
ಕ್ರೂಸ್ ಶಿಪ್ ಪಯಣ ಅಂದರೆ ಬಹುತೇಕ ಪ್ರವಾಸಿಗರೇ ತುಂಬಿರುವ ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಹೆಚ್ಚಾಗಿ ಹೈ ಕ್ಲಾಸ್ ಜನರೇ ಇರುವ ಹಡಗಿನ ಪಯಣ, ಹೀಗೆ ಪಯಣ ಮಾಡುವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಹಡಗಿನಲ್ಲಿ ಸಾಗುತ್ತಾ ಐಷಾರಾಮಿ ಸವಲತ್ತು ಬಳಸಿಕೊಂಡು ನೀವು ಸಮುದ್ರ ವಿಹಾರವನ್ನು ಎಂಜಾಯ್ ಮಾಡಬಹುದಾಗಿದೆ. ಆದರೆ ಇಲ್ಲೊಂದು ಕಡೆ ಇಂತಹ ಕ್ರೂಸಿ ಶಿಪ್‌ನಲ್ಲಿ ಚಿಕನ್‌ಗಾಗಿ ದೊಡ್ಡ ರಂಪಾಟವೇ ನಡೆದಿದೆ. ಚಿಕನ್ ಟೆಂಡರ್‌ಗಾಗಿ ಜನ ಹಡಗು ತಾವು ಪ್ರವಾಸಿಗರು ಎಂಬುದನ್ನು ಮರೆತು ಮುಖ ಮೂತಿ ನೋಡದೇ ಬಡಿದಾಡಿಕೊಂಡಿದ್ದಾರೆ. ಈ ಕ್ರೂಸ್ ಹಡಗಿನಲ್ಲಿದ್ದ ಕೆಲ ಇನ್‌ಫ್ಲುಯೆನ್ಸರ್‌ಗಳ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿದೆ. ಚಿಕನ್ ಟೆಂಡರ್‌ಗಾಗಿ ಜನ ಹೀಗೂ ಹೊಡೆದಾಡುವುದು ನೋಡಿ ಜನ ಅಚ್ಚರಿಪಟ್ಟಿದ್ದಾರೆ.
ಚಿಕನ್ ಟೆಂಡರ್‌ಗಾಗಿ ಬಿಗ್ ಫೈಟ್:
ಅಂದಹಾಗೆ ಈ ಕಾರ್ನಿವಲ್ ಕ್ರೂಸಿ ಶಿಪ್ ಮಿಯಾಮಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಹಡಗಿನಲ್ಲಿ ಪ್ರಯಾಣಿಕರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ನಾಟಕೀಯ ಘಟನೆ ನಡೆದಿದ್ದು, WWE ಅಥವಾ ರಸ್ಲಿಂಗ್‌ನ್ನು ಟಿವಿಯಲ್ಲಿ ನೋಡುತ್ತಿದ್ದ ಜನರಿಗೆ ಕಣ್ಣೆದುರೇ ಅದೇ ರೀತಿ ಫೈಟ್ ನೋಡಿ ಆಘಾತ ಅಚ್ಚರಿಪಟ್ಟಿದ್ದಾರೆ. ಕ್ರೂಸ್ ಪ್ರಯಾಣದ ಕೊನೆಯ ದಿನವಾದ ಸೋಮವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಪ್ರಯಾಣಿಕರ ದೊಡ್ಡ ಗುಂಪು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ತೋರಿಸಲಾಗಿದ್ದು, ಕೆಲವರು ನೆಲಕ್ಕೆ ಬಿದ್ದರೆ, ಇನ್ನು ಕೆಲವರು ತಲೆಗೆ ಸರಿಯಾಗಿ ಹೆಟ್ಟಿಸಿಕೊಂಡಿದ್ದಾರೆ.
ಈ ವಿಡಿಯೋವನ್ನು ಮೈಕ್ ಟೆರ್ರಾ ಎಂಬ ಸಹ ಪ್ರಯಾಣಿಕ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಹೀಗೆ ಬರೆದಿದ್ದಾರೆ. ಕಾರ್ನಿವಲ್ ಎಂದರೆ ನಾನು ಘೆಟ್ಟೊ ರಾಟ್ಚೆಟ್ (ಲೋಕಲ್ ಗಲಾಟೆಯಿಂದ ಕೂಡಿದ) ಎಂದು ನಾನು ಭಾವಿಸಿದೆ. ಆದರೆ ನಾನು ಹಲವು ವರ್ಷಗಳಿಂದ ಕ್ರೂಸಿ ಪ್ರಯಾಣ ಮಾಡುತ್ತಿದ್ದೇನೆ ಆದರೆ ಈ ರೀತಿಯ ಅನುಭವ ನನಗೆ ಯಾವತ್ತೂ ಆಗಿರಲಿಲ್ಲ. ಹಡಗಿನಲ್ಲೂ ಈ ರೀತಿ ಫೈಟ್ ನೋಡಿದ್ದು ಇದೇ ಮೊದಲು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ವೀಡಿಯೋದಲ್ಲಿ ಫೈಟನ್ನು ರೆಕಾರ್ಡ್ ಮಾಡಿದ ಅವರು ಚಿಕನ್ ಟೆಂಡರ್‌ಗಾಗಿ ಈ ರೀತಿ ಫೈಟ್ ಆಗಿದ್ದು ನೋಡಿ ಹುಚ್ಚೆನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಈ ಶಿಪ್‌ನಲ್ಲಿ ಪ್ರಯಾಣಿಕರು ಹೊಡೆದಾಡುವುದನ್ನು ನೋಡಿ ಅಲ್ಲಿಗೆ ಬಂದ ಭದ್ರತಾ ಸಿಬ್ಬಂದಿ ಗಲಾಟೆಯನ್ನು ನಿಯಂತ್ರಿಸಲು ಹೆಣಗಾಡಿದ್ದಾರೆ. ಒಂದು ಹಂತದಲ್ಲಿ, ಒಬ್ಬ ಗಾರ್ಡ್ ತನ್ನ ವಾಕಿಟಾಕಿ ಮೂಲಕ ಕರೆ ಮಾಡಲು ಅಲ್ಲಿಂದ ಓಡಿಹೋಗಿದ್ದನ್ನು ವೀಡಿಯೋದಲ್ಲಿ ಕಾಣಬಹುದು. ಈ ಘಟನೆಗೆ ಸಂಬಂಧಿಸಿದಂತೆ ಕಾರ್ನಿವಲ್ ಕ್ರೂಸ್ ಇನ್ನೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಹಿಂಸಾಚಾರದಲ್ಲಿ ಯಾವುದೇ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮ ಕೈಗೊಂಡ ಬಗ್ಗೆಯೂ ವರದಿಯಾಗಿಲ್ಲ.
