-ಟ್ರಂಪ್ ಹೊಸ ಸಾಮಾಜಿಕ ಜಾಲತಾಣ ಆ್ಯಪ್ Truth Social ಹ್ಯಾಕ್!
-ಹಂದಿ ಮಲವಿಸರ್ಜನೆ ಮಾಡುತ್ತಿರುವ ಫೋಟೋ ಪೋಸ್ಟ್!
-ಹ್ಯಾಕ್ ಆದ ಎರಡು ಗಂಟೆಗಳ ನಂತರ ಟ್ರಂಪ್ ತಂಡ ಅಲರ್ಟ್
ಯುಎಸ್‌ಎ(ಅ. 23 ) : ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಸಾಮಾಜಿಕ ಜಾಲತಾಣ ಆ್ಯಪ್ (Social Media App) ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹ್ಯಾಕ್(Hack) ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇತ್ತೀಚೆಗೆ ಟ್ವೀಟರ್ ಮತ್ತು ಇತರ ಸಾಮಾಜಿಕ ಜಾಲತಾಣ ದೈತ್ಯ ಕಂಪನಿಗಳಿಗೆ ಸೆಡ್ಡು ಹೊಡೆಯಲು ಟ್ರಂಪ್ ತಮ್ಮದೇ ಆದ ಹೊಸ ಸಾಮಾಜಿಕ ಜಾಲತಾಣ ಟ್ರುತ್ ಸೋಷಿಯಲ್ (Truth Social) ಆರಂಭಿಸುವುದಾಗಿ ತಿಳಿಸಿದ್ದರು. ಆದರೆ ಈಗ ಯೆನೋನಿಮಸ್ (Anonymous) ಎಂಬ ಹ್ಯಾಕರ್‌ಗಳು ಈ ಆ್ಯಪ್‌ನ್ನು ಹ್ಯಾಕ್ ಮಾಡಿದ್ದು ನಕಲಿ ಖಾತೆಗಳನ್ನು(Fake accounts) ತೆರೆದಿದ್ದಾರೆ.
ಟ್ವಿಟರ್‌ನಿಂದ ಬಹಿಷ್ಕಾರ: ತನ್ನದೇ ಹೊಸ ಸಾಮಾಜಿಕ ಜಾಲತಾಣ ಪ್ರಾರಂಭಿಸಲಿದ್ದಾರೆ ಟ್ರಂಪ್!
ಟ್ರುತ್ ಸೋಷಿಯಲ್ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲವಾದರೂ ಪರಿಕ್ಷಾರ್ಥವಾಗಿ ಆ್ಯಪ್‌ನ ಬೀಟಾ ವರ್ಷನ್ (Beta Version) ಲಭ್ಯವಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಹ್ಯಾಕರ್ಸ್ ಆ್ಯಪ್‌ನ ಆ್ಯಕ್ಸಸ್ (Access) ಪಡೆದುಕೊಂಡಿದ್ದಾರೆ. ಆ್ಯಪ್‌ನಲ್ಲಿ 'donaldjtrump' ಮತ್ತು 'mikepence' ಎಂಬ ಹೆಸರಿನಲ್ಲಿ ಖಾತೆಗಳನ್ನು ತೆರೆಯಲಾಗಿದೆ. ಅಲ್ಲದೇ ಹಂದಿಯೊಂದು ಮಲವಿಸರ್ಜನೆ ಮಾಡುತ್ತಿರುವ ಪೋಟೋವನ್ನು donaldjtrump ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಅಧಿಕೃತವಾಗಿ ಜನವರಿ 2021 ರಲ್ಲಿTruth Social ಬಳಕೆಗೆ ಲಭ್ಯವಿರಲಿದೆ.
Truth Social ಹ್ಯಾಕ್ ಮಾಡುವುದು ಕಷ್ಟವೆನಿಸಲಿಲ್ಲ!
