ಹಾವುಗಳೆಂದರೆ ಜನ ಮಾರು ದೂರ ಓಡುವುದೇ ಹೆಚ್ಚು. ಆದರೆ ಇಲ್ಲೊಬ್ಬ ವ್ಯಕ್ತಿ ಎರಡು ಬರೋಬರಿ ಗಾತ್ರದ ಎರಡು ಹೆಬ್ಬಾವುಗಳನ್ನು ಹೆಗಲ ಮೇಲೆ ಹಾಕಿಕೊಂಡು ಡಾನ್ಸ್ ಮಾಡುತ್ತಿದ್ದು, ನೋಡುಗರಿಗೆ ಭಯ ಹುಟ್ಟಿಸುವಂತಿದೆ. ಈತ ಹಾವುಗಳೊಂದಿಗೆ ಸರಸವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆಬ್ಬಾವುಗಳು ವಿಷ ಇಲ್ಲದ ಹಾವುಗಳಾಗಿದ್ದರೂ, ಬೃಹತ್ ಗಾತ್ರವಿರುವ ಕಾರಣ ಅವುಗಳು ಮನುಷ್ಯರನ್ನು ಕಚ್ಚಿ ನುಂಗಬಲ್ಲವು. ವಿಶ್ವದ ಅತಿ ಉದ್ದದ ಹಾವುಗಳು ಎಂಬ ಕರೆಯಲ್ಪಡುವ ಎರಡು ರೆಟಿಕ್ಯುಲೇಟೆಡ್ ಹೆಬ್ಬಾವುಗಳನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಯುವಕನೋರ್ವ ಡಾನ್ಸ್ ಮಾಡುತ್ತಿದ್ದಾನೆ. ರೆಟಿಕ್ಯುಲೇಟೆಡ್ ಹೆಬ್ಬಾವುಗಳು 20 ಅಡಿಗಳಿಗಿಂತ ಹೆಚ್ಚು ಉದ್ದಕ್ಕೆ ಬೆಳೆಯುತ್ತವೆ.
Chikkamagaluru ಮೇಕೆ ಮರಿ ನುಂಗಿ ಗಡದ್ದಾಗಿ ನಿದ್ದೆ ಮಾಡಿದ್ದ ಹೆಬ್ಬಾವು ಸೆರೆ
ಹೀಗೆ ಹಾವುಗಳೊಂದಿಗೆ ಡಾನ್ಸ್ ಮಾಡುತ್ತಿರುವ ವ್ಯಕ್ತಿ ಇಂಡೋನೇಷಿಯಾದನಾಗಿದ್ದು(Indonesia), ಈತ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಎರಡು ಬೃಹತ್ ರೆಟಿಕ್ಯುಲೇಟೆಡ್ ಹೆಬ್ಬಾವುಗಳೊಂದಿಗೆ (reticulated pythons) ಆಗಾಗ್ಗೆ ರೀಲ್ಸ್‌ಗಳನ್ನು ಮಾಡಿ ಪೋಸ್ಟ್ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ಎರಡು ಹೆಗಲುಗಳ ಮೇಲೆ ಒಂದೊಂದು ಹೆಬ್ಬಾವನ್ನು(pythons) ಹಗ್ಗದಂತೆ ಹಾಕಿಕೊಂಡಿರುವ ಈತ ಅವುಗಳೊಂದಿಗೆ ನೃತ್ಯ ಮಾಡುತ್ತಿದ್ದಾನೆ. ಹೆಬ್ಬಾವುಗಳು ಭಾರಕ್ಕೆ ಆತ ಅತಿತ್ತ ವಾಲುತ್ತಾ ಡಾನ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು 3.7 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಸೂಪರ್ ಮಾರ್ಕೆಟ್ ಒಳಗೆ ಹೆಬ್ಬಾವು
ಆಸ್ಪ್ರೇಲಿಯಾದ ಸೂಪರ್ ಮಾರ್ಕೆಟ್ ಒಂದರಲ್ಲಿ ಹೆಬ್ಬಾವು ಸೇರಿಕೊಂಡು ಜನರನ್ನು ಭಯಬೀಳಿಸಿದ ಘಟನೆ ಕಳೆದ ವರ್ಷ ನಡೆದಿತ್ತು. ಮೂರು ಮೀಟರ್ ಉದ್ದದ ಹೆಬ್ಬಾವು ಅಂಗಡಿಯಲ್ಲಿ ಸಾಂಬಾರ ಪದಾರ್ಥಗಳನ್ನು ಜೋಡಿಸಿಟ್ಟಿದ್ದ ಶೆಲ್ಫಿನಲ್ಲಿ ಸೇರಿಕೊಂಡಿದೆ. ಜನರು ಆ ಶೆಲ್ಫನಲ್ಲಿ ಹುಡುಕುವಾಗ ಹಾವು ಕಾಣಿಸಿಕೊಂಡು ಅಲ್ಲಿದ್ದವರಿಗೆ ಹೆದರಿಕೆ ಹುಟ್ಟಿಸಿದೆ. ಅಂಗಡಿಯೊಳಗೆ ಹಾವು ಹರಿದಾಡುತ್ತಿರುವ ವಿಡಿಯೋ ನಂತರ ವೈರಲ್ ಆಗಿತ್ತು. ಅಟ್ಲಿ ಎನ್ನುವ ವ್ಯಕ್ತಿ ಆಸ್ಪ್ರೇಲಿಯಾದಲ್ಲಿ ಹೊಸ ಸಾಂಬಾರ ಪದಾರ್ಥ ಸಿಕ್ಕಿದೆ ಎಂಬ ಉಕ್ಕಣೆಯೊಡನೆ ವಿಡಿಯೋವನ್ನು ಪೋಸ್ಟ್ ಮಾಡಿದ್ದ.
