ವಿಶ್ವದ ಇತರ ದೇಶ​ಗ​ಳಿ​ಗಿಂತ ಭಾರತ ಭರ​ವ​ಸೆ​ದಾ​ಯ​ಕ: ಎಲಾನ್‌ ಮಸ್ಕ್

By Kannadaprabha News  |  First Published Jun 22, 2023, 7:06 AM IST

ನಾನು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ. ವಿಶ್ವದ ಇತರ ದೇಶ​ಗ​ಳಿ​ಗಿಂತ ಭಾರತ ಭರ​ವ​ಸೆ​ದಾ​ಯ​ಕ​ ಎಂದು ವಿಶ್ವದ ನಂ.1 ಶ್ರೀಮಂತ, ಟ್ವೀಟರ್‌ ಕಂಪನಿಯ ಮಾಲೀಕ ಎಲಾನ್‌ ಮಸ್ಕ್ ಬಣ್ಣಿಸಿದ್ದಾರೆ.


ನ್ಯೂಯಾರ್ಕ್: ನಾನು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ. ವಿಶ್ವದ ಇತರ ದೇಶ​ಗ​ಳಿ​ಗಿಂತ ಭಾರತ ಭರ​ವ​ಸೆ​ದಾ​ಯ​ಕ​ ಎಂದು ವಿಶ್ವದ ನಂ.1 ಶ್ರೀಮಂತ, ಟ್ವೀಟರ್‌ ಕಂಪನಿಯ ಮಾಲೀಕ ಎಲಾನ್‌ ಮಸ್ಕ್ ಬಣ್ಣಿಸಿದ್ದಾರೆ. ಜೊತೆಗೆ ಮೋದಿ ಜೊತೆಗಿನ ಭೇಟಿ ಅದ್ಭುತ ಎಂದು ಹೇಳಿದ್ದಾರೆ. ಹಾಲಿ ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರನ್ನು ಇಲ್ಲಿ ಭೇಟಿ ಮಾಡಿದ ಬಳಿಕ ಪತ್ರ​ಕ​ರ್ತ​ರ ಜತೆ ಮಾತ​ನ​ಡಿದ ಮಸ್ಕ್, ‘ಪ್ರಧಾನಿ ಅವರೊಂದಿಗಿನ ಭೇಟಿ ಅದ್ಭುತ ಮತ್ತು ಅವರನ್ನು ನಾನು ಸಾಕಷ್ಟು ಮೆಚ್ಚಿಕೊಳ್ಳುತ್ತೇನೆ. ಕೆಲ ವರ್ಷಗಳ ಹಿಂದೆ ಅವರು ನಮ್ಮ ಫ್ಯಾಕ್ಟರಿಗೆ ಭೇಟಿ ನೀಡಿದ್ದರು. ಹೀಗಾಗಿ ನಾವಿಬ್ಬರೂ ಸಾಕಷ್ಟು ಪರಿಚಿತರಾಗಿದ್ದೇವೆ. ಭಾರತದ ಭವಿಷ್ಯದ ಬಗ್ಗೆ ನಾನು ಸಾಕಷ್ಟು ಉತ್ಸುಕನಾಗಿದ್ದೇನೆ. ವಿಶ್ವದ ಇತರೆ ಯಾವುದೇ ದೊಡ್ಡ ದೇಶಗಳಿಗಿಂತ ಭಾರತ ಹೆಚ್ಚು ಭರವಸೆದಾಯಕ ಎಂದು ಬಣ್ಣಿ​ಸಿ​ದ​ರು.

ಇದೇ ವೇಳೆ, ಭಾರತದ ಬಗ್ಗೆ ಮೋದಿ ( Narendra Modi) ಸಾಕಷ್ಟು ಕಳಕಳಿ ಹೊಂದಿದ್ದಾರೆ ಮತ್ತು ಈ ಕಾರಣಕ್ಕಾಗಿಯೇ ಅವರು ನಮ್ಮನ್ನು ಬಂಡವಾಳ ಹೂಡುವಂತೆ ಪ್ರೇರೇಪಿಸುತ್ತಿದ್ದಾರೆ. ಅದಕ್ಕಾಗಿ ನಾವು ಸೂಕ್ತ ಸಮಯವನ್ನು ಹುಡುಕಬೇಕಷ್ಟೇ. ಅವರು ಭಾರತಕ್ಕೆ ಸೂಕ್ತವಾದುದನ್ನೇ ಮಾಡಲು ಬಯಸುತ್ತಾರೆ. ಅವರ ಮುಕ್ತವಾಗಿ ಇರಲು ಬಯಸುತ್ತಾರೆ, ಅವರು ಕಂಪನಿಗಳಿಗೆ ನೆರವಾಗಲು ಬಯಸುತ್ತಾರೆ ಮತ್ತು ಅದೇ ಸಮಯದಲ್ಲಿ ಇಂಥ ನೆರವು ಭಾರತಕ್ಕೆ ಲಾಭ ತರು​ವಂತೆ ನೋಡಿಕೊಳ್ಳುತ್ತಾರೆ ಎಂದು ಹೊಗಳಿದ್ದಾರೆ.

Tap to resize

Latest Videos

ಯೋಗಕ್ಕೆ ಕಾಪಿರೈಟ್ಸ್, ಪೇಟೆಂಟ್ ಇಲ್ಲ, ಎಲ್ಲರಿಗೂ ಮುಕ್ತ; ನ್ಯೂಯಾರ್ಕ್ ಯೋಗದಿನಾಚರಣೆಯಲ್ಲಿ ಮೋದಿ ಭಾಷಣ!

ಮೋದಿ ಸಂತ​ಸ:

ಭೇಟಿಯ ಬಳಿಕ ಈ ಬಗ್ಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ‘ಎಲಾನ್‌ ಮಸ್ಕ್, (Elon Musk)ನಿಮ್ಮ ಜೊತೆಗಿನ ಇಂದಿನ ಭೇಟಿ ಅದ್ಭುತವಾಗಿತ್ತು. ನಾವು ಇಂಧನ, ಅಧ್ಯಾತ್ಮ ಸೇರಿದಂತೆ ಬಹು ವಿಷಯಗಳ ಕುರಿತು ಚರ್ಚೆ ನಡೆಸಿದೆವು. ವಿವಿಧ ವಲಯಗಳಲ್ಲಿ ತಂತ್ರಜ್ಞಾನವನ್ನು ಎಲ್ಲರಿಗೂ ಮತ್ತು ಕೈಗೆಟುಕುವ ದರದಲ್ಲಿ ಒದಗಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ. ಎಲೆಕ್ಟ್ರಿಕ್‌ ಮೊಬೈಲಿಟಿ ಮತ್ತು ವಾಣಿಜ್ಯ ಬಾಹ್ಯಾಕಾಶ ವಲಯದಲ್ಲಿ ಭಾರತದಲ್ಲಿ ಅವಕಾಶಗಳನ್ನು ಸಂಶೋಧಿಸುವಂತೆ ನಿಮ್ಮನ್ನು ದೇಶಕ್ಕೆ ಆಹ್ವಾನಿಸುತ್ತೇನೆ’ ಎಂದಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಮಸ್ಕ್, ‘ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗುವುದು ನಮ್ಮ ಸೌಭಾಗ್ಯ’ ಎಂದಿದ್ದಾರೆ.

ಗಿನ್ನಿಸ್ ವಿಶ್ವ ದಾಖಲೆ ಪುಟ ಸೇರಿದ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಯೋಗದಿನಾಚರಣೆ!

click me!