ಕಿರಿಕ್ ಕುಡುಕನ ಆಕ್ರೋಶಕ್ಕೆ ಹೊತ್ತಿ ಉರಿಯಿತು ಬಾರ್, ನಶೆಯಲ್ಲಿದ್ದ 11 ಮಂದಿ ಸಜೀವ ದಹನ!

Published : Jul 23, 2023, 05:12 PM IST
ಕಿರಿಕ್ ಕುಡುಕನ ಆಕ್ರೋಶಕ್ಕೆ ಹೊತ್ತಿ ಉರಿಯಿತು ಬಾರ್, ನಶೆಯಲ್ಲಿದ್ದ 11 ಮಂದಿ ಸಜೀವ ದಹನ!

ಸಾರಾಂಶ

ಬಾರ್‌ನಲ್ಲಿ ಕುಡಿಯುತ್ತಾ ಕಿರಿಕ್ ಆರಂಭಿಸಿದ್ದ. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಲು ಶುರುಮಾಡಿದೆ. ಬಾರ್ ಸಿಬ್ಬಂದಿಗಳು ಆಗಮಿಸಿ ಕಿರಿಕ್ ಕುಡುಕನ ಹೊರದಬ್ಬಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಕುಡುಕ, ಬಾರ್‌ಗೆ ಬೆಂಕಿ ಹಚ್ಚಿದ್ದಾನೆ. ಇದರ ಪರಿಣಾಮ 11 ಮಂದಿ ಸಜೀವ ದಹನವಾಗಿದ್ದರೆ, 6 ಮಂದಿ ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆ ದಾಖಲಾಗಿದ್ದಾರೆ.  

ಮೆಕ್ಸಿಕೋ(ಜು.23) ನಶೆ ಏರುತ್ತಿದ್ದಂತೆ ಹಲವರ ವರ್ತನೆ ಬದಲಾಗುತ್ತದೆ. ಸೈಲೆಂಟ್ ಇದ್ದವರು ವೈಲೆಂಟ್ ಆಗುತ್ತಾರೆ. ವಾಗ್ವಾದ, ಕಿರಿಕ್, ಹೊಡೆದಾಟಗಳು ಆರಂಭಗೊಳ್ಳುತ್ತದೆ. ಕೊನೆಗೆ ದುರಂತದಲ್ಲಿ ಅಂತ್ಯವಾಗುತ್ತದೆ. ಬಾರ್‌ನಲ್ಲಿ ಸೈಲೆಂಟ್ ಆಗಿ ಒಂದೊಂದೆ ಪೆಗ್ ಏರಿಸಿಕೊಳ್ಳುತ್ತಿದ್ದ. ನಶೆ ತಲೆಗೆ ಏರುತ್ತಿದ್ದಂತೆ ವಾಗ್ವಾದ ಆರಂಭಿಸಿದ. ಅಕ್ಕ ಪಕ್ಕದಲ್ಲಿ ಹಲವು ಜೋಡಿಗಳು ನಶೆಯಲ್ಲಿ ತೇಲಾಡುತ್ತಿದ್ದವರ ವಿರುದ್ಧವೇ ಗಲಾಟೆ ಆರಂಭಿಸಿದ. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಬಾರ್ ಸಿಬ್ಬಂದಿಗಳು ಕಿರಿಕ್ ಕುಡುಕನ ಹೊರದಬ್ಬಿದ್ದಾರೆ. ಈ ಸಿಟ್ಟಿಗೆ ಕಿರಿಕ್ ಕುಡುಕು, ಪೆಟ್ರೋಲ್ ಸುರಿದು ಬಾರ್‌ಗೆ ಬೆಂಕಿ ಹಚ್ಚಿದ್ದಾರೆ. ಕುಡುಕನ ಆಕ್ರೋಶಕ್ಕೆ 11 ಮಂದಿ ಸಜೀವ ದಹನವಾದ ಘಚನೆ ಮೆಕ್ಸಿಕೋದಲ್ಲಿ ನಡೆದಿದೆ.

ಮೆಕ್ಸಿಕೋದ ಸಣ್ಣ ಬಾರ್ ಒಂದರ ಮೇಜು ಕುರ್ಚಿಗಳು ಭರ್ತಿಯಾಗಿದ್ದು. ಹಾಗಂತ ಇದು ದೊಡ್ಡ ಬಾರ್ ಅಂಡ್ ರೆಸ್ಟೋರೆಂಟ್ ಅಲ್ಲ. ನಮ್ಮ ಹಳ್ಳಿ, ಪಟ್ಟಣದಲ್ಲಿರುವಂತ ಸಣ್ಣ ಬಾರ್. ಇಲ್ಲಿನ ನಾನ್ ವೆಜ್ ಭಾರಿ ಫೇಮಸ್. ಜೊತೆಗೊಂದು ಪೆಗ್ ಇಲ್ಲಿನ ಸ್ಛಳೀಯರು, ಪ್ರವಾಸಿಗರ ಫೇವರಿಟ್. ಹೀಗಾಗಿ ಈ ಸಣ್ಣ ಬಾರ್ ಯಾವತ್ತೂ ಫುಲ್. ದಂಪತಿಗಳು, ಜೋಡಿ ಹಕ್ಕಿಗಳು, ಯುವಕರ ಗುಂಪು ಸೇರಿದಂತ ಹಲವರು ಈ ಬಾರ್‌ಗೆ ಆಗಮಿಸಿ ಕೆಲ ಹೊತ್ತು ಕಳೆದು ನಶೆಯಲ್ಲಿ ಸಾಗುವುದೇ ವಾಡಿಕೆ.

