ಜಸ್ಟ್ ಮಿಸ್: ಎಣ್ಣೆ ಹೊಡೆದು ಟ್ರ್ಯಾಕ್ ಮೇಲೆ ಮಲಗಿದ್ದರೂ ಪವಾಡಸದೃಶವಾಗಿ ಪಾರಾದ ಕುಡುಕ

Published : Mar 10, 2025, 05:58 PM ISTUpdated : Mar 10, 2025, 07:05 PM IST
ಜಸ್ಟ್ ಮಿಸ್: ಎಣ್ಣೆ ಹೊಡೆದು ಟ್ರ್ಯಾಕ್ ಮೇಲೆ ಮಲಗಿದ್ದರೂ ಪವಾಡಸದೃಶವಾಗಿ ಪಾರಾದ ಕುಡುಕ

ಸಾರಾಂಶ

ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ರೈಲು ಬರುವ ಕೆಲ ಸೆಕೆಂಡ್ ಮುನ್ನ ಎದ್ದು ಪವಾಡಸದೃಶವಾಗಿ ಪಾರಾಗಿದ್ದಾನೆ. ಪೆರುವಿನಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕುಡಿದ ಮೇಲೆ ಅನೇಕರಿಗೆ ಮೈ ಮೇಲೆ ಜ್ಞಾನವೇ ಇರುವುದಿಲ್ಲ, ತಾನು ಏನು ಮಾಡುತ್ತೇನೆ ಎಂಬುದರ ಅರಿವು ಕೂಡ ಇರುವುದಿಲ್ಲ, ಈ ಕಾರಣಕ್ಕೆ ಕುಡಿದು ರಸ್ತೆಯಲ್ಲಿ ಮಲಗುತ್ತಾರೆ. ದಾರಿ ಕಾಣದೇ ಚರಂಡಿಗೆ ಬೀಳುತ್ತಾರೆ ಒಟ್ಟಿನಲ್ಲಿ ಅವರದ್ದೇ ಲೋಕದಲ್ಲಿ ತೇಲಾಡುತ್ತಿರುತ್ತಾರೆ. ಅವರು ಹೀರಿದ ಎಣ್ಣೆಯ ತಾಕತ್ತಿಗೆ ತಕ್ಕಂತೆ ಅವರ ಆಟಾಟೋಪಗಳಿರುತ್ತವೆ. ಅದೇ ರೀತಿ ಇಲ್ಲೊಬ್ಬ ಕುಡುಕ ಕಂಠಪೂರ್ತಿ ಕುಡಿದು ರೈಲ್ವೆ ಟ್ರ್ಯಾಕ್‌ಗೆ ತಲೆಕೊಟ್ಟು ಮಲಗಿದ್ದಾನೆ. ಗೂಡ್ಸ್ ರೈಲೊಂದು ಅದೇ ವೇಳೆ ಟ್ರ್ಯಾಕ್ ಮೇಲೆ ಬಂದಿದೆ. ಆದರೆ ಪವಾಡವೇ ನಡೆದಂತೆ ಆತ ರೈಲು ಇನ್ನೇನು ತನಗೆ ಡಿಕ್ಕಿ ಹೊಡೆಯಬೇಕು ಅನ್ನುವಷ್ಟರಲ್ಲಿ ಎದ್ದಿದ್ದು, ಕೂದಲೆಳೆ ಅಂತರದಲ್ಲಿ ಜೀವ ಉಳಿದಿದೆ. ಈ ರೋಚಕ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಪೆರುವಿನ ರಾಜ್ಯ ಲಿಮಾದಲ್ಲಿ ಈ ಘಟನೆ ನಡೆದಿದ್ದು, ಆತ ಕಂಠಪೂರ್ತಿ ಕುಡಿದಿದ್ದರಿಂದ ಆತನಿಗೆ ರೈಲು ಬಂದಿದ್ದೆ ಗೊತ್ತಾಗಿಲ್ಲ, ಆ ಪ್ರದೇಶದಲ್ಲಿ ನಿಯೋಜಿಸಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿದ್ದು, ರೈಲು ಟ್ರ್ಯಾಕ್‌ಗೆ ದಿಂಬು ಎಂಬಂತೆ ತಲೆಕೊಟ್ಟು ಮಲಗಿದ್ದವನ ಮೇಲೆ ರೈಲು ಸಂಚರಿಸಿದೆ. ಆದರೆ ಅದೃಷ್ಟ ಚೆನ್ನಾಗಿತ್ತೋ ಏನೋ ಆತ ಪವಾಡಸದೃಶವಾಗಿ ಪಾರಾಗಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲಿನ ಅಧಿಕಾರಿಗಳು ಕೂಡ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಆತ ಆ ಕ್ಷಣಕ್ಕೆ ಎದ್ದಿದ್ದರೂ ರೈಲಿನ ವೇಗದ ರಭಸಕ್ಕೆ ಪಕ್ಕಕ್ಕೆ ಹೊರಳಿಕೊಂಡಿದ್ದಾನೆ. ಒಂದು ಸಮಯ ಒಂದು ಸೆಕೆಂಡ್ ಲೇಟಾದರೂ ಕೂಡ ಆತ ತಲೆ ನುಚ್ಚು ನೂರಾಗುತ್ತಿದ್ದಿದ್ದು ಪಕ್ಕಾ. ಆತನನ್ನು ಕ್ರಮಿಸಿ ಹೋದ ರೈಲು ನಂತರ ನಿಂತಿದೆ. 

