ಉಗ್ರರಲ್ಲಿ ಹೆಚ್ಚಿದ ಆತಂಕ, ಪಾಕಿಸ್ತಾನದಲ್ಲಿ ಕಿಡ್ನಾಪ್ ಆಗಿದ್ದ ಸುಂಜುವಾನ್ ದಾಳಿಕೋರ ಉಗ್ರನ ಶವ ಪತ್ತೆ!

By Suvarna News  |  First Published Nov 5, 2023, 7:53 PM IST

ಪಾಕಿಸ್ತಾನದಲ್ಲಿ ಕುಳಿತು ಭಾರತ ವಿರುದ್ಧ ದಾಳಿ ನಡೆಸುತ್ತಿದ್ದ ಒಬ್ಬೊಬ್ಬ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ. ಈ ಸಾಲಿಗೆ ಇದೀಗ 2018ರಲ್ಲಿ ಭಾರತೀಯ ಸೇನೆ ಮೇಲೆ ದಾಳಿ ನಡೆಸಿದ್ದ, ಲಷ್ಕರ್ ಇ ತೈಬಾ ಕಮಾಂಡರ್ ಖ್ವಾಜ್ ಶಾಹೀದ್ ಸೇರಿಕೊಂಡಿದ್ದಾನೆ. ಕಳೆದೆರಡು ದಿನದಿಂದ ನಾಪತ್ತೆಯಾಗಿದ್ದ ಈ ಉಗ್ರನ ರುಂಡು ಬೇರ್ಪಟ್ಟ ಶವ ಪತ್ತೆಯಾಗಿದೆ.


ಇಸ್ಲಾಮಾಬಾದ್(ನ.05)ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಒಬ್ಬರ ಹಿಂದೊಬ್ಬರು ಹತ್ಯೆಯಾಗುತ್ತಿದ್ದಾರೆ. ಕೆನಡಾದಲ್ಲಿ ಕುಳಿತು ಭಾರತ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಹಲವರು ಅವರ ದೇಶದಲ್ಲಿ ನಡೆದ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದಾರೆ. ಇತ್ತ ಪಾಕಿಸ್ತಾನದಲ್ಲಿ ಸುರಕ್ಷಿತವಾಗಿ ಕುಳಿತು ಭಾರತ ಮೇಲೆ ದಾಳಿ ನಡೆಸುತ್ತಿದ್ದ ಒಬ್ಬೊಬ್ಬ ಉಗ್ರರು ಹತರಾಗುತ್ತಿದ್ದಾರೆ. ಇದೀಗ 2018ರಲ್ಲಿ ಭಾರತೀಯ ಸೇನೆ ಮೇಲೆ ನಡೆದ ಸುಂಜುವಾನ್ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಇ ತೈಬಾ ಕಮಾಂಡ್ ಖ್ವಾಜಾ ಶಾಹೀದ್ ಶವವಾಗಿ ಪತ್ತೆಯಾಗಿದ್ದಾನೆ.  

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಮ್ ಕಣಿವೆ ಪ್ರದೇಶದ ಖ್ವಾಜಾ ಶಾಹೀದ್, ಮಿಯಾ ಮುಜಾಹೀದ್ ಎಂದೇ ಜನಪ್ರಿಯ. ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ ಕಳೆದೆರಡು ದಿನದಿಂದ ನಾಪತ್ತೆಯಾಗಿದ್ದ. ಅಪರಿಚಿತರರು ಖ್ವಾಜಾ ಶಾಹೀದ್‌ನನ್ನು ಅಪಹರಣ ಮಾಡಿರುವುದಾಗಿ ಪಾಕಿಸ್ತಾನ ಪೊಲೀಸರು ಹೇಳಿದ್ದರು.

Tap to resize

Latest Videos

undefined

ಪಾಕ್ ಉಗ್ರ ಸಂಘಟನೆಗೆ ನೆರವು: ಇಬ್ಬರು ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್ ಶೀಟ್

ಖ್ವಾಜಾ ಶಾಹೀದ್‌ಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಆದರೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಕಿಡ್ನಾಪ್ ಮಾಹಿತಿಯನ್ನು ಪಾಕಿಸ್ತಾನ ಅಧಿಕಾರಿಗಳು ಖಚಿತಪಡಿಸಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಕೆಲ ಪ್ರಾಂತ್ಯದಲ್ಲಿ ಅಲರ್ಟ್ ಘೋಷಿಸಲಾಗಿತ್ತು. ಇದೀಗ ಖ್ವಾಜಾ ಶಾಹೀದ್ ಶವ ಪತ್ತೆಯಾಗಿದೆ. ರುಂಡ ಬೇರ್ಪಟ್ಟ ಶವ ಪತ್ತೆಯಾಗಿದೆ.

ಈ ಘಟನೆಯಿಂದ ಪಾಕಿಸ್ತಾನದಲ್ಲಿನ ಉಗ್ರರ ಆತಂಕ ಹೆಚ್ಚಾಗಿದೆ. ಇತ್ತೀಚೆಗೆ ಅಪರಿಚಿತರ ಗುಂಡಿನ ದಾಳಿ, ದುರ್ಷರ್ಮಿಗಳ ದಾಳಿಯಿಂದ ಭಾರತದ ಮೋಸ್ಟ್ ವಾಂಟೆಡ್ ಉಗ್ರರು ಹತ್ಯೆಯಾಗುತ್ತಿದ್ದಾರೆ. ಪಾಕಿಸ್ತಾನ ಸರ್ಕಾರ ಈಗಾಗಲೇ ಹೈಅಲರ್ಟ್ ಘೋಷಿಸಿದೆ. ಇದೀಗ ಖ್ವಾಜಾ ಶಾಹೀದ್ ಹತ್ಯೆಯಿಂದ ಕಳೆದ ಒಂದು ವರ್ಷದಲ್ಲಿ ಭಾರತಕ್ಕೆ ಬೇಕಾದ ಉಗ್ರರ ಹತ್ಯೆ ಸಂಖ್ಯೆ 20 ದಾಟಿದೆ.

ಮನಮೋಹನ್‌ ಸಿಂಗ್‌ ರೀತಿ ಹಮಾಸ್ ವಿರುದ್ಧ ಇಸ್ರೇಲ್‌ ಸುಮ್ಮನಿರಬೇಕಿತ್ತು: ಅಮೆರಿಕದ ಖ್ಯಾತ ಲೇಖಕ

ಇತ್ತೀಚೆಗೆ   ಭಾರತದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕನಾಗಿದ್ದ ಲಷ್ಕರ್‌-ಎ-ಜಬ್ಬಾರ್‌ ಉಗ್ರ ಸಂಘಟನೆಯ ಸಂಸ್ಥಾಪಕ ದಾವೂದ್ ಮಲಿಕ್‌ನನ್ನು ಪಾಕಿಸ್ತಾನ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದರೊಂದಿಗೆ ಭಾರತ ವಿರೋಧಿ ಕೃತ್ಯಗಳ ಎಸಗಿ, ವಿದೇಶಗಳಲ್ಲಿ ನಿಗೂಢವಾಗಿ ಕೊಲೆಯಾಗುತ್ತಿರುವ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರ ಸಂಖ್ಯೆಯು 18ಕ್ಕೆ ಏರಿಕೆಯಾಗಿದೆ. ಮಲಿಕ್‌ ಕುಖ್ಯಾತ ಉಗ್ರ ಮೌಲಾನಾ ಮಸೂದ್‌ ಅಜರ್‌ನ ಆಪ್ತನಾಗಿದ್ದ. 
 

click me!