Ukraine Educational Institutions: ರಷ್ಯಾ ದಾಳಿಯಿಂದ ಉಕ್ರೇನ್ ನಲ್ಲಿ 160 ಶಿಕ್ಷಣ ಸಂಸ್ಥೆಗಳು ನಾಶ!

By Suvarna News  |  First Published Mar 5, 2022, 5:26 PM IST

ರಷ್ಯಾ ಸೇನಾಪಡೆಗಳ ಶೆಲ್ ದಾಳಿಯಿಂದ ಉಕ್ರೇನ್ ನಲ್ಲಿನ ಸುಮಾರು 160 ಶಿಕ್ಷಣ ಸಂಸ್ಥೆಗಳು ಸಂಪೂರ್ಣವಾಗಿ ಹಾನಿಗೊಂಡಿದೆ ಎಂದು ಉಕ್ರೇನ್ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ  ಟ್ವೀಟ್ ಮಾಡಿದೆ. 


ಕೀವ್: ರಷ್ಯಾ ಸೇನಾಪಡೆಗಳ ಶೆಲ್ ದಾಳಿಯಿಂದ ಉಕ್ರೇನ್ ನಲ್ಲಿನ ಸುಮಾರು 160 ಶಿಕ್ಷಣ ಸಂಸ್ಥೆಗಳು ಭಾಗಶ: ಸಂಪೂರ್ಣವಾಗಿ ಹಾನಿಗೊಂಡಿರುವುದಾಗಿ ಉಕ್ರೇನ್ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಹೇಳಿದೆ. 

ಉಕ್ರೇನ್ ಶಿಕ್ಷಣ ಸಚಿವಾಲಯದ ಪ್ರಕಾರ, ರಷ್ಯಾ ಸೇನಾಪಡೆ ನಡೆಸಿದ ಶೆಲ್ ದಾಳಿಯಿಂದ ಉಕ್ರೇನ್ ನಲ್ಲಿರುವ ಸುಮಾರು 160 ಶಿಕ್ಷಣ ಸಂಸ್ಥೆಗಳು ಭಾಗಶ: ಅಥವಾ ಸಂಪೂರ್ಣವಾಗಿ ಹಾನಿಗೊಂಡಿರುವುದಾಗಿ ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ. 

Tap to resize

Latest Videos

undefined

 

According to the Minister of Education of Ukraine: “More than 160 educational institutions in Ukraine have been partially or completely destroyed by the shelling of Russian troops” pic.twitter.com/YcB72993as

— MFA of Ukraine 🇺🇦 (@MFA_Ukraine)

ಯುಕೆ, ಯುಎಸ್, ಕೆನಡಾ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಹಲವಾರು ದೇಶಗಳು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿವೆ ಮತ್ತು ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಈ ಎಲ್ಲಾ ದೇಶಗಳು ರಷ್ಯಾದ ವಿರುದ್ಧ ಹೋರಾಡಲು  ಉಕ್ರೇನ್‌ಗೆ ಮಿಲಿಟರಿ  ಸಹಾಯ ಮಾಡುವ ಭರವಸೆ ನೀಡಿವೆ.

ಇದೀಗ ರಷ್ಯಾ-ಉಕ್ರೇನ್ ನಡುವೆ ಸೇನಾಪಡೆ ಯುದ್ಧಕ್ಕೆ ತಾರ್ಕಿಕ ಅಂತ್ಯ ಕಾಣುವ ಲಕ್ಷಣ ಗೋಚರಿಸುತ್ತಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 11.30ರ ಹೊತ್ತಿಗೆ ರಷ್ಯಾ ಉಕ್ರೇನ್ ಮೇಲೆ ಕದನ ವಿರಾಮ ಘೋಷಣೆ (Ukrain-Russia war ceasefire) ಮಾಡಿದೆ.

Russia Ukraine war ರಷ್ಯಾದಿಂದ ಕದನ ವಿರಾಮ ಘೋಷಣೆ, ಷರತ್ತು ಅನ್ವಯ!

ಮಾನವೀಯ ದೃಷ್ಟಿಯಿಂದ ಉಕ್ರೇನ್ ನಾದ್ಯಂತ ಕದನ ವಿರಾಮ ಘೋಷಣೆ ಮಾಡಲಾಗಿದೆ ಎಂದು ರಷ್ಯಾ ಘೋಷಣೆ ಮಾಡಿದೆ. ನಾಗರಿಕರಿಗೆ ಮಾನವೀಯ ಕಾರಿಡಾರ್ ಗಳನ್ನು (Humanitarian corridor) ಮುಕ್ತಗೊಳಿಸಲಾಗುವುದು ಎಂದು ಹೇಳಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿದ 10 ದಿನಗಳ ನಂತರ ರಷ್ಯಾ ಕದನ ವಿರಾಮ ಘೋಷಣೆ ಮಾಡಿದೆ.