ಕುಡಿದ ಮತ್ತಿನಲ್ಲಿ ವಧುವಿನ ಬದಲು ಸ್ನೇಹಿತನ ಕೊರಳಿಗೆ ಹಾರ ಹಾಕಿದ ವರ..!

ಒಂದು ಕ್ಷಣ ಲೇಟಾದರೂ ಫಿನಿಶ್

ಅಲ್ಲಿನ ಸ್ಥಳೀಯ ಅಧಿಕಾರಿ ಜೇವಿಯರ್ ಅವಲೊಸ್ ಎಂಬುವವರು ಈ ಘಟನೆಯ ಬಗ್ಗೆ ವಿವರಿಸಿದ್ದು, ಆ ವ್ಯಕ್ತಿ ಕುಡಿತದ ಅಮಲಿನಲ್ಲಿದ್ದ, ಆತ ಕುಡಿದು ರೈಲು ಹಳಿಯ ಮೇಲೆಯೇ ನಿದ್ದೆಗೆ ಜಾರಿದ್ದ ಹೀಗಾಗಿ ಆತನಿಗೆ ರೈಲು ಬಂದಿದ್ದೆ ತಿಳಿಯಲಿಲ್ಲ, ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದೊಡ್ಡ ಅನಾಹುತದಿಂದ ಪಾರಾಗಿದ್ದಾನೆ ಎಂದು ಅವರು ಹೇಳಿದ್ದಾರೆ. ಜೀವಕ್ಕೆ ಅಪಾಯ ತರುವ ಇಂತಹ ಸ್ಥಿತಿಯ ನಡುವೆಯೂ ಆತ ಬದುಕುಳಿದಿದ್ದೆ ಒಂದು ಪವಾಡ ಆತನ ಬಲ ತೋಳಿಗೆ ಸಣ್ಣ ಗಾಯವಾಗಿದೆ, ಕೂಡಲೇ ತುರ್ತು ಆರೋಗ್ಯ ಸಿಬ್ಬಂದಿ ಬಂದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಒಂದು ವೇಳೆ ಒಂದು ಕ್ಷಣ ಆತ ಲೇಟಾಗಿ ಎದ್ದಿದ್ದರೂ ದೊಡ್ಡ ದುರಂತವಾಗುತ್ತಿತ್ತು. ಆದರೆ ಅವರಿಗೆ ಕೇವಲ ಸಣ್ಣ ಗಾಯಗಳಾಗಿವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ. 

ಪತಿಯರಿಂದ ಬೇಸತ್ತ ಇಬ್ಬರು ಮಹಿಳೆಯರು ಮಾಡಿದ್ದಾರೆ ಶಾಕಿಂಗ್ ಕೆಲಸ! 

ವೀಡಿಯೋ ಇಲ್ಲಿದೆ ನೋಡಿ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!