ತುಂಬಿದ ಸಭೆಯಲ್ಲಿ ಜರ್ಮನ್‌ ಸಚಿವೆಗೆ ಸಚಿವನಿಂದ ಚುಂಬನ: ಸುತ್ತಲಿದ್ದವರೇ ಶಾಕ್‌

By Anusha KbFirst Published Nov 6, 2023, 1:05 PM IST
Highlights

ಕ್ರೊಯೇಷಿಯಾದ ವಿದೇಶಾಂಗ ಸಚಿವರು ಸಭೆಯೊಂದಕ್ಕೆ ಆಗಮಿಸಿದ ಜರ್ಮನ್‌ ಸಚಿವೆಗೆ ತುಂಬಿದ ಸಭೆಯಲ್ಲಿ ಕೆನ್ನೆಗೆ ಸಿಹಿಮುತ್ತು ನೀಡಿ ಸ್ವಾಗತಿಸಿದ ಆಘಾತಕಾರಿ ಘಟನೆ ಬರ್ಲಿನ್‌ನಲ್ಲಿ ನಡೆದಿದೆ.

ಕ್ರೊಯೇಷಿಯಾದ ವಿದೇಶಾಂಗ ಸಚಿವರು ಸಭೆಯೊಂದಕ್ಕೆ ಆಗಮಿಸಿದ ಜರ್ಮನ್‌ ಸಚಿವೆಗೆ ತುಂಬಿದ ಸಭೆಯಲ್ಲಿ ಕೆನ್ನೆಗೆ ಸಿಹಿಮುತ್ತು ನೀಡಿ ಸ್ವಾಗತಿಸಿದ ಆಘಾತಕಾರಿ ಘಟನೆ ಬರ್ಲಿನ್‌ನಲ್ಲಿ ನಡೆದಿದೆ. ಸಚಿವರ ವರ್ತನೆಗೆ  ಸುತ್ತಲಿದ್ದ ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ ಸ್ವತಃ ಜರ್ಮನ್ ಸಚಿವೆಯೂ ಶಾಕ್ ಆಗಿದ್ದಾರೆ. 

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು, ವೈರಲ್ ಆಗಿದೆ. ಇವರ ನಡೆ ಈಗ ಭಾರಿವಿವಾದಕ್ಕೆ ಕಾರಣವಾಗಿದೆ. ಕ್ರೊಯೇಷಿಯಾದ ವಿದೇಶಾಂಗ ಸಚಿವ ಗೋರ್ಡಾನ್ ಗ್ರಿಲಿಕ್ ರಾಡ್ಮನ್ ಎಂಬುವವರೇ ಹೀಗೆ ಜರ್ಮನ್ ಸಚಿವೆಗೆ ಮುತ್ತಿಟ್ಟು ವಿವಾದಕ್ಕೆ ಕಾರಣವಾದವರು. 

