ಪಿಜ್ಜಾ ಡೆಲಿವರಿ ಬಾಯ್ ಮಾಡಿದ ಎಡವಟ್ಟಿಗೆ ಸಿಕ್ತು 18 ವರ್ಷ ಜೈಲು ಶಿಕ್ಷೆ!

By Suvarna NewsFirst Published Jan 26, 2020, 7:13 PM IST
Highlights

ಪಿಜ್ಜಾ ಡೆಲಿವರಿ ಬಾಯ್ ಮಾಡಿದ ಎಡವಟ್ಟಿಗೆ ಸಿಕ್ತು 18 ವರ್ಷ ಜೈಲು ಶಿಕ್ಷೆ!ಈಗ ಎಲ್ಲವೂ ಆನ್‌ಲೈನ್ ಯುಗ. ಬಟ್ಟೆ, ದಿನಬಳಕೆ ವಸ್ತು, ಆಹಾರ ಕೂಡ ಆನ್‌ಲೈನ್ ಮೂಲಕವೇ  ಮನೆ ತಲುಪುತ್ತವೆ. ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡಿದ 5 ನಿಮಿಷಕ್ಕೆ ಆಹಾರ ರೆಡಿ ಇರುತ್ತೆ. ಹೀಗೆ ಗ್ರಾಹಕರಿಗೆ ಡೆಲಿವರಿ ಮಾಡುವಾಗ ಆದ ಯಡವಟ್ಟುಗಳು ಒಂದೆರಡಲ್ಲ, ಇದೀಗ ಇದೇ ರೀತಿ ಎಡವಟ್ಟು ಮಾಡಿದ ಪಿಜ್ಜಾ ಡೆಲಿವರಿ ಬಾಯ್‌ಗೆ ಬರೋಬ್ಬರಿ 18 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಟರ್ಕಿ(ಜ.26): ಭಾರತದಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಬಾಯ್ ಮಾಡಿದ ಸಣ್ಣ ತಪ್ಪು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸಂಚಲನ ಸೃಷ್ಟಿಸಿದೆ. ಕೆಲವರು ಉದ್ಯೋಗ ಕೂಡ  ಕಳೆದುಕೊಂಡಿದ್ದಾರೆ. ಇದೀಗ ಗ್ರಾಹಕನಿಗೆ ಪಿಜ್ಜಾ ಡೆಲಿವರಿ ಮಾಡುವಾಗ ಮಾಡಿದ ತಪ್ಪಿಗೆ ಬರೋಬ್ಬರಿ 18 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ.

ಇದನ್ನೂ ಓದಿ: ಆಹಾರ ಕದ್ದು ತಿಂದ ಜೊಮ್ಯಾಟೋ ಬಾಯ್‌ ವಿಡಿಯೋ ವೈರಲ್‌... ಕಂಪನಿ ಹೇಳಿದ್ದೇನು?.

ಈ ಘಟನೆ ನಡೆದಿರುವುದು ಟರ್ಕಿಯಲ್ಲಿ.  2017ರಲ್ಲಿ ಟರ್ಕಿಯ ಸೆಂಟ್ರಲ್ ನಗರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ವ್ಯಕ್ತಿ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಕೆಲ ಹೊತ್ತಲ್ಲಿ ಪಿಜ್ಜಾ ಮನೆಗೆ ತಲುಪಿದೆ. ಪಿಜ್ಜಾ ತಿಂದ ವ್ಯಕ್ತಿ ಮುಂದಿನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ. ಕೆಲ ದಿನಗಳ ಬಳಿಕ ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್ ಕರೆದು, ಸಿಸಿಟಿವಿ ದೃಶ್ಯವನ್ನು ತೋರಿಸಿದ್ದಾನೆ.

ಇದನ್ನೂ ಓದಿ: ಮುಸ್ಲಿಂ ಬೇಡ, ಹಿಂದೂ ಡೆಲಿವರಿ ಬಾಯ್ ಕಳ್ಸಿ ಎಂದ ಗ್ರಾಹಕ: Zomato ಉತ್ತರ ಮನಮೋಹಕ!

ಸೆಕ್ಯೂರಿಟಿ ಗಾರ್ಡ್ ತೋರಿಸಿದ ದೃಶ್ಯಕ್ಕೆ ಪಿಜ್ಜಾ ಆರ್ಡರ್ ಮಾಡಿದ ವ್ಯಕ್ತಿಗೆ ಒಮ್ಮಲೇ ವಾಂತಿಯಾಗಿದೆ. ಕಾರಣ ತಾನು ಕಳೆದ ವಾರ ಆರ್ಡರ್ ಮಾಡಿದ ಪಿಜ್ಜಾ ತನ್ನ ಕೈಸೇರೋ ಮುನ್ನ ಡೆಲಿವರಿ ಬಾಯ್ ಉಗುಳಿದ್ದಾನೆ. ಪಿಜ್ಜಾ ಮೇಲೆ ಉಗುಳಿ ಬಳಿಕ ಅದೇ ರೀತಿ ಪ್ಯಾಕ್ ಮಾಡಿ ನೀಡಿರುವ ದೃಶ್ಯ, ಗ್ರಾಹಕರ ಕಣ್ಣು ಕೆಂಪಾಗಿಸಿದೆ. 

ಇದನ್ನೂ ಓದಿ: ಜೊಮ್ಯಾಟೋ ಡೆಲಿವರಿ ಬಾಯ್ಸ್ ಪುಂಡಾಟ; ಆರ್ಡರ್ ಲೇಟ್ ಕೊಟ್ಟದ್ದಕ್ಕೆ ಅಟ್ಟಾಡಿಸಿ ಹಲ್ಲೆ

ಈ ದೃಶ್ಯ ಆಧರಿಸಿ ದೂರು ನೀಡಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಟರ್ಕಿ ನ್ಯಾಯಾಲಯ, ಪಿಜ್ಜಾ ಡೆಲಿವರಿ ಬಾಯ್ ಬರುಕ್ ಎಸ್‌ಗೆ ಬರೋಬ್ಬರಿ 18 ವರ್ಷ ಜೈಲು ಶಿಕ್ಷೆ ವಿಧಿಸಿದೆ. ವಿಷಯುಕ್ತ ಆಹಾರ ನೀಡಿದ ಕಾರಣಕ್ಕೆ ಈ ಶಿಕ್ಷೆ ನೀಡಲಾಗಿದೆ. 

click me!