Playing With Paython: ಆಟಿಕೆ ಎಲ್ಲಾ ಯಾರಿಗೆ ಬೇಕು ? ಪಕ್ಕದಲ್ಲಿ ಹೆಬ್ಬಾವಿದ್ರೆ ಸಾಕು
ಒಂದೇ ಕಡೆ ಕಾಣಿಸಿಕೊಂಡ 4 ಹೆಬ್ಬಾವು
ಕಳೆದ ಡಿಸೆಂಬರ್‌ನಲ್ಲಿ ಉಡುಪಿ ನಗರದ ಹೃದಯಭಾಗದಲ್ಲಿಒಂದೇ ಕಡೆಯಲ್ಲಿ 4 ಭಾರೀ ಗಾತ್ರದ ಹೆಬ್ಬಾವುಗಳು ಪತ್ತೆಯಾಗಿದ್ದವು. ಅಲ್ಲದೇ ಈ ಹಾವನ್ನು ಹಿಡಿಯಲೆತ್ನಿದ ಒಬ್ಬರಿಗೆ ಕಚ್ಚಿರುವ ಘಟನೆ ನಡೆದಿತ್ತು. ನಗರದ ಪೂರ್ಣಪ್ರಜ್ಞಾ ಕಾಲೇಜಿನ ಬಳಿಯ ಖಾಲಿ ನಿವೇಶನದಲ್ಲಿ ಮಂಗಳವಾರ ಸಂಜೆ ಹಲ್ಲು ಕತ್ತರಿಸುವಾಗ ಒಂದು ಹೆಬ್ಬಾವು ಪತ್ತೆಯಾಗಿತ್ತು. ಬಳಿಕ ಅಲ್ಲಿಯೇ ಹುಲ್ಲು ಪೊದೆಯಲ್ಲಿ ಇನ್ನೊಂದು ಹೆಬ್ಬಾವು ಕಂಡುಬಂದಿತ್ತು.ವಿಷಯ ತಿಳಿದ ಸ್ಥಳೀಯ ಯುವಕರು ಸೇರಿ ಅವುಗಳನ್ನು ಹಿಡಿದು ಚೀಲದೊಳಗೆ ಹಾಕಿದರು. ಹುಲ್ಲಿನಲ್ಲಿ ಹುಡುಕಿದಾಗ ಇನ್ನೂ ಎರಡು ಮಧ್ಯಮ ಗಾತ್ರ ಹೆಬ್ಬಾವುಗಳೂ ಪತ್ತೆಯಾಗಿದ್ದು ಅವುಗಳನ್ನು ಸಹ ಹಿಡಿದು ಚೀಲಕ್ಕೆ ತುಂಬಿದರು.
ಡಿಸೆಂಬರ್ ನಿಂದ ಫೆಬ್ರವರಿ ತನಕ ಶೇ.70ರಷ್ಟು ಪ್ರಬೇಧದ ಹಾವುಗಳು ಸಂತಾನೋತ್ಪತ್ತಿಗಾಗಿ ಲೈಂಗಿಕ ಕ್ರಿಯೆ ನಡೆಸುತ್ತವೆ. ಅವುಗಳಲ್ಲಿ ಹೆಬ್ಬಾವು ಕೂಡ ಒಂದು. ಹೀಗಾಗಿ ಈ ಸಮಯದಲ್ಲಿ ಗುಂಪಿನಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತವೆ. ಒಂದು ಹೆಣ್ಣು ಹೆಬ್ಬಾವಿನೊಂದಿಗೆ 5-6 ಗಂಡು ಹೆಬ್ಬಾವುಗಳು ಸರದಿಯಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತವೆ. ಈ ಗಂಡು ಹಾವುಗಳ ಮಧ್ಯೆ ಸ್ಪರ್ಧೆ, ಜಗಳ ಇರುವುದಿಲ್ಲ. ತಾಳ್ಮೆಯಿಂದ ಕಾದು ತಮ್ಮ ಆಸೆಯನ್ನು ಪೂರೈಸಿಕೊಳ್ಳುತ್ತವೆ. ಹೆಣ್ಣು ಹಾವು ಗಾತ್ರದಲ್ಲಿ ದೊಡ್ಡದಿರುತ್ತವೆ. ಗಂಡು ಹಾವುಗಳು ಚಿಕ್ಕದಿರುತ್ತವೆ. ಹೆಬ್ಬಾವುಗಳು ವಿಷಕಾರಿಯಲ್ಲ ಎನ್ನುತ್ತಾರೆ ಉರಗ ತಜ್ಞರಾದ ಗುರುರಾಜ್ ಸುನಿಲ್.