Russia Ukraine war ರಷ್ಯಾದಿಂದ ಕದನ ವಿರಾಮ ಘೋಷಣೆ, ಷರತ್ತು ಅನ್ವಯ!

By Suvarna News  |  First Published Mar 5, 2022, 5:01 PM IST
  • ಸತತ 9 ದಿನ ಉಕ್ರೇನ್ ಮೇಲೆ ಸತತ ಯುದ್ಧ ನಡೆಸಿದ ರಷ್ಯಾ
  • ಎರಡನೇ ಸುತ್ತಿನ ಮಾತುಕತೆ ಬಳಿಕ ಕದನ ವಿರಾಮ ಘೋಷಣೆ
  • ಷರತ್ತಿನೊಂದಿಗೆ ರಷ್ಯಾದಿಂದ ಕದನ ವಿರಾಮ ಘೋಷಣೆ

ಉಕ್ರೇನ್(ಮಾ.05): ಅಮಾಯಕ ನಾಗರೀಕರ ಆಕ್ರಂದನ, ಮಕ್ಕಳು, ಮಹಿಳೆಯರ ಚೀರಾಟ, ಎಲ್ಲಿ ನೋಡಿದರೂ ರಕ್ತದ ಕೋಡಿ, ಧರೆಗುರುಳಿ ಬಿದ್ದ ಕಟ್ಟಡಗಳು ಉಕ್ರೇನ್(Russia Ukraine war) ರಾಷ್ಟ್ರದ ಎಲ್ಲೆಡೆ ಕಂಡು ಬರುತ್ತಿರುವ ದೃಶ್ಯ. ಸತತ 9 ದಿನ ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ರಷ್ಯಾ ಇದೀಗ ದಿಢೀರ್ ಕದನ ವಿರಾಮ(Russia declares ceasefire) ಘೋಷಿಸಿದೆ. ಆದರೆ ಈ ಕದನ ವಿರಾಮ ಘೋಷಣೆ ಕೇವಲ ನಾಗರೀಕರ ತೆರವು ಮಾಡುವವರೆಗೆ ಮಾತ್ರ. ಯುದ್ಧ ಪೀಡಿತ ಉಕ್ರೇನ್ ಎರಡು ನಗರಗಳಲ್ಲಿ ಮಾನವೀಯ ದೃಷ್ಟಿಯಿಂದ ನಾಗರೀಕರ ತೆರವಿಗೆ ಕಾರಿಡಾರ್ ತೆರೆಯಲಾಗಿದೆ(humanitarian corridors for civilians). ಈ ವೇಳೆ ಯಾವುದೇ ಯುದ್ಧ ನಡೆಸದಂತೆ ರಷ್ಯಾ ಹಾಗೂ ಉಕ್ರೇನ್ ಮಾತುಕತೆಯಲ್ಲಿ ನಿರ್ಧರಿಸಿದೆ.

ಮಾರಿಪೊಲ್ ಹಾಗೂ ವೋಲ್ನೋವಖಾ(Mariupol and Volnovakha) ನಗರದಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದೆ. ಮಾರ್ಚ್ 5 ರ ಬೆಳಗ್ಗೆ 10 ಗಂಟೆಯಿಂದ ನಾಗರೀಕರ ತೆರವು ಕಾರ್ಯಾಚರಣೆ ನಡೆಯುವ ವೇಳೆ ಕದನ ವಿರಾಮಕ್ಕೆ ರಷ್ಯಾ ಒಪ್ಪಿಕೊಂಡಿದೆ. ಎರಡು ನಗರದಲ್ಲಿ ಸಿಲುಕಿಕೊಂಡಿದ್ದ ನಾಗರೀಕರನ್ನು ತಕ್ಷಣವೆ ಉಕ್ರೇನ್ ತೊರೆಯುವಂತೆ ಸೂಚನೆ ನೀಡಲಾಗಿದೆ. ಹತ್ತಿರದ ರಾಷ್ಟ್ರಗಳಿಗೆ ತೆರಳಿ ಅಥವಾ ಇತರ ಆಶ್ರಯ ತಾಣಗಳಲ್ಲಿರುವಂತೆ ಸೂಚನೆ ನೀಡಲಾಗಿದೆ.

Tap to resize

Latest Videos

undefined

Ukraine Crisis ರೊಮೆನಿಯಾ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಯ ಹುಟ್ಟು ಹಬ್ಬ ಆಚರಣೆ!

ಮಾರಿಪೊಲ್ ನಗರದಲ್ಲಿ ವಿದ್ಯುತ್ ಕಡಿತಗೊಂಡಿದೆ. ಆಹಾರ, ನೀರಿಗೆ ಹಾಹಾಕಾರ ಎದ್ದಿದೆ. ವಿಪರೀತ ಚಳಿಯಿಂದ ಜನರು ನಲುಗುತ್ತಿದ್ದಾರೆ. ತಕ್ಷಣವೆ ನಾಗರೀಕರ ನೆರವು ನೀಡಲಾಗುವುದು ಎಂದು ಮಾರಿಪೊಲ್ ಮೇಯರ್ ವಾದಿಮ್ ಬಾಯ್‌ಚೆಂಕೋ ಹೇಳಿದ್ದಾರೆ. ಖೆರ್ಸನ್ ಬಳಿಕ ರಷ್ಯಾ ಎರಡನೇ ಬಂದರು ನಗರು ಮಾರಿಪೊಲ್ ಮೇಲೆ ದಾಳಿ ಮಾಡಿದೆ. ಮಾರಿಪೊಲ್ ವಶಕ್ಕೆ ಪಡೆದು ಬಂದರು ಮೂಲಕ ನೌಕಾಪಡೆಯನ್ನು ನುಗ್ಗಿಸಲು ರಷ್ಯಾ ಸಜ್ಜಾಗಿದೆ. 

