Queen Elizabeth II: ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ II ಅವರ ಸಾವಿನ ಸುದ್ದಿ ಕವರ್ ಮಾಡುವ ವೇಳೆ BBC News ಎಡವಟ್ಟು ಮಾಡಿಕೊಂಡಿದೆ. ಕ್ವೀನ್ ರೆಜಿನಾ ಎಂದು ಹಾಕಲು ಹೋಗಿ ಕ್ವೀನ್‌ರ ಖಾಸಗಿ ಭಾಗ ಎಂದು ಆಂಗ್ಲಭಾಷೆಯಲ್ಲಿ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ನವದೆಹಲಿ: ಪತ್ರಿಕೋದ್ಯಮದಲ್ಲಿ ಬಿಬಿಸಿ ಮತ್ತು ಅಲ್ಜಜೀರಾ ಮಾಧ್ಯಮ ಸಮೂಹಕ್ಕೆ ಅದರದ್ದೇ ಆದ ಹೆಸರಿದೆ. ತಪ್ಪು ವರದಿಗಳನ್ನು ಅಪ್ಪಿತಪ್ಪಿಯೂ ಈ ಸುದ್ದಿ ವಾಹಿನಿಗಳು ಪ್ರಸಾರ ಮಾಡುವುದಿಲ್ಲ. ಸುದ್ದಿ ಬ್ರೇಕ್ ಮಾಡುವ ಧಾವಂತದಲ್ಲಿ ಎಡವಟ್ಟು ಮಾಡುವುದಿಲ್ಲ ಎಂಬ ಮಾತು ಮಾಧ್ಯಮ ಲೋಕದಲ್ಲಿ ಕೇಳಿ ಬರುವ ಮಾತು. ಆದರೆ ಇಂಗ್ಲೆಂಡ್ ಕಾಣಿ ಎಲಿಜಬೆತ್ ಅವರ ಸಾವಿನ ಕವರೇಜ್ ವೇಳೆ ದೊಡ್ಡ ತಪ್ಪೊಂದನ್ನು ಬಿಬಿಸಿ ಮಾಡಿದೆ. ಬಿಬಿಸಿ ತನ್ನ ಲೈವ್ ಕವರೇಜ್ ವೇಳೆ ಟೈಟಲ್‌ಗಳನ್ನು ನೀಡಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಕೆ ಮಾಡುತ್ತದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಾಡಿರುವ ಎಡವಟ್ಟಿನಿಂದ ಬಿಬಿಸಿ ತಲೆ ತಗ್ಗಿಸುವಂತಾಗಿದೆ. "ರಾಣಿಯ ಖಾಸಗಿ ಭಾಗವಲ್ಲ, ನಾವು ಅವರನ್ನು ಕ್ವೀನ್ ರೆಜಿನಾ ಎಂದು ಸಂಬೋಧಿಸುತ್ತಿದ್ದೆವು," ಎಂದು ಆಟೋ ಟೈಟಲ್ ಪ್ರಸಾರವಾಗಿದೆ. ಈ ಬ್ಲಂಡರ್‌ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟಿಜನ್ಸ್ ಕಾಲೆಳೆಯುತ್ತಿದ್ದಾರೆ. ಈ ರೀತಿಯ ಮುಖಭಂಗ ಬಿಬಿಸಿಗೆ ಎಂದೂ ಆಗಿರಲಿಲ್ಲ.
ಕ್ವೀನ್ ರೆಜಿನಾ ಎನ್ನುವುದನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ವೀನ್ ವಜೈನಾ ಎಂದು ಕೇಳಿಸಿಕೊಂಡು ಅದೇ ರೀತಿ ಟೈಟಲ್ ನೀಡಿದೆ. ಇದರಿಂದ ಬಿಬಿಸಿ ಮುಜುಗರಕ್ಕೊಳಗಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ವಿಟ್ಟರ್ ಬಳಕೆದಾರರೊಬ್ಬರು, "ಊಪ್ಸ್. ಬಿಬಿಸಿ ಆಟೋ ಸಬ್‌ಟೈಟಲ್ಸ್ ಬಳಕೆಯನ್ನು ಎಚ್ಚರಿಕೆಯಿಂದ ಬಳಕೆ ಮಾಡಬೇಕೆಂದು," ಸಲಹೆ ಮಾಡಿದ್ದಾರೆ.
