ಟ್ರಂಪ್ ಪ್ರಾಣ ಉಳಿಸಿದ ಭಗವಾನ್ ಜಗನ್ನಾಥ, ಮಾಜಿ ಅಧ್ಯಕ್ಷನಿಗೆ ನೆರವಾದ 1976ರ ರಥ ಯಾತ್ರೆ!
ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಹತ್ಯೆ ಪ್ರಯತ್ನದಲ್ಲಿ ಟ್ರಂಪ್ ಪ್ರಾಣ ಉಳಿಯಲ ಕಾರಣ ಭಗವಾನ್ ಜಗನ್ನಾಥ. ಈ ಕುರಿತು ಇಸ್ಕಾನ್ 1976ರ ಜಗನ್ನಾಥ ರಥಯಾತ್ರೆ ಘಟನೆ ಮೂಲಕ ವಿವರಣೆ ನೀಡಿದೆ.
ಪೆನ್ಸಿಲ್ವೇನಿಯಾ(ಜು.15) ಅಮರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹತ್ಯೆಗೆ ನಡೆಸಿದ ಭಾರಿ ಪ್ರಯತ್ನ ಒಂದು ವಿಫಲವಾಗಿದೆ. ಟ್ರಂಪ್ ಟಾರ್ಗೆಟ್ ಮಾಡಿ ದಾಳಿ ಮಾಡಿ ಹಂತಕ ಗುರಿ ತಪ್ಪಿತ್ತು. ಹೀಗಾಗಿ ಕಿವಿ ಸೀಳಿಕೊಂಡು ಗುಂಡು ಹಾರಿ ಹೋಗಿದೆ. ಕೂದಲೆಳೆ ಅಂತರದಲ್ಲಿ ಟ್ರಂಪ್ ಬದುಕುಳಿದಿದ್ದಾರೆ. ಡೋನಾಲ್ಡ್ ಟ್ರಂಪ್‌ಗೆ ಭಗವಾನ್ ಜಗನ್ನಥಾನ ಆಶೀರ್ವಾದವಿದೆ. ಹೀಗಾಗಿ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಇಸ್ಕಾನ್ ಹೇಳಿದೆ. ಇದು ಹೇಗೆ ಅನ್ನೋದನ್ನು ಇಸ್ಕಾನ್ 1976ರ ಜಗನ್ನಾಥ ರಥಯಾತ್ರೆ ಘಟನೆ ಮೂಲಕ ವಿವರಿಸಿದೆ.
ಡೋನಾಲ್ಡ್ ಟ್ರಂಪ್‌ಗೆ ಭಗವಾನ್ ಜಗನ್ನಾಥನ ಆಶೀರ್ವಾದದ ಕಾರಣದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 1976ರಲ್ಲಿ ಟ್ರಂಪ್ ನ್ಯಯಾರ್ಕ್ ನಗರದಲ್ಲಿ ಅತೀ ದೊಡ್ಡ ರಿಲಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. 1976ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಭಾರತೀಯರು ಜಗನ್ನಥ ರಥ ಯಾತ್ರೆ ಆಯೋಜನೆಗೆ ತಯಾರಿ ನಡೆಸಿದ್ದರು. ಅನುಮತಿ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿತ್ತು. ಈ ವೇಳೆ ಜಗನ್ನಾಥ ರಥ ಯಾತ್ರೆಗೆ ಪರ ವಿರೋಧಗಳು ವ್ಯಕ್ತವಾಗಿತ್ತು.
ಟ್ರಂಪ್ ಹತ್ಯೆ ಯತ್ನ: ನಿಜವಾದ ಕೋಠಿ ಮಠದ ಶ್ರೀಗಳ ಭವಿಷ್ಯ!
ಈ ವೇಳೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಡೋನಾಲ್ಡ್ ಟ್ರಂಪ್, ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ ಜಗನ್ನಾಥ ರಥಯಾತ್ರೆಯನ್ನು ಬೆಂಬಲಿಸಿದ್ದರು. ರಥಗಳ ನಿರ್ಮಾಣಕ್ಕಾಗಿ ಟ್ರಂಪ್, ತಮ್ಮ ರೈಲು ಅಂಗಳನ್ನು ಉಚಿತವಾಗಿ ನೀಡಿದ್ದರು. 30 ವರ್ಷದ ಉದಯೋನ್ಮುಖ ರಿಯಲ್ ಎಸ್ಟೇಟ್ ಉದ್ಯಮಿ ಟ್ರಂಪ್ ನ್ಯೂಯಾರ್ಕ್ ನಗರದಲ್ಲಿ ಮೊದಲ ಜಗನ್ನಾಥ ರಥ ಯಾತ್ರೆಗೆ ಎಲ್ಲಾ ನೆರವು ನೀಡಿದ್ದರು. ಅಂದು ಅಮೆರಿಕದ ಅಧಿಕಾರಿಗಳು, ನಾಯಕರು ಸೇರಿದಂತೆ ಹಲವರು ರಥಯಾತ್ರೆಗೆ ಅನುಮತಿ ನಿರಾಕರಿಸಿದ್ದರು. ಪ್ರಮುಖವಾಗಿ ಭದ್ರತೆ ಕಾರಣ ನೀಡಿದ್ದರು. ಆದರೆ ಟ್ರಂಪ್ ಆಗಷ್ಟೇ ಖರೀದಿಸಿದ್ದ ಟ್ರೈನ್ ಯಾರ್ಡ್ ಸ್ಥಳವನ್ನು ರಥಗಳ ನಿರ್ಮಾಣಕ್ಕೆ ನೀಡಿದರು.
ಇದಾದ ಬಳಿಕ ಹಲವು ಅಡೆ ತಡೆಗಳು ಎದುರಾಗಿತ್ತು. ಪೊಲೀಸ್ ಇಲಾಖೆ ಮೊದಲು ಒಕೆ ಎಂದಿತ್ತು. ಆದರೆ ಬಳಿಕ ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಮೇಯರ್ ಕೂಡ ರಥ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದ್ದರು. ಆದರೆ ಜಗನ್ನಾಥನ ಆಶೀರ್ವಾದದಿಂದ ಎಲ್ಲವೂ ಸುಸೂತ್ರವಾಗಿ ನಡೆದಿತ್ತು. 1976ರಲ್ಲಿ ಮೊದಲ ರಥ ಯಾತ್ರೆಗೆ ಮೊದಲು ಬೆಂಬಲ ನೀಡಿ, ಸಹಾಕಾರ ನೀಡಿದ ಜಗನ್ನಾಥನ ಇದೀಗ ಟ್ರಂಪ್ ಮೇಲಿನ ದಾಳಿ ತಪ್ಪಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ ಎಂದು ಕೋಲ್ಕತಾ ಇಸ್ಕಾನ್ ಮುಖ್ಯಸ್ಥ ರಾಧಾರಾಮನ್ ದಾಸ್ ಹೇಳಿದ್ದಾರೆ.
ಟ್ರಂಪ್ ಮೇಲೆ ದಾಳಿ..ವೈರಲ್ ಆಯ್ತು ಭವಿಷ್ಯ ಹೇಳಿದ್ದ ಪಾದ್ರಿ ವೀಡಿಯೋ!