ಕೊರೋನಾ ವೈರಸ್ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ರತಿ ದಿನ ಹಲವು ಅಧಿಕಾರಿಗಳನ್ನುಭೇಟಿ ಮಾಡುತ್ತಿದ್ದಾರೆ. ಹೀಗಾಗಿ ಟ್ರಂಪ್ ಕೊರೋನಾ ವಕ್ಕರಿಸದಿರಲಿ ಎಂದು ಪ್ರಧಾನಿ ಮೋದಿ ಕಳುಹಿಸಿದ ಮಾತ್ರೆ ಸೇವಿ ಸಿದ್ದರು. ಇದೀಗ ಇದರ ವರದಿ ಬಂದಿದೆ.
ನ್ಯೂಯಾರ್ಕ್(ಮೇ.29): ಕಾಡಿ ಬೇಡಿ ಪ್ರಧಾನಿ ಮೋದಿಯಿಂದ ಹೈಡ್ರೋಕ್ಸಿಕ್ಲೊರೋಕ್ವಿನ್ ಮಾತ್ರೆ ಆಮದು ಮಾಡಿಕೊಂಡ ಡೋನಾಲ್ಡ್ ಟ್ರಂಪ್ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಬಳಸಲು ಸೂಚಿಸಿದ್ದರು. ಕಳೆದೆರಡು ವಾರದಿಂದ ಸ್ವತಃ ಟ್ರಂಪ್ ಹೈಡ್ರೋಕ್ಸಿಕ್ಲೊರೋಕ್ವಿನ್ ಮಾತ್ರೆ ಸೇವಿಸಿದ್ದರು. ಕಳೆದ ಕೆಲ ದಿನಗಳಿಂದ ಮಾತ್ರೆ ಸೇವಿಸಿದ್ದರು. ಇದೀಗ ಟ್ರಂಪ್ ವರದಿ ಬಹಿರಂಗವಾಗಿದೆ. ಹೈಡ್ರೋಕ್ಸಿಕ್ಲೊರೋಕ್ವಿನ್ ಮಾತ್ರೆ ಸೇವನೆ ಬಳಿಕ ಟ್ರಂಪ್ ಹೆಚ್ಚು ಆರೋಗ್ಯವಂತರಾಗಿದ್ದಾರೆ ಎಂದು ಅಮೆರಿಕದ ಶ್ವೇತ ಭವನ ಹೇಳಿದೆ.
ಟ್ರಂಪ್‌ಗೆ ಜೀವದಾನ; ನಮೋ ಸಹಾಯಕ್ಕೆ ಸಲಾಂ ಎಂದ ದೊಡ್ಡಣ್ಣ.
undefined
ಕೊರೋನಾ ವೈರಸ್ ಬರಬಾರದು ಎಂದು ಡೋನಾಲ್ಡ್ ಟ್ರಂಪ್ ಕಳೆದೆರಡು ವಾರದಿಂದ ಹೈಡ್ರೋಕ್ಸಿಕ್ಲೊರೋಕ್ವಿನ್ ಮಾತ್ರೆ ಸೇವನೆ ಮಾಡುತ್ತಿದ್ದರು. ಮುಂಜಾಗ್ರತ ಕ್ರಮವಾಗಿ ಹೈಡ್ರೋಕ್ಸಿಕ್ಲೊರೋಕ್ವಿನ್ ಮಾತ್ರೆ ಸೇವಿಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದರು. 2 ವಾರಗಳ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ವೇತಭವನ ಕಾರ್ಯದರ್ಶಿ ಕೈಲೆ, ಮೆಕ್‌ನಾನೆ, ಸುದ್ದಿಗೋಷ್ಠಿಗೂ ಮುನ್ನ ಟ್ರಂಪ್ ಬಳಿ ತೆರಳಿ ಮಾತನಾಡಿಸಿದ್ದೇನೆ. ಮಾತ್ರೆ ಸೇವನೆ ಬಳಿಕ ಆರೋಗ್ಯವಾಗಿದ್ದೇನೆ ಎಂದಿದ್ದಾರೆ ಎಂದರು.
ಕೊರೋನಾ ವಾರಿಯರ್ಸ್ ಜೊತೆ ಭಾರತದ 10 ವರ್ಷದ ಬಾಲಕಿಗೆ ಟ್ರಂಪ್ ಸನ್ಮಾನ!.
ಆಡಳಿತ, ಸಭೆ, ಕಾರ್ಯಕ್ರಮ ಸೇರಿದಂತೆ ಹಲವರನ್ನು ಬೇಟಿ ಮಾಡುವ ಡೋನಾಲ್ಡ್ ಟ್ರಂಪ್ ಮುಂಜಾಗ್ರತ ಕ್ರಮವಾಗಿ ಮಲೆರಿಯಾ ಮಾತ್ರೆ ಸೇವಿಸಿದ್ದಾರೆ. ಮತ್ತಷ್ಟು ಜನರನ್ನು ಬೇಟಿಯಾದರೆ ಟ್ರಂಪ್ ಮುಂದೆಯೂ ಇದೇ ರೀತಿ 2 ವಾರದ ಡೋಸೆಜ್ ತೆಗುದುಕೊಳ್ಳುವುದಾಗಿ ಹೇಳಿದ್ದಾರೆ.
ಕೊರೋನಾ ವೈರಸ್ ಅಮೆರಿಕದಲ್ಲಿ ಆರ್ಭಟ ಶುರುಮಾಡಿದಾಗ ಮೆಲೆರಿಯಾದ ಮಾತ್ರೆಯಾದ ಹೈಡ್ರೋಕ್ಸಿಕ್ಲೊರೋಕ್ವಿನ್ ಅಮೇರಿಕ, ಭಾರತದಿಂದ ಆಮದು ಮಾಡಿಕೊಂಡಿತ್ತು. ವೈದ್ಯರ ಸಲಹೆ ಬಳಿಕ ಟ್ರಂಪ್ ಮಾತ್ರೆ ಸೇವಿಸಿದ್ದಾರೆ. ಮುನ್ನಚ್ಚೆರಿಕೆ ಕ್ರಮ ಉಪಯುಕ್ತ ಅನ್ನೋ ಕಾರಣಕ್ಕೆ ಟ್ರಂಪ್ ಮಾತ್ರೆ ತೆಗೆದುಕೊಂಡಿದ್ದಾರೆ ಎಂದು ಕಾರ್ಯದರ್ಶಿ ಹೇಳಿದ್ದಾರೆ