ಮದುವೆ ಉಡುಗೆಯೇ ಕಳ್ಳತನ: ತಮ್ಮದೇ ಮದುವೆ ದಿನ ಅಂದರ್‌ ಆದ ಜೋಡಿ

Suvarna News   | Asianet News
Published : Feb 08, 2022, 02:05 PM IST
ಮದುವೆ ಉಡುಗೆಯೇ ಕಳ್ಳತನ: ತಮ್ಮದೇ ಮದುವೆ ದಿನ ಅಂದರ್‌ ಆದ ಜೋಡಿ

ಸಾರಾಂಶ

ತಮ್ಮದೇ ಮದುವೆ ದಿನ ಕಂಬಿ ಎಣಿಸುವಂತಾದ ಜೋಡಿ ಮದುವೆಗೆ ವರನ ಮಾಜಿ ಪತ್ನಿಯ ಬಟ್ಟೆ ಧರಿಸಿದ ವಧು ಸ್ನೇಹಿತೆ ಕಳುಹಿಸಿದ ಫೋಟೋ ನೋಡಿ ಪೊಲೀಸ್‌ ಕರೆತಂದ ಮಾಜಿ ಪತ್ನಿ

ತಮ್ಮದೇ ಮದುವೆಯ ದಿನ ನವ ವಿವಾಹಿತ ಜೋಡಿ ಅಂದರ್‌ ಆದ ಘಟನೆ ವಿದೇಶದಲ್ಲಿ ನಡೆದಿದೆ. ವರನ ಮಾಜಿ ಪತ್ನಿಯ ಮದುವೆ ದಿರಿಸನ್ನು ಧರಿಸಿದ ವಧು ಹಾಗೂ ವರನನ್ನು ಪೊಲೀಸರು ಮದುವೆ ದಿನವೇ ಠಾಣೆ ಮೆಟ್ಟಿಲು ಹತ್ತಿಸಿದ್ದಾರೆ. ವರನ ಮಾಜಿ ಪತ್ನಿಯ ಬಳಿ ಇದ್ದ ಮದುವೆಯ ಡ್ರೆಸ್‌ನ್ನು ಕದ್ದು ಆತ ತನ್ನ ಹೊಸ ಹೆಂಡ್ತಿಗೆ ಧರಿಸಲು ನೀಡಿದ್ದ. ವರ ಮತ್ತು ಆತನ ಮಾಜಿ ಪತ್ನಿ ವಿಚ್ಛೇದನ ಪಡೆದ ಬಳಿಕ ಮಾಜಿ ಪತ್ನಿ ವಿವಾಹದ ವೇಳೆ ಧರಿಸಿದ ಲಾಂಗ್‌ ಗವನ್‌ ನಿಗೂಢವಾಗಿ ನಾಪತ್ತೆಯಾಗಿತ್ತು. ಇತ್ತ ಹೊಸ ವಧು ವರನ ಮಾಜಿ ಪತ್ನಿಯ ಡ್ರೆಸ್‌ ಮಾತ್ರವಲ್ಲದೇ ಆಕೆಯ ಜ್ಯುವೆಲ್ಲರಿಯನ್ನು ಕೂಡ ಧರಿಸಿದ್ದಳು ಎಂದು ತಿಳಿದು ಬಂದಿದೆ.

ವರನ ಮಾಜಿ ಪತ್ನಿ ಹಾಗೂ ವರನಿಗೆ ಇಬ್ಬರಿಗೂ ಸ್ನೇಹಿತೆಯಾಗಿರುವ ಮಹಿಳೆಯೊಬ್ಬರು ಈ ವಿವಾಹಕ್ಕೆ ಹೋಗಿದ್ದು, ಈ ವೇಳೆ ಆಕೆ ಅಲ್ಲಿ ಹೊಸ ವಧುವಿನ ಫೋಟೋವನ್ನು ತೆಗೆದು ವರನ ಮಾಜಿ ಪತ್ನಿಗೆ ಕಳುಹಿಸಿದ್ದಾಳೆ. ಇದನ್ನು ನೋಡಿದ ಮಾಜಿ ಪತ್ನಿ ನೇರವಾಗಿ ಪೊಲೀಸರನ್ನು ಕರೆಸಿದ್ದಾಳೆ. ಹೇಗೆ ತನ್ನ ಸಹೋದ್ಯೋಗಿಯನ್ನು ವಿವಾಹದ ದಿನವೇ ಬಂಧಿಸಲಾಯಿತು ಎಂಬುದನ್ನು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣವಾದ ರೆಡಿಟ್‌ನಲ್ಲಿ (Reddit) ಬರೆದುಕೊಂಡಿದ್ದಾರೆ. 