ಇದು ತಾತ್ಕಾಲಿಕ ಯುದ್ಧ ವಿರಾಮ ಘೋಷಣೆಯೇ, ಎಷ್ಟು ಹೊತ್ತಿನವರೆಗೆ ಅಥವಾ ದಿನಗಳವರೆಗೆ ಇರುತ್ತದೆ ಎಂದು ಕಾದುನೋಡಬೇಕಿದೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆದಿದ್ದರೂ ಯಾವುದೇ ನಿರ್ಧಾರ ಅಥವಾ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. 

ಇಂದು ಮಾರ್ಚ್ 5, ರಷ್ಯಾ ಸಮಯ ಬೆಳಿಗ್ಗೆ 10ರಿಂದ ಯುದ್ಧ ವಿರಾಮ ಘೋಷಣೆ ಮಾಡಲಾಗಿದೆ. ಮರಿಯಪೋಲ್ ಮತ್ತು ವೋಲ್ನೋವಾಖಾದಿಂದ ನಾಗರಿಕರ ನಿರ್ಗಮನಕ್ಕಾಗಿ ಮಾನವೀಯ ಕಾರಿಡಾರ್‌ಗಳನ್ನು ರಷ್ಯಾ ಸರ್ಕಾರ ತೆರೆಯುತ್ತದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಷ್ಯಾದ ಪಡೆಗಳು ಉಕ್ರೇನಿಯನ್ ಬಂದರು ನಗರವಾದ ಮರಿಯಪೋಲ್ ಅನ್ನು ದಿಗ್ಬಂಧನಗೊಳಿಸಿವೆ ಎಂದು ಮರಿಯಪೋಲ್ ಮೇಯರ್ ವಾಡಿಮ್ ಬಾಯ್ಚೆಂಕೊ ತಿಳಿಸಿದ್ದಾರೆ.ರಷ್ಯಾದ ಪಡೆಗಳು ಕಳೆದ ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು, ರಷ್ಯಾ ಉಕ್ರೇನ್‌ನ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಘಟಕಗಳಾಗಿ ಗುರುತಿಸಿದ ಮೂರು ದಿನಗಳ ನಂತರ ಯುದ್ಧ ಘೋಷಣೆಯಾಗಿತ್ತು. ಈ ವಾರಾಂತ್ಯದಲ್ಲಿ ರಷ್ಯಾ ಜೊತೆ ಉಕ್ರೇನ್ ಮಾತುಕತೆಗೆ ಯೋಜಿಸಿದೆ ಎಂದು ಕೀವ್ ನ ಸಮಾಲೋಚಕರೊಬ್ಬರು ತಿಳಿಸಿದ್ದಾರೆ.

ರಕ್ಷಿಸಿದ್ದಕ್ಕೆ ಕೃತಜ್ಞತೆ... ಮಗುವಿಗೆ ಗಂಗಾ ಹೆಸರಿಡುವುದಾಗಿ ಹೇಳಿದ ಕೇರಳಿಗ

ಸ್ಥಳಾಂತರಕ್ಕೆ ಅವಕಾಶ: ರಷ್ಯಾ ಇದೀಗ ಕದನ ವಿರಾಮ ಘೋಷಣೆ ಮಾಡಿರುವುದರಿಂದ ಬಂದರು ನಗರಿ ಮರಿಯಪೋಲ್ ಸೇರಿದಂತೆ ಎರಡು ದೊಡ್ಡ ನಗರಗಳ ನಾಗರಿಕರಿಗೆ ಸ್ಥಳಾಂತರಕ್ಕೆ ಅವಕಾಶ ಸಿಕ್ಕಿದೆ, ಕದನ ವಿರಾಮ ಘೋಷಣೆಯಿಂದ ಮಾರಿಯುಪೋಲ್ ಮತ್ತು ವೊಲ್ನೊವಕ್ಹ ನಗರಗಳ ನಾಗರಿಕರಿಗೆ ಸ್ಥಳಾಂತರಕ್ಕೆ ಅವಕಾಶ ಸಿಗಲಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

ಕಳೆದ ಫೆಬ್ರವರಿ 24 ರಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನೇತೃತ್ವದ ರಷ್ಯಾ ಸೈನ್ಯವು ಆಕ್ರಮಣ ಮಾಡಿದ ನಂತರ, ರಷ್ಯಾ ಉಕ್ರೇನ್ ನ ಸಾಕಷ್ಟು ನಗರಗಳನ್ನು ಹೊಡೆದುರುಳಿಸಿದೆ. ನೂರಾರು ನಾಗರಿಕರನ್ನು ಕೊಂದಿದೆ, ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವನ್ನು ಆಕ್ರಮಿಸಿದೆ.

click me!