
ಕೀವ್(ಸೆ.12): ಭಾನುವಾರಕ್ಕೆ 200 ದಿನಗಳ ಪೂರೈಸಿರುವ ರಷ್ಯಾ- ಉಕ್ರೇನ್ ಯುದ್ಧ ಮತ್ತೊಂದು ಮಹತ್ವದ ಬೆಳವಣಿಗೆಗೂ ಸಾಕ್ಷಿಯಾಗಿದೆ. ಹಲವು ಆಯಕಟ್ಟಿನ ಪ್ರದೇಶಗಳು ನಿರಂತರವಾಗಿ ಮರಳಿ ವಶಕ್ಕೆ ಬರುತ್ತಿರುವ ಬೆನ್ನಲ್ಲೇ, ಉಕ್ರೇನ್ ಸೇನೆ ತನ್ನ ಪ್ರಬಲ ದಾಳಿ ಆರಂಭಿಸಿದೆ. ಹೀಗಾಗಿ ರಷ್ಯಾ ಯೋಧರು, ದಾಳಿಯ ಬದಲು ಪ್ರತಿದಾಳಿ ಮತ್ತು ರಕ್ಷಣೆಯ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಕಳೆದ 1 ತಿಂಗಳಲ್ಲಿ 2000 ಚ.ಕಿ.ಮೀ. ಪ್ರದೇಶ ಮರುವಶ ಮಾಡಿಕೊಂಡಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.
ಈಶಾನ್ಯ ಉಕ್ರೇನ್‌ನ ಖಾರ್ಕಿವ್ ಸಮೀಪದ ಇಝ್ಯುಮ್ ಬಳಿಕ ಉಕ್ರೇನ್ ಪಡೆಗಳು ನಡೆಸಿದ ಹಠಾತ್ ಪರಿಣಾಮ, ರಷ್ಯಾ ಸೇನೆಯ ಸಾವಿರಾರು ಯೋಧರು ಉಕ್ರೇನ್‌ನ ವಶವಾಗುವ ಭೀತಿ ಎದುರಾಗಿತ್ತು. ಇದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಆ ಪ್ರದೇಶದಿಂದ ಹಿಂದೆ ಸರಿವ ಹಠಾತ್ ನಿರ್ಧಾರವನ್ನು ಶನಿವಾರ ರಷ್ಯಾ ಪ್ರಕಟಿಸಿತ್ತು. ಜೊತೆಗೆ ರಷ್ಯಾ ಸೈನಿಕರು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಷ್ಯಾ-ಉಕ್ರೇನ್ ಕದನಕ್ಕೆ 6 ತಿಂಗಳು ಪೂರ್ಣ: ಶೇ. 20 ಉಕ್ರೇನ್ ಭೂಭಾಗ ವಶಪಡಿಸಿಕೊಂಡ ರಷ್ಯಾ
ಕಳೆದ ಮಾಚ್‌ರ್‍ನಲ್ಲಿ ರಾಜಧಾನಿ ಕೀವ್ ಅನ್ನು ಉಕ್ರೇನ್ ಪಡೆಗಳು ಮರುವಶಕ್ಕೆ ಪಡೆದ ಬಳಿಕ, ಮತ್ತೊಂದು ದೊಡ್ಡ ಪ್ರದೇಶ ಇದೀಗ ಆ ದೇಶದ ಪಾಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಇನ್ನಷ್ಟು ಪ್ರದೇಶಗಳಲ್ಲಿ ಉಕ್ರೇನ್ ಯೋಧರು ತಮ್ಮ ದಾಳಿಯನ್ನು ತೀವ್ರಗೊಳಿಸಿದ್ದು, ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸುವ ಯತ್ನ ಮಾಡಿದ್ದಾರೆ. ಇದರಿಂದಾಗಿ ಈವರೆಗೆ ದಾಳಿ ನಡೆಸುತ್ತಿದ್ದ ರಷ್ಯಾ ಯೋಧರು ಈಗ ತಮ್ಮ ಸ್ವರಕ್ಷಣೆ ಮಾಡಿಕೊಳ್ಳುವತ್ತ ಗಮನ ಹರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸಿ, ‘ಇತ್ತೀಚಿನ ದಿನಗಳಲ್ಲಿ ರಷ್ಯಾ ಯೋಧರು ತಮ್ಮ ಬಳಿ ಗರಿಷ್ಠ ಏನು ಸಾಧ್ಯವೋ ಅದನ್ನು ಮಾಡುತ್ತಿದ್ದಾರೆ. ತಮ್ಮ ಬೆನ್ನು ತೋರಿಸುವುದು....’ ಎಂದು ರಷ್ಯಾ ಸೇನೆಯ ಪಲಾಯನವನ್ನು ವ್ಯಂಗ್ಯವಾಡಿದ್ದಾರೆ. ಜೊತೆಗೆ ಮುಂಬರುವ ಚಳಿಗಾದ ವೇಳೆ ನಮಗೆ ಇನ್ನಷ್ಟುಶಸ್ತ್ರಾಸ್ತ್ರ ಲಭ್ಯವಾದರೆ ಇನ್ನಷ್ಟುಪ್ರದೇಶಗಳು ಮರಳಿ ನಮ್ಮ ಕೈವಶವಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹಲವು ಪ್ರದೇಶಗಳಲ್ಲಿ ರಷ್ಯಾ ಯೋಧರನ್ನು ಹಿಮ್ಮೆಟ್ಟಿಸಿರುವ ತಮ್ಮ ಯೋಧರನ್ನು ಕೊಂಡಾಡಿದ್ದಾರೆ.
ಉಕ್ರೇನ್‌ನ ಡೋನ್‌ಬಾಸ್ ಬಹುತೇಕ ರಷ್ಯಾದ ತೆಕ್ಕೆಗೆ!
2000 ಚ.ಕಿ.ಮೀ. ವಶ:
ಝಿಯಂ ವಶದೊಂದಗೆ ಕಳೆದೊಂದು ತಿಂಗಳಲ್ಲಿ ರಷ್ಯಾ ವಶದಿಂದ ಸುಮಾರು 2000 ಚದರ ಕಿ.ಮೀನಷ್ಟುಪ್ರದೇಶವನ್ನು ಮರಳಿ ವಶಕ್ಕೆ ಪಡೆದಂತೆ ಆಗಿದೆ ಎಂದು ಉಕ್ರೇನ್ ಸೇನೆ ಹೇಳಿದೆ. ಇಝಿಯುಂ ಪ್ರದೇಶವನ್ನು ಡೋನ್ಬಾಸ್ ಮತ್ತು ಡೊನೆಟ್ ಪ್ರದೇಶದ ಮೇಲಿನ ದಾಳಿಗೆ ತನ್ನ ಪ್ರಮುಖ ನೆಲೆಯನ್ನಾಗಿ ರಷ್ಯಾ ಬಳಸಿಕೊಂಡಿತ್ತು.
ಆದರೆ ಡೋನ್ಬಾಸ್ ವಲಯದ ಡೊನೆಟ್ಸ್ ಮತ್ತು ಲುಹಾನ್ಸ್ ಅನ್ನು ಸಂಪೂರ್ಣವಾಗಿ ಉಕ್ರೇನ್‌ನಿಂದ ಬೇರೆ ಮಾಡುವ ಸಲವಾಗಿ ಬೇರೊಂದು ಪ್ರದೇಶದಿಂದ ದಾಳಿಗೆ ರಷ್ಯಾ ಯೋಜಿಸಿತ್ತು. ಇದಕ್ಕೆಂದೆ ಇಝಿಯುಂ ಪ್ರದೇಶದಿಂದ ಸ್ವಲ್ಪ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಈ ಸಮಯ ನೋಡಿದ ಉಕ್ರೇನ್ ಯೋಧರು, ಭರ್ಜರಿ ದಾಳಿ ನಡೆಸಿ ಇಡೀ ಪ್ರದೇಶವನ್ನು ಸುತ್ತುವರೆದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