Suvarna FIR: ವಿಜಯಪುರ,  ಹಗಲಿಗೆ ಐಪೋನ್ ಜಾರ್ಜರ್‌ ಕೇಳಿ ರಾತ್ರಿ ಮನೆ ದೋಚುತ್ತಾರೆ...!

ವರನ ಮಾಜಿ ಪತ್ನಿಯಾದ 38 ವರ್ಷದ ಮಹಿಳೆ ಮೇರಿ ಮತ್ತು ಆಡಮ್ ನನ್ನೊಂದಿಗೆ ಒಟ್ಟಿಗೆ ಕೆಲಸ ಮಾಡಿದ್ದರು. ಅವರು ಕಂಪನಿಗೆ ಸೇರಿದಾಗ ಮದುವೆಯಾಗಿ ಕೆಲವು ವರ್ಷಗಳಾಗಿತ್ತು. ಮೇರಿ ಕಂಪನಿಯನ್ನು ತೊರೆದ ಸ್ವಲ್ಪ ಸಮಯದ ನಂತರ ಆಡಮ್ ಆಕೆಗೆ ವಂಚಿಸಿದ ಎಂಬ ಕಾರಣಕ್ಕೆ ಆಕೆ ಆಡಮ್‌ಗೆ ವಿಚ್ಛೇದನ ನೀಡಿದ್ದರು.

ಆದಾಗ್ಯೂ ಮೇರಿ ಆ ಸಂದರ್ಭವನ್ನು ತುಂಬಾ ನಾಜೂಕಾಗಿ ನಿರ್ವಹಿಸಿದ್ದಳು. ಆಡಮ್‌ ಬಗ್ಗೆ ಒಂದು ಕೆಟ್ಟ ಮಾತಾಡದ ಆಕೆ, ತನ್ನ ವಿವಾಹದ ಡ್ರೆಸ್‌  ಹಾಗೂ ಕೆಲವು ಜ್ಯುವೆಲ್ಲರಿ ಹಾಗೂ ಸಂಪ್ರದಾಯಿಕವಾಗಿ ಬಂದ ಕೆಲ ವಸ್ತುಗಳು ಹೇಗೆ ಕಾಣೆ ಆಯಿತು ಎಂಬ ಬಗ್ಗೆ ಯೋಚಿಸಿದ್ದಳು. 
ಬಹುಶಃ ಅಪಾರ್ಟ್‌ಮೆಂಟ್‌ನಿಂದ ಸ್ಥಳಾಂತರಿಸುವಾಗ  ಎಲ್ಲೂ ಇಟ್ಟಿರಬೇಕು ಎಂದು ಆಕೆ ಸುಮ್ಮನಾಗಿದ್ದಳು.

