ಮಾತಿಲ್ಲ ಕತೆಯಿಲ್ಲ, ಸೂಚನೆಯೂ ಇಲ್ಲ, Xನಲ್ಲಿ ಅನ್‌ಫಾಲೋ ಮಾಡಿ ಪತ್ನಿಯಿಂದ ಎಲಾನ್ ಮಸ್ಕ್ ದೂರ

Published : Oct 03, 2026, 02:57 PM IST
Elon Musk and Shivon Zilis Spark Breakup

ಸಾರಾಂಶ

ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹಾಗೂ ಪತ್ನಿ ಶಿವೋನ್ ಝಿಲಿಸ್ ದೂರವಾಗಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೆಂಡ್ ರೀತಿಯಲ್ಲಿ ಮಸ್ಕ್ ಪತ್ನಿಯಿಂದ ದೂರವಾಗಿದ್ದಾರೆ. ಯಾವುದೇ ಸೂಚನೆ ನೀಡದೆ ಎಕ್ಸ್‌ನಲ್ಲಿ ಅನ್‌ಫಾಲೋ ಮಾಡಿ ವಿಚ್ಚೇದನ ನೀಡಿದ್ದಾರೆ.

ನ್ಯೂಯಾರ್ಕ್ (ಅ.03) ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವೈಯುಕ್ತಿಕ ಬದುಕಿನಲ್ಲಿ ಹಲವರು ಸಂಬಂಧದಲ್ಲಿದ್ದರು. 2000ನೇ ಇಸವಿಯಲ್ಲಿ ಜಸ್ಟಿನ್ ವಿಲ್ಸನ್‌ ಮದುವೆಯಾದ ಮಸ್ಕ್ ಬಳಿಕ ಕಾಲಕ್ಕ ತಕ್ಕಂತೆ ವಿಚ್ಚೇದನ ನೀಡಿ ಬೇರೆ ಮದುವೆಯಾಗುತ್ತಾ ಬಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ನ್ಯೂರಾಲಿಂಕ್ ಎಕ್ಸ್‌ಕ್ಯೂಟೀವ್ ಶಿವೊನ್ ಝಿಲಿಸ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಈ ಸಂಬಂಧದಲ್ಲಿ ಮಸ್ಕ್ ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಇದೀಗ ಮಸ್ಕ್ ಹಾಗೂ ಶಿವೋನ್ ಝಿಲಿಸ್ ಸಂಬಂಧ ಮುರಿದು ಬಿದ್ದಿದೆ. ಆದರೆ ಯಾವುದೇ ಸೂಚನೆ ನೀಡಿದೆ, ಯಾವುದೇ ಮಾತುಕತೆ ಇಲ್ಲದೆ ಎಲಾನ್ ಮಸ್ಕ್, ಶಿವೋನ್ ಝಿಲಿಸ್ ಜೊತೆಗಿನ ಸಂಬಂಧ ಅಂತ್ಯಗೊಳಿಸಿದ್ದಾರೆ. ಹೊಸ ಟ್ರೆಂಡ್‌ನಂತೆ ಎಕ್ಸ್‌ನಲ್ಲಿ ಅನ್‌ಫಾಲೋ ಮಾಡಿ ಸಂಬಂಧಕ್ಕೆ ಅಂತ್ಯಹಾಡಿದ್ದಾರೆ.

ಬ್ರೇಕ್‌ಅಪ್ ಬೆನ್ನಲ್ಲೇ ಭಾವುಕ ಸಂದೇಶ ಹಂಚಿಕೊಂಡ ಶಿವೊನ್

ಎಲಾನ್ ಮಸ್ಕ್ ಜೊತೆಗಿನ ಸಂಬಂಧ ಅಂತ್ಯಗೊಂಡ ಬೆನ್ನಲ್ಲೇ ಶಿವೋನ್ ಝಿಲಿಸ್ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಪ್ರೀತಿಯಲ್ಲಿದ್ದು ದಿಢೀರ್ ಪ್ರೀತಿ ದೂರವಾಗುವುದು ಕಠಿಣ, ನನಗೆ ಯಾವುದೇ ಸೂಚನೆ ಇರಲಿಲ್ಲ, ಎಚ್ಚರಿಕೆಯೂ ಇರಲಿಲ್ಲ, ಸಂಬಂಧ ಅಂತ್ಯಗೊಳಿಸುತ್ತಿರುವ ಕುರಿತು ಯಾವುದೇ ಮಾತುಕತೆಯೂ ಇರಲಿಲ್ಲ. 2020ರಿಂದ ಎಲಾನ್ ಮಸ್ಕ್ ಜೊತೆ ರಿಲೇಶನ್‌ಶಿಪ್‌ನಲಿದ್ದೆ. ಇದೀಗ ಎಕ್ಸ್‌ನಲ್ಲಿ ಅನ್‌ಫಾಲೋ ಮಾಡಿ ದೂರವಾದರು. ಸಂಬಂಧಗಳು ಹೀಗೆ ಎಂದು ಶಿವೋನ್ ಝಿಲಿಸ್ ಹೇಳಿದ್ದಾರೆ.

