ಅಬ್ಬಾ ತಡೆಯಲಾರೆ ಈ ಸೆಖೆ : ತುಂಬಿಟ್ಟ ನೀರಲ್ಲಿ ಮುಳುಗೇಳುತ್ತಿರುವ ಶ್ವಾನ

By Anusha Kb  |  First Published May 22, 2022, 10:41 AM IST
  • ಸೆಖೆ ತಡೆಯಲಾರದೆ ನೀರಲ್ಲಿ ಮುಳುಗೇಳುವ ಶ್ವಾನ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಈ ಬಾರಿಯ ಬೇಸಿಗೆ ನಮ್ಮ ಕರ್ನಾಟಕದಲ್ಲಿ ಅಕಾಲಿಕ ಮಳೆಯಿಂದಾಗಿ ತಂಪು ನೀಡಿದೆ. ಆದರೆ ದೆಹಲಿ ರಾಜಸ್ಥಾನ ಮುಂತಾದ ರಾಜ್ಯಗಳ ಜನ 40 ರಿಂದ 45 ಡಿಗ್ರಿಗೂ ಅಧಿಕ ತಾಪಮಾನ ದಾಖಲಾದ ದಿನಗಳನ್ನು ಕಂಡಿದ್ದರು. ಮನುಷ್ಯರೇನು ಬಿಸಿಲ ಧಗೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮನೆಯಲ್ಲಿ ಎಸಿ ಅಳವಿಡಿಸಿಕೊಳ್ಳುತ್ತಾರೆ. ಹೇಳಿ ಕೇಳಿ ಇದು ಬೇಸಿಗೆ ರಜಾ ಸಮಯವೂ ಆಗಿರುವುದರಿಂದ ಪೋಷಕರು ಮಕ್ಕಳೆಲ್ಲರೂ ಜೊತೆಯಾಗಿ ತಂಪಾಗಿರುವ ಪ್ರವಾಸಿ ತಾಣಗಳು ಪಾಲ್ಸ್‌ಗಳು ನದಿ ದಂಡೆಗಳತ್ತ ಟ್ರಿಪ್ ಹೊಡೆಯುತ್ತಾರೆ. ಆದರೆ ಪ್ರಾಣಿಗಳೇನು ಮಾಡೋದು. ಸೆಖೆ ಮನುಷ್ಯರಿಗಂತ ಅವುಗಳಿಗೆ ಸ್ವಲ್ಪ ಹೆಚ್ಚೆ ಎನಿಸುವಷ್ಟು ತಟ್ಟುವುದು. ಎಸಿ ಕೂಲರ್‌ಗಳು ಅವರ ಬಳಿ ಇಲ್ಲ. ಆದರೂ ಇಲ್ಲೊಂದು ಶ್ವಾನ ಏನಿದೆಯೋ ಅದರಲ್ಲೇ ಬಿಸಿಲ ಧಗೆಯನ್ನು ನಿವಾರಿಸಿಕೊಳ್ಳಲು ಮುಂದಾಗಿದೆ.

ಮನೆಯಲ್ಲಿದ್ದ ತಣ್ಣಗಿನ ನೀರು ತಂಬಿಸಿದ ಪಾತ್ರೆಯೊಂದಕ್ಕೆ ಧುಮುಕಿದ ಶ್ವಾನ ಅದರಲ್ಲೇ ಮುಳುಗೇಳುತ್ತಿದೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀರು ತುಂಬಿಸಿದ ಪಾತ್ರಕ್ಕೆ ಮೆಲ್ಲನೆ ಇಳಿದ ಶ್ವಾನ ಅದರೊಳಗೆ ತನ್ನ ತಲೆಯನ್ನು ಬಿಡದೇ ಮುಳುಗಿ ಎದ್ದು ಮಾಡುತ್ತಾ ದಾಹ ನೀಗಿಸಲು ಮುಂದಾಗುತ್ತಿದೆ. ಬಿಟ್ಟಿಂಗ್ಬಿಡ್ಡೆನ್‌ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಬಿಟ್ಟಿಂಗ್ಬಿಡ್ಡೆನ್‌  ಸದಾ ಕಾಲ ಪ್ರಾಣಿಗಳ ಮುದ್ದಾದ ಅನೇಕ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತದೆ. ಈ ವಿಡಿಯೋವನ್ನು ಐದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇದರಲ್ಲಿ ಕಂದು ಬಣ್ಣದ ಜರ್ಮನ್ ಶೆಫರ್ಡ್‌ ಶ್ವಾನ ನೀರಿನಲ್ಲಿ ಮುಳುಗೇಳುವ ದೃಶ್ಯ ವೈರಲ್ಲಾಗಿದೆ.