Oops.. BBC should really be more careful with their auto subtitles.. pic.twitter.com/ggAMqpgac7
— Johnny Nicks (@SadSensituv)ಇನ್ನೊಬ್ಬರು, "ಬಿಬಿಸಿ ಸಬ್‌ಟೈಟಲ್ಸ್ ಅದ್ಭುತವಾಗಿ ಆಡಿರುವ ಮಾತನ್ನು ತಪ್ಪಾಗಿ ಕೇಳಿಸಿಕೊಂಡಿದೆ. ಕ್ಯಾಮಿಲ್ಲಾ ಬಗೆಗಿನ ಸಂಭಾಷಣೆಯ ವೇಳೆ "ಕ್ವೀನ್ ರೆಜಿನಾ" ಎಂಬ ಪದವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ," ಎಂದು ಟ್ವೀಟ್ ಮಾಡಿದ್ದಾರೆ.
BBC subtitles spectacularly mis-hearing the words "Queen Regina" during a conversation about Camilla just now.
— Jolly Englishman (@JollyEnglishman)ಸುದೀರ್ಘ ಅವಧಿಯ ಕಾಲ ಸೇವೆ ಸಲ್ಲಿಸಿದ ರಾಣಿ ಎಲಿಜಬೆತ್ II ಅವರು 96 ನೇ ವಯಸ್ಸಿನಲ್ಲಿ ನಿಧನರಾದರು. ಅವರು 70 ವರ್ಷಗಳ ಕಾಲ ಬ್ರಿಟನ್‌ನ ಆಳ್ವಿಕೆ ನಡೆಸಿದರು. ರಾಜಮನೆತನದ ಕುಟುಂಬ - ರಾಣಿಯ ಮಗ ಮತ್ತು ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್, ಮೊಮ್ಮಕ್ಕಳಾದ ವಿಲಿಯಂ ಮತ್ತು ಹ್ಯಾರಿ ಮತ್ತು ಅವರ ಕುಟುಂಬಗಳು - ಸ್ಕಾಟಿಷ್ ಹೈಲ್ಯಾಂಡ್ಸ್ನಲ್ಲಿರುವ ಅವರ ಬಾಲ್ಮೋರಲ್ ರಾಣಿಯ ಕೊನೆಯ ಗಳಿಗೆಯಲ್ಲಿ ಜೊತೆಯಾಗಿದ್ದರು. ರಾಣಿ ಇದೇ ನಿವಾಸದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದರು. ಬ್ರಿಟನ್ ದೇಶವನ್ನು 70 ವರ್ಷಗಳ ಕಾಲ ಆಳಿದ್ದನ್ನು ಗುರುತಿಸುವ ಸಲುವಾಗಿ ಕಳೆದ ಜೂನ್‌ನಲ್ಲಿ ಕ್ವೀನ್ಸ್ ಪ್ಲಾಟಿನಂ ಜ್ಯುಬಿಲಿಯನ್ನೂ ವಿಜೃಂಭಣೆಯಿಂದ ಇಂಗ್ಲೆಂಡ್‌ನಲ್ಲಿ ಆಚರಣೆ ಮಾಡಲಾಗಿತ್ತು. 2015 ರಲ್ಲಿ, ರಾಣಿ ಎಲಿಜಬೆತ್ ತನ್ನ ಮುತ್ತಜ್ಜಿ ರಾಣಿ ವಿಕ್ಟೋರಿಯಾವನ್ನು ಅವರ ಅವಧಿಯನ್ನು ಮೀರಿಸುವ ಮೂಲಕ ಸುದೀರ್ಘ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿ ಎನಿಸಿಕೊಂಡಿದ್ದರು. ಹಾಲಿ ವರ್ಷ ಅವರು ಅತೀ ದೀರ್ಘ ಅವಧಿಯ ಕಾಲ ದೇಶವನ್ನು ಆಳಿದ ವಿಶ್ವದ 2ನೇ ಮೊನಾರ್ಕ್ ಎನಿಸಿಕೊಂಡಿದ್ದರು. ಯುಕೆ ತನ್ನ ರಾಣಿಯ ಪ್ಲಾಟಿನಂ ಜುಬಿಲಿ ಮೈಲಿಗಲ್ಲನ್ನು ರಾಯಲ್ ಪರೇಡ್‌ಗಳು, ಪಾರ್ಟಿಗಳು ಮತ್ತು ಸಂಗೀತ-ನೃತ್ಯ ಪ್ರದರ್ಶನಗಳೊಂದಿಗೆ ಆಚರಣೆ ಮಾಡಿತ್ತು. ಈ ಹಂತದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಪತ್ರ ಬರೆದಿದ್ದ ಕ್ವೀನ್ ಎಲಿಜಬೆತ್, ಈ ಕಾರ್ಯಕ್ರಮಗಳು ನನ್ನ ಮನಸ್ಸಿನಾಳಕ್ಕೆ ತಟ್ಟಿದೆ ಎಂದು ತಿಳಿಸಿದ್ದರು.
70 ವರ್ಷ ದೇಶವನ್ನು ರಾಣಿ ಆಳಿದ್ದಾಳೆ, ಇದರ ಆಚರಣೆಯನ್ನು ಹೇಗೆ ಮಾಡುವುದು ಎನ್ನುವ ಕುರಿತಾಗಿ ಯಾವುದೇ ರಾಜನಿಯಮಗಳಿಲ್ಲ. ಯಾಕೆಂದರೆ, ಈ ಸಾಧನೆ ಇದೇ ಮೊದಲು ಎಂದು ಎಲಿಜಬೆತ್ ಪತ್ರದಲ್ಲಿ ಬರೆದಿದ್ದರು.
ಇದನ್ನೂ ಓದಿ: ಇಂಗ್ಲೆಂಡ್ ರಾಣಿ ಸದಾ ಕಾಲ ಧರಿಸ್ತಿದ್ದ ಈ ನೆಕ್ಲೇಸ್ ಭಾರತ ಮೂಲದ್ದು
ಪುತ್ರ ಚಾರ್ಲ್ಸ್ ಈಗ ಬ್ರಿಟನ್ ರಾಜ: ಎಲಿಜಬೆತ್ ರಾಣಿಯ (Queen Elizabeth II) ನಿಧನದೊಂದಿಗೆ ಮುಂದೆ ಬ್ರಿಟನ್ ರಾಜಮನೆತನದ (Britain Royal family) ಮುಖ್ಯಸ್ಥರು ಹಾಗೂ ದೇಶವನ್ನು ಆಳುವವರು ಯಾರು ಎನ್ನುವುದಕ್ಕೂ ತೆರೆಬಿದ್ದಿದೆ. ವೇಲ್ಸ್‌ನ ಮಾಜಿ ಪ್ರಿನ್ಸ್ (former Prince of Wales) ಚಾರ್ಲ್ಸ್ (Charles) ಹೊಸ ರಾಜನಾಗಲಿದ್ದಾರೆ. ಅವರೇ ಸ್ವತಃ ರಾಣಿಯ ನಿಧನವನ್ನು ಘೋಷಣೆ ಮಾಡಿದ್ದಾರೆ. "ರಾಣಿ ಇಂದು ಮಧ್ಯಾಹ್ನ ಬಾಲ್ಮೋರಲ್‌ನಲ್ಲಿ ನೆಮ್ಮದಿಯಿಂದ ನಿಧನರಾದರು. ರಾಜ ಮತ್ತು ರಾಣಿ ಪತ್ನಿ ಇಂದು ಸಂಜೆ ಬಾಲ್ಮೋರಲ್‌ನಲ್ಲಿ ಉಳಿಯುತ್ತಾರೆ ಮತ್ತು ನಾಳೆ ಲಂಡನ್‌ಗೆ ಹಿಂತಿರುಗುತ್ತಾರೆ" ಎಂದು ರಾಜಮನೆತನವು ಟ್ವೀಟ್ ಮಾಡಿದೆ. ಬ್ರಿಟನ್ ಕಾಲಮಾನ ಸಂಜೆ 6.30ರ ವೇಳೆ ಅವರ ನಿಧನವಾಗಿದೆ ಎಂದು ವರದಿಯಾಗಿದೆ.