ದೂರವಾದರೂ ಮಸ್ಕ್ ಪ್ರೀತಿ, ಆರೈಕೆಗೆ ಝಿಲಿಸ್ ಮೆಚ್ಚುಗೆ

ಎಲಾನ್ ಮಸ್ಕ್ ತನ್ನಿಂದ ದೂರವಾದರೂ ಮಸ್ಕ್ ಆರೈಕೆ, ಪ್ರೀತಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಮಸ್ಕ್‌ನ ಜೀವಕ್ಕಿಂತ ಹೆಚ್ಚು ಪ್ರೀತಿಸಿದ್ದೆ. ನನಗೆ ಪ್ರೋತ್ಸಾಹ ನೀಡಿದ್ದರು, ಜ್ಞಾನ ನೀಡಿದ್ದರು. ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಿದ್ದರು. ಎಲಾನ್ ಮಸ್ಕ್ ಮುಂದಿನ ಜೀವನ ಸುಗಮವಾಗಲಿ ಎಂದು ಹಾರೈಸಿದ್ದಾರೆ.

ಮಸ್ಕ್ ಅವರಿಂದ ದೂರವಾಗುತ್ತಿರುವುದು ತೀವ್ರ ನೋವುಂಟು ಮಾಡಿದೆ. ಆದರೆ ನಾವಿಬ್ಬರು ಸುಂದರ ನಾಲ್ಕು ಜೀವಗಳನ್ನು ಸೃಷ್ಟಿಸಿದ್ದೇವೆ. ಅವರ ಪ್ರೀತಿ, ಆರೈಕೆಯು ನನಗೆ ಮುಖ್ಯ . ಎಲಾನ್ ಮಸ್ಕ್ ಅವರಿಗೆ ಉತ್ತಮ ಆರೋಗ್ಯ ದೇವರು ನೀಡಲಿ. ಎಲಾನ್ ಮಸ್ಕ್ ಯಾವಗಲು ಸಂತೋಷವಾಗಿರಲಿ, ಅವರ ಸಂತೋಷಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ವಿಶ್ವ ಎಲಾನ್ ಮಸ್ಕ್ ರೀತಿಯ ವಿಶೇಷ ವ್ಯಕ್ತಿಯನ್ನು ಹೊಂದಿರುವುದು ಅದೃಷ್ಟ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಝಿಲಿಸ್ ಎಕ್ಸ್ ಮೂಲಕ ಪೋಸ್ಟ್ ಮಾಡಿದ್ದಾರೆ.

ಎಕ್ಸ್ ಪೋಸ್ಟ್‌ನಲ್ಲಿ ಝಿಲಿಸ್ ಇತ್ತೀಚೆಗೆ ಎಲಾನ್ ಮಸ್ಕ್ ಜೊತೆಗಿನ ಚಾಟ್ ಹಂಚಿಕೊಂಡಿದ್ದಾರೆ. ದೂರವಾದರೂ ಪ್ರೀತಿಯ ಮಾತುಗಳ ಕುರಿತು ಝಿಲಿಸ್ ಹಂಚಿಕೊಂಡಿದ್ದಾರೆ. ಬ್ರೇಕ್‌ಫಾಸ್ಟ್‌ನಲ್ಲಿ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು, ತುಂಬಾ ಪ್ರೀತಿಸುತ್ತೇನೆ ಲವ್ ಯು ಎಂದು ಝಿಲಿಸ್ ಚಾಟ್ ಮಾಡಿದ್ದರು. ಇದಕ್ಕೆ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯೆ ನೀಡಿದ್ದು, ನಾನು ಪ್ರೀತಿಸುತ್ತಿದ್ದೇನೆ, ಲವ್ ಯು ಎಂದಿದ್ದಾರೆ.

2020ರಲ್ಲಿ ಎಲಾನ್ ಮಸ್ಕ್ ಜೊತೆ ಶಿವೊನ್ ಝಿಲಿಸ್ ರಿಲೇಶನ್‌‌ಶಿಪ್‌ ಆರಂಭಗೊಂಡಿತ್ತು. 2021ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಝಿಲಿಸ್, 2024ರಲ್ಲಿ ಮಗಳು ಹಾಗೂ 2025ರಲ್ಲಿ ಮಗನಿಗೆ ಜನ್ಮ ನೀಡಿದ್ದರು. ಒಟ್ಟು ನಾಲ್ಕು ಮಕ್ಕಳ ತಾಯಿಯಾಗಿ ಝಿಲಿಸ್ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿರಿಯನ್ ತಾಯಿ, ಒಮನ್ ತಂದೆ, ಅಲ್‌ಖೈದಾ ನಂಟು? ಫ್ಲೈದುಬೈ ದಾಳಿಕೋರನ ಬಗ್ಗೆ ಶಾಕಿಂಗ್ ಮಾಹಿತಿ ಬಯಲು!
ಅಮೆರಿಕ ಇರಾನ್ ನಡುವೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗುತ್ತ Flydubai ಅಟ್ಯಾಕ್? ಸಂಚಲನ ಸೃಷ್ಟಿಸಿದ ಟ್ರಂಪ್ ಹೇಳಿಕೆ!