
ವಾಶಿಂಗ್ಟನ್(ನ.22): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿನ ಸೋಲನ್ನು ಅರಗಿಸಿಕೊಳ್ಳಲು ಹಲವು ದಿನ ತೆಗೆದುಕೊಂಡ ಟ್ರಂಪ್ ಸಾಕಷ್ಟ ಎಡವಟ್ಟು ಮಾಡಿದ್ದಾರೆ. ಇದೀಗ ತನ್ನ ಸೋಲು ಕನಸಲ್ಲ ನನಸು ಎಂದು ಅರಿವಾಗುತ್ತಿದ್ದಂತೆ, ಅಮೆರಿಕ ಆಡಳಿತಕ್ಕೂ ತನಗೂ ಸಂಬಂಧವಿಲ್ಲ ಅಂತಿದೆ ಟ್ರಂಪ್ ನಡೆ. ಕೊರೋನಾದಿಂದ ಅಮೆರಿಕ ತೀವ್ರ ಸಂಕಷ್ಟ ಅನುಭವಿಸುತ್ತಿದೆ. ಇದೇ ವೇಳೆ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಆಯೋಜಿಸಿದ್ದ G20 ಶೃಂಗಸಭೆಗೆ ಟ್ರಂಪ್ ಚಕ್ಕರ್ ಹಾಕಿ, ಗಾಲ್ಫ್ ಆಡಿರುವುದು ಇದೀಗ ಭಾರೀ ಟೀಕೆಗೆ ಗುರಿಯಾಗಿದೆ.
22 ಕೋಟಿ ರು. ಕಟ್ಟಿ ಮರುಮತ ಎಣಿಕೆಗೆ ಡೊನಾಲ್ಡ್ ಟ್ರಂಪ್ ಅರ್ಜಿ
ಸೋಲಿನ ಬಳಿಕ ಇದೀಗ ಡೋನಾಲ್ಡ್ ಟ್ರಂಪ್ ಅಮೆರಿಕಗೂ ತನಗೂ ಸಂಬಂಧವಿಲ್ಲದಂತೆ ನಟಿಸುತ್ತಿದ್ದಾರೆ. ಅಮೆರಿಕ ಕೊರೋನಾಗೆ ನಲುಗಿದೆ. ಎರಡನೇ 2ನೇ ಅಲೆಯೂ ಅಮೆರಿಕದಲ್ಲಿ ಜೋರಾಗಿ ಬೀಸುತ್ತಿದೆ. ಇದರ ನಡುವೆ ಕೊರೋನಾ ನಿಯಂತ್ರಣ ಕುರಿತು ವಿಶ್ವ G20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರದ ಟ್ರಂಪ್, ವರ್ಜಿನಿಯದಲ್ಲಿರುವ ಟ್ರಂಪ್ ನ್ಯಾಶನಲ್ ಗಾಲ್ಫ್ ಕ್ಲಬ್‌ನಲ್ಲಿ ಗಾಲ್ಫ್ ಆಡೋ ಮೂಲಕ ಕಾಲ ಕಳೆದಿದ್ದಾರೆ.
ಚುನಾವಣೆ ಮುಗಿದರೂ ನಿಲ್ಲದ ಟೀಕೆ: ಬೈಡೆನ್ ವಿರುದ್ಧ ಗಂಭೀರ ಆರೋಪ!
ಶೃಂಗಸಭೆಗೆ ಮೊದಲೇ ತಯಾರಿಸಿದ್ದ ಭಾಷಣ ನೀಡಲಾಗಿದೆ. ಈ ಭಾಷಣದಲ್ಲಿ ಟ್ರಂಪ್, ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನಾವೆಲ್ಲ ಜೊತೆಯಾಗಿ ಕೆಲಸ ಮಾಡಬೇಕಿದೆ. ಒಗ್ಗಟ್ಟಾಗಿ ಆರ್ಥಿಕತೆಗೆ ಚೇತರಿಕೆ ನೀಡಬೇಕಿದೆ. ಪ್ರದಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಬಲಿಷ್ಠ ನಾಯಕರು ಕೊರೋನಾ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ವೈಟ್ ಹೈಸ್ ನೀಡಿದ ಟ್ರಂಪ್ ಭಾಷಣ ಪ್ರತಿಗೂ ಮೊದಲೇ ವಿಶ್ವದ ಇತರ ನಾಯಕರು ಜೋ ಬೈಡೆನ್‌ಗೆ ಫೋನ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಇಷ್ಟೇ ಅಲ್ಲ ಕೊರೋನಾ ವೈರಸ್ ನಿಯಂತ್ರಣ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆಯನ್ನು ಬೈಡನ್ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