ತಮ್ಮ ಮದುವೆಯ ಆರತಕ್ಷತೆಯನ್ನು ಮುಗಿಸಿಕೊಂಡು ಹೋಗುತ್ತಿದ್ದಾಗ ವರ - ವಧುವಿಗೆ ಅಪಘಾತ ಸಂಭವಿಸಿದೆ. ಮದ್ಯಪಾನ ಸೇವಿಸಿ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ವರ ಹಾಗೂ ವಧು ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.
ಸ್ಯಾನ್ ಫ್ರಾನ್ಸಿಸ್ಕೋ (ಮೇ 2, 2023): ಮದುವೆ ಅನ್ನೋದು ಯುವಕ - ಯುವತಿಯರ ಜೀವನದಲ್ಲಿ ನಡೆಯೋ ಪ್ರಮುಖ ಬೆಳವಣಿಗೆ. ಆದರೆ, ಇದೇ ಮದುವೆ ಸಮಾರಂಭ ನಡೆದ ಬಳಿಕ ಸಂಭ್ರಮದ ಕ್ಷಣ ಕಳೆದುಹೋಗಿ ಸೂತಕದ ವಾತಾವರಣ ಏರ್ಪಟ್ಟಿದೆ. ಅದಕ್ಕೆ ಕಾರಣ ಅಪಘಾತ. ಹೌದು, ಮದುವೆ ಆರತಕ್ಷತೆ ಮುಗಿಸಿಕೊಂಡು ಹೋಗುತ್ತಿದ್ದ ವರ ಹಾಗೂ ವಧು ಭೀಕರ ಅಪಘಾತಕ್ಕೊಳಗಿದ್ದಾರೆ.
ತಮ್ಮ ಮದುವೆಯ ಆರತಕ್ಷತೆಯನ್ನು ಮುಗಿಸಿಕೊಂಡು ಹೋಗುತ್ತಿದ್ದಾಗ ವರ - ವಧುವಿಗೆ ಅಪಘಾತ ಸಂಭವಿಸಿದೆ. ಮದ್ಯಪಾನ ಸೇವಿಸಿ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ವರ ಹಾಗೂ ವಧು ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ವಧು ಮೃತಪಟ್ಟಿದ್ದು, ವರ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಅಮೆರಿಕದ ಸೌತ್ ಕೆರೊಲಿನಾದಲ್ಲಿ ಈ ದುರಂತ ಘಟನೆ ಸಂಭವಿಸಿದ್ದು, ಅವರು ಹೋಗುತಿದ್ದ ವಾಹನಕ್ಕೆ ವೇಗ ಮಿತಿಗಿಂತ 2 ಪಟ್ಟು ವೇಗದಲ್ಲಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಯುವತಿಯರಿಗೆ ಯಾಮಾರಿಸಿದ ಮನೆ ಮಾಲೀಕ: ಬೆಡ್‌ರೂಮ್, ಬಾತ್ರೂಮ್‌ನಲ್ಲಿ ಸ್ಪೈ ಕ್ಯಾಮೆರಾ ಇಟ್ಟ ವಂಚಕ
GoFundMe ಎಂಬ ಪೇಜ್ ವಧುವನ್ನು ಸಮಂತಾ 'ಸ್ಯಾಮ್' ಹಚಿನ್ಸನ್, 34, ಮತ್ತು ಆಕೆಯ ವರ ಆರಿಕ್ ಹಚಿನ್ಸನ್ ಎಂದು ಮಾಹಿತಿ ನೀಡಿದೆ. ಅಪಘಾತಕ್ಕೀಡಾಗುವ ಮುನ್ನ ನವವಿವಾಹಿತರು ಸ್ಪಾರ್ಕ್ಲರ್‌ಗಳ ಅಡಿಯಲ್ಲಿ ಓಡುತ್ತಿರುವ ಫೋಟೋವನ್ನು ಸಹ ಇದು ಒಳಗೊಂಡಿದೆ. ಅಂದರೆ, ಇದು ಎಂಗೇಜ್‌ಮೆಂಟ್ ನಂತರ ನಡೆದಿರುವ ಸಮಾರಂಭ ಅಥವಾ ಪಾರ್ಟಿ ಎನ್ನಲಾಘಿದೆ.
ಕುಟುಂಬ ಸದಸ್ಯರು ದಂಪತಿಯನ್ನು ಆರತಕ್ಷತೆಯಿಂದ ಕರೆದೊಯ್ಯುತ್ತಿದ್ದಾಗ ಹಿಂದಿನಿಂದ ಕಾರು ಬಂದು ಡಿಕ್ಕಿ ಹೊಡೆದಿದ್ದಾರೆ ಎಂದು ವರನ ತಾಯಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಚಲಾಯಿಸುತ್ತಿದ್ದ ವಾಹನ ಅಪಘಾತದಲ್ಲಿ 100 ಯಾರ್ಡ್‌ಗಳಷ್ಟು ದೂರ ಹಾರಿದ್ದು, ಹಲವು ಬಾರಿ ಉರುಳಿದೆ ಎಂದೂ ತಿಳಿದುಬಂದಿದೆ. ತನ್ನ ಮಗನಿಗೆ ಮಿದುಳಿನ ಗಾಯವಾಗಿದೆ ಮತ್ತು ಹಲವಾರು ಮೂಳೆಗಳು ಮುರಿದಿವೆ ಎಂದು ಸಹ ತಾಯಿ ಹೇಳಿಕೊಂಡಿದ್ದು, ಇದರಿಂದ ಆತ 2 ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದೂ ತಾಯಿ ಹೇಳಿದ್ದಾರೆ. ಅಲ್ಲದೆ, ಈ ಅಪಘಾತದಲ್ಲಿ ವರ ಹಾಗೂ ವಧು ಹೊರತುಪಡಿಸಿ ಮತ್ತಿಬ್ಬರು ಗಾಯಗೊಂಡಿದ್ದು, ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದೂ ವರನ ತಾಯಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರೇವಾ ವಿವಿ ವಿದ್ಯಾರ್ಥಿ ಕೊಲೆ ಕೇಸ್: ಓರ್ವ ವಿದ್ಯಾರ್ಥಿ ಅರೆಸ್ಟ್; ಇನ್ನೂ ಕೆಲ ಆರೋಪಿಗಳಿಗಾಗಿ ಶೋಧ ಕಾರ್ಯ
‘’ಸ್ಯಾಮ್ ತನ್ನ ಗಾಯಗಳಿಂದ ಮೃತಪಟ್ಟಿದ್ದಾಳೆ. ಆರಿಕ್ ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ಎರಡು ಶಸ್ತ್ರಚಿಕಿತ್ಸೆಗೊಳಗಾಗಿದ್ದಾನೆ. ಹಲವಾರು ಮುರಿದ ಮೂಳೆಗಳು ಮತ್ತು ಮಿದುಳಿನ ಗಾಯವೂ ಉಂಟಾಗಿದೆ. ಇದರಿಂದ ಚೇತರಿಸಿಕೊಳ್ಳಲು ಸುದೀರ್ಘ ಸಮಯ ಹಿಡಿಯುತ್ತದೆ. ಅಪಘಾತದಲ್ಲಿ ಬೆನ್ ಮತ್ತು ಬ್ರೋಗನ್ ಕೂಡ ಗಾಯಗೊಂಡಿದ್ದಾರೆ, ಬೆನ್ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರನ ತಾಯಿ ಹೇಳಿದ್ದಾರೆ. ಅಲ್ಲದೆ, ಅವರು ತನ್ನ ಸೊಸೆಯ ಅಂತ್ಯಕ್ರಿಯೆ ಮತ್ತು ಆಕೆಯ ಮಗನ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಸಹಾಯ ಮಾಡಿ ಎಂದು ಪೇಜ್‌ನಲ್ಲಿ ಕೇಳಿಕೊಂಡಿದ್ದಾರೆ.
ಈ ಮಧ್ಯೆ, ಸಮಂತಾ ಕೆಲಸ ಮಾಡ್ತಿದ್ದ ಕಂಪನಿಯ ಮಾಲೀಕರು ತಮ್ಮ ಸಾವಿನ ಸುದ್ದಿಯನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದು "ಸಮಂತಾ ಅದ್ಭುತ ವ್ಯಕ್ತಿ. ಕಳೆದ ಕೆಲವು ತಿಂಗಳುಗಳಲ್ಲಿ, ನಮ್ಮ ತಂಡವು ಅವರ ಮುಂಬರುವ ವಿವಾಹದ ಕುರಿತು ಫೋಟೋಗಳು ಮತ್ತು ಸಂಕೀರ್ಣ ವಿವರಗಳನ್ನು ಹಂಚಿಕೊಂಡಿದ್ದರಿಂದ ಅವರ ಉತ್ಸಾಹದಲ್ಲಿ ಸೇರಲು ಸಾಧ್ಯವಾಯಿತು. ನಾವು ಸಮಂತಾ ಅವರ ನಗು, ಅವರ ಕೆಲಸ, ಸ್ನೇಹಿತರು ಮತ್ತು ಕುಟುಂಬಕ್ಕೆ ಅವರ ಸಮರ್ಪಣೆಯನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇವೆ’’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬೀದರ್‌ನಲ್ಲಿ ಭಾರಿ ಮಳೆ: ಹಳ್ಳ ದಾಟಲು ಹೋಗಿ ಮಕ್ಕಳು ಸೇರಿ ಕುಟುಂಬದ ಮೂವರು ನೀರುಪಾಲು