ಏರ್‌ಪೋರ್ಟ್ ಟರ್ಮಿನಲ್‌ಗೆ ಬೆಂಕಿ ಹಚ್ಚಿದ ಭೂಪ
ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿದೇಶದ ಮತ್ತೊಂದು ವೀಡಿಯೋದಲ್ಲಿ. ಇಟಲಿಯ ಮಿಲನ್‌ನ ಮಾಲ್ಪೆನ್ಸಾ ವಿಮಾನ ನಿಲ್ದಾಣದಲ್ಲಿ ಬುಧವಾರ ವ್ಯಕ್ತಿಯೊಬ್ಬ ಟರ್ಮಿನಲ್ 1ರಲ್ಲಿ ಬೆಂಕಿ ಹಚ್ಚುವ ಮೂಲಕ ದೊಡ್ಡ ದೊಡ್ಡ ಕೋಲಾಹಲವನ್ನೆಬ್ಬಿಸಿದ. ಟರ್ಮಿನಲ್‌ನ ಕೆಲ ಭಾಗಗಳಿಗೆ ಆತ ಬೆಂಕಿ ಹಚ್ಚಿದ್ದು ಇದನ್ನು ನೋಡಿ ಜನ ಗಾಬರಿಯಾಗಿ ಓಡುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ವರದಿಗಳ ಪ್ರಕಾರ, ಸ್ಥಳೀಯ ಸಮಯ ಬೆಳಗ್ಗೆ 11 ಗಂಟೆ ಸುಮಾರಿಗೆ ಆ ವ್ಯಕ್ತಿ ಚೆಕ್-ಇನ್ ಕೌಂಟರ್‌ಗಳ ಬಳಿ ಸುಡುವ ದ್ರವವನ್ನು ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯ ತೀವ್ರತೆಯಿಂದಾಗಿ ಟರ್ಮಿನಲ್‌ನ ಕೆಲವು ಭಾಗಗಳು ಹೊಗೆಯಿಂದ ತುಂಬಿ, ಅಧಿಕಾರಿಗಳು ಆ ಪೀಡಿತ ಪ್ರದೇಶದಿಂದ ಜನರನ್ನು ಸ್ಥಳಾಂತರಗೊಳಿಸಲು ಪ್ರಾರಂಭಿಸಿದರು.
ಟರ್ಮಿನಲ್‌ನ ಕೆಲ ಭಾಗಗಳಿಗೆ ಬೆಂಕಿ ಹಚ್ಚುವ ಮೊದಲು ಅರೋಪಿ ಅಲ್ಲಿದ್ದ ತ್ಯಾಜ್ಯದ ತೊಟ್ಟಿಗೆ ಬೆಂಕಿ ಹಚ್ಚಿದ್ದ ಅಲ್ಲದೇ ಸುತ್ತಿಗೆಯಿಂದ ವಿಮಾನ ನಿಲ್ದಾಣದ ಆಸ್ತಿಯನ್ನು ಪುಡಿಮಾಡಿದ್ದಾನೆ ಎಂದು ವರದಿಯಾಗಿದೆ. ಈತನ ಕೃತ್ಯದಿಂದ 12 ಮತ್ತು 13 ಕೌಂಟರ್‌ಗಳ ಬಳಿ ಇರುವ ಮೇಜುಗಳು ಮತ್ತು ಮಾಹಿತಿ ಪರದೆಗಳು ಹಾನಿಗೊಳಗಾಗಿವೆ. ಘಟನೆಯ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದ್ದು,ಭಯಭೀತರಾದ ಪ್ರಯಾಣಿಕರು ತಮ್ಮ ಸುರಕ್ಷತೆಗಾಗಿ ಓಡಿಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: 50 ಪೈಸೆಗೆ ಫುಲ್ ಮಿಲ್, 20 ಪೈಸೆಗೆ ಇಡ್ಲಿ: 1962ರ ರೇಟ್‌ನಲ್ಲಿ ಊಟ ತಿಂಡಿ ಚಹಾ ಕೊಟ್ಟ ಉಡುಪಿ ವಿಹಾರ್
ಇದನ್ನೂ ಓದಿ: ಮನೆ ಕೆಲಸದಾಕೆಯ ವಿಚಿತ್ರ ನಡವಳಿಕೆಯಿಂದ ಅನುಮಾನ: ಕಿಚನ್‌ನಲ್ಲಿ ಸಿಸಿಟಿವಿ ಅಳವಡಿಸಿದ ಕುಟುಂಬಕ್ಕೆ ಆಘಾತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