ಕೆಳಗೆ ಬಿದ್ದ ಮಕ್ಕಳ ಚಪ್ಪಲಿಯನ್ನು ಎತ್ತಿಕೊಟ್ಟ ಆನೆ: ವಿಡಿಯೋ ವೈರಲ್‌

Published : Aug 17, 2022, 04:57 PM IST
ಕೆಳಗೆ ಬಿದ್ದ ಮಕ್ಕಳ ಚಪ್ಪಲಿಯನ್ನು ಎತ್ತಿಕೊಟ್ಟ ಆನೆ: ವಿಡಿಯೋ ವೈರಲ್‌

ಸಾರಾಂಶ

ಆನೆಯೊಂದು ತನ್ನ ಬಳಿ ಬಿದ್ದ ಮಕ್ಕಳ ಚಪ್ಪಲ್ ಅನ್ನು ಸೊಂಡಿಲಿನಲ್ಲಿ ಹೆಕ್ಕಿ ವಾಪಸ್ ಅವರಿಗೆ ನೀಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆನೆಗಳು ಬಹಳ ಬುದ್ಧಿವಂತ ಪ್ರಾಣಿಗಳು. ಸಾಕಾನೆಗಳು ಮನುಷ್ಯರೊಂದಿಗೆ ಕುಟುಂಬ ಸದಸ್ಯರಂತೆ ಬಿಟ್ಟಿರಲಾರದ ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ. ಆನೆಗಳು ಮನುಷ್ಯರೊಂದಿಗೆ ಒಡನಾಡುವ ಸಾಕಷ್ಟು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಾಗೆಯೇ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಆನೆಯೊಂದು ತಾವಿದ್ದ ಪ್ರದೇಶಕ್ಕೆ ಬಿದ್ದ ಮಕ್ಕಳ ಚಪ್ಪಲಿಯೊಂದನ್ನು ಆನೆಯೊಂದು ಹೆಕ್ಕಿ ಕೊಡುತ್ತಿದೆ. ಈ ಬುದ್ಧಿವಂತ ಆನೆ ಮತ್ತು ಮಕ್ಕಳ ಒಡನಾಟದ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಚೀನಾ ಶಾಂಡೊಂಗ್ ಪ್ರದೇಶದ ಮೃಗಾಲಯವೊಂದರಲ್ಲಿ ಸೆರೆಯಾದ ವಿಡಿಯೋ ಇದಾಗಿದ್ದು, ಮಗುವೊಂದರ ಚಪ್ಪಲಿಯೊಂದು ಆನೆಗಳು ಇರುವ ಪ್ರದೇಶದ ಒಳಗೆ ಬೀಳುತ್ತದೆ. ಈ ವೇಳೆ ಮಕ್ಕಳು ಜೋರಾಗಿ ಬೊಬ್ಬೆ ಹೊಡೆಯುತ್ತಿರುತ್ತಾರೆ. ಈ ವೇಳೆ ಮಕ್ಕಳ ಚಪ್ಪಲಿಯನ್ನು ನೋಡಿದ ಆನೆ ಅದನ್ನು ತನ್ನ ಸೊಂಡಿಲಿನಿಂದ ಎತ್ತಿ ಕಟ್ಟಡದ ಮೇಲಿದ್ದ ಮಕ್ಕಳಿಗೆ ನೀಡುತ್ತದೆ. ನೌ ದಿಸ್‌ ನ್ಯೂಸ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ಪೋಸ್ಟ್‌ ಆಗಿದ್ದು, ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಕ್ಕಳು ಆನೆಗೆ ಹುಲ್ಲು ಕಡ್ಡಿಯೊಂದನ್ನು ತಿನ್ನಲು ನೀಡುತ್ತಾರೆ. 

ಈ ವಿಡಿಯೋ ನೋಡಿದ ಅನೇಕರು ಆನೆಯ ಜಾಣತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುತೇಕರು ಆನೆಗೆ ಕೆಳಗೆ ಬಿದ್ದ ಚಪ್ಪಲಿಯನ್ನು ಹಿಂದಿರುಗಿಸಬೇಕು ಎಂದು ಹೇಗೆ ಅನಿಸಿತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಝೂಗಳಲ್ಲಿ ಸೆರೆಯಾಗಿರುವ ಆನೆಗಳನ್ನು ಕಾಡಿಗೆ ಬಿಡಬೇಕು ಅವುಗಳಿಗೆ ಸ್ವಚ್ಛಂದವಾದ ಬದುಕು ನೀಡಬೇಕು ಎಂದು ಮತ್ತೆ ಕೆಲವರು ಟ್ವಿಟ್ ಮಾಡಿದ್ದಾರೆ. 

ಆನೆಗಳು ಗಾತ್ರದಲ್ಲಿ ದೈತ್ಯರಾಗಿದ್ದರೂ ಬಹಳ ಸೌಮ್ಯವಾದ ಪ್ರಾಣಿಗಳು ತಮ್ಮನ್ನು ಕೆಣಕದ ಹೊರತು ಅವುಗಳಾಗಿಯೇ ವಿನಾಕಾರಣ ಯಾರಿಗೂ ತೊಂದರೆ ನೀಡುವುದಿಲ್ಲ. ಕೆಲ ದಿನಗಳ ಹಿಂದೆ ಆನೆಗಳೆರಡು ನೀರು ಕುಡಿಯುವ ವೇಳೆ ಅಚಾನಕ್ ಆಗಿ ನೀರಿನ ಹೊಂಡಕ್ಕೆ ಬಿದ್ದ ತಮ್ಮ ಮರಿಯೊಂದನ್ನು ಓಡಿ ಬಂದು ನೀರಿಗೆ ಇಳಿದು ರಕ್ಷಣೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು. ಆನೆಗಳು ಕೂಡ ಹೇಳಿ ಕೇಳಿ ಮನುಷ್ಯರಷ್ಟೇ ಬುದ್ಧಿವಂತ ಪ್ರಾಣಿಗಳು. ಹಿಂಡು ಹಿಂಡುಗಳಾಗಿ ಕುಟುಂಬ ಜೀವನವನ್ನು ಆನೆಗಳು ಮಾಡುತ್ತವೆ. ಇವುಗಳು ತಮ್ಮ ನವಜಾತ ಕಂದನ ಸುರಕ್ಷತೆಗೆ ಕೈಗೊಳ್ಳುವ ಕ್ರಮಗಳು ಮಾತ್ರ ನೋಡುಗರನ್ನು ಹುಬ್ಬೇರುವಂತೆ ಮಾಡುತ್ತಿದೆ.

ಅಬ್ಬಾ ಏನ್‌ ಸೆಕೆ: ದಣಿವಾರಿಸಲು ಕೆಸರಿನ ಸ್ನಾನ ಮಾಡುತ್ತಿರುವ ಗಜಪಡೆ

ಪುಟ್ಟ ನವಜಾತ ಮಕ್ಕಳ ರಕ್ಷಣೆಯ ವಿಚಾರದಲ್ಲಿ ತಾಯಿ ಹಾಗೂ ಕುಟುಂಬ ಮಾಡುವ ಕಾಳಜಿ ತುಂಬಾ ಜಾಗರೂಕವಾಗಿರುತ್ತದೆ. ಮಗುವಿನ ಸುರಕ್ಷತೆಗೆ ಕುಟುಂಬ ಮೊದಲ ಆದ್ಯತೆ ನೀಡುತ್ತದೆ. ಆದರೆ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯ ಇದನ್ನು ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಪ್ರಾಣಿಗಳು ಕೂಡ ಇದೇ ರೀತಿ ತಮ್ಮ ಹಸುಗೂಸುಗಳಿಗೆ ರಕ್ಷಣೆ ನೀಡುತ್ತವೆ ಎಂಬುದು ಅಷ್ಟೇ ಸತ್ಯ. ಇದನ್ನು ಪುಷ್ಠಿಕರಿಸುತ್ತಿದೆ ಆನೆಗಳ ಗುಂಪಿನ ಇತ್ತೀಚಿನ ವಿಡಿಯೋ. ಇವುಗಳು ಮರಿಗಳಿಗೆ ನೀಡುತ್ತಿರುವ ಭದ್ರತೆ ನಮ್ಮ ದೇಶದಲ್ಲಿ ಪ್ರಮುಖ ರಾಜಕಾರಣಿಗಳಿಗೆ ನೀಡುವ z+ ಭದ್ರತೆಯನ್ನು ಮೀರಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. 

ಬೇಲಿ ದಾಟಲು ಮರಿಗೆ ಸಹಾಯ ಮಾಡುತ್ತಿರುವ ಆನೆಗಳ ಹಿಂಡು: ವಿಡಿಯೋ ವೈರಲ್

ವಿಡಿಯೋದಲ್ಲಿ ಕಾಣಿಸುವಂತೆ ಆನೆಗಳ ಹಿಂಡೊಂದು ಕಾಡಿನ ಮಧ್ಯದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿವೆ. ಈ ವೇಳೆ ಈ ಹಿಂಡಿನಲ್ಲಿ ಪುಟ್ಟದೊಂದು ಮರಿಯೂ ಇದ್ದು, ಇದನ್ನು ಯಾರಿಗೂ ಕಾಣದಂತೆ ಗಜಪಡೆ ಮಧ್ಯದಲ್ಲಿ ಇರಿಸಿಕೊಂಡು ಕರೆದುಕೊಂಡು ಹೋಗುತ್ತಿವೆ. ಹಿಂದೆ ಮುಂದೆ ಸುತ್ತಮುತ್ತ ದೊಡ್ಡ ದೊಡ್ಡ ಆನೆಗಳು ಸಾಗುತ್ತಿದ್ದರೆ ಇವುಗಳ ಮಧ್ಯೆ ಹಿಂಡಿನಲ್ಲಿ ಪುಟ್ಟ ಮರಿಯಾನೆ ಸಾಗುತ್ತಿದೆ. ಇದರ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking ಸ್ಮೋಕ್ ಬಾಂಬ್ ಎಸೆದು ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿ, 3 ಸಾವು, ಐವರು ಗಂಭೀರ
11 ನಿಮಿಷ ಉಸಿರು ಚೆಲ್ಲಿ ಬದುಕಿದ ಮಹಿಳೆ: ಸ್ವರ್ಗ- ನರಕದ ನಂಬಲಾಗದ ಅನುಭವ ಬಿಚ್ಚಿಟ್ಟಿದ್ದು ಹೀಗೆ