Tap to resize

Latest Videos

ಕೇದಾರನಾಥಕ್ಕೆ ಭೇಟಿ ನೀಡಿದ ನವಾಬ : ಕೇಸು ದಾಖಲಿಸಿದ ಅರ್ಚಕರು

ನಾಯಿಗಳು ಸಾಮಾನ್ಯವಾಗಿ ಸ್ನಾನ ಮಾಡುವುದು ಎಂದರೆ ಮಾರು ದೂರ ಓಡುತ್ತವೆ. ಶ್ವಾನದ ಮಾಲೀಕರು ತಮ್ಮ ಮುದ್ದಾದ ನಾಯಿಗೆ ಸ್ನಾನ ಮಾಡಿಸಲು ಹರ ಸಾಹಸವನ್ನೇ ಮಾಡುತ್ತಾರೆ. ಆದರೆ ಇಲ್ಲೊಂದು ಶ್ವಾನದ ಮರಿ ಮಾತ್ರ ವಿಭಿನ್ನ. ಇದಕ್ಕೆ ಶ್ವಾನ ಮಾಡುವುದೆಂದರೆ ತುಂಬಾ ಇಷ್ಟ. ಬಹುಶ ಈ  ಶ್ವಾನ ತನ್ನ ಮಾಲಕರು ಶವರ್‌ನಲ್ಲಿ ಸ್ನಾನ ಮಾಡುವುದನ್ನು ನೋಡಿರಬೇಕು ಎಂದೆನಿಸುತ್ತದೆ. ಏಕೆಂದರೆ ಇದು ಕೈ ತೊಳೆಯುವಂತಹ ಸಿಂಕ್‌ಗೆ ಇಳಿದು ಟ್ಯಾಪ್‌ಗ ತಲೆಯೊಡ್ಡಿ ಸ್ನಾನ ಮಾಡುತ್ತದೆ. ಮೇಲಿಂದ ಬೀಳುವ ನೀರನ್ನು ಆನಂದಿಸುವ ಈ ನಾಯಿ ಮರಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ನದಿಯಲ್ಲಿ ಮುಳುಗುತ್ತಿದ್ದ ಶ್ವಾನವನ್ನು ರಕ್ಷಿಸಿದ ಯುವಕ: ವಿಡಿಯೋ ವೈರಲ್
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾಕಷ್ಟು ಜನ ವೀಕ್ಷಿಸಿದ್ದಾರೆ. ಮುದ್ದಾದ ಶ್ವಾನಗಳ ಮೋಜಿನಾಟದ ಸಾಕಷ್ಟು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಂತಹದ್ದೇ ವಿಡಿಯೋ ಇದಾಗಿದ್ದು, ಸಿಂಕ್‌ನೊಳಗೆ ಕೂರುವ ಶ್ವಾನ ಅಲ್ಲೇ ಸ್ನಾನವೂ ಮಾಡಬೇಕೆಂದು ಬಯಸುತ್ತದೆ. ನೀರನ್ನು ಬಹಳ ಇಷ್ಟಪಡುವ ಈ ಶ್ವಾನ ನೀರು ಬೀಳುವ ನಲ್ಲಿಗೆ ಸರಿಯಾಗಿ ತಲೆಯನ್ನು ಹಿಡಿದು ಮೇಲಿನಿಂದ ಬೀಳುವ ನೀರನ್ನು ಆಸ್ವಾದಿಸುತ್ತದೆ. ಶ್ವಾನ ಸ್ನಾನ ಮಾಡಲು ನಿರ್ಧರಿಸಿದೆ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.

ಈ ವಿಡಿಯೋವನ್ನು Reddit ನಲ್ಲಿ ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಮಾಡಿದ ನಂತರ ಈ ವೀಡಿಯೊ ವೈರಲ್ ಆಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ.ಅಲ್ಲದೇ ಶ್ವಾನಪ್ರಿಯರು ಇದಕ್ಕೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ. ನೀವು ಈ ಶ್ವಾನಕ್ಕೆ ಯಾವ ರೀತಿ ಬುದ್ಧಿ ಕಲಿಸಿದ್ದೀರಾ ಎಂಬುದನ್ನು ನಾನು ತಿಳಿಯಬೇಕು. ನಾನು ನನ್ನ ಶ್ವಾನಕ್ಕೆ ಕಳೆದ ಒಂದು ಗಂಟೆಯಿಂದ ಸ್ನಾನ ಮಾಡಲು ಯತ್ನಿಸಿ ಕೊನೆಗೂ ಆ ಪ್ರಯತ್ನವನ್ನು ಕೈಬಿಟ್ಟೆ. ನಿಜವಾಗಿಯೂ ತಾನೇ ಇಷ್ಟಪಟ್ಟು ಸ್ನಾನ ಮಾಡುವ ಶ್ವಾನವನ್ನು ನಾನು ಎಲ್ಲೂ ನೋಡಿಲ್ಲ ಎಂದು ಒಬ್ಬರು ಈ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. 

click me!