
ವಾಷಿಂಗ್ಟನ್ (ಅ.3): ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ(Flydubai) ವಿಮಾನವನ್ನು ಅಮೆರಿಕದ 9/11 ಮಾದರಿಯಲ್ಲಿ ಪತನಕ್ಕೆತ್ನಿಸಿದ ಕೃತ್ಯದ ಹಿಂದೆ ಇರಾನ್ ಕೈವಾಡವಿರುವ ಶಂಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವ್ಯಕ್ತಪಡಿಸಿದ್ದಾರೆ ಹಾಗೂ ಇದು ನಿಜ ಎಂದು ಕಂಡು ಬಂದರೆ ಇರಾನ್ ಮೇಲೆ ಕಠಿಣ ದಾಳಿಯ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, ‘ನಮಗೆ ಕೇಳಿ ಬಂದಿರುವ ಮಾಹಿತಿ ಪ್ರಕಾರ ಇರಾನ್ ಕೈವಾಡ ನಿಜ, ಆದರೆ ಈ ಕುರಿತು ಪರಿಶೀಲನೆ ನಡೆಯುತ್ತಿದೆ. ಒಂದು ವೇಳೆ ಆ ಷಡ್ಯಂತ್ರದ ಹಿಂದೆ ಇರಾನ್ ಕೈವಾನ ಇರುವುದು ಸ್ಪಷ್ಟವಾದರೆ ಕಠಿಣ ದಾಳಿ ನಡೆಸುವ ಮೂಲಕ ಸೂಕ್ತ ಪ್ರತ್ಯುತ್ತರ ನೀಡಲಾಗುವುದು’ ಎಂದರು.
‘ನಾವು ಆ ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಡಿ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ದಾಳಿಕೋರ ಪೈಲಟ್‌ಗೂ ಇರಾನ್‌ಗೂ ಲಿಂಕ್ ಇದೆ ಎಂದು ಈಗಲೇ ಹೇಳುವುದು ಕಷ್ಟ. ವಾಸ್ತವ ತಿಳಿಯಲು ಕೆಲವು ದಿನ ಬೇಕು’ ಎಂದರು.
ಟ್ರಂಪ್ ಅವರು ಗುರುವಾರವಷ್ಟೇ ವಿಮಾನ ಪತನಗೊಳಿಸುವ ಸಹಪೈಲಟ್‌ನ ಪ್ರಯತ್ನವನ್ನು ಜೀವದ ಹಂಗು ತೊರೆದು ವಿಫಲಗೊಳಿಸಿದ್ದಕ್ಕಾಗಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನು ಹೀರೋ ಎಂದು ಕರೆದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