ಮಾಲ್ಡೀವ್ಸ್‌ನತ್ತ ಚೀನಾ ಗೂಢಚರ್ಯೆ ನೌಕೆ: ಭಾರತ-ಮಾಲ್ಡೀವ್ಸ್‌ ಸಂಘರ್ಷದ ಬೆನ್ನಲ್ಲೇ ಈ ಬೆಳವಣಿಗೆ

Published : Jan 24, 2024, 11:16 AM IST
ಮಾಲ್ಡೀವ್ಸ್‌ನತ್ತ ಚೀನಾ ಗೂಢಚರ್ಯೆ ನೌಕೆ:  ಭಾರತ-ಮಾಲ್ಡೀವ್ಸ್‌ ಸಂಘರ್ಷದ ಬೆನ್ನಲ್ಲೇ ಈ ಬೆಳವಣಿಗೆ

ಸಾರಾಂಶ

ಭಾರತ ಮತ್ತು ಮಾಲ್ಡೀವ್ಸ್‌ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿರುವ ನಡುವೆಯೇ ಚೀನಾದ ಗೂಢಚರ್ಯೆ ಹಡಗೊಂದು ಮಾಲ್ಡೀವ್ಸ್‌ನತ್ತ ಪ್ರಯಾಣಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಉಪಗ್ರಹ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿ ತಯಾರಿಸಲಾಗಿದೆ.

ನವದೆಹಲಿ: ಭಾರತ ಮತ್ತು ಮಾಲ್ಡೀವ್ಸ್‌ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿರುವ ನಡುವೆಯೇ ಚೀನಾದ ಗೂಢಚರ್ಯೆ ಹಡಗೊಂದು ಮಾಲ್ಡೀವ್ಸ್‌ನತ್ತ ಪ್ರಯಾಣಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಉಪಗ್ರಹ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿ ತಯಾರಿಸಲಾಗಿದೆ.

ಮಾಲ್ಡೀವ್ಸ್‌ನಲ್ಲಿ ಭಾರತ ಸೈನ್ಯದ ಉಪಸ್ಥಿತಿಯನ್ನು ವಿರೋಧಿಸುತ್ತಿರುವ ಅಧ್ಯಕ್ಷ ಮಯಿಜು ಚೀನಾ ಪ್ರವಾಸ ಮುಗಿಸಿ ಮರಳಿದ ಬೆನ್ನಲ್ಲೇ ಚೀನಾ ಗುಪ್ತಚರ ಹಡಗು ಮಾಲ್ಡೀವ್ಸ್‌ನತ್ತ ಪ್ರಯಾಣ ಆರಂಭಿಸಿದೆ. ಈ ಹಡಗು ಇಂಡೋನೇಷ್ಯಾ ಬಳಿ ಇರುವ ಸುಂಡಾ ಜಲಸಂಧಿಯನ್ನು ದಾಟಿದ್ದು, ಫೆ.8ರ ವೇಳೆಗೆ ಮಾಲ್ಡೀವ್ಸ್‌ ತಲುಪುವ ಸಾಧ್ಯತೆ ಇದೆ. 2019 ಮತ್ತು 2020ರಲ್ಲೂ ಚೀನಾದ ಹಡಗುಗಳು ಭಾರತದ ಸುತ್ತಮುತ್ತ ಸರ್ವೇಕ್ಷಣೆ ನಡೆಸಿದ್ದವು. ಇದೀಗ ಮಾಲ್ಡೀವ್ಸ್‌ನಲ್ಲೂ ಚೀನಾ ಬೀಡು ಬಿಡುವುದು ಭಾರತದ ಆತಂಕವನ್ನು ಹೆಚ್ಚಿಸಿದೆ.

ಭಾರತದ ಮೇಲೆ ಯಾಕಿಷ್ಟು ದ್ವೇಷ? HAL ವಿಮಾನ ನಿರಾಕರಿಸಿದ ಮುಯಿಝು; ಹಾರಿಹೋದ ಮಾಲ್ಡೀವ್ಸ್‌ ಬಾಲಕನ ಪ್ರಾಣ ಪಕ್ಷಿ

ಚೀನಾ ಈ ಹಡಗುಗಳನ್ನು ಹಿಂದೂ ಮಹಾಸಾಗರ ಅಧ್ಯಯನಕ್ಕಾಗಿ ಬಳಕೆ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದರೂ ಸಹ ಇವುಗಳನ್ನು ಬಳಸಿ ಚೀನಾ ಗೂಢಚರ್ಯೆ ನಡೆಸುತ್ತಿದೆ ಎಂಬ ಅನುಮಾನಗಳು ದಟ್ಟವಾಗಿವೆ. ಹಿಂದೂ ಮಹಾಸಾಗರದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಿರುವ ಚೀನಾ ಪದೇ ಪದೇ ತನ್ನ ಹಡಗುಗಳನ್ನು ಹಿಂದೂ ಮಹಾಸಾಗರಕ್ಕಿಳಿಸುತ್ತಿದೆ.

ಇಲ್ಲಿ ಉಚಿತವಾಗಿ ಸಿಗ್ತಿದೆ ಚೋಲಾ ಭಾತುರೆ : ಮಾಲ್ಡೀವ್ಸ್ ಕ್ಯಾನ್ಸಲ್ಡ್ ಟಿಕೆಟ್ ತೋರಿಸಬೇಕು!

4 ಕಡೆ ಚೀನಾ ಚೀನಾ ಗೂಢಚರ್ಯೆ ಹಡಗು

ಹಿಂದೂ ಮಹಾಸಾಗರದಲ್ಲಿ ಬಲಿಷ್ಠ ರಾಷ್ಟ್ರವಾಗಿರುವ ಭಾರತದ ವಿರುದ್ಧ ಮಾಹಿತಿಗಳನ್ನು ಕಲೆ ಹಾಕಲು ಚೀನಾ ಮೂರು ದೇಶಗಳಲ್ಲಿ ತನ್ನ ಗೂಢಚರ್ಯೆ ಹಡಗುಗಳನ್ನು ನಿಲ್ಲಿಸಿತ್ತು. ಕಳೆದ ವರ್ಷ ಜುಲೈನಲ್ಲಿ ಶ್ರೀಲಂಕಾದ ಹಂಬನ್‌ತೋಟಾದಲ್ಲಿ, ನವೆಂಬರ್‌ನಲ್ಲಿ ಕರಾಚಿ ಬಂದರಿನಲ್ಲಿ ಚೀನಾದ ಗೂಢಚರ್ಯೆ ಹಡಗುಗಳು ಲಂಗರು ಹಾಕಿದ್ದವು. ಭಾರತದ ಪ್ರಮುಖ ವ್ಯಾಪಾರಿ ಮಾರ್ಗವಾದ ಜಿಬೋಟಿಯಲ್ಲೂ ಚೀನಾದ ಯುದ್ಧನೌಕೆ ಇದ್ದು ಭಾರತಕ್ಕೆ ಬರುವ ಹಡಗುಗಳ ಮೇಲೆ ಕಣ್ಣಿಟ್ಟಿದೆ. ಇದೀಗ ಮಾಲ್ಡೀವ್ಸ್‌ನಲ್ಲೂ ಚೀನಾ ತನ್ನ ಹಡಗನ್ನು ಲಂಗರು ಹಾಕುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಭಾರತದ ಚಾಪರ್ ಬಳಸಲು ಒಪ್ಪದ ಮಾಲ್ಡೀವ್ಸ್; 13 ವರ್ಷದ ಬಾಲಕ ಸಾವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