ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಗೆ ಪ್ರಯತ್ನ, ನಿವಾಸದ ಮೇಲೆ ಡ್ರೋನ್ ದಾಳಿ!

Published : May 03, 2023, 06:24 PM IST
ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಗೆ ಪ್ರಯತ್ನ, ನಿವಾಸದ ಮೇಲೆ ಡ್ರೋನ್ ದಾಳಿ!

ಸಾರಾಂಶ

ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೇಲೆ ಹಲವು ಬಾರಿ ಹತ್ಯೆಗೆ ಯತ್ನ ನಡೆದಿದೆ. ಆದರೆ ಈ ಬಾರಿ ಕೂದಲೆಳೆ ಅಂತರದಲ್ಲಿ ಪುಟಿನ್ ಪಾರಾಗಿದ್ದಾರೆ. ಪುಟಿನ್ ನಿವಾಸದ ಮೇಲೆ ಡ್ರೋನ್ ದಾಳಿ ಯತ್ನ ನಡದಿದೆ.

ಮಾಸ್ಕೋ(ಮೇ.03): ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಸದ್ಯಕ್ಕೆ ನಿಲ್ಲಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಯುದ್ಧ ಆರಂಭಗೊಂಡು ವರ್ಷ ಕಳೆದರೂ ಹೋರಾಟ ನಡೆಯುತ್ತಲೇ ಇದೆ. ರಷ್ಯಾಗೆ ತಿರುಗೇಟು ನೀಡಲು ಹಲವು ಪ್ರಯತ್ನಗಳು ನಡೆದಿದೆ. ಈ ಬಾರಿ ಪುಟಿನ್ ಹತ್ಯೆಗೆ ಬಹುದೊಡ್ಡ ಸಂಚು ನಡೆದಿತ್ತು. ಪುಟಿನ್ ನಿವಾಸದ ಮೇಲೆ ಎರಡು ಡ್ರೋನ್ ಮೂಲಕ ಹತ್ಯೆಗೆ ಪ್ರಯತ್ನ ಮಾಡಲಾಗಿದೆ. ಆದರೆ ರಷ್ಯಾ ಭದ್ರತಾ ಪಡೆ ಎರಡೂ ಡ್ರೋನ್ ಹೊಡೆದುರುಳಿಸಿದೆ. ಈ ದಾಳಿ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾ ಹೇಳಿಕೆ ಬಿಡುಗಡೆ ಮಾಡಿದೆ. 

ವ್ಲಾದಿಮಿರ್ ಪುಟಿನ್ ಕ್ರೆಮ್ಲಿನ್ ನಿವಾಸದ ಮೇಲೆ ಡ್ರೋನ್ ದಾಳಿ ನಡೆದಿದೆ. ಎರಡು ಶಸ್ತ್ತಾರಸ್ತ್ರ ತುಂಬಿದ ಡ್ರೋನ್‌ಗಳು ಕ್ರೆಮ್ಲಿನ್ ನಿವಾಸದ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಆದರೆ ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆ ಎರಡೂ ಡ್ರೋನ್ ಹೊಡೆದುರಳಿಸಿದೆ. ಈ ಪ್ರತಿದಾಳಿಯಲ್ಲಿ ವ್ಲಾದಿಮಿರ್ ಪುಟಿನ್‌ ಸುರಕ್ಷಿತವಾಗಿದ್ದಾರೆ. ಯಾವುದೇ ಅಪಾಯವಿಲ್ಲ. ಕ್ರೆಮ್ಲಿನ್ ಕಟ್ಟಡಕ್ಕೂ ಯಾವುದೇ ಹಾನಿಯಾಗಿಲ್ಲ ಎಂದು ರಷ್ಯಾ ಭದ್ರತಾ ಪಡೆ ಹೇಳಿದೆ.

400 ದಿನಗಳ ಉಕ್ರೇನ್-ರಷ್ಯಾ ಯುದ್ಧಕ್ಕೆ ವಿಶ್ವದ ದೊಡ್ಡಣ್ಣ ಎಂಟ್ರಿ: ಯುದ್ಧಭೂಮಿಗೆ ನುಗ್ಗುತ್ತಾ ಅಮೆರಿಕ ಸೈನ್ಯ..?

