ಟ್ರಂಪ್ ಮತ್ತೊಂದು ವಿವಾದಾತ್ಮಕ ನಿರ್ಧಾರ, ಅಮೆರಿಕದಲ್ಲಿ ಕಂಡುಕೇಳರಿಯದ ಬೆಳವಣಿಗೆ!

By Suvarna NewsFirst Published Jan 9, 2021, 7:28 AM IST
Highlights

ಅಧಿಕಾರದಿಂದ ಇಳಿವ ಮುನ್ನ ಟ್ರಂಪ್‌ ಸ್ವಯಂ ಕ್ಷಮಾದಾನ?| ಮತ್ತೊಂದು ವಿವಾದಾತ್ಮಕ ನಿರ್ಧಾರಕ್ಕೆ ಚಿಂತನೆ| ಅಮೆರಿಕದಲ್ಲಿ ಕಂಡುಕೇಳರಿಯದ ಬೆಳವಣಿಗೆ

ವಾಷಿಂಗ್ಟನ್(ಜ.09):  ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಜ.20ರಂದು ಅಧಿಕಾರ ಹಸ್ತಾಂತರಿಸಿದ ಬಳಿಕ ತಮ್ಮ ಅವಧಿಯಲ್ಲಿ ಕೈಗೊಂಡ ಹಲವು ವಿವಾದಾತ್ಮಕ ನಿರ್ಧಾರಗಳು, ಕ್ರಮಗಳು ತಮ್ಮನ್ನು ಸುತ್ತಿಕೊಳ್ಳಬಹುದು ಎಂದು ಊಹಿಸಿರುವ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಂದು ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ಅಧಿಕಾರದಿಂದ ಕೆಳಗಿಳಿಯುವ ಮುನ್ನ ಸ್ವಯಂ ಕ್ಷಮಾದಾನ ಪಡೆಯಲು ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಸಂಚಲನಕ್ಕೆ ಕಾರಣವಾಗಿದೆ.

ಹಿಂಸೆ ಎಂದಿಗೂ ಗೆಲ್ಲಲ್ಲ; ಪ್ರಜಾಪ್ರಭುತ್ವ ರಕ್ಷಿಸಿದ ಉಪಾಧ್ಯಕ್ಷ ಮೈಕ್ ಪೆನ್ಸ್‌

ಈ ಸಂಬಂಧ ಟ್ರಂಪ್‌ ಅವರು ತಮ್ಮ ಸಲಹೆಗಾರರ ಜತೆ ಸಮಾಲೋಚನೆ ನಡೆಸಿದ್ದಾರೆ. ಆದರೆ ಅಮೆರಿಕದ ಸಂಸತ್‌ ಭವನ ಕ್ಯಾಪಿಟಲ್‌ ಮೇಲೆ ತಮ್ಮ ಬೆಂಬಲಿಗರು ದಾಳಿ ನಡೆಸಿದ ಬಳಿಕವೂ ಈ ಮಾತುಕತೆ ಮುಂದುವರಿದಿದೆಯೇ ಎಂಬುದು ಗೊತ್ತಾಗಿಲ್ಲ. ಅಮೆರಿಕದ ಇತಿಹಾಸದಲ್ಲಿ ಯಾವುದೇ ಅಧ್ಯಕ್ಷ ತನಗೆ ತಾನೇ ಕ್ಷಮಾದಾನ ಕೊಟ್ಟಿಕೊಂಡ ನಿದರ್ಶನ ಅಲ್ಲ. ಇಂತಹ ನಿರ್ಧಾರಗಳು ಕಾನೂನಿನ ನಿಷ್ಕರ್ಷೆಗೂ ಒಳಪಟ್ಟಿಲ್ಲ. ಹೀಗಾಗಿ ಟ್ರಂಪ್‌ ಆಲೋಚನೆ ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಅಮೆರಿಕ ಸಂಸತ್​ ಮೇಲೆ ಟ್ರಂಪ್ ಬೆಂಬಲಿಗರ ದಾಳಿ, ಓರ್ವ ಸಾವು!

2016ರ ಚುನಾವಣೆಯಲ್ಲಿ ರಷ್ಯಾ ಕೈವಾಡ ಕುರಿತ ತನಿಖೆಗೆ ಅಡ್ಡಿಪಡಿಸಿದ್ದು, ಜಾರ್ಜಿಯಾದ ಚುನಾವಣಾ ಅಧಿಕಾರಿಗಳಿಗೆ ಕರೆ ಮಾಡಿ ತಮ್ಮ ಪರ ಇರುವ ಪತ್ರಗಳನ್ನು ಹುಡುಕುವಂತೆ ತಾಕೀತು ಮಾಡಿದ್ದು ಸೇರಿದಂತೆ ಹಲವು ಗಂಭೀರ ಆರೋಪಗಳು ಟ್ರಂಪ್‌ ಮೇಲಿವೆ. ಇದೀಗ ಸಂಸತ್‌ ಭವನದ ಬೆಂಬಲಿಗರ ನಡೆಸಿದ ದಾಳಿಯೂ ಅವರಿಗೆ ಮಗ್ಗುಲ ಮುಳ್ಳಾಗಿದೆ.

click me!