ಡ್ಯಾನ್ ಬಿಲ್ಜೇರಿಯನ್ ಜೂಜಾಟದ ಅಂದರೆ ಪೋಕರ್ ಗೇಮ್ ಕಿಂಗ್ ಎಂದೇ ಫೇಮಸ್. ಡ್ಯಾನ್ ಜೂಜಾಟವಾಡಿಯೇ ಬರೋಬ್ಬರಿ 15 ಕೋಟಿ ಡಾಲರ್ ಸಂಪಾದಿಸಿದ್ದಾನೆ.
ಡ್ಯಾನ್ ಬಿಲ್ಜೇರಿಯನ್ ಜೂಜಾಟದ ಅಂದರೆ ಪೋಕರ್ ಗೇ ಕಿಂಗ್ ಎಂದೇ ಫೇಮಸ್. ಡ್ಯಾನ್ ಜೂಜಾಟವಾಡಿಯೇ ಬರೋಬ್ಬರಿ 15 ಕೋಟಿ ಡಾಲರ್ ಸಂಪಾದಿಸಿದ್ದಾನೆ. 1980 ರಲ್ಲಿ ಡಿಸೆಂಬರ್ 7 ರಂದು ಫ್ಲೋರಿಡಾದಲ್ಲಿ ಜನಿಸಿದ ಡ್ಯಾನ್ ಇಂದು ಜೂಜಾಟದ ಪ್ರೊಫೆಶನಲ್ ಆಟಗಾರ. ಆತ ಅತ್ಯುತ್ತಮ ಸ್ಟಂಟ್‌ಮನ್ ಆ್ಯಕ್ಟರ್ ಕೂಡಾ ಹೌದು ಆತ Other Woman, The Equalizer & Cat Run 2 ಮೊದಲದ ಹಾಲಿವುಡ್ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾನೆ.
ಡ್ಯಾನ್ ಬಾಲ್ಯ:
ಉದ್ಯಮಿಯ ಮಗನಾಗಿದ್ದ ಡ್ಯಾನ್ ಐಷಾರಾಮಿಯಾಗಿ ಬೆಳೆದಿದ್ದರು. ಅವರ ಬಳಿ ಎಲ್ಲಾ ರೀತಿಯ ಸೌಕರ್ಯವಿತ್ತು ಆದರೆ ತಂದೆ ತಾಯಿಯ ಪ್ರೀತಿ ಮಾತ್ರ ಸಿಗುತ್ತಿರಲಿಲ್ಲ. ತನ್ನಿಚ್ಛೆಯಂತೆ ಬೆಳೆದಿದ್ದ ಡ್ಯಾನ್ ಹಲವಾರು ಸಂದರ್ಶನಗಳಲ್ಲಿ ತಾನು ಚಿಕ್ಕವನಿದ್ದಾಗ ಯಾರೂ ತನ್ನ ಬಗ್ಗೆ ನಿಗ ವಹಿಸಿರಲಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಐಷಾರಾಮಿ ಜೀವನ ಸಾಗಿಸುತ್ತಿದ್ದ ಡ್ಯಾನ್ ಜೀವನವು, ಆತನ ತಂದೆ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಜೖಲು ಪಾಲಾದಾಗ ಸಂಪೂರ್ಣವಾಗಿ ಬದಲಾಯಿತು. ಡ್ಯನ್ ತಂದೆ ವಿಯೆಟ್ನಾಂ ಯುದ್ಧದಲ್ಲೂ ಪಾಲ್ಗೊಂಡಿದ್ದರು. ಅವರ ಬಳಿ ಯುದ್ಧಕ್ಕೆ ಬಳಸಿದ್ದ ಒಂದು ಬಂದೂಕು ಕೂಡಾ ಇತ್ತು. ಒಂದು ದಿನ ಡ್ಯಾನ್ ತಂದೆಯ ಆ ಬಂದೂಕನ್ನು ಶಾಲೆಯಲ್ಲಿ ತನ್ನ ಸಹಪಾಠಿಗಳಿಗೆ ತೋರಿಸಲು ಕೊಂಡೊಯ್ದಿದ್ದರು. ಇದಾದ ಬಳಿಕ ಶಾಲಾ ಆಡಳಿತ ಮಂಡಳಿ ಅವರನ್ನು ಶಾಲೆ ಹಾಗೂ ಆ ನಗರದಿಂದಲೇ ಹೊರಗಟ್ಟಿದ್ದರು. ಆದರೆ ಇದಾವುದೂ ಡ್ಯಾನ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಮೊದಲ ಬಾರಿ ಜೂಜಾಟದ ಬಗ್ಗೆ ತಿಳಿದುಕೊಂಡ
ಡ್ಯಾನ್‌ಗೆ ಬಂದೂಕು ಹಾಗೂ ಸೖನ್ಯ ಇವೆರಡೂ ಬಹಳ ಇಷ್ಟವಾಗುತ್ತಿತ್ತು. ಒಂದು ಬಾರಿ ನೌಕಾದಳಕ್ಕೂ ಆಯ್ಕೆಯಾಗಿದ್ದರು. ಆದರೆ ಕೆಲ ಕಾರಣಗಳಿಂದ ಅವರನ್ನು ಅಲ್ಲಿಂದ ತೆಗೆದು ಹಾಕಲಾಯ್ತು. ಇದಾದ ಬಳಿಕ ಡ್ಯಾನ್ ಕಾಲೇಜು ಸೇರಿಕೊಂಡಿದ್ದು, ಇಲ್ಲಿ ಮೊದಲ ಬಾರಿ ಆನ್‌ಲೖನ್ ಪೋಕರ್ ಬಗ್ಗೆ ತಿಳಿದುಕೊಂಡರು. ಇಲ್ಲಿಂದ ಡ್ಯಾನ್ ಪೋಕರ್ ಗೇಮ್ ಆಡಲಾರಂಭಿಸಿದರು.
ಜೂಜಾಟವಾಡುತ್ತಿದ್ದ ಆರಂಭಿಕ ದಿನಗಳು
ಆರಂಭದಲ್ಲಿ ಆತ ತನ್ನ ಬಳಿ ಇದ್ದ ಎಲ್ಲಾ ಹಣವನ್ನು ಕಳೆದುಕೊಂಡಿದ್ದ, ಆದರೆ ಧೃತಿಗೆಡದ ಆತ ಇದೇ ಆಟದಲ್ಲಿ ಗೆಲ್ಲುವುದಾಗಿ ನಿರ್ಧರಿಸಿದರು. ಮುಂದೆ ಆಟವಾಡಲು ಅವರು ತಮ್ಮ ಬಳಿ ಇದ್ದ ಬಂದೂಕನ್ನೂ ಮಾರಿದ್ದರು. ಈ ಬಾರಿ 10 ಸಾವಿರ ರೂಪಾಯಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ. ಇದಾದ ಬಳಿಕ ಅಲ್ಲಿಂದ ನೇರವಾಗಿ ಲಾಸ್ ವೇಗಾಸ್‌ಗೆ ಹೊರಟು ಹೋದ.
ಲಾಸ್ ವೆಗಾಸ್‌ಗೆ ತೆರಳಿದ ಡ್ಯಾನ್ ದೊಡ್ಡ ಮಟ್ಟದ ಪೋಕರ್ ಆಟವಾಡಿದರು. ಅವರು ರಾತ್ರಿ ಬೆಳಗಾಗುವುದರೊಳಗೆ 10 ಸಾವಿರ ಡಾಲರ್‌ನಿಂದ 1,87,000 ಡಾಲರ್‌ವರೆಗೂ ಗೆದ್ದಿದ್ದಿದೆ ಎಂದು ಹೇಳಲಾಗುತ್ತದೆ. ಆತ ಪೋಕರ್‌ನ ವರ್ಲ್ಡ್ ಸೀರೀಸ್‌ನಲ್ಲೂ ಭಾಗಿಯಾಗಿದ್ದ, 180ನೇ ರ‍್ಯಾಂಕ್ ಪಡೆದ.
ಡ್ಯಾನ್ ಅಮೆರಿಕನ್ ಸೋಷಲ್ ಮೀಡಿಯಾದಲ್ಲಿ ಸೆಲೆಬ್ರಿಟಿ ಕೂಡಾ ಆಗಿದ್ದಾನೆ. ಆತ 'ಇನ್ಸ್ಟಾಗ್ರಾಂ'ನಲ್ಲಿ ಅದೆಷ್ಟು ಫೇಮಸ್ ಎಂದರೆ ಅಲ್ಲೂ ಆತನನ್ನು ರಾಜ ಎಂದೇ ಕರೆಯಲಾಗುತ್ತದೆ. ಪ್ರೊಫೖಲ್ಲ್‌ನಲ್ಲಿ ಬಂದೂಕು ಹಾಗೂ ಐಷಾರಾಮಿ ಕಾರುಗಳ ಫೋಟೋಗಳೇ ತುಂಬಿಕೊಂಡಿವೆ. ಬಹುತೇಕ ಫೋಟೋಗಳಲ್ಲಿ ಹುಡುಗಿಯರ ನಡುವೆಯೇ ಕಂಡು ಬರುವ ಈತನನ್ನು 'ಪ್ಲೇ ಬಾಯ್' ಎಂದೂ ಕರೆಯಲಾಗುತ್ತದೆ. ಹಲವಾರು ಬಾರಿ ವಿವಾದಗಳಲ್ಲೂ ಸಿಲುಕಿದ್ದಾನೆ. 2013ರ ಒಂದು ರಾತ್ರಿ ಈತ ಸುಮಾರು ಮಿಲಿಯನ್ ಡಾಲರ್ ಸಂಪಾದಿಸಿ ಸದ್ದು ಮಾಡಿದ್ದ.
ಹಗಲು ರಾತ್ರಿ ಎಂದು ಲೆಕ್ಕಿಸದೆ ಪಾರ್ಟಿ ಮಾಡುವ ಈತನಿಗೆ ಡ್ರಗ್ಸ ಛಟ ಕೂಡಾ ಇದೆ. ಆತನಿಗೆ ಒಂದು ಬಾರಿ ಹೃದಯಾಘಾತವಾದಾಗ ಈ ವಿಚಾರ ಬಹಿರಂಗವಾಯಿತು. 30ರ ಹರೆಯದಲ್ಲಿ ಡ್ರಗ್ಸ್ ಛಟ ಅದೆಷ್ಟು ಡ್ಯಾನ್ ನನ್ನು ಆವರಿಸಿತ್ತೆಂದರೆ 12 ಗಂಟೆಗಳೊಳಗೆ ಎರಡು ಮೂರು ಬಾರಿ ಹಾರ್ಟ್ ಅಡ್ಯಾಕ್ ಆಗಿತ್ತು. ಈತನ ಸಂಪತ್ತು 15 ಕೋಟಿ ಡಾಲರ್[150 ಮಿಲಿಯನ್ ಡಾಲರ್] ಎಂದು ಅಂದಾಜಿಸಲಾಗಿದೆ.