾನ್ ಲೇಕ್ ಬ್ಯಾಲೆ ಡಾನ್ಸ್‌ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದು 1991 ರಲ್ಲಿ ಸೋವಿಯತ್ ಒಕ್ಕೂಟವು (Soviet Union) ಪತನವಾದಾಗ ರಷ್ಯಾದಲ್ಲಿ ಸರ್ಕಾರಿ ಚಾನೆಲ್‌ಗಳಲ್ಲಿ ಪ್ರಸಾರವಾಗಿತ್ತು. 

Meanwhile TVRain, the last independent media outlet operating in Russia, has shut down — here's the last few minutes of its broadcast, poorly Google Translated. It then cut to Swan Lake, which has particular relevance: https://t.co/XXtUHroZkt pic.twitter.com/Iq7HSal7FW

 

ಉಸಿರನ್ನು ಹೊರಹಾಕಲು ಮತ್ತು ಮುಂದೆ ಹೇಗೆ ಕೆಲಸ ಮಾಡಬೇಕೆಂದು ಅರ್ಥಮಾಡಿಕೊಳ್ಳಲು ನಮಗೆ ಶಕ್ತಿ ಬೇಕು. ನಾವು ಪ್ರಸಾರ ಕಾರ್ಯಕ್ಕೆ ಹಿಂತಿರುಗುತ್ತೇವೆ ಮತ್ತು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆ ಎಂದು ಈ ಚಾನೆಲ್‌ ನೆಟ್‌ವರ್ಕ್‌ನ ಸಿಇಒ ನಟಾಲಿಯಾ ಸಿಂಡೆಯೆವಾ (Natalia Sindeyeva) ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಈ ವಾರದ ಆರಂಭದಲ್ಲಿ, ರಷ್ಯಾದ ಕೊನೆಯ ಉದಾರವಾದಿ ಮಾಧ್ಯಮಗಳಲ್ಲಿ ಒಂದಾದ ಎಖೋ ಮಾಸ್ಕ್ವಿ (Ekho Moskvy) (ಮಾಸ್ಕೋದ  ಪ್ರತಿಧ್ವನಿ) ರೇಡಿಯೋ ಸ್ಟೇಷನ್ (radio station), ಉಕ್ರೇನ್‌ನಲ್ಲಿನ ಯುದ್ಧದ ಪ್ರಸಾರವನ್ನು ತಡೆಯುವುದಕ್ಕೆ ಒತ್ತಡಕ್ಕೆ ಒಳಗಾದ ನಂತರ ಅದನ್ನು ಮುಚ್ಚಲಾಗುತ್ತಿದೆ ಎಂದು ಘೋಷಿಸಿತು.

Russia- Ukraine Crisis: ರಷ್ಯಾದ MI 35 ಹೆಲಿಕಾಪ್ಟರ್‌ನನ್ನು ಹೊಡೆದುರುಳಿಸಿದ ಉಕ್ರೇನ್

ಸ್ವತಂತ್ರ ಸುದ್ದಿವಾಹಿನಿಗಳನ್ನು ನಿರ್ಬಂಧಿಸುವ ಮೂಲಕ ಮತ್ತು ಉಕ್ರೇನ್ ಆಕ್ರಮಣದ ಸುದ್ದಿಯನ್ನು ರಷ್ಯನ್ನರು ಕೇಳದಂತೆ ತಡೆಯುವ ಮೂಲಕ ರಷ್ಯಾ(Russia) ಮಾಧ್ಯಮ ಸ್ವಾತಂತ್ರ್ಯ ಮತ್ತು ಸತ್ಯದ ಮೇಲೆ ಸಂಪೂರ್ಣ ಯುದ್ಧ ಪ್ರಾರಂಭಿಸಿದೆ ಎಂದು  ಅಮೆರಿಕಾ (United States) ಬುಧವಾರ ಆರೋಪಿಸಿದೆ. ಹತ್ತಾರು ಮಿಲಿಯನ್ ರಷ್ಯಾದ ನಾಗರಿಕರು ಸ್ವತಂತ್ರ ಮಾಹಿತಿ ಮತ್ತು ಅಭಿಪ್ರಾಯಗಳನ್ನು ತಿಳಿಸಲು ಅವಲಂಬಿಸಿರುವ ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ಗಳನ್ನು ಸಹ ರಷ್ಯಾ ಸರ್ಕಾರ ತಡೆಯುತ್ತಿದೆ ಎಂದು  ಅಮೆರಿಕಾ ತನ್ನ ಹೇಳಿಕೊಂದರಲ್ಲಿ ಆರೋಪಿಸಿದೆ.

Russia-Ukraine War: ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ, ಸುರಕ್ಷಿತ ಸ್ಥಳಗಳತ್ತ ನಾಗರೀಕರು 

ಈ ನಡುವೆ ಉಕ್ರೇನ್‌ನ ಮರಿಯೂಪೋವಾ, ವೋಲ್‌ನವೋಕಾ ನಗರಗಳಲ್ಲಿ ಐದು ಗಂಟೆ ಕಾಲ ಕದನ ವಿರಾಮ ಘೋಷಿಸಲಾಗಿತ್ತು. ನಾಗರಿಕರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಅವಕಾಶ ನೀಡಿ ಈ ವಿರಾಮ ಘೋಷಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