
ನ್ಯೂಯಾರ್ಕ್ (ಸೆ.23) ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತೆ ಸುಳ್ಳಿನ ಕತೆ ತೆರೆದಿಟ್ಟಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಸೇರಿದಂತೆ 7 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಭಾರತ ಪಾಕ್ ಕದನ ವಿರಾಮ ಕುರಿತು ಈಗಾಗಲೇ ಭಾರತ ಟ್ರಂಪ್ ಮಾತನ್ನು ತಳ್ಳಿ ಹಾಕಿದೆ. ಇದೀಗ ಮತ್ತೆ ಟ್ರಂಪ್ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯಲ್ಲಿ ಪುನರುಚ್ಚರಿಸಿದ್ದಾರೆ. ಈ ಮೂಲಕ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿಗೆ ಪರೋಕ್ಷ ಮನವಿಯೊಂದನ್ನು ವಿಶ್ವಸಂಸ್ಥೆ ಮುಂದೆ ತೆರಿದಿಟ್ಟಿದ್ದಾರೆ.
ಕೆಲ ಯುದ್ಧಗಳು ನಿಲ್ಲಿಸಲು ಅಸಾಧ್ಯವಾಗಿತ್ತು. ಆದರೆ ತ್ವರಿತಗತಿಯಲ್ಲಿ ಮಾತುಕತೆ ನಡೆಸಿ 7 ತಿಂಗಳಲ್ಲಿ 7 ಯುದ್ಧ ನಿಲ್ಲಿಸಿದ್ದೇವೆ. ಈ ಪೈಕಿ ಮೇ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಆರಂಭಗೊಂಡ ಯುದ್ಧ ಕೂಡ ಸೇರಿದೆ ಎಂದು ಟ್ರಂಪ್ ಹೇಳಿದ್ದಾರೆ. ಇಬ್ಬರ ಮುಸುಕಿನ ಗುದ್ದಾಟ ಯುದ್ದಗಳು 31 ವರ್ಷದಿಂದ ನಡೆಯುತ್ತಿದ್ದರೆ, ಮತ್ತಿಬ್ಬರದ್ದು 36 ವರ್ಷಗಳಿಂದ ನಡೆಯುತ್ತಿತ್ತು. ಅಮರೆಕ ಮಧ್ಯಪ್ರವೇಶಿದ ಏಳೇ ತಿಂಗಳಲ್ಲಿ 7 ಯುದ್ಧ ನಿಲ್ಲಿಸಲು ಸಾಧ್ಯವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಭಾರತ-ಪಾಕಿಸ್ತಾನ, ಕಾಂಬೋಡಿಯಾ-ಥಾಯ್ಲೆಂಡ್, ಸರ್ಬಿಯಾ, ಕಾಂಗೋ-ರ್ವಾಂಡ, ಇಸ್ರೇಲ್-ಇರಾನ್, ಈಜಿಪ್ಟ್-ಇಥೋಪಿಯಾ, ಅರ್ಮೆನಿಯಾ-ಅಜರ್‌ಬೈಜಾನ್ ದೇಶಗಳ ನಡುವಿನ ಯುದ್ಧ ನಿಲ್ಲಿಸಲಾಗಿದೆ ಎಂದು ಟ್ರಂಪ್ ಲಿಸ್ಟ್ ನೀಡಿದ್ದಾರೆ.
ಡೋನಾಲ್ಡ್ ಟ್ರಂಪ್ ನೊಬೆಲ್ ಪ್ರಶಸ್ತಿಗೆ ಹಾತೊರೆಯುತ್ತಿದ್ದಾರೆ ಅನ್ನೋದು ಕಳೆದ ಹಲವು ದಿನಗಳ ನಡೆಯಿಂದಲೇ ಸ್ಪಷ್ಟವಾಗಿದೆ. ಪದೇ ಪದೇ ಭಾರತ -ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದೇನೆ ಎಂದು ಟ್ರಂಪ್ ಹೇಳಿಕೆ ನೀಡುತ್ತಲೇ ಇದ್ದಾರೆ. ಇದೀಗ 7 ಯುದ್ಧ ನಿಲ್ಲಿಸಿರುವುದಾಗಿ ಲಿಸ್ಟ್ ಕೊಟ್ಟಿದ್ದಾರೆ. ನೊಬೆಲ್ ಪ್ರಶಸ್ತಿ ಒಲಿಸಿಕೊಳ್ಳಲು ಟ್ರಂಪ್ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.
ಡೋನಾಲ್ಡ್ ಟ್ರಂಪ್ ಪ್ರತಿ ನಡೆಯಲ್ಲೂ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಪ್ರಮುಖವಾಗಿ ಡೋನಾಲ್ಡ್ ಟ್ರಂಪ್ ತಮ್ಮ ಮೊದಲ ಅಧ್ಯಕ್ಷ ಅವಧಿಯಲ್ಲಿ ಮಾಡಿದ ಕೆಲ ಎಡವಟ್ಟು ಮರೆಮಾಚಿ ಹೊಸ ಬ್ರ್ಯಾಂಡ್ ಇಮೇಜ್ ಪ್ರಸ್ತುತಪಡಿಸಲು ಮುಂದಾಗಿದ್ದಾರೆ. ಈ ಪೈಕಿ ಟ್ರಂಪ್ ಚುನಾವಣೆ ಸೋತು ಅಧಿಕಾರ ಬಿಟ್ಟುಕೊಡುವಾಗ ಸೃಷ್ಟಿಸಿದ ಗಲಭೆ, ಟ್ರಂಪ್ ಅಧ್ಯಕ್ಷರ ಕರಿಯರ್‌ನಲ್ಲಿ ಕಪ್ಪು ಚುಕ್ಕೆಯಾಗಿದೆ. ಟ್ರಂಪ್ ಈ ಗಲಭೆ ಸೃಷ್ಟಿಸಿರುವುದು ಗೌಪ್ಯವಾಗಿ ಉಳಿದಿಲ್ಲ. ಅಮೆರಿಕ ಸಂಸತ್ತಿನ ಮೇಲೆ ದಾಳಿ ಸೇರಿದಂತೆ ಹಲೆವೆಡೆ ಪ್ರತಿಭಟನೆಗಳು ನಡೆದಿತ್ತು. ಇದು ತಾನು ಸೃಷ್ಟಿಸಿದ ಗಲಭೆಯಲ್ಲ, ತನ್ನ ಬೆಂಬಲಿಗರು ಆಕ್ರೋಶದಿಂದ ಉದ್ದೇಶಪೂರ್ವಕವಲ್ಲದೆ ಸೃಷ್ಟಿಯಾದ ಗಲಬೆ ಎಂದು ಬಿಂಬಿಸಲು ಟ್ರಂಪ್ ಹೊರಟಿದ್ದಾರೆ. ಇದಕ್ಕಾಗಿ ತಾನು ಮೂಲತಃ ಶಾಂತಿ ಬಯಸುವ ಅಧ್ಯಕ್ಷ, ಇದೇ ಕಾರಣಕ್ಕೆ 7 ಯುದ್ಧ ನಿಲ್ಲಿಸಿದ್ದೇನೆ ಎಂದು ಪರೋಕ್ಷವಾಗಿ ಹೇಳುವ ಪ್ರಯತ್ನ ಟ್ರಂಪ್ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