ಕ್ರೊಯೇಷಿಯಾದ ವಿದೇಶಾಂಗ ಸಚಿವ ಗೋರ್ಡನ್ ಗ್ರ್ಲಿಕ್ ರಾಡ್‌ಮನ್ ಅವರು ಬರ್ಲಿನ್‌ನಲ್ಲಿ ಗ್ರೂಪ್ ಫೋಟೋ ಸೆಷನ್‌ ವೇಳೆ ಈ ಕೃತ್ಯವೆಸಗಿದ್ದಾರೆ. ತಮ್ಮ ಜರ್ಮನ್ ಸಹವರ್ತಿ ಅನ್ನಾಲೆನಾ ಬೇರ್‌ಬಾಕ್‌ ಅವರ ಬಳಿ ಆಗಮಿಸಿದ ಗೋರ್ಡನ್ ಆಕೆಯ ಕೆನ್ನೆಗೆ ಮುತ್ತಿಕ್ಕಿದ್ದಾರೆ.  ಆದರೆ ಸುತ್ತಲಿದ್ದವರೆಲ್ಲಾ ಇವರನ್ನೇ ರಫ್ ಅಂತ ನೋಡಿ ಮುಖ ಬೇರೆಡೆ ತಿರುಗಿಸಿಕೊಂಡಿದ್ದಾರೆ.,  ಕ್ಷಣದಲ್ಲೇ ಅವರು ವಾಸ್ತವಕ್ಕೆ ಬಂದಿದ್ದು, ಈ ದೃಶ್ಯದ ವೀಡಿಯೋ ಈಗ ಸಖತ್ ವೈರಲ್ ಆಗ್ತಿದೆ.  ಜರ್ಮನ್ ಸಚಿವೆ ಅನ್ನಾಲೆನಾ ಬೇರ್‌ಬಾಕ್‌ ಬಳಿ ಬಂದ ಗೋರ್ಡನ್ ಮೊದಲಿಗೆ ಅವರ ಕೈ ಕುಲುಕಿ ಕೆನ್ನೆಗೆ ಮುತ್ತಿಡುವುದು ಕಾಣಿಸುತ್ತಿದೆ.  ಬರ್ಲಿನ್ ನಗರದಲ್ಲಿ ನಡೆದ ಯುರೋಪಿಯನ್ ಕಾನ್ಫರೆನ್ಸ್‌ನಲ್ಲಿ ಈ ಘಟನೆ ನಡೆದಿದೆ. 

ಉದ್ಯಮಿ ಜಗತ್ ಜೊತೆ ಹಸೆಮಣೆ ಏರಿದ ಹೆಬ್ಬುಲಿ ನಟಿ: ಅಮಲಾ ಪೌಲ್ ಮದ್ವೆಯ ಸುಂದರ ಫೋಟೋಗಳು

ಕ್ರೊಯೇಷಿಯಾದ ಮಾಜಿ ಪ್ರಧಾನಿ (Former Croatian prime minister) ಜಡ್ರಾಂಕಾ ಕೊಸೋರ್ (Jadranka Kosor) ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.  ಮಹಿಳೆಯನ್ನು ಹಿಂಸಾತ್ಮಕವಾಗಿ ಚುಂಬಿಸುವುದು ಕೂಡ ಹಿಂಸೆ ಅಲ್ಲವೇ ಎಂದು ಅವರು ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಗೋರ್ಡನ್‌, ಸಮಸ್ಯೆ ಏನು ಎಂದು ನನಗೆ ಗೊತ್ತಾಗುತ್ತಿಲ್ಲ, ನಾವು ಯಾವಾಗಲೂ ಪರಸ್ಪರ ಬೆಚ್ಚನೆಯ ಸ್ವಾಗತ ಮಾಡುತ್ತೇವೆ. ಇದೊಂದು  ಸಹೋದ್ಯೋಗಿಗೆ ಬೆಚ್ಚಗಿನ ಮಾನವ ಸ್ವಾಗತವಾಗಿದೆ ಎಂದು ಅವರು ಹೇಳಿದ್ದಾರೆ. 

