ಕೊರೋನಾ ವೈರಸ್ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಆಯೋಜಿಸಿದ್ದ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ| ಕ್ಯಾಮೆರಾವನ್ನು ಆನ್ ಮಾಡಿಟ್ಟುಕೊಂಡೇ ಸ್ನಾನಕ್ಕೆ ತೆರಳಿದ್ದ ಉದ್ಯಮಿ| ನಗ್ನವಾಗಿ ಸ್ನಾನ ಮಾಡುತ್ತಿರುವ ದೃಶ್ಯ ವಿಡಿಯೋ ಕಾನ್ಫರೆನ್ಸ್ ವೇಳೆ ಪ್ರದರ್ಶನ
ಬ್ರೆಜಿಲಿಯಾ(ಮೇ.19): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರು ಸಚಿವರು ಹಾಗೂ ಉದ್ಯಮಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಆಯೋಜಿಸಿದ್ದ ವೇಳೆ ಎಡವಟ್ಟು ನಡೆದಿದೆ.
ಜೂಮ್ ಬಿಟ್ಹಾಕಿ, ಈ 5 ವಿಡಿಯೋ ಕಾಲಿಂಗ್ ಆ್ಯಪ್ ಬಳಸಿ!
undefined
ವಿಡಿಯೋ ಕಾನ್ಫರೆನ್ಸ್ ನಡೆಯುತ್ತಿರುವಾಗಲೇ ಉದ್ಯಮಿಯೊಬ್ಬ ಕ್ಯಾಮೆರಾವನ್ನು ಆನ್ ಮಾಡಿಟ್ಟುಕೊಂಡೇ ಸ್ನಾನಕ್ಕೆ ತೆರಳಿದ್ದಾನೆ. ಅಚಾತುರ್ಯದಿಂದ ಕ್ಯಾಮೆರಾವನ್ನು ಸ್ನಾನದ ಕೋಣೆಗೂ ಒಯ್ದಿದ್ದರಿಂದ ಆತ ನಗ್ನವಾಗಿ ಸ್ನಾನ ಮಾಡುತ್ತಿರುವ ದೃಶ್ಯ ವಿಡಿಯೋ ಕಾನ್ಫರೆನ್ಸ್ ವೇಳೆ ಪ್ರದರ್ಶನಗೊಂಡಿದ್ದು, ಮುಜುಗರಕ್ಕೆ ಕಾರಣವಾಗಿದೆ.
Brasil. En pleno zoom entre Bolsonaro y empresarios uno de ellos se estaba duchando .!!! pic.twitter.com/t6J6Hy4zO1
— Andrés Repetto (@andresrepetto)ಸದ್ಯ ಈ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದು, ಉದ್ಯಮಿಯ ಎಡವಟ್ಟು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿವೆ.