ಹನುಮಾನ್ ನಕಲಿ ದೇವರು, ಟೆಕ್ಸಾಸ್ ರಿಪಬ್ಲಿಕನ್ ನಾಯಕನ ವಿವಾದಿತ ಹೇಳಿಕೆಗೆ ಭಾರಿ ವಿರೋಧ

Published : Sep 23, 2025, 05:05 PM IST
Alexander Duncan remark on hanuman

ಸಾರಾಂಶ

ಹನುಮಾನ್ ನಕಲಿ ದೇವರು, ಪ್ರತಿಮೆ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತಡಿಸಿದ ಅಮೆರಿಕ ನಾಯಕ, ರಿಪಬ್ಲಿಕನ್ ನಾಯಕನ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಜಗತ್ತಲ್ಲೇ ಇಲ್ಲದ ದೇವರ ವಿಗ್ರಹ, ಪ್ರತಿಮೆ ಇಲ್ಲಿ ಯಾಕೆ ಎಂದು ವಿವಾದ ಸೃಷ್ಟಿಸಿದ್ದಾರೆ.

ಟೆಕ್ಸಾಸ್ (ಸೆ.23) ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಟೆಕ್ಸಾಸ್‌ನಲ್ಲಿ ಬೃಹತ್ ಹನುಮಾನ್ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ. ಟೆಕ್ಸಾಸ್‌ನಲ್ಲಿ ಮಾರುತಿ ಪ್ರತಿಮೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಟೆಕ್ಸಾಸ್‌ನಲ್ಲಿ ಹಿಂದೂ ದೇವರ ಪ್ರತಿಮೆ ನಿರ್ಮಾಣಕ್ಕೆ ಟೆಕ್ಸಾಸ್ ರಿಪಬ್ಲಿಕನ್ ನಾಯಕ ಅಲೆಕ್ಸಾಂಡರ್ ಡಂಕನ್ ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಡಂಕನ್ ಆಡಿದ ಮಾತುಗಳು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ನಕಲಿ ಪ್ರತಿಮೆ, ನಕಲಿ ಹಿಂದೂ ದೇವರನ್ನು ನಿರ್ಮಾಣ ಮಾಡಲು ಅವಕಾಶ ನೀಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಈ ನಕಲಿ ಹಿಂದೂ ದೇವರು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಇದು ಕ್ರಿಶ್ಚಿಯನ್ ದೇಶ, ಇಲ್ಲಿ ನಕಲಿ ಹಿಂದೂ ದೇವರು ಯಾಕೆ?

ಅಮೆರಿಕ ಕ್ರಿಶ್ಚಿಯನ್ ದೇಶ. ಇಲ್ಲಿ ನಕಲಿ ಹಿಂದೂ ದೇವರ ಪ್ರತಿಮೆ ಯಾಕೆ ಎಂದು ಡಂಕನ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.ಈ ನಕಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡಿದ್ದು ಯಾಕೆ? ಎಂದು ಅಲೆಕ್ಸಾಂಡರ್ ಡಂಕನ್ ಪ್ರಶ್ನಿಸಿದ್ದಾರೆ. ಡಂಕನ್ ಹೇಳಿಕೆಗೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿದೆ. ಟೆಕ್ಸಾಸ್‌ನ ಶುಗರ್ ಲ್ಯಾಂಡ್ ಬಳಿ ಇರುವ ಅಷ್ಟಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಈ ಬೃಹತ್ ಹನುಮಾನ್ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

ಬೈಬಲ್ ಉಲ್ಲೇಖಿಸಿ ಹಿಂದೂ ದೇವರ ಅವಮಾನಿಸಿದ ಡಂಕನ್

ರಿಪಬ್ಲಿಕನ್ ನಾಯಕ ಅಲೆಕ್ಸಾಂಡರ್ ಡಂಕನ್ ಒಂದು ಟ್ವೀಟ್‌ಗೆ ಮುಗಿಸಿಲ್ಲ. ಬೈಬಲ್ ಕೆಲ ಸಾಲುಗಳನ್ನು ಉಲ್ಲೇಖಿಸಿ ಮತ್ತೆ ಹನುಮಾನ್ ಪ್ರತಿಮೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.ಈ ಜಗತ್ತಿನಲ್ಲಿ ನೀವು ಯಾವುದೇ ಫೋಟೋ, ಪ್ರತಿಮೆಯನ್ನು ದೇವರಾಗಿ ಪೂಜಿಸುವುದಲ್ಲ ಸೇರಿದಂತೆ ಕೆಲ ಬೈಬಲ್ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಅಮೆರಿಕ ಕ್ರಿಶ್ಚಿಯನ್ ರಾಜ್ಯ, ಇಲ್ಲಿ ಕ್ರೈಸ್ತ ಪ್ರಾರ್ಥನೆ, ಕ್ರೈಸ್ತ ಪಂಥದ ನಂಬಿಕೆಗಳ, ಆಚರಣೆಗಳು ಇರಲಿದೆ. ಈ ನಾಡಿನಲ್ಲಿ ಹಿಂದೂ ದೇವರ ವಿಗ್ರಹಗಳು ಯಾಕೆ ಎಂದು ಡಂಕನ್ ಪ್ರಶ್ನಿಸಿದ್ದಾರೆ.

 

 

ಡಂಕನ್ ವಿರುದ್ದ ದೂರು ದಾಖಲಿಸಿದ ಹಿಂದೂ ಫೌಂಡೇಶನ್

ಅಮೆರಿಕದ ಟೆಕ್ಸಾಸ್‌ನಲ್ಲಿರುವ ಹಿಂದೂ ಅಮೆರಿಕನ್ ಫೌಂಡೇಶನ್, ಅಲೆಕ್ಸಾಂಡರ್ ಡಂಕನ್ ಹೇಳಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಟೆಕ್ಸಾಸ್ ಪೊಲೀಸರಿಗೆ ದೂರು ನೀಡಿದೆ. ಹಿಂದೂ ವಿರೋಧಿ, ಹಿಂದೂಗಳ ನಂಬಿಕೆಗಳಿಗೆ ಘಾಸಿಗೊಳಿಸುವ, ಸೌಹಾರ್ಧತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದೀರಿ ಎಂದು ಹಿಂದೂ ಅಮೆರಿಕನ್ ಫೌಂಡೇಶನ್ ಹೇಳಿದೆ.

ಟೆಕ್ಸಾಸ್ ರಿಪಬ್ಲಿಕನ್ ಪಾರ್ಟಿಗೆ ಈ ಕುರಿತು ಹಿಂದೂ ಅಮೆರಿಕನ್ ಫೌಂಡೇಶನ್ ಸಂಘಟನೆ ಎಚ್ಚರಿಕೆ ನೀಡಿದೆ. ನಿಮ್ಮ ನಾಯಕನಿಗೆ ಸರಿಯಾಗಿ ಮಾತನಾಡಲು ಹೇಳಿ. ನಿಮ್ಮ ನಾಯಕನಿಗೆ ಶಿಸ್ತು ಕಲಿಸಿ. ನಿಂದನೆ, ತಾರತಮ್ಯ, ಹಿಂದೂ ವಿರೋಧಿ ಹೇಳಿಕೆ ನೀಡುತ್ತಿರುವ ನಿಮ್ಮ ನಾಯಕ, ನಿಯಮ ಹಾಗೂ ಸಂವಿಧಾನಿಕ ಹಕ್ಕುಗಳ ಬಗ್ಗೆ ಮರೆತಿದ್ದಿರಾ ಎಂದು ಹಿಂದೂ ಅಮೆರಿಕನ್ ಫೌಂಡೇಶನ್ ಸಂಘಟನೆ ಪ್ರಶ್ನಿಸಿದೆ.

ಹಲವರು ಡಂಕನ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಅಮೆರಿಕದ ಸಂವಿಧಾನ, ಎಲ್ಲಾ ಧರ್ಮಗಳ ಪಾಲಿಸಲು, ನಂಬಿಕೆ, ಆಚರಣೆಗೆ ಅವಕಾಶ ನೀಡಿದೆ. ಅಮರಿಕ ಕ್ರಿಶ್ಚಿಯನ್ ರಾಜ್ಯ ನಿಜ. ಕ್ರಿಶ್ಚಿಯನ್ ನಂಬಿಕೆ, ಆಚರಣೆಗೆ ಯಾರೂ ಅಡ್ಡಿ ಬಂದಿಲ್ಲ. ನೀವು ಹಿಂದೂ ಅಲ್ಲ ಕಾರಣಕ್ಕೆ ಹಿಂದೂ ದೇವರು ನಕಲಿಯಾಗಲ್ಲ. 2000 ವರ್ಷಗಳ ಮೊದಲೇ ವೇದಗಳು ರಚನೆಯಾಗಿದೆ. ಹಿಂದೂ ಸಂಸ್ಕೃತಿ, ಪುರಾತನ ವಿಚಾಗಳ ಬಗ್ಗೆ ತಿಳಿದುಕೊಂಡು ಮಾತನಾಡಿ, ಇಲ್ಲದಿದ್ದರೆ ಸುಮ್ಮನಿರಿ ಎಂದು ಹಲವು ಭಾರತೀಯರು ಸೋಶಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ನಕಲಿ ಅನ್ನೋ ಪದ ಬಳಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