ಸಂಧಾನ ಮಾತುಕತೆ:
ಸತತ 9 ದಿನಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಬೆಲಾರಸ್‌ನಲ್ಲಿ 2ನೇ ಹಂತದ ಸಂಧಾನ ಮಾತುಕತೆ ನಡೆಸಿದ್ದು, ಚರ್ಚೆಯು ಮಹತ್ವದ ಪ್ರಗತಿ ಕಂಡಿದೆ. ಯುದ್ಧಪೀಡಿತ ಸ್ಥಳಗಳಲ್ಲಿ ಜನರ ತೆರವು ಕಾರಾರ‍ಯಚರಣೆಗೆ ಅನುವು ಮಾಡಿಕೊಡಲು ಉಭಯ ದೇಶಗಳು ಸಮ್ಮತಿಸಿವೆ.

Russia-Ukraine War: ಅನ್ನ-ನೀರಿಲ್ಲ, ನೀರಿಗಾಗಿ ಮನೆ ಮುಂದೆ ಬೀಳುವ ಹಿಮದ ಹನಿಯೇ ಆಸರೆ

ಇದೇ ವೇಳೆ, ನಾಗರಿಕರ ತೆರವು ಕಾರ್ಯಾಚರಣೆಯಲ್ಲದೆ ಆಹಾರ ಹಾಗೂ ಔಷಧ ಪೂರೈಕೆಗೆ ಯಾವುದೇ ಅಡ್ಡಿ ಮಾಡಬಾರದು. ಇಂಥ ಕೆಲಸಗಳು ನಡೆಯುವಾಗ ತಾತ್ಕಾಲಿಕವಾಗಿ ಕದನವಿರಾಮ ನೀತಿಯನ್ನು ಅನುಸರಿಸಬೇಕು ಎಂದು ಮಾತುಕತೆಯಲ್ಲಿ ನಿರ್ಧರಿಸಲಾಗಿದೆ. ಇದೇ ವೇಳೆ, ಉಳಿದ ವಿಷಯಗಳಿಗೆ ಸಂಬಂಧಿಸಿದಂತೆ 3ನೇ ಸುತ್ತಿನ ಮಾತುಕತೆಗೆ ನಿರ್ಧರಿಸಲಾಗಿದೆ.

ಮಾತುಕತೆ ಆರಂಭದಲ್ಲಿ, ‘ತಕ್ಷಣದಿಂದಲೇ ಕದನ ರಾಮ ಘೋಷಣೆಯಾಗಬೇಕು. ಯುದ್ಧ ಸ್ಥಗಿತಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಬೇಕು. ಯುದ್ಧದಿಂದ ನಾಶವಾದ ಪ್ರದೇಶಗಳಿಂದ ನಾಗರಿಕರನ್ನು ರಕ್ಷಿಸಲು ಮಾನವೀಯ ಕಾರಿಡಾರ್‌ ರಚಿಸಬೇಕು’ ಎಂಬ ಷರತ್ತುಗಳನ್ನು ಉಕ್ರೇನ್‌ ವಿಧಿಸಿತ್ತು ಎಂದು ಮೂಲಗಳು ಹೇಳಿವೆ.

ಇದಕ್ಕೂ ಮೊದಲು ಫೆ.28ರಂದು ಉಭಯ ದೇಶಗಳು ಮೊದಲ ಸುತ್ತಿನ ಮಾತುಕತೆ ನಡೆಸಿದ್ದವು. 2 ದೇಶಗಳ ನಿಯೋಗಗಳು ಪರಸ್ಪರ ಷರತ್ತುಗಳನ್ನು ವಿಧಿಸಿದ ಕಾರಣ ಈ ಮಾತುಕತೆ ಅಪೂರ್ಣವಾಗಿತ್ತು.ಮಾತುಕತೆಗೂ ಮೊದಲು ಮಾತನಾಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ನಮ್ಮ ಗುರಿ ಈಡೇರುವವರೆಗೂ ಯುದ್ಧ ನಿಲ್ಲಿಸುವುದಿಲ್ಲ. ಸಂಘರ್ಷವನ್ನು ನಿಧಾನಗೊಳಿಸಲು ಉಕ್ರೇನ್‌ ಮಾತುಕತೆಗೆ ಪ್ರಯತ್ನ ನಡೆಸಿದರೆ, ರಷ್ಯಾ ಇನ್ನಷ್ಟುಬೇಡಿಕೆಯನ್ನು ಉಕ್ರೇನ್‌ ಮುಂದಿಡಲಿದೆ. ಇದರ ಪರಿಣಾಮ ಏನೇ ಆದರೂ ಎದುರಿಸಲು ಸಿದ್ಧ’ ಎಂದು ಹೇಳಿದ್ದರು.

click me!