
ಕೊಲೊಂಬೊ(ಮೇ.19): ಭಾರತದ ನೆರೆ ರಾಷ್ಟ್ರ ಶ್ರೀಲಂಕಾದಲ್ಲೂ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಕಳೆದ ತಿಂಗಳು ಕೊಲೊಂಬೊದಲ್ಲಿ ದರ್ಶನ ಕುಮಾರ ವಿಜಯೆನಾರಾಯಣ ಹಾಗೂ ಪವಾನಿ ರಸಂಗ ಮದುವೆಗೆ ಹಾಲ್ ಬುಕ್ ಮಾಡಿದ್ದರು. ಆದರೆ ಕೊರೋನಾ ಕಾರಣ ಸಾಮಾಜಿಕ ಅಂತರ ಹಾಗೂ ಲಾಕ್‌ಡೌನ್ ನಿಯಮದಿಂದ ಕುಟುಂಬಸ್ಥರು ಮದುವೆ ಮುಂದೂಡಲು ಸಲಹೆ ನೀಡಿದ್ದರು. ಆದರೆ ನವ ಜೋಡಿ ಎರಡು ಕುಟುಂಬದ ಪೋಷಕರನ್ನು ಕರೆದು ಮನೆಯಲ್ಲಿ ಕೇಕ್ ಕತ್ತರಿಸಿ ಮದುವೆಯಾಗಿದ್ದಾರೆ.
ಆನ್‌ಲೈನ್ ಕ್ಲಾಸ್‌ಗಾಗಿ ಮರ ಏರುವ ವಿದ್ಯಾರ್ಥಿ
ಮದುವೆ ರೆಸೆಪ್ಶನ್ ಪಾರ್ಟಿ ಕ್ಯಾನ್ಸಲ್ ಮಾಡಿ ಆ ಹಣದಲ್ಲಿ ತಮ್ಮ ಮಲಿಂಬಾಡ ಸಣ್ಣ ಗ್ರಾಮದ ನಿರ್ಗತಿಕರಿಗೆ, ಬಡವರಿಗೆ ಆಹಾರ ಧಾನ್ಯ ವಿತರಿಸಿದ್ದಾರೆ. ನವ ಜೋಡಿಗಳು ನಡೆದುಕೊಂಡೇ ಹೋಗಿ ತಮ್ಮ ಮದುಯೆ ಕೇಕ್ ಜೊತೆಗೆ ಆಹಾರ ಧಾನ್ಯ ವಿತರಿಸಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ಚಿಕ್ಕ ಮಕ್ಕಳಿಗೆ ಆಟಿಕೆ ಸಾಮಾನುಗಳು ಸೇರಿದಂತೆ ಹಲವು ವಸ್ತುಗಳನ್ನು ನವ ಜೋಡಿಗಳು ಮನೆ ಮನೆಗೆ ತೆರಳಿ ವಿತರಿಸಿದ್ದಾರೆ.ನವ ಜೋಡಿಗಳಿಗೆ ಪ್ರತಿ ಮನೆಯವರು ಹಾರೈಸಿದ್ದಾರೆ.
ಕೇರಳ-ಕರ್ನಾಟಕ ಬಾರ್ಡರ್‌ನಲ್ಲೇ ತಾಳಿ ಕಟ್ಟೋಕೆ ಮುಂದಾದ ವರ: ಏನಾಯ್ತು ನೋಡಿ
ಎಪ್ರಿಲ್ 27ರಂದು ವಿವಾಹ ಆಯೋಜಿಸಲಾಗಿತ್ತು. ಮದುವೆ ಮುಂದೂಡಿ ಹಣ ಖರ್ಚು ಮಾಡುವುದಕ್ಕಿಂತ ಅದೆ ಹಣದಲ್ಲಿ ನಿರ್ಗತಿಕರಿಗೆ ಸಹಾಯ ಮಾಡುವ ನಿರ್ಧಾರ ಮಾಡಿದ್ದಾರೆ. ಇತ್ತ ಎಪ್ರಿಲ್ ತಿಂಗಳ ಅಂತ್ಯದಲ್ಲಿ ಲಂಕಾ ಸರ್ಕಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 7ವರೆಗೆ ಲಾಕ್‌ಡಡೌನ್ ಸಡಿಲಿಕೆ ಮಾಡಲಾಗಿತ್ತು. ಹೀಗಾಗಿ ನಿಗದಿತ ದಿನಾಂಕದಲ್ಲೇ ಮದುವೆ ಮಾಡಿ ಬಡವರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ.
ದರ್ಶನ ಕುಮಾರ ದಿನಸಿ ಅಂಗಡಿ ಇಟ್ಟುಕೊಂಡಿದ್ದರೆ, ವಧು ಪವಾನಿ ಲಂಕಾ ಸರ್ಕಾರಿ ಶಾಲೆಯ ಲ್ಯಾಬ್ ಅಸಿಸ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೋನಾ ಕಾರಣ ಶ್ರೀಲಂಕಾದಲ್ಲಿ ಬಡತನ ಸಂಖ್ಯೆ ಹೆಚ್ಚಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡವು ಪರಿಸ್ಥಿತಿ ಎದುರಾಗಿದೆ. ಫೆಬ್ರವರಿಯಲ್ಲಿ ಶ್ರೀಲಂಕದಲ್ಲಿ ಮೊದಲ ಕೇಸ್ ಪತ್ತೆಯಾಗಿತ್ತು. ಚೀನಾದಿಂದ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