96 ವರ್ಷದ Queen Elizabeth II ಆರೋಗ್ಯದ ಬಗ್ಗೆ ಇಡೀ ದೇಶಕ್ಕೆ ಚಿಂತೆಯಾಗಿದೆ: ಬ್ರಿಟನ್ ಪ್ರಧಾನಿ
ರಾಣಿಯ ಆರೋಗ್ಯದ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲಿಯೇ, ರಾಣಿಯ ಕುಟುಂಬದ ಆಪ್ತರು ಅರಮನೆಗೆ ಆಗಮಿಸಿದ್ದರು ಎಂದು ಬಕಿಂಗ್‌ಹ್ಯಾಂ ಅರಮನೆ ತಿಳಿಸಿದೆ. ಪ್ರಸ್ತುತ ರಾಜಮನೆತನದಿಂದ ದೂರು ಉಳಿದು ವಾಸ ಮಾಡುತ್ತಿರುವ ಮೊಮ್ಮಗ ಹ್ಯಾರಿ ಹಾಗೂ ಆತನ ಪತ್ನಿ ಮೇಘನ್ ಮರ್ಕೆಲ್, ಕೆನಡಾದಿಂ ಲಂಡನ್‌ಗೆ ಆಗಮಿಸಿದ್ದರು. ಎಎಫ್‌ಪಿ ಪ್ರಕಾರ, ರಾಣಿ ಬುಧವಾರ ತನ್ನ ಹಿರಿಯ ರಾಜಕೀಯ ಸಲಹೆಗಾರರೊಂದಿಗೆ ಅದಾಗಲೇ ನಿಗದಿಯಾಗಿದ್ದ ಸಭೆಯಿಂದ ಅವಧಿಗೂ ಮುನ್ನವೇ ಹೊರಬಂದಿದ್ದರು. ಆ ಬಳಿಕ ಅವರಿಗೆ ವಿಶ್ರಾಂತಿ ಪಡೆದುಕೊಳ್ಳುವಂತೆ ಹೇಳಲಾಗಿತ್ತು. ಅದಕ್ಕೂ ಹಿಂದಿನ ದಿನ ಅವರು, ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಲಿಜ್ ಟ್ರಸ್‌ಗೆ ಅಧಿಕಾರ ನೀಡುವ ಸಭೆಯಲ್ಲಿ ಭಾಗಿಯಾಗಿದ್ದರು.
ಬ್ರಿಟನ್ ರಾಣಿಗೀಗ ವಿಶ್ವದ 2ನೇ ಸುದೀರ್ಘ ಆಳ್ವಿಕೆ ನಡೆಸಿದ ಹಿರಿಮೆ!
ಇತ್ತೀಚಿನ ತಿಂಗಳುಗಳಲ್ಲಿ, ರಾಣಿಯು ಬಹಳ ದುರ್ಬಲವಾಗಿ ಕಂಡಿದ್ದರು. ಅಲ್ಲದೆ, ಸಾಲು ಸಾಲು ಸಾರ್ವಜನಿಕ ಸಭೆಗಳಿಂದ ಅವರು ಭಾಗವಹಿಸಲು ನಿರಾಕರಿಸುತ್ತಿದ್ದರು. ಚೆಲ್ಸಿಯಾ ಫ್ಲವರ್ ಶೋಗೆ ಹೋಗಿದ್ದ ವೇಳೆ ನಡೆದಾಡಲು ಕೋಲಿನ ಸಹಾಯವನ್ನು ಅತಿಯಾಗಿ ಪಡೆದುಕೊಳ್ಳುತ್ತಿದ್ದರು. ಈ ವೇಳೆಯೇ ಅವರ ಆರೋಗ್ಯದ ಬಗ್ಗೆ ಬ್ರಿಟನ್‌ನಲ್ಲಿ ಕಳವಳ ವ್ಯಕ್ತವಾಗಿದ್ದವು.