ಅಪರಿಚಿತಳ ಜೊತೆ ಸೆಕ್ಸ್‌ನಲ್ಲಿರುವಾಗಲೇ ಹಾರ್ಟ್ ಆಟ್ಯಾಕ್: ಪರಿಹಾರಕ್ಕೆ ಕೋರ್ಟ್ ಆದೇಶ

By Suvarna News  |  First Published Jul 7, 2020, 4:01 PM IST

ಬಿಜಿನಸ್ ಟ್ರಿಪ್ ನಲ್ಲಿದ್ದ ವ್ಯಕ್ತಿ ಸಾವು/  ಅಪರಿಚಿತಳ ಜೊತೆ ಸೆಕ್ಸ್ ನಲ್ಲಿದ್ದಾಗಲೇ ಹಾರ್ಟ್ ಅಟ್ಯಾಕ್/ ಕುಟುಂಬಕ್ಕೆ ಕಂಪನಿ ಪರಿಹಾರ ನೀಡಬೇಕು ಎಂದು ಕೋರ್ಟ್ ಆದೇಶ


ಪ್ಯಾರೀಸ್(ಜು.  07)  ಇದೊಂದು ವಿಚಿತ್ರ ಪ್ರಕರಣ.  ಬಿಜಿನಸ್ ಟ್ರಿಪ್ ನಲ್ಲಿದ್ದ ವ್ಯಕ್ತಿ ಅಪರಿಚಿತಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಮಗ್ನನಾಗಿದ್ದ. ಇದೇ ವೇಳೆ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪುತ್ತಾನೆ.

2013 ರ ಘಟನೆ ಇದೀಗ ಮತ್ತೆ ಸದ್ದು ಮಾಡಿದೆ. ಸೆಕ್ಸ್ ವೇಳೆ ಸಾವಿಗೀಡಾವದನ ಕುಟುಂಬಕ್ಕೆ ಕಂಪನಿ ಪರಿಹಾರ ಕಟ್ಟಬೇಕಾಗಿದೆ.  ಕಂಪನಿಯ ಕೆಲಸದ ಮೇಲೆ ಇದ್ದಾಗ ಸಾವನ್ನಪ್ಪಿದ್ದಾನೆ, ಹಾಗಾಗಿ ಪರಿಹಾರ ಕೊಡಬೇಕು ಎಂದು ವ್ಯಕ್ತಿಯ ಕುಟುಂಬ ನ್ಯಾಯಾಲಯದ ಮೊರೆ ಹೋಗಿತ್ತು. 

Latest Videos

undefined

ಹಾರ್ಟ್ ಅಟ್ಯಾಕ್ ತಡೆಯುವ 10  ಸಂಗತಿಗಳು

ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಾಗಿತ್ತು. ಸಿಬ್ಬಂದಿ ಕೆಲಸದ ವೇಳೆಯಲ್ಲಿ ಮೃತಪಟ್ಟಿಲ್ಲ ಎಂದು ಕಂಪನಿ ವಾದ ಮುಂದಿಟ್ಟಿತ್ತು.  ಇದೊಂದು ಆಕಸ್ಮಿಕ ಆದರೆ ಅಷ್ಟೇ ನೋವಿನ ಸಾವು, ಕೆಲಸದ ವೇಳೆಯೇ ಆತ ಮೃತಪಟ್ಟಿದ್ದು ಕಂಪನಿ ಮತ್ತು ಬಾಸ್ ಜವಾಬ್ದಾರರಾಗುತ್ತಾರೆ ಎಂದು ನ್ಯಾಯಾಲಯ ಇತ್ತೀಚೆಗೆ ನೀಡಿದ ಆದೇಶದಲ್ಲಿ ಹೇಳಿದೆ.

ವಿಶ್ವಸಂಸ್ಥೆ ಕಾರಲ್ಲಿ ಹಾಡುಹಗಲೇ ಕಾಮದಾಟ; ವಿಡಿಯೋ ವೈರಲ್

ನ್ಯಾಯಾಲಯದ ತೀರ್ಮಾನದಂತೆ ಸಿಬ್ಬಂದಿ ಪಡೆಯುತ್ತಿದ್ದ ವೇತನದದಲ್ಲಿ ಶೇ.  80 ನ್ನು ಆತನ ನಿವೃತ್ತಿ ತನಕ ಕುಟುಂಬ ಪಡೆಯಲಿದೆ. ಪೆನ್ಶನ್ ಸಹ ಪಡೆಯಲಿದೆ.

ರೈಲ್ವೆ ಟೆಕ್ನಿಶಿಯನ್ ಆಗಿ ಜೇವಿಯರ್  ಎಂಬಾತ ಕೆಲಸ ಮಾಡುತ್ತಿದ್ದರು. ಇಲ್ಲಿ ಸಂತ್ರಸ್ತೆ ಮದುವೆಯಾಗಿದ್ದ ಕಾರಣಕ್ಕೆ  ಇದೊಂದು ವಂಚನೆ ಪ್ರಕರಣ ಎಂದು ಪರಿಗಣಿಸಲಾಗಿದೆ.

ಒಟ್ಟಿನಲ್ಲಿ ಇಲ್ಲಿ ಯಾರ ತಪ್ಪು ಯಾರದ್ದು ಒಪ್ಪು ಎಂದು ಹೇಳಲು ಸಾಧ್ಯವಿಲ್ಲದ ಸ್ಥಿತಿ. ಬಿಜಿನಸ್ ಟ್ರಿಪ್ ಗೆಂದು ಬಂದ ವ್ಯಕ್ತಿ ತನ್ನ ವಾಂಛೆ ತೀರಿಸಿಕೊಳ್ಳಲು ಹೋಗಿ ಮೃತನಾದ. ಇದಕ್ಕೆ ಕಂಪನಿ ಹೊಣೆಗಾರ ಎಂದು ನ್ಯಾಯಾಲಯ  ಹೇಳಿತು. ಪತ್ನಿಗೂ ಇಲ್ಲಿ  ವಂಚನೆ.  ಆಧುನಿಕ ಜಗತ್ತಿನಲ್ಲಿ ಇಂಥ ಪ್ರಕರಣಗಳು ಮೇಲಿಂದ ಮೇಲೆ ಆಗುತ್ತಲೇ ಇರುತ್ತವೆ. 

ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

click me!