ನ್ಯೂಯಾರ್ಕ್(ಫೆ. 8): ತಂತ್ರಜ್ಞಾನವು ಅನೇಕ ಸಂದರ್ಭಗಳಲ್ಲಿ ಜೀವರಕ್ಷಕವಾಗಿ ಹೊರಹೊಮ್ಮಿದ ಅನೇಕ ಉದಾಹಣೆಗಳಿವೆ. ಈಗ ಆಪಲ್ ವಾಚ್ ಧರಿಸಿದ ವ್ಯಕ್ತಿಯೊಬ್ಬರ ಜೀವ ಉಳಿಸಲು ಆಪಲ್ ವಾಚ್ ನೆರವಾಗಿದೆ. ಅಮೆರಿಕಾದಲ್ಲಿ(United State) ಈ ಘಟನೆ ನಡೆದಿದೆ. ಎಲೆಕ್ಟ್ರಿಕ್ ಬೈಕ್‌ನಿಂದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದಿದ್ದು, ಈ ವೇಳೆ ಅವರು ಕಟ್ಟಿದ್ದ ಆಪಲ್ ವಾಚ್ (Apple Watch) ಸ್ವಯಂಚಾಲಿತವಾಗಿ ಕೂಡಲೇ ತುರ್ತು ದೂರವಾಣಿ ಸಂಖ್ಯೆ 911 ಅನ್ನು ಡಯಲ್ ಮಾಡಿದೆ. ಪರಿಣಾಮ ಸಕಾಲಕ್ಕೆ ವ್ಯಕ್ತಿಗೆ ವೈದ್ಯಕೀಯ ಸೌಲಭ್ಯ ದೊರೆಯುವಂತಾಗಿದೆ.
Appleinsider ಪ್ರಕಾರ, ವಾಚ್ ತನ್ನ ಮಾಲೀಕರು ಅಪಾಯದಲ್ಲಿದ್ದಾರೆ ಎಂದು ಕ್ಯಾಲಿಫೋರ್ನಿಯಾದ (California )ಹರ್ಮೋಸಾ ಬೀಚ್ ಪೊಲೀಸರಿಗೆ ( Hermosa Beach Police)ಸಂದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳದ ಆಧಾರದ ಮೇಲೆ ಇಲಾಖೆಯು ಸ್ಥಳಕ್ಕೆ ತುರ್ತು ಸೇವೆಗಳನ್ನು ಕಳುಹಿಸಲು ಆದೇಶಿಸಿತು. ಈ ಘಟನೆಯು ಜನವರಿ 22 ರಂದು ಅಮೆರಿಕನ್ ಸಮಯ ರಾತ್ರಿ 1:30 ರ ಸುಮಾರಿಗೆ ನಡೆದಿದೆ.
Apple Watch saves man's life after hard fall from an electric bike https://t.co/eRmK74GTcy
— AppleInsider (@appleinsider)Apple Watch saving lifes
— Λldo (@aldo_tobing)undefined
ತಂತ್ರಜ್ಞಾನದ ಅದ್ಭುತ ಕೌಶಲ್ಯದ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದ್ದು, ವ್ಯಕ್ತಿಯ ಜೀವ ಉಳಿಸಿದ್ದಕ್ಕಾಗಿ ನೆಟ್ಟಿಗರು ಆಪಲ್ ವಾಚ್ ಅನ್ನು ಶ್ಲಾಘಿಸುತ್ತಿದ್ದಾರೆ. ಇತ್ತ ಸಂದೇಶ ತಲುಪಿದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ತಲುಪಿದ ತುರ್ತು ಸೇವಾ ಸಿಬ್ಬಂದಿಗೆ, ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಮತ್ತು ಅವನ ಎಲೆಕ್ಟ್ರಿಕ್ ಬೈಸಿಕಲ್‌ನ ಪಕ್ಕದಲ್ಲಿ ಅವನ ತಲೆಯಿಂದ ತೀವ್ರವಾಗಿ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿತ್ತು ಎಂದು ಪೋಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಬಳಿಕ ಆ ಅಪಘಾತಕ್ಕೊಳಗಾದ ವ್ಯಕ್ತಿಗೆ ಅಧಿಕಾರಿಗಳು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದರು. ಹಲವು ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ತಿಳಿದು ಬಂದಿದೆ.
No.1 Smartpone ಒಪ್ಪೋ, ವಿವೋ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆ್ಯಪಲ್, 6 ವರ್ಷದ ಬಳಿಕ ಚೀನಾದಲ್ಲಿ ಮೋಡಿ!
ಇದು ಸೋಲೋ-ಎಲೆಕ್ಟ್ರಿಕ್ ಬೈಸಿಕಲ್ ಅಪಘಾತ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಸಾಮಾಜಿಕ ಮಾಧ್ಯಮಗಳಲ್ಲಿ ಇದು ಅಪರಾಧ ಅಥವಾ ದಾಳಿ ಎಂದು ಪೋಸ್ಟ್‌ಗಳು ಇರುವುದನ್ನು ಅಲ್ಲಿನ ಕಾನೂನು ಜಾರಿ ಸಂಸ್ಥೆ ಗಮನಿಸಿದೆ.
ತನ್ನನ್ನು ಧರಿಸಿದ ವ್ಯಕ್ತಿಯ ಜೀವ ಉಳಿಸಲು ಆಪಲ್ ವಾಚ್ ತುರ್ತು ಸಂಪರ್ಕ ಸಂಖ್ಯೆಗಳಿಗೆ ಡಯಲ್ ಮಾಡಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 2019 ರಲ್ಲಿ, ಗೇಬ್ ಬರ್ಡೆಟ್ ಅವರು ( Gabe Burdett) ವೈರಲ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಮ್ಮ ತಂದೆ ಬಾಬ್‌ನ ( Bob) ಆಪಲ್ ವಾಚ್‌ನಿಂದ ಅವರು ಬಿದ್ದಿರುವ ಬಗ್ಗೆ ಸಂದೇಶ ಸ್ವೀಕರಿಸಿದ್ದೆವು ಎಂದು ಹೇಳಿದ್ದರು. ಸಂದೇಶ ಬಂದ ಬಳಿಕ ಘಟನಾ ಸ್ಥಳಕ್ಕೆ ತುರ್ತು ಸೇವೆಯನ್ನು ಕಳುಹಿಸಲಾಗಿತ್ತು ಎಂದು ಅವರು ಹೇಳಿದ್ದರು.
Apple iPhone 12 ಭಾರತದಲ್ಲಿ ಅತ್ಯಂತ ಜನಪ್ರಿಯ ಫೋನ್ ಬ್ರ್ಯಾಂಡ್ ಪಟ್ಟಿ ಪ್ರಕಟ, ಆ್ಯಪಲ್‌ಗೆ ಮೊದಲ ಸ್ಥಾನ!
ಅಮೆರಿಕದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆಪಲ್ ಜಗತ್ತಿನ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾಗಿದೆ. ಚೀನಾ ಮಾರುಕಟ್ಟೆಯಲ್ಲಿ ಚೀನಿ ಕಂಪನಿಗಳೇ ಮೇಲುಗೈ ಸಾಧಿಸುವುದು ಸಹಜ. ಆದರೆ, ಈ 6 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದಲ್ಲಿ ಚೀನಿ ಬ್ರ್ಯಾಂಡುಗಳಾದ ಒಪ್ಪೋ (Oppo), ವಿವೋ (Vivo) ಗಳನ್ನು ಹಿಂದಿಕ್ಕಿ ಆಪಲ್ ನಂಬರ್ 1 ಸ್ಥಾನಕ್ಕೇರಿದೆ.