ಯೋಧರ ಸಮಾಧಿ ಮೇಲೆ ಡಾನ್ಸ್ : ಉಕ್ರೇನ್ ಸೋದರಿಯರ ಬಂಧನ

By Anusha KbFirst Published Aug 29, 2023, 2:44 PM IST
Highlights

ಯೋಧರ ಸಮಾಧಿ ಮೇಲೆ ಡಾನ್ಸ್ ಮಾಡಿದ ಆರೋಪದ ಮೇಲೆ ಇಬ್ಬರು ಉಕ್ರೇನ್ ಸೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಕೀವ್ಸ್: ಯೋಧರ ಸಮಾಧಿ ಮೇಲೆ ಡಾನ್ಸ್ ಮಾಡಿದ ಆರೋಪದ ಮೇಲೆ ಇಬ್ಬರು ಉಕ್ರೇನ್ ಸೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ. ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ ಈ ಸೋದರಿಯರು ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಹುತಾತ್ಮ ಯೋಧರ ಸಮಾಧಿ ಮೇಲೆ ಡಾನ್ಸ್ ಮಾಡುವ ಮೂಲಕ ಭಾರಿ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಇವರು ಸಮಾಧಿ ಮೇಲೆ ಡಾನ್ಸ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ಜನ ಸಾಮಾಜಿಕ ಜಾಲತಾಣಗಳಲ್ಲಿ ಸೋದರಿಯರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಈ ಡಾನ್ಸಿಂಗ್ ಸೋದರಿಯರನ್ನು ಬಂಧಿಸಿದ್ದಾರೆ. 

ವೀಡಿಯೋ ವೈರಲ್ ಆದ ನಂತರ ಅವರ ಲೋಕೇಷನ್ ಗುರುತಿಸಿದ ಪೊಲೀಸರು ಕೀವ್‌ನಲ್ಲಿಯೇ ಈ ಸೋದರಿಯರನ್ನು ಬಂಧಿಸಿದ್ದಾರೆ. ಇವರ ವೀಡಿಯೋ vl_lindermann ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಆಗಸ್ಟ್ 24 ರಂದು ಪೋಸ್ಟ್ ಆಗಿತ್ತು. ಆದರೆ ಇದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ವೀಡಿಯೋವನ್ನು ಖಾತೆಯಿಂದ ತೆಗೆದು ಹಾಕಿ ಕ್ಷಮೆ ಕೇಳಿದ್ದರು. ತಾವು ತಮ್ಮ ಮೃತ ತಂದೆಯ ಸಮಾಧಿಗೆ ಭೇಟಿ ನೀಡಿದ ವೇಳೆ ಈ ರೀತಿ ಮಾಡಿದ್ದಾಗಿ ಸೋದರಿಯರು ಹೇಳಿಕೊಂಡಿದ್ದರು. 

Latest Videos

ತ್ರಿವರ್ಣ ಧ್ವಜ ಎಸೆದ ಉಕ್ರೇನ್‌ ಖ್ಯಾತ ಗಾಯಕಿ: ಉಮಾ ಶಾಂತಿ ವಿರುದ್ಧ ಕೇಸ್‌ ದಾಖಲು

ಟೆಲಿಗ್ರಾಮ್‌ನಲ್ಲಿ (Telegram) ಈ ವೀಡಿಯೋ ಲಭ್ಯವಿದ್ದು, ವೀಡಿಯೋದಲ್ಲಿ ಕಾಣಿಸುವಂತೆ ಉಕ್ರೇನಿಯನ್ ಮಹಿಳೆಯರಿಬ್ಬರು ಗ್ರೇವ್ ಮೇಲೆ ನಿಂತು ಡಾನ್ಸ್ ಮಾಡುತ್ತಿರುವ ದೃಶ್ಯವಿದೆ. ಅದೇ ಪ್ರೇಮ್‌ನಲ್ಲಿ ಮಡಿದ ಯೋಧರ ಫೋಟೋಗಳು ಕೂಡ ಕಾಣಿಸುತ್ತಿವೆ. ವರದಿಯ ಪ್ರಕಾರ ಈ ಇಬ್ಬರು ಸೋದರಿಯರಾಗಿದ್ದು, ಇವರು ಯುದ್ಧದಲ್ಲಿ ಮಡಿದ ತಮ್ಮ ತಂದೆಯ ಸಮಾಧಿಗೆ ಭೇಟಿ ನೀಡಲು ಬಂದಿದ್ದರು ಎಂದು ತಿಳಿದು ಬಂದಿದೆ. ಇವರ ತಂದೆ 2022ರಲ್ಲಿ ರಷ್ಯಾ ಉಕ್ರೇನ್‌ ಯುದ್ಧದ ವೇಳೆ ಈಜಿಯಂ ಎಂಬಲ್ಲಿ ಹುತಾತ್ಮರಾಗಿದ್ದರು ಎಂದು ಕೀವ್ (Kyiv) ಪೊಲೀಸರು ಟೆಲಿಗ್ರಾಂನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ನಂತರ ಯುವತಿಯರು ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. 

ರಷ್ಯಾದ ಈ ಕ್ಷಿಪಣಿ ಎದುರಿಸಲು ಪರದಾಡ್ತಿದೆ ಉಕ್ರೇನ್ ವಾಯು ರಕ್ಷಣಾ ಪಡೆ: ಪುಟಿನ್‌ ಮೇಲುಗೈ ಸಾಧಿಸೋಕೆ ಇದೇ ಕಾರಣ..!

ಉಕ್ರೇನ್‌ನಲ್ಲಿ ರಷ್ಯಾ ನಡುವಿನ ಸಮರ ಆರಂಭವಾಗಿರುವುದು ಇಂದು ನಿನ್ನೆಯದ್ದಲ್ಲ. ಫೆಬ್ರವರಿ 2014ರಿಂದಲೇ ಇಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವೆ ಶೀತಲ ಸಮರ ನಡೆಯುತ್ತಿದ್ದು, 2022ರಿಂದ ಜನವರಿಯಿಂದ ಇದು ತೀವ್ರ ಸ್ವರೂಪ ಪಡೆಯಿತು. ಈ ಯುದ್ಧದಿಂದಾಗಿ ಇದುವರೆಗೆ 62,295 ಜನ ಸಾವಿಗೀಡಾಗಿದ್ದಾರೆ. 61 ಸಾವಿರಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ. 15 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. 1.7 ಕೋಟಿಗೂ ಅಧಿಕ ಜನ ಸ್ಥಳಾಂತರಗೊಂಡಿದ್ದಾರೆ. 1,40,000 ಕ್ಕೂ ಅಧಿಕ ಕಟ್ಟಡಗಳು ಧ್ವಂಸಗೊಂಡಿವೆ. 41 ಟ್ರಿಲಿಯನ್ ಕೋಟಿ ಡಾಲರ್ ಆಸ್ತಿ ನಷ್ಟವಾಗಿದೆ. 

click me!