ಇದಾಗಿ ಕೆಲ ವರ್ಷಗಳ ನಂತರ,  ಆಡಮ್ ಜೊತೆ ಕೆಲಸ ಮಾಡುತ್ತಿರುವ ಮಹಿಳೆ ಚೆಲ್ಸಿಯಾಳನ್ನು ಆಡಮ್‌ ಮದುವೆಯಾಗುತ್ತಿದ್ದು, ಈ ಮದುವೆಗೆ ಮೇರಿಯನ್ನು ಆಹ್ವಾನಿಸಲಾಗಿತ್ತು. ಇದೇ ಮಹಿಳೆ ಮೇರಿಗೆ ಮೋಸ ಮಾಡಿದ್ದಳು. ಈ ಬಗ್ಗೆ ಮೇರಿ ಏನೂ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ರೆಡಿಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಹಾಗೂ ಮೇರಿ ಹಾಗೂ ಆಡಮ್‌ ಇಬ್ಬರಿಗೂ ಸ್ನೇಹಿತೆಯಾಗಿರುವ ಮಹಿಳೆ ತನ್ನ ಸಹೋದ್ಯೋಗಿಯ ಮದುವೆಗೆ ಹೋಗಲು ಒಪ್ಪಿಕೊಂಡಿದ್ದರು.

ಈ ಮಹಿಳೆ, ಆಡಮ್ಸ್‌ ಹೊಸ ವಧು ಚೆಲ್ಸಿಯಾ ಧರಿಸಿದ ಮದುವೆ ಧಿರಿಸು ಕೆಲ ವರ್ಷಗಳ ಹಿಂದೆ ಆಡಮ್‌ ಮೇರಿಯನ್ನು ಮದುವೆಯಾಗುವ ವೇಳೆ ಮೇರಿ ಧರಿಸಿದ್ದ ಡ್ರೆಸ್‌ನಂತೆ ಇರುವುದನ್ನು ಗಮನಿಸಿದ್ದರು. ಹೀಗಾಗಿ ಈ ಬಗ್ಗೆ ಹೆಚ್ಚು ಯೋಚಿಸದ ಮಹಿಳೆ ವಧುವಿನ ಫೋಟೋವನ್ನು ಮೇರಿಗೆ ಕಳುಹಿಸಿದರು. ಆದರೆ ಫೋಟೋ ನೋಡಿದ ಆಕೆ ಏನೂ ಪ್ರತಿಕ್ರಿಯಿಸಿರಲಿಲ್ಲ. ಬದಲಾಗಿ ಒಂದು ಗಂಟೆಯ ನಂತರ ಪೊಲೀಸರನ್ನೇ ನೇರವಾಗಿ ಮದುವೆ ಹಾಲ್‌ಗೆ ಕಳುಹಿಸಿದ್ದಳು ಎಂದು ಮಹಿಳೆ ರೆಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. 

ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ: ಬೈಕ್‌ ಕದ್ದು ಪತ್ನಿ, ಸಂಬಂಧಿಕರಿಗೆ ಗಿಫ್ಟ್‌ ಕೊಡ್ತಿದ್ದ ಭೂಪ..!

ಸ್ಥಳಕ್ಕೆ ಬಂದ ಪೊಲೀಸರು ಚೆಲ್ಸಿಯಾಗೆ ಉಡುಗೆ ಮತ್ತು ಎಲ್ಲಾ ಆಭರಣಗಳನ್ನು ತೆಗೆಯಲು ಹೇಳಿದರು. ಆದರೆ ಚೆಲ್ಸಿಯಾ ನಿರಾಕರಿಸಿದಳು. ಮತ್ತು ಅವರೊಂದಿಗೆ ಜಗಳವಾಡಲು ಪ್ರಾರಂಭಿಸಿದಳು. ಚೆಲ್ಸಿಯಾ ಜೊತೆ ಆಡಮ್ ಕೂಡ ಸೇರಿಕೊಂಡಿದ್ದು, ಅವರು ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಅವರನ್ನು ಪೊಲೀಸರು ಠಾಣೆಗೆ ಕರೆದೊಯ್ದರು. ಅಲ್ಲಿ ವಿಚಾರಣೆ ನಡೆದು ಜಾಮೀನು ಪಡೆದ ನಂತರ ಚೆಲ್ಸಿಯಾ ಮದುವೆಯ ಡ್ರೆಸ್ ಮತ್ತು ಆಭರಣಗಳನ್ನು ಪೊಲೀಸ್ ಠಾಣೆಯಲ್ಲಿ ನೀಡಬೇಕಾಯಿತು ಎಂದು ಮಹಿಳೆ ರೆಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್