ಮಹಿಳೆಯರ ಒಳಗೆ ಸೇರಿದ ‘ಗುಂಡು’; ಪೊಲೀಸ್‌ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ವಿಡಿಯೋ ವೈರಲ್‌

ಎಂದಿನಂತೆ ಈ ಬಾರ್ ಫುಲ್ ಆಗಿತ್ತು. ನಶೆ ಏರುತ್ತಿದ್ದಂತೆ ಕಿರಿಕ್ ಕುಡುಕನ ಅವಾಂತರವೂ ಹೆಚ್ಚಾಗಿತ್ತು. ಕುಡಿದು ವಾಗ್ವಾದ ಆರಂಭಿಸಿದ್ದ. ಅಕ್ಕ ಪಕ್ಕದ ಟೇಬಲ್‌ನವರಿಗೂ ಕಿರಿಕ್ ಮಾಡಲು ಆರಂಭಿಸಿದ. ಕೆಲವರು ಸುಮ್ಮನಾಗಿದ್ದರೆ, ಮತ್ತೆ ಕೆಲವರು ಈತನ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಬಾರ್‌ನಲ್ಲಿ ಗಲಾಟೆ ಆರಂಭಗೊಂಡರೆ ಅಪಾಯ ಹೆಚ್ಚು. ಇಷ್ಟೇ ಅಲ್ಲ ತಮ್ಮ ಗ್ರಾಹಕರಿಗೂ ಸಮಸ್ಯೆ, ವ್ಯಾಪಾರಕ್ಕೂ ಸಮಸ್ಯೆ ಎಂದು ಅರಿತ ಬಾರ್ ಸಿಬ್ಬಂದಿಗಳು, ಕಿರಿಕ್ ಕುಡುಕನನ್ನು ಎಳೆದು ಹೊರಹಾಕಿದ್ದಾರೆ.

 

 

ಬಾರಿನೊಳಗೆ ಕಾಲಿಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ. ನಶೆಯಲ್ಲಿದ್ದ ಕಿರಿಕ್ ಕುಡುಕನ ಪಿತ್ತ ನೆತ್ತಿಗೇರಿದೆ. ಸೇಡು ತೀರಿಸಿಕೊಳ್ಳಲು ಮುಂದಾದ. ಪಕ್ಕದ ಬಂಕ್‌ನಿಂದ ಪೆಟ್ರೋಲ್ ತಂದು ಒಂದೇ ಸಮನೆ ಸುರಿದು ಬೆಂಕಿ ಹಚ್ಚಿದ್ದಾನೆ. ಪೆಟ್ರೋಲ್ ಕಾರಣ ಒಂದೇ ಸಮನೆ ಬೆಂಕಿ ಹೊತ್ತಿಕೊಂಡಿದೆ. ಬಾರಿನ ಹೊರಭಾಗದಲ ಬಾಗಿಲ ಬಳಿಯೇ ಬೆಂಕಿ ಹಚ್ಚಿದ್ದಾನೆ. ಬೆಂಕಿ ಒಂದೇ ಸಮನೆ ಉರಿದಿದೆ. ಒಳಗಿದ್ದವರಿಗೆ ಮೊದಲು ಗೊತ್ತಾಗಿಲ್ಲ. ಗೊತ್ತಾಗುವ ವೇಳೆಗೆ ಬೆಂಕಿಯ ಜ್ವಾಲೆ ಎಲ್ಲೆಡೆ ಆವರಿಸಿಕೊಂಡಿದೆ. ಇದು ಸಣ್ಣ ಬಾರ್ ಆಗಿರುವ ಕಾರಣ ಮುಂಭಾಗದ ಒಂದೇ ಬಾಗಿಲು. ಇದನ್ನು ಬಿಟ್ಟರೆ ಹೊರಗಡೆ ಹೋಗಲು ತುರ್ತು ಬಾಗಿಲು ಇಲ್ಲ. ಹೀಗಾಗಿ ಹಲವರು ಬಾರ್ ಒಳಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ.

 

ಎಣ್ಣೆ ಏಟಲ್ಲಿ ದಾರಿಯಲ್ಲಿ ಹೋಗೋನಿಗೆ ಸ್ವಂತ ಕಾರು ಕೊಟ್ಟು ಮೆಟ್ರೋ ಏರಿದ, ಇದರಲ್ಲಿದೆ ಟ್ವಿಸ್ಟು!

11 ಮಂದಿ ಸಜೀವ ದಹನವಾಗಿದ್ದರೆ, 6 ಮಂದಿ ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಕಿರಿಕ್ ಮಾಡಿ ಬೆಂಕಿ ಹಚ್ಚಿದ ಕುಡುಕ ನಾಪತ್ತೆಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತ ಕಿರಿಕ್ ಕುಡುಕನಿಗೆ ಹುಡುಕಾಟ ಶುರುಮಾಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