ನಿಜ್ಜರ್‌ ಹತ್ಯೆ ಸಾಕ್ಷ್ಯ ಎಲ್ಲಿ? ಮತ್ತೆ ಕೆನಡಾಕ್ಕೆ ಭಾರತ ಪ್ರಶ್ನೆ

ಕ್ರೊಯೇಷಿಯಾದ ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾದ ರಾಡಾ ಬೋರಿಕ್ (Rada Boric) ಅವರು ಕೂಡ ಸಚಿವರನ್ನು ಈ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೊಂದು ಸಚಿವರ ತೀವ್ರ ಅನುಚಿತ ವರ್ತನೆ ಎಂದು ಕರೆದಿದ್ದಾರೆ.  ಚುಂಬನವನ್ನು ಅನುಮತಿಸುವ ಸಂಬಂಧದಲ್ಲಿ ಮಾತ್ರ ಇಂತಹ ಬೆಚ್ಚಗಿನ ಸ್ವಾಗತ ಕೋರಬೇಕು. ಆದರೆ ಅಂತಹ ಸಂಬಂಧವು ಇಲ್ಲಿಇರಲಿಲ್ಲ ಮತ್ತು ಜರ್ಮನ್ ಸಚಿವರು ಕ್ರೊವೇಷಿಯಾದ ಸಚಿವರ ಈ ವರ್ತನೆಯಿಂದ  ಆಶ್ಚರ್ಯಗೊಂಡಿದ್ದಂತೂ  ಸ್ಪಷ್ಟವಾಗಿದೆ ಎಂದು ರಾಡಾ ಬೋರಿಕ್ ಜುಟಾರ್ಂಜಿ ಹೇಳಿದ್ದಾರೆ. 

ಈ ಘಟನೆಗೆ ಕೆಲವೇ ತಿಂಗಳುಗಳ ಮೊದಲು, ಸ್ಪೇನ್‌ನ (Spain) ಫುಟ್‌ಬಾಲ್ ಮುಖ್ಯಸ್ಥ ಲೂಯಿಸ್ ರುಬಿಯಾಲ್ಸ್ ಮಹಿಳಾ ವಿಶ್ವಕಪ್ ಸಮಾರಂಭದಲ್ಲಿ ಆಟಗಾರ್ತಿ ಜೆನ್ನಿ ಹೆರ್ಮೊಸೊ (Jenni Hermoso) ಅವರ ತುಟಿಗಳಿಗೆ ಚುಂಬಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. ತಮ್ಮ ಈ ಕಿಸ್ಸಿಂಗ್ ಸೀನ್ ವಿವಾದಕ್ಕೀಡಾಗುತ್ತಿದ್ದಂತೆ ಮೊದಲಿಗೆ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡ ಅವರು ನಂತರ ಕ್ಷಮೆ ಕೇಳಿದ್ದರು.  ಇದು ನಾನು ನನ್ನ ಮಗಳ ಸಮಾನಳಿಗೆ ಕೊಡಬಹುದಾದಂತಹ ಕಿಸ್ ಆಗಿತ್ತು ಎಂದು ರುಬಿಯಾಲ್ಸ್ ಹೇಳಿಕೊಂಡು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ  ನಂತರ ಅವರು ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದರು. ಲೂಯಿಸ್ ರುಬಿಯಾಲ್ಸ್ ಅವರನ್ನು ಆಗಸ್ಟ್‌ನಲ್ಲಿ ಫಿಫಾದಲ್ಲಿರುವ (FIFA) ಅವರ ಹುದ್ದೆಯಿಂದ ತೆಗೆದು ಹಾಕಲಾಗಿತ್ತು. 

ಯುವತಿಯ ಬಟ್ಟೆ ಹರಿದು ಚುಂಬಿಸಿದ ಕಿರಾತಕರು: ಐಐಟಿ ಕ್ಯಾಂಪಸ್‌ನಲ್ಲೇ ಅವಾಂತರ, ಪ್ರತಿಭಟನೆ

Rubiales ಆರಂಭದಲ್ಲಿ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡರು ."ನಾನು ನನ್ನ ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಕೊಡಬಹುದಾದ ಮುತ್ತು ಒಂದೇ ಆಗಿತ್ತು," Rubiales ಹೇಳಿದರು. ಆದಾಗ್ಯೂ, ಅವರು ನಂತರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು. ರೂಬಿಯಾಲ್ಸ್ ಅವರನ್ನು ಫಿಫಾ ಅವರ ಹುದ್ದೆಯಿಂದ ಆಗಸ್ಟ್ 27 ರಂದು ಅಮಾನತುಗೊಳಿಸಿದೆ.
 

🇭🇷's foreign minister tries to his counterpart at a .https://t.co/cHt7WG53wJ pic.twitter.com/1EpCUslcRL

— Enigma Intel (@IntelEnigma)

 

click me!