ಈ ದಾಳಿ ಉಕ್ರೇನ್ ನಡೆಸಿದೆ. ಇದು ಭಯೋತ್ಪಾದಕ ಕೃತ್ಯ ಎಂದು ರಷ್ಯಾ ಹೇಳಿದೆ. ಮೇ.9 ರಂದು ವಿಕ್ಟರಿ ಡೇ ಆಚರಣೆಗೆ ಮಾಸ್ಕೋ ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಈ ದಾಳಿ ನಡೆದಿದೆ. ಇದು ಹಲವು ಅನುಮಾನಕ್ಕೆ ಕಾರಣಾಗಿದೆ. ವಿಕ್ಟರಿ ಡೇ ಆಚರಣೆಗೆ ಬ್ರೇಕ ಹಾಕಲು ಈ ದಾಳಿ ನಡೆದಿದೆ. ಹೀಗಾಗಿ ಇದರ ಹಿಂದಿನ ಕೈವಾಡದ ಮೇಲೆ ಪ್ರತಿ ದಾಳಿ ನಡೆಯಲಿದೆ ಎಂದು ರಷ್ಯಾ ಎಚ್ಚರಿಸಿದೆ.

ಏಪ್ರಿಲ್ ತಿಂಗಳ ಅಂತ್ಯದಲ್ಲಿ ರಷ್ಯಾ ಕ್ಷಿಪಣಿ ದಾಳಿ ಮೂಲಕ ಉಕ್ರೇನ್ ನಡುಗಿಸಿತ್ತು.ಉಕ್ರೇನ್‌ನ ರಾಜಧಾನಿ ಕೀವ್‌ನಿಂದ 215 ಕಿ.ಮಿ.ದೂರದ ಉಮಾನ್‌ನಲ್ಲಿ ರಷ್ಯಾ ಕ್ಷಿಪಣಿ ದಾಳಿ ಮಾಡಿದ್ದು ಇದರಲ್ಲಿ 3 ಮಕ್ಕಳು ಸೇರಿ 16 ಮಂದಿ ಸಾವನ್ನಪ್ಪಿದ್ದರು. ನುಸುಕಿನ ವೇಳೆಯಲ್ಲಿ 20 ಕ್ಷಿಪಣಿ ಹಾಗೂ 2 ಡ್ರೋನ್‌ಗಳು ಇಲ್ಲಿನ ಅಪಾರ್ಚ್‌ಮೆಂಟ್‌ನ ಮೇಲೆ ಸ್ಫೋಟಗೊಂಡಿದೆ. ಇದರಿಂದಾಗಿ ಕಟ್ಟಡ ಧ್ವಂಸವಾಗಿ ಗಾಜುಗಳೆಲ್ಲ ಪುಡಿಯಾಗಿದೆ. ಈ ಘಟನೆಯಿಂದ ಮೂವರು ಮಕ್ಕಳು ಸೇರಿ 16 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಅವಶೇಷಗಳಡಿ ಸಿಲುಕಿದ 17 ಮಂದಿಗೆ ಗಾಯಗಳಾಗಿದೆ ಎಂದು ಮೂಲಗಳು ತಿಳಿಸಿದೆ.

ಕಮಾಂಡರ್‌ಗೆ ಹಿಂಬಡ್ತಿ, ಅಧ್ಯಕ್ಷ ಜೆಲೆನ್ಸ್ಕಿ ವಿರುದ್ಧ ಉಕ್ರೇನ್‌ ಸೇನಾ ಯುನಿಟ್‌ ದಂಗೆ?

ಅತ್ತ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್ಸ್ಕಿ ಹಲವು ನಾಯಕರನ್ನು ಭೇಟಿಯಾಗಿ ನೆರವು ಕೇಳಿದ್ದಾರೆ.  ರಷ್ಯಾ-ಉಕ್ರೇನ್‌ ಸಂಘರ್ಷವನ್ನು ನಿಲ್ಲಿಸುವ ನಿಟ್ಟಿನಲ್ಲಿ  ಝೆಲೆನ್ಸ್ಕಿ ಅವರೊಂದಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕ್ಸಿ ಅವರು, ‘ಈ ಸಂಘರ್ಷದಲ್ಲಿ ಚೀನಾ ತಟಸ್ಥ ನಿಲುವನ್ನು ಪ್ರತಿಪಾದಿಸುತ್ತದೆ. ಜಗತ್ತಿನ ನಾಳೆಗೆ ಹಾಗೂ ಮನುಕುಲದ ಒಳಿತಿಗೆ ಅಣುಯುದ್ಧ ನಡೆಯದೇ ಇದ್ದರೆ ಒಳ್ಳೆಯದು. ಒಂದು ವೇಳೆ ಅಣುಯುದ್ಧ ನಡೆದರೆ ಅದರಲ್ಲಿ ಯಾರೂ ಗೆಲ್ಲುವುದಿಲ್ಲ’ ಎಂದರು. ಈ ಮೂಲಕ ಚೀನಾ ರಷ್ಯಾ ಉಕ್ರೇನ್‌ ಸಂಘರ್ಷದಲ್ಲಿ ಮಧ್ಯಪ್ರವೇಶಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?