
ನ್ಯೂಯಾರ್ಕ್(ಜ.08): ಕೊರೋನಾ ವೈರಸ್ ವಿರುದ್ಧ ಹೋರಾಡಬಲ್ಲ ಲಸಿಕೆ ವಿತರಣೆ ಭಾರತದಲ್ಲಿ ಆರಂಭಗೊಂಡಿದೆ. ಇನ್ನು ಅಮೆರಿಕ, ಬ್ರಿಟನ್ ಸೇರಿದಂತೆ ಕೆಲ ದೇಶದಲ್ಲಿ ಲಸಿಕೆ ಲಭ್ಯವಾಗುತ್ತಿದೆ. ಇದರ ನಡುವೆ ಕಾಣಿಸಿಕೊಂಡ ರೂಪಾಂತರಿ ಕೊರೋನಾ ವೈರಸ್ ಆತಂಕ ಹೆಚ್ಚಿಸಿತ್ತು. ಇದಕ್ಕೆ ಲಸಿಕೆ ಇದೆಯಾ? ಅಥವಾ ಆಗಾಗಲೇ ಅಭಿವೃದ್ಧಿ ಪಡಿಸಿದ ಲಸಿಕೆ ಪರಿಣಾಮಕಾರಿಯಾಗಲಿದೆಯಾ? ಅನ್ನೋ ಹಲವು ಪ್ರಶ್ನೆಗಳು ಹಲವರನ್ನು ಕಾಡುತ್ತಿದೆ. ಇದೀಗ ಎಲ್ಲಾ ಗೊಂದಲಗಳಿಗೆ ಅಮೇರಿಕ ಡ್ರಗ್ ಸಂಸ್ಥೆ ನಡೆಸಿದ ಅಧ್ಯಯನ ವರದಿ ಉತ್ತರ ನೀಡಿದೆ.
ಜ.13ರಿಂದ ಜನಸಾಮಾನ್ಯರಿಗೆ ಕೊರೋನಾ ಲಸಿಕೆ ಲಭ್ಯ; ಕಾಂಗ್ರೆಸ್‌ಗೆ ಹೆಚ್ಚಾಯ್ತು ಅನುಮಾನ!..
ಅಮೆರಿಕ ಡ್ರಗ್ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಫೈಜರ್ ಹಾಗೂ ಬಯೋNಟೆಕ್ ಕೋವಿಡ್ 19 ಲಸಿಕೆಗಳು ರೂಪಾಂತರಿ ಕೊರೋನಾ ವೈರಸ್ ವಿರುದ್ಧವೂ ಪರಿಣಾಮಕಾರಿಯಾಗಿದೆ ಎಂದಿದೆ. ರೂಪಾಂತರಿ ವೈರಸ್ ತಳಿ ವಿರುದ್ಧ ಈ ಎರಡು ಲಸಿಕೆಗಳು ಕಾರ್ಯನಿರ್ವಹಿಸಲಿದೆ. ಪ್ರಯೋಗದ ಮೂಲಕ ಇದು ಸಾಬೀತಾಗಿದೆ ಎಂದಿದೆ.
ರೂಪಾಂತರಿ ಕೊರೋನಾ ವೈರಸ್ ಹರಡುವಿಕೆ ವೇಗ ಹೆಚ್ಚಿದೆ. ಹೀಗಾಗಿ ರೂಪಾಂತರಿ ವೈರಸ್ ಪತ್ತೆಯಾದವರಿಗೆ ಲಸಿಕೆ ನೀಡಲಾಗಿದೆ. ಇವರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ರೂಪಾಂತರ ವೈರಸ್ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಸಂಶೋಧಕ ಡಾರ್ಮಿಟ್ಜರ್ ಹೇಳಿದ್ದಾರೆ.
16 ವಿಭಿನ್ನ ರೂಪಾಂತರಿ ವೈರಸ್ ಕುರಿತು ಪರೀಕ್ಷೆ ನಡೆಸಿದ್ದೇವೆ. 16 ರೂಪಾಂತರ ಗೊಂಡಿರುವ ವೈರಸ್ ಹರಡುವಿಕೆ ವೇಗ ಹೆಚ್ಚಾಗಿದೆ. ಆದರೆ ದೇಹದಲ್ಲಿ ಮಹತ್ವದ ಪರಿಣಾಮ ಬೀರುವುದಿಲ್ಲ ಎಂದು ಅಧ್ಯಯನ ವರದಿ ಹೇಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