ಯೆನೋನಿಮಸ್ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ Aubrey Cottle 'ಆ್ಯಪಲ್ ಸ್ಟೋರ್‌ನಲ್ಲಿ (Apple store) ಗ್ರಾಹಕರಿಗಾಗಿ ಲಭ್ಯವಿರುವ ಆ್ಯಪ್ ಮೂಲಕ ನಾವು ಹ್ಯಾಕ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಜತೆಗೆ ಆ್ಯಪ್‌ಗೆ sing-up ಆಗಲು ಸಹಾಯ ಮಾಡುವ ಲಿಂಕ್‌ವೊಂದನ್ನು ತನ್ನ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದು ಇದರಿಂದ ಜನರು ಸುಲಭವಾಗಿ ಆ್ಯಪ್ ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಟ್ವೀಟರ್ ಸಿಇಒ ಜಾಕ್ ಡೋರ್ಸಿ (Jack Dorsey) ಹಾಗೂ ಸ್ವತ: ಡೊನಾಲ್ಡ್ ಟ್ರಂಪ್ ಸೇರಿದಂತೆ ಇತರ ಪ್ರಸಿದ್ದ ವ್ಯಕ್ತಿಗಳ ನಕಲಿ ಖಾತೆಗಳನ್ನು ಹ್ಯಾಕರ್ಸ್ ತೆರೆದಿದ್ದಾರೆ. ಆ್ಯಪ್‌ನ ಸೋರ್ಸ್ ಕೋಡ್ (Sources Code) ಗಮನಿಸಿದಾಗಲೇ ನಮಗೆ ಇದರ ಸೆಕ್ಯೂರಿಟಿಯಲ್ಲಿರುವ (Security) ಲೋಪಗಳ ಬಗ್ಗೆ ಅರಿವಾಗಿತ್ತು. ಹಾಗಾಗಿ ಸುಲಭವಾಗಿ ಆ್ಯಪ್ ಹ್ಯಾಕ್ ಮಾಡಬಹುದಿತ್ತು. ಹ್ಯಾಕ್ ಆದ ಎರಡು ಗಂಟೆ ನಂತರ ಆ್ಯಪ್‌ನಲ್ಲಿ ಏನೋ ಸಮಸ್ಯೆಯಿದೆ ಎಂದು ಟ್ರಂಪ್ ತಂಡಕ್ಕೆ ತಿಳಿದಿದೆ. ಇದಾದ ಬಳಿಕ ಅವರು ಎಲ್ಲ ನಕಲಿ ಖಾತೆಗಳನ್ನು ಸ್ಥಗಿತಗೊಳಿಸಿ ಬೀಟಾ ಟೆಸ್ಟಿಂಗ್ ವೆಬ್‌ಸೈಟ್‌ನ್ನ ನಿಷ್ಕ್ರಿಯಗೊಳಿಸಿದ್ದಾರೆ.
ಹೊಸ ಸಾಮಾಜಿಕ ಜಾಲತಾಣ ಆರಂಭಿಸುವ ಬಗ್ಗೆ ತಿಳಿಸಿದ್ದ ಟ್ರಂಪ್!
ಇತ್ತೀಚೆಗೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮದೇ ಹೊಸ ಸಾಮಾಜಿಕ ಜಾಲತಾಣವನ್ನು (Social Media) ಆರಂಭಿಸುವುದಾಗಿ ತಿಳಿಸಿದ್ದರು. ಟ್ರಂಪ್ ಮೀಡಿಯಾ ಆ್ಯಂಡ್ ಟೆಕ್ನಾಲಜಿ ಗ್ರೂಪ್ (Trump Media and Technology) ಒಡೆತನದಲ್ಲಿ 'TRUTH social' ಆ್ಯಪ್ ಎಂಬ ಕೆಲಸ ಮಾಡಲಿದೆ ಹಾಗೂ 'ಸಾಮಾಜಿಕ ಜಾಲತಾಣದ ದೈತ್ಯ ಕಂಪನಿಗಳ ದಬ್ಬಾಳಿಕೆ ವಿರುದ್ಧ ಸಮರ ಸಾರಲು ನಾನು ಟ್ರುತ್ ಸೋಷಿಯಲ್ ಆರಂಭ ಮಾಡುತ್ತಿದ್ದೇನೆ' ಎಂದು ಟ್ರಂಪ್ ಹೇಳಿದ್ದರು.
ಅಮೆರಿಕದಲ್ಲಿ ಈರುಳ್ಳಿ ತಿಂದು 650 ಜನಕ್ಕೆ ವಿಚಿತ್ರ ಸೋಂಕು!
ಕ್ಯಾಪಿಟಲ್ ಹಿಲ್ ಗಲಭೆ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ ಸೊಸೆಯ ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಂಡ ಟ್ರಂಪ್‌ಗೆ ಮತ್ತೆ ನಿರ್ಬಂಧ ಹೇರಲಾಗಿತ್ತು. ಇಷ್ಟೇ ಅಲ್ಲ ಸೊಸೆಗೆ ನೊಟೀಸ್ ನೀಡುವ ಮೂಲಕ ಟ್ರಂಪ್ ವಿರುದ್ಧದ ನಿಲುವನ್ನು ಮತ್ತಷ್ಟು ಕಠಿಣಗೊಳಿಸಿತ್ತು. 'ತಾಲಿಬಾನಿಗಳಿಂದಲೇ ತುಂಬಿ ತುಳುಕುತ್ತಿರುವ ಟ್ವೀಟರ್‌ಅನ್ನು ನಾವು ಬಳಸುತ್ತಿದ್ದೇವೆ. ಇದರ ಹೊರತಾಗಿಯು ನಮ್ಮ ಅಮೆರಿಕಾದ ಅಧ್ಯಕ್ಷರು ಸುಮ್ಮನಿದ್ದಾರೆ. ಇದು ಸ್ವೀಕಾರಾರ್ಹವಲ್ಲ' ಎಂದು ಟ್ರಂಪ್ ಹೇಳಿದ್ದರು